ಪಿ.ಎಚ್.ಡಿ ಕಡ್ಡಾಯಕ್ಕೆ ತೀವ್ರ ವಿರೋಧ: ಉನ್ನತಾ ಶಿಕ್ಷಣ ವಿದ್ಯಾರ್ಹತೆ, ನೇಮಕಾತಿ & ಬಡ್ತಿಯಲ್ಲಿ ಬದಲಾವಣೆ ತರಲು ಅಧಿಸೂಚನೆ: UGC Regulations for Qualification, Appointment & CAS 2025
ನಮಸ್ತೆ ಸ್ನೇಹಿತರೆ ಉನ್ನತಾ ಶಿಕ್ಷಣದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗವು (UGC) ಹೊಸ ತಿದ್ದುಪಡಿ ನಿಯಮಾವಳಿಗಳನ್ನ ಜಾರಿಗೊಳಿಸಿದೆ. ಯುಜಿಸಿ ಯು ಕಾಲೇಜು ಮತ್ತು ವಿಶ್ವವಿದ್ಯಾಲಯ ಬೋಧಕರ ಕನಿಷ್ಠ ವಿದ್ಯಾರ್ಹತೆ, ನೇಮಕಾತಿ ಮತ್ತು ವೃತ್ತಿ ಪದೋನ್ನತಿ ನಿಯಮಾವಳಿಗಳ ನಿಯಮ 2025 ರೂಪಿಸಿ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಅಷ್ಟೇ ಅಲ್ಲದೆ ಪ್ರಕಟಿಸಿರುವ ಕರಡು ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಯಾವುದೇ ಸಲಹೆ ಮತ್ತು ಆಕ್ಷೇಪಣೆಗಳನ್ನು ಸಾರ್ವಜನಿಕರಿಂದ ಆಹ್ವಾನಿಸಲಾಗಿದೆ. ಈ ನಿಯಮಾವಳಿಗಳಿಗೆ ತೀವ್ರ ಆಕ್ಷೆಪ ವ್ಯಕ್ತವಾಗಿದೆ ಮತ್ತು ಆಕ್ಷೇಪಣೆ ಸಲ್ಲಿಸಲು ಪ್ರಾಧ್ಯಾಪಕ ವರ್ಗ ನಿರ್ದರಿಸಿದೆ.
2025ರ ನಿಯಮಾವಳಿಗಳ ಪ್ರಕಾರ ಕನಿಷ್ಠ ವಿದ್ಯಾರ್ಹತೆ ಮತ್ತು ಬಡ್ತಿಯಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಕಾಣಬಹುದಾಗಿದೆ ಅವುಗಳನ್ನು ಕೆಳಗಿನಂತೆ ವಿವರಿಸಲಾಗಿದೆ.
ನೇರ ನೇಮಕಾತಿ/ Direct Recruitment:
ಅಸಿಸ್ಟೆಂಟ್ ಪ್ರೊಫೆಸರ್ ನೇರ ನೇಮಕಾತಿ ಹೊಂದಲು ಕನಿಷ್ಠ 55% ನಷ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಮತ್ತು ಕೆಸೆಟ್, ನೆಟ್ ಅಥವಾ ಪಿ ಎಚ್ ಡಿ ಅರ್ಹತೆಯನ್ನು ಹೊಂದಿರಬೇಕು. ಅಸೋಸಿಯೇಟ್ ಪ್ರೊಫೆಸರ್ ಆಗಿ ನೇರ ನೇಮಕಾತಿ ಹೊಂದಲು ಸಹಾಯಕ ಪ್ರಾಧ್ಯಾಪಕರಾಗಿ ಕಾಲೇಜು ಅಥವಾ ವಿಶ್ವವಿದ್ಯಾಲಯಗಳಲ್ಲಿ ಕನಿಷ್ಠ 8 ವರ್ಷಗಳ ಬೋಧನಾ ಅಥವಾ ಸಂಶೋಧನಾ ಅನುಭವವನ್ನು ಹೊಂದಿರುವುದು ಅವಶ್ಯಕವಾಗಿರುತ್ತದೆ. ಹಾಗೆಯೇ ಪ್ರೊಫೆಸರ್ ಆಗಿ ನೇರ ನೇಮಕ ಹೊಂದಲು ಅಸಿಸ್ಟೆಂಟ್ ಪ್ರೊಫೆಸರ್ ಅಥವಾ ಅಸೋಸಿಯೇಟ್ ಪ್ರೊಫೆಸರ್ ಆಗಿ ಕಾಲೇಜು ಅಥವಾ ವಿಶ್ವವಿದ್ಯಾಲಯಗಳಲ್ಲಿ ಕನಿಷ್ಠ 10 ವರ್ಷಗಳ ಬೋಧನಾ ಅಥವಾ ಸಂಶೋಧನಾ ಅನುಭವವನ್ನು ಹೊಂದಿರಬೇಕು.
ವೃತ್ತಿಪದೋನ್ನತಿ ಯೋಜನೆಯಲ್ಲಿ ಬಡ್ತಿ (CAS Promotion):
ಅಸಿಸ್ಟೆಂಟ್ ಪ್ರೊಫೆಸರ್ ಅಕಾಡೆಮಿಕ್ ಲೆವೆಲ್ 10 ರಿಂದ 11ಕ್ಕೆ ವೃತ್ತಿಪದೋನ್ನತಿಯನ್ನು ಹೊಂದಲು ಪಿಎಚ್ಡಿ ಕಡ್ಡಾಯವಾಗಿರುವುದಿಲ್ಲ ಆದರೆ ಸಹಾಯಕ ಪ್ರಾಧ್ಯಾಪಕ 11 ರಿಂದ 12 ಹಂತಕ್ಕೆ ವೃತ್ತಿ ಪದೋನ್ನತಿಯನ್ನು ಹೊಂದಲು ಸಂಬಂಧಿಸಿದ ವಿಷಯದಲ್ಲಿ ಪಿ ಎಚ್ ಡಿ ಡಿಗ್ರಿಯನ್ನು ಕಡ್ಡಾಯವಾಗಿ ಗಳಿಸಿಕೊಂಡಿರಬೇಕು.
ಅಸಿಸ್ಟೆಂಟ್ ಪ್ರೊಫೆಸರ್ 12 ರಿಂದ ಅಸೋಸಿಯೇಟ್ ಪ್ರೊಫೆಸರ್ 13 ಎ ಹಂತಕ್ಕೆ ವೃತ್ತಿಪದೋನ್ನತಿಯನ್ನು ಹೊಂದಲು ಪಿ.ಎಚ್.ಡಿ ಜೊತೆಗೆ ಯುಜಿಸಿ ಕೇರ್ ಲಿಸ್ಟ್ ನಲ್ಲಿರುವ ಜರ್ನಲ್ ನಲ್ಲಿ ಸಂಶೋಧನಾ ಲೇಖನಗಳು ಅಥವಾ ಪುಸ್ತಕಗಳ ಪ್ರಕಟಣೆ ಹಾಗೂ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕನಿಷ್ಠ ನಾಲ್ಕು ಕ್ಷೇತ್ರಗಳಲ್ಲಿ ಗಣನೀಯವಾದ ಕೊಡುಗೆಯನ್ನು ನೀಡಿರಬೇಕು.
ನೆಟ್ ಅಥವಾ ಕೆ ಸೆಟ್ ಮಾನ್ಯತೆ ಕಡಿಮೆ:
2018ರ ನಿಯಮಾವಳಿಗಳ ಪ್ರಕಾರ ಸೆಟ್ ಅಥವಾ ಎನ್ಇಟಿ ಉತ್ತೀರ್ಣತೆಯನ್ನು ಹೊಂದಿದ್ದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ನಿಂದ ಅಸೋಸಿಯೇಟ್ ಪ್ರೊಫೆಸರ್ ವರೆಗೂ ಅರ್ಹತೆಯನ್ನು ಗಳಿಸಿದಂತಾಗುತ್ತಿತ್ತು. ಆದರೆ ಪ್ರಸ್ತುತ 2025ರ ನಿಯಮಾವಳಿಗಳ ಪ್ರಕಾರ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಎಂಟ್ರಿ ಲೆವೆಲ್ ಗೆ ಮಾತ್ರ ಅರ್ಹತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಮುಂದುವರೆದು ಕರಿಯರ್ ಅಡ್ವಾನ್ಸ್ ಮೆಂಟ್ ಯೋಜನೆಯಲ್ಲಿ ಪದೋನ್ನತಿ ಹೊಂದಲು ಸಹಾಯಕ ಪ್ರಾಧ್ಯಾಪಕರು ಕಡ್ಡಾಯವಾಗಿ ಪಿಎಚ್ಡಿ ಯನ್ನು ಗಳಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ
ಪಿ.ಎಚ್.ಡಿ ಕಡ್ಡಾಯಕ್ಕೆ ವ್ಯಾಪಕ ವಿರೋಧ:
ಅಸಿಸ್ಟೆಂಟ್ ಪ್ರೊಫೆಸರ್/ ಅಸೋಸಿಯೇಟ್ ಪ್ರೊಫೆಸರ್ ಆಗಿ ನೇಮಕ ಅಥವಾ ವೃತ್ತಿ ಪದೊನ್ನತಿ ಹೊಂದಲು ಪಿ.ಎಚ್.ಡಿ ಕಡ್ಡಾಯಗೊಳಿಸಿರುವುದು ಹಾಗೂ ನೆಟ್/ ಸ್ಲೆಟ್ ನ ಮಾನ್ಯತೆಯನ್ನು ಕಡಿಮೆಗೊಳಿಸಿರುವುದನ್ನು ಹಾಗೂ ಕೆಲವು ಕಠಿಣ ನಿಯಮಾವಳಿಗಳನ್ನು ರೂಪಿಸಿರುವುದನ್ನು ಬೋಧಕ ಸಮುದಾಯ ತೀವ್ರ ಆಕ್ಷೇಪಣೆಯನ್ನು ಎತ್ತಿದೆ. ಪ್ರಸ್ತುತ ವಿಶ್ವವಿದ್ಯಾಲಯಗಳಲ್ಲಿ ಅಗತ್ಯವಿರುವಷ್ಟು ಪಿ.ಎಚ್.ಡಿ ಸೀಟುಗಳು ಲಭ್ಯವಿರುವುದಿಲ್ಲ ಹಾಗೆಯೇ ಕೆಲವು ವಿಷಯಗಳಲ್ಲಿ ಮಾರ್ಗದರ್ಶಕರ ಕೊರತೆ ಇದೆ ಅಷ್ಟಾಗಿಯೂ ಪಿ.ಎಚ್.ಡಿ ಸೀಟು ಲಭ್ಯವಾದರೂ ಗುಣಮಟ್ಟದ ಸಂಶೋಧನೆ ನಡೆಯುತ್ತಿಲ್ಲ ಆಗಿದ್ದರೂ ಪಿ.ಎಚ್.ಡಿ ಕಡ್ಡಾಯಗೊಳಿಸುವುದು ಔಚಿತ್ಯವಲ್ಲ ಎಂಬುದು ಸಹಾಯಕ ಪ್ರಾಧ್ಯಾಪಕ ಆಕಾಂಕ್ಷಿಗಳ ಅಭಿಪ್ರಾಯವಾಗಿದೆ.
ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ. ಆದಾಗ್ಯೂ ಆಫೀಶಿಯಲ್ ವೆಬ್ಸೈಟ್/ ಸಂಸ್ಥೆಯನ್ನ ಒಮ್ಮೆ ಸಂಪರ್ಕಿಸಿ ಮತ್ತೊಮ್ಮೆ ಖಚಿತ ಪಡಿಸಿ