ರಾಜ್ಯ ಸರ್ಕಾರಿ ನೌಕರರು ಈ ಕೆಲಸ ಮಾಡದಿದ್ದರೇ.! ಜನವರಿ ತಿಂಗಳ ವೇತನ ಸ್ಥಗಿತ..! Alert to State Govt employees to do this work for January salary

WhatsApp Group Join Now
Telegram Group Join Now
Spread the love

ರಾಜ್ಯ ಸರ್ಕಾರಿ ನೌಕರರು ಈ ಕೆಲಸ ಮಾಡದಿದ್ದರೇ.! ಜನವರಿ ತಿಂಗಳ ವೇತನ ಸ್ಥಗಿತ..! Alert to State Govt employees to do this work for January salary

ಸರ್ಕಾರದಿಂದ ನೇರವಾಗಿ / ಪರೋಕ್ಷವಾಗಿ ನೇಮಕಗೊಂಡಿರುವ ಗ್ರೂಪ್ ‘ಎ’ ‘ಬಿ’ ಮತ್ತು ‘ಸಿ’ ಗುಂಪಿನ ಅರ್ಹ ಅಧಿಕಾರಿಗಳು/ನೌಕರರು ಕಡ್ಡಾಯವಾಗಿ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವುದನ್ನು ಕಾಲಾವಧಿಯನ್ನು ವಿಸ್ತರಿಸಿ ಸರ್ಕಾರದಿಂದ ಆದೇಶ ಹೊರಬಿದ್ದಿದೆ. ಇದೇ ವೇಳೆ ಇದೇ ತಿಂಗಳು ಅಂದರೇ ಜನವರಿ 16ನೇ ತಾರೀಖಿನ ಒಳಗಾಗಿ ಕಡ್ಡಾಯವಾಗಿ ಎಲ್ಲರೂ ಸ್ಯಾಲರಿ ಪ್ಯಾಕೇಜ್‌ ಗೆ ಕ್ರಮವಹಿಸಲು ಸೂಚಿಸಲಾಗಿದೆ. 

ಸರ್ಕಾರದ ಕಾರ್ಯದರ್ಶಿ, ಆರ್ಥಿಕ ಇಲಾಖೆ (ವಿತ್ತೀಯ ಸುಧಾರಣೆ), ಬಹುಮಹಡಿ ಕಟ್ಟಡ, ಬೆಂಗಳೂರು. ವತಿಯಿಂದ ಯೋಜನಾ ನಿರ್ದೇಶಕರು, ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ-2 5ನೇ ಮಹಡಿ, ಕೆಪಿಸಿಎಲ್ ಕಟ್ಟಡ, ಅರಮನೆ ರಸ್ತೆ, ಬೆಂಗಳೂರು. ಇವರಿಗೆ ಬರೆದ ಪತ್ರದಲ್ಲಿ ಎಲ್ಲಾ ಅರ್ಹ “ಎ”, “ಬಿ” ಮತ್ತು “ಸಿ” ಗುಂಪಿನ ಅಧಿಕಾರಿಗಳು/ನೌಕರರಿಗೆ ಕಡ್ಡಾಯವಾಗಿ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ದಿನಾಂಕ: 15.12.2025 ರೊಳಗಡೆ ನೋಂದಾಯಿಸಿಕೊಳ್ಳದ ಅಧಿಕಾರಿಗಳ ಸಂಬಳದ ವಿತರಣೆಯನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಲು ತಿಳಿಸಲಾಗಿತ್ತು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಲ್ಲಿ ಖಾಲಿ ಇರುವ SDA & FDA ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: 

ಆದರೆ, ಹಲವು ಅಧಿಕಾರಿಗಳು/ನೌಕರರು ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವಲ್ಲಿ ಇನ್ನೂ ಹೆಚ್ಚಿನ ಕಾಲಾವಕಾಶ ಕೋರಿದ್ದರಿಂದ, ‘ಎ’ ಮತ್ತು “ಬಿ” ಗುಂಪಿನ ಅಧಿಕಾರಿಗಳಿಗೆ ಹಾಗೂ ‘ಸಿ’ ಗುಂಪಿನ ನೌಕರರಿಗೆ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳಲು ದಿನಾಂಕ: 16.01.2026ರ ವರೆಗೆ ಕಾಲಾವಕಾಶವನ್ನು ವಿಸ್ತರಿಸಲಾಗಿದೆ.

ಸರ್ಕಾರಿ ನೌಕರಿ ಸ್ಯಾಲರಿ ಪ್ಯಾಕೇಜ್ ಎಂದರೇನು?

“ಸರ್ಕಾರಿ ನೌಕರಿ ಸ್ಯಾಲರಿ ಪ್ಯಾಕೇಜ್” ಎಂದರೆ ಸರ್ಕಾರಿ ಉದ್ಯೋಗಿಗಳಿಗೆ ಸಿಗುವ ಒಟ್ಟು ವೇತನ ಮತ್ತು ಅದಕ್ಕೆ ಸಂಬಂಧಿಸಿದ ಇತರ ಆರ್ಥಿಕ ಸೌಲಭ್ಯಗಳ ಮೊತ್ತವಾಗಿದೆ. ಇದನ್ನು ಮುಖ್ಯವಾಗಿ ಎರಡು ರೀತಿಯಲ್ಲಿ ಅರ್ಥೈಸಬಹುದು:

ವೇತನದ ರಚನೆ (Salary Structure): ಸರ್ಕಾರದಿಂದ ನೇರವಾಗಿ ಸಿಗುವ ಸಂಬಳ ಮತ್ತು ಭತ್ಯೆಗಳು.

ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ತೆರಿಗೆ ಸಹಾಯಕ,  MTS ಹುದ್ದೆಗಳಿಗೆ ಅರ್ಜಿ ಆಹ್ವಾನ: Income tax Dept Grou C  Jobs 2026

ಬ್ಯಾಂಕ್ ಸ್ಯಾಲರಿ ಪ್ಯಾಕೇಜ್ (Bank Salary Package):

ಸರ್ಕಾರಿ ನೌಕರರಿಗಾಗಿ ಬ್ಯಾಂಕುಗಳು ನೀಡುವ ವಿಶೇಷ ಖಾತೆ ಮತ್ತು ವಿಮೆ ಸೌಲಭ್ಯಗಳು.

ಬ್ಯಾಂಕ್ ಸ್ಯಾಲರಿ ಪ್ಯಾಕೇಜ್ (Bank Salary Package Benefits)

ಸರ್ಕಾರಿ ನೌಕರರ ವೇತನವು ನಿರ್ದಿಷ್ಟ ಬ್ಯಾಂಕ್ (ಉದಾ: SBI, Canara Bank, HDFC) ಮೂಲಕ ಜಮೆಯಾಗುವುದರಿಂದ, ಆ ಬ್ಯಾಂಕುಗಳು “Salary Package Account” ಎಂಬ ವಿಶೇಷ ಸೌಲಭ್ಯವನ್ನು ನೀಡುತ್ತವೆ. ಸಾಮಾನ್ಯ ಉಳಿತಾಯ ಖಾತೆಗಿಂತ ಇದು ಹೇಗೆ ಭಿನ್ನವಾಗಿದೆ ಎಂಬ ಮಾಹಿತಿ ಇಲ್ಲಿದೆ:

ಶೂನ್ಯ ಶಿಲ್ಕು (Zero Balance Account): ಖಾತೆಯಲ್ಲಿ ಕನಿಷ್ಠ ಹಣ (Minimum Balance) ಇಡದಿದ್ದರೂ ದಂಡ ವಿಧಿಸುವುದಿಲ್ಲ.

ಉಚಿತ ವಿಮೆ (Free Insurance):

ಅಪಘಾತ ವಿಮೆ (Personal Accident Insurance): ಅಪಘಾತದಲ್ಲಿ ಮರಣ ಹೊಂದಿದರೆ ಅಥವಾ ಅಂಗವೈಕಲ್ಯ ಉಂಟಾದರೆ ರೂ. 20 ಲಕ್ಷದಿಂದ 1 ಕೋಟಿಯವರೆಗೆ ಉಚಿತ ವಿಮೆ ಸಿಗುತ್ತದೆ (ಬ್ಯಾಂಕ್ ಮತ್ತು ವೇತನದ ಶ್ರೇಣಿಯ ಮೇಲೆ ಅವಲಂಬಿತ).

Grama Panchayath recruitment 2026: ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಕರವಸೂಲಿಗಾರರು ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ

ವಿಮಾನ ಅಪಘಾತ ವಿಮೆ: ವಿಮಾನ ಪ್ರಯಾಣದ ವೇಳೆ ಅಪಘಾತ ಸಂಭವಿಸಿದರೆ ಹೆಚ್ಚಿನ ವಿಮಾ ರಕ್ಷಣೆ.

ಸಾಲ ಸೌಲಭ್ಯಗಳು (Loan Benefits): ಗೃಹ ಸಾಲ (Home Loan), ವಾಹನ ಸಾಲ (Car Loan) ಮತ್ತು ವೈಯಕ್ತಿಕ ಸಾಲಗಳಿಗೆ (Personal Loan) ಬಡ್ಡಿ ದರದಲ್ಲಿ ರಿಯಾಯಿತಿ ಮತ್ತು ಪ್ರಕ್ರಿಯೆ ಶುಲ್ಕ (Processing Fee) ಮನ್ನಾ.

ಓವರ್ ಡ್ರಾಫ್ಟ್ (Overdraft): ತುರ್ತು ಸಂದರ್ಭದಲ್ಲಿ ಖಾತೆಯಲ್ಲಿ ಹಣವಿಲ್ಲದಿದ್ದರೂ, 2 ತಿಂಗಳ ಸಂಬಳದಷ್ಟು ಹಣವನ್ನು ಮುಂಗಡವಾಗಿ ಪಡೆಯುವ ಸೌಲಭ್ಯ.

ಉಚಿತ ಎಟಿಎಂ ಬಳಕೆ: ಯಾವುದೇ ಬ್ಯಾಂಕ್ ಎಟಿಎಂನಲ್ಲಿ ಅನಿಯಮಿತ ಬಾರಿ ಹಣ ತೆಗೆಯುವ ಸೌಲಭ್ಯ.

ಗಮನಿಸಿ: ಈ ಬ್ಯಾಂಕ್ ಪ್ಯಾಕೇಜ್ ಸೌಲಭ್ಯಗಳನ್ನು ಪಡೆಯಲು, ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ನಿಮ್ಮ ಖಾತೆಯನ್ನು “Salary Package Account” ಆಗಿ ಪರಿವರ್ತಿಸಿಕೊಳ್ಳಬೇಕು (Convert to SGSP/CGSP Account).

 

ಕೊನೆಯ ಮಾತು:

ಒಟ್ಟಾರೆಯಾಗಿ, ಸರ್ಕಾರಿ ನೌಕರಿ ಸ್ಯಾಲರಿ ಪ್ಯಾಕೇಜ್ ಎಂದರೆ ಕೇವಲ ತಿಂಗಳ ಸಂಬಳವಲ್ಲ; ಅದು ಉದ್ಯೋಗ ಭದ್ರತೆ, ಪಿಂಚಣಿ ಸೌಲಭ್ಯ, ವೈದ್ಯಕೀಯ ನೆರವು ಮತ್ತು ಬ್ಯಾಂಕುಗಳಿಂದ ಸಿಗುವ ಉಚಿತ ವಿಮಾ ಸೌಲಭ್ಯಗಳ ಒಂದು ಬೃಹತ್ ಮೊತ್ತವಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಯಾವಾಗ ಏನು ಬೇಕಾದರೂ ಅವಘಡಗಳು ಸಂಭವಿಸಬಹುದು. ಅಂತಹ ಸಂದರ್ಭದಲ್ಲಿ ತಮ್ಮನ್ನು ನಂಬಿರುವ ಒಂದು ಕುಟುಂಬ ಪರಿತಪಿಸಬೇಕಾಗುತ್ತದೆ. ಅಷ್ಟೆ ಅಲ್ಲದೆ ಬ್ಯಾಂಕುಗಳು ನೀಡುವ ಸ್ಯಾಲರಿ ಪ್ಯಾಕೇಜ್ ಗಳು ತಮ್ಮ ಹಕ್ಕನ್ನು ಸಾಬೀತುಪಡಿಸುತ್ಯದೆ‌. ಆದ್ದರಿಂದ ನೌಕರರು ಕಡ್ಡಾಯವಾಗಿ ತಮ್ಮ ಸ್ಯಾಲರಿ ಬ್ಯಾಂಕ್‌ಗೆ ತೆರಳಿ ಕೂಡಲೇ ಸ್ಯಾಲರಿ ಪ್ಯಾಕೇಜ್ ಮಾಡಿಸಿಕೊಳ್ಳಿ. ಧನ್ಯವಾದಗಳು

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top