500 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿಗೆ ಕೆಇಎಯಿಂದ ಅರ್ಜಿ: 500 Village Administrative Officer Recruitment 2026

WhatsApp Group Join Now
Telegram Group Join Now
Spread the love

500 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿಗೆ ಕೆಇಎಯಿಂದ ಅರ್ಜಿ: 500 Village Administrative Officer Recruitment 2026

ನಮಸ್ತೆ ಸ್ನೇಹಿತರೇ, ಸ್ಪರ್ಧಾದೀಪ ವೆಬ್ಸೈಟ್ ನಿಂದ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ  ಪ್ರಮುಖ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು ಕಂದಾಯ ಇಲಾಖೆಯ ಕೆಳಹಂತದ ಪ್ರಮುಖ ಹುದ್ದೆಯಾಗಿದ್ದು. ಪ್ರತಿಯೊಂದು ಗ್ರಾಮ ಮತ್ತು ವಾರ್ಡ್‌ ಗಳಲ್ಲಿ ಈ ಹುದ್ದೆಯನ್ನು ಸೃಜಿಸಲಾಗಿದೆ. ರಾಜ್ಯ ಸರ್ಕಾರವು ಕಾಲಕಾಲಕ್ಕೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ರೂಪಿಸಿ, ಗ್ರಾಮ ಆಡಳಿತಾಧಿಕಾರಿಯನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತೆ. ಗ್ರಾಮೀಣ ಭಾಷೆಯಲ್ಲಿ ತಲಾಟಿ ಎಂದು ಕರೆಯಲ್ಪಡುವ ಈ ಹುದ್ದೆಯನ್ನು ನಂತರ ಗ್ರಾಮ ಲೆಕ್ಕಿಗ ಎಂದು ಕರೆಯಲಾಯಿತು. ಕಳೆದ ನೇಮಕಾತಿಯ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿ (VAO) ಎಂದು ಕರೆಯಲಾಯಿತು. ಈ ಮುಂಚೆ ಕೇವಲ ಪಿಯುಸಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಜಿಲ್ಲಾವಾರು ಆಯ್ಕೆ ಮಾಡಲಾಗುತ್ತಿತ್ತು. ಕಳೆದ ನೇಮಕಾತಿಯಿಂದ ರಾಜ್ಯ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುವ ಮೂಲಕ ಪಾರದರ್ಶಕವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅಂತಹ ಪರೀಕ್ಷೆಗಾಗಿ ವರ್ಷಾನುಗಟ್ಟಾಲೆ ಅಭ್ಯರ್ಥಿಗಳು ಸಿದ್ದತೆಯನ್ನು ಮಾಡಿಕೊಂಡಿರುತ್ತಾರೆ. ಸದರಿ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಬಹುಮುಖ್ಯ ಮಾಹಿತಿಯೊಂದು ಹೊರಬಿದ್ದಿದೆ.  ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 500 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ನೇಮಕಾತಿಗೆ ಆರ್ಥಿಕ ಇಲಾಖೆಯು ಅನುಮತಿ ನೀಡಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಹೊಸ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ.

ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಯಿಂದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನಾ ತಮ್ಮ ಜಿಲ್ಲೆಯಲ್ಲಿ ಒಟ್ಟು ಮಂಜಾರಾದ ಹುದ್ದೆಗಳ ಸಂಖ್ಯೆ, ಭರ್ತಿಯಾಗಿರುವ ಹುದ್ದೆಗಳ ಸಂಖ್ಯೆ, 2025 ರಲ್ಲಿ ನೇಮಕ ಮಾಡಿಕೊಂಡ ಹುದ್ದೆಗಳ ಸಂಖ್ಯೆ, ಕರ್ತವ್ಯಕ್ಕೆ ವರದಿ ಮಾಡಿಕೊಂಡ ಹುದ್ದೆಗಳ ಸಂಖ್ಯೆ, ಹಾಲಿ ನೇಮಕ ಮಾಡಲು ಜಿಲ್ಲೆಗ ಅಗತ್ಯವಿರುವ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಸಂಖ್ಯೆ ಕುರಿತು ಮಾಹಿತಿಯನ್ನು ಕೋರಲಾಗಿದೆ. ಇದರ ಅನ್ವಯ ಶೀಘ್ರದಲ್ಲಿಯೆ 500 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ  ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಗ್ರಾಮ ಆಡಳಿತಾಧಿಕಾರಿ 500 ಹುದ್ದೆಗಳ ನೇಮಕಾತಿ ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೀತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.

ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ಯಂಗ್‌ ಪ್ರೊಫೆಶನಲ್‌ ಹುದ್ದಗಳ ಭರ್ತಿಗೆ ಅರ್ಜಿ ಆಹ್ವಾನ: Apply now  Income Tax Dept Young Professional Recruitment 2026

 ಶೈಕ್ಷಣಿಕ ಅರ್ಹತೆ:

ಮಾನ್ಯತೆ ಪಡೆದ ಮಂಡಳಿಯಿಂದ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು. ಡಿಪ್ಲೋಮಾ ಮತ್ತು ಐಟಿಐ ಹೊಂದಿರುವವರು ಸಹ ಅರ್ಹರು.

ವಯೋಮಿತಿ/ Age limit:

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಸರಿಯಾಗಿ

ಕನಿಷ್ಟ ವಯೋಮಿತಿ- 18 ವರ್ಷ

ಗರಿಷ್ಟ ವಯೋಮಿತಿ 38 ವರ್ಷ

ಗರಿಷ್ಟವಯೋಮಿತಿಯಲ್ಲಿ ಪಜಾ & ಪಪಂ ಅಭ್ಯರ್ಥಿಗಳಿಗೆ 05 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 03 ವರ್ಷ ಸಡಿಲಿಕೆ ಇರುತ್ತದೆ.

 ಆಯ್ಕೆ ವಿಧಾನ:ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜನೆ ಮಾಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯು ಪತ್ರಿಕೆ 1 & 2 ಎಂಬ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಗರಿಷ್ಟ 200 ಅಂಕಗಳನ್ನು ಒಳಗೊಂಡಿರುತ್ತದೆ.  ಸದರಿ ಹುದ್ದೆಗಳ ನೇಮಕಾತಿಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಫ್ ಲೈನ್-ಒಎಂಆರ್ ಮಾದರಿ (Offline OMR type) ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು. ಅಭ್ಯರ್ಥಿಯು ಅರ್ಹತೆಗಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಒಟ್ಟು ಅಂಕಗಳಲ್ಲಿ ಕನಿಷ್ಠ ಶೇಕಡ 35 ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿರುತ್ತದೆ. ಪತ್ರಿಕೆ 1: (ಎ) ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ವಿಷಯಗಳು. (ಬಿ) ದೈನಂದಿನ ಗ್ರಹಿಕೆಯ ವಿಷಯಗಳು (ಸಿ) ಭಾರತದ ಸಂವಿಧಾನದ ಸ್ಕೂಲ ನೋಟದ ವಿಷಯಗಳು. (ಡಿ) ವಿಶೇಷವಾಗಿ ಕರ್ನಾಟಕ್ಕೆ ಸಂಬಂಧಿಸಿದ ಭಾರತದ ಇತಿಹಾಸ. (ಇ) ಕರ್ನಾಟಕ್ಕೆ ಸಂಬಂಧಿಸಿದಂತೆ ಭಾರತದ ಭೂಗೋಳ ವಿಷಯಗಳು. (ಎಫ್) ರಾಜ್ಯ ಮತ್ತು ಪ್ರಾದೇಶಿಕ ಆಡಳಿತ ಕುರಿತ ವಿಷಯಗಳು.(ಜಿ) ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳಿಗೆ ಸಂಬಂಧಿಸಿದ ಉಪಕ್ರಮಗಳನ್ನು ಒಳಗೊಂಡಂತೆ ಕರ್ನಾಟಕ ಆರ್ಥಿಕತೆಯ ಅಭಿವೃದ್ಧಿ ಕುರಿತ ವಿಷಯಗಳು. (ಎಚ್) ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು. 

ಪತ್ರಿಕೆ 2:

(ಎ) ಸಾಮಾನ್ಯ ಜ್ಞಾನ

(ಬಿ) ಸಾಮಾನ್ಯ ಇಂಗ್ಲೀಷ್‌

(ಸಿ) ಕಂಪ್ಯೂಟರ್‌ ಜ್ಞಾನ   

ಬೆಂಗಳೂರು ಮೆಟ್ರೊದಲ್ಲಿ ಖಾಲಿ ಇರುವ ಸೆಕ್ರೆಟರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ವೇತನ ರೂ. 164000/- BMRCL Company Secretary recruitment 2026

ಸ್ನೇಹಿತರೇ ಶೀಘ್ರದಲ್ಲಿಯೇ ಗ್ರಾಮ ಆಡಳಿತಾಧಿಕಾರಿ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಬೃಹತ್‌ ನೇಮಕಾತಿ ಅಧಿಸೂಚನೆ ಹೊರಬೀಳುವ ನಿರೀಕ್ಷೆ ಇದ್ದು, ಆಸಕ್ತ ಅಭ್ಯರ್ಥಿಗಳು ಈಗಿನಿಂದಲೇ ತಮ್ಮ ಸಿದ್ದತೆಯನ್ನು ಮಾಡಿಕೊಳ್ಳಿ. ಉಳ್ಳವರಿಗೆ ನೂರೆಂಟು ಆಯ್ಕೆ, ಆದರೆ ಸ್ಪರ್ಧಾರ್ಥಿಗಳಿಗೆ ಒಂದೇ ಆಯ್ಕೆ ಅದು ಪರಿಶ್ರಮ. ಎಲ್ಲರೂ ಜಾಗೃತರಾಗಿರಿ ಮುಂದೊಂದು ದಿನ ದೇಶ ನೋಡುವಂತ ಕೈಂಕರ್ಯ ನಿಮ್ಮಿಂದಾಗಲಿ ಎಂಬ ಆಶಯ ನಮ್ಮದು. ಈ ಲೇಖನವನ್ನು ಆದಷ್ಟು ಶೇರ್‌ ಮಾಡಿ ಮತ್ತು ನಮ್ಮ ಟೆಲಿಗ್ರಾಮ್‌ ಹಾಗೂ ವಾಟ್ಸಪ್‌ ಗ್ರೂಪ್‌ ಗಳಿಗೆ ಸೇರಿಕೊಳ್ಳಿ. ಧನ್ಯವಾದಗಳು…

504 ಕೆಎಎಸ್‌ (ಗೆಜೆಟೆಡ್‌ ಪ್ರೊಬೇಶನರಿ) ಹುದ್ದೆಗಳ ನೇಮಕಾತಿಗೆ ಕೆಪಿಎಸ್ಸಿಯಿಂದ ಅರ್ಜಿ: Check here compete details about  KAS recruitment 2026

 

 

 

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ):

1) ಎಷ್ಟು ಹುದ್ದೆಗಳಿಗೆ VAO ನೇಮಕಾತಿ ನಡೆಯಬಹುದು

ಉತ್ತರ: ಒಟ್ಟು 500 ಹುದ್ದೆಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ.

2) ಜಿಲ್ಲಾವಾರು ಹುದ್ದೆಗಳ ಮಾಹಿತಿ ನೀಡಿ.

ಸದ್ಯ ಜಿಲ್ಲಾವಾರು ಹುದ್ದೆಗಳ ಮಾಹಿತಿ ಲಭ್ಯವಿಲ್ಲ. ಪ್ರತಿ ಜಿಲ್ಲೆಗೆ ಅವಶ್ಯವಿರುವ ಹುದ್ದೆಗಳ ಸಂಖ್ಯೆಯನ್ನು ಕೇಳಲಾಗಿದೆ. ಜಿಲ್ಲೆಯಿಂದ ಮಾಹಿತಿ ಬಂದ ನಂತರ ಮಾಹಿತಿ ಲಭ್ಯವಾಗುತ್ತದೆ.

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top