ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಆಪ್ತಸಮಾಲೋಚಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ನಮಸ್ತೆ ಸ್ನೇಹಿತರೇ, ಸ್ಪರ್ಧಾದೀಪ ವೆಬ್ಸೈಟ್ ನಿಂದ ಇಂದು ಹೊಸ ಉದ್ಯೋಗ ಮಾಹಿತಿಯನ್ನು ನೀಡುತ್ತೇವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಇದರಲ್ಲಿ ಖಾಲಿ ಇರುವ ಮನ: ಶಾಸ್ತ್ರಜ್ಞರು/ ಆಪ್ತ ಸಮಾಲೋಚಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
State Bank of India ದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ದಿನಾಂಕ 22-02-2025 ರ ಒಳಗಾಗಿ ಅರ್ಜಿಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೀತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.
ಭಾರತೀಯ ಸ್ಟೇಟ್ ಬ್ಯಾಂಕ್, ಸ್ಥಳೀಯ ಪ್ರಧಾನ ಕಛೇರಿ, ಸಂತ ಮಾರ್ಕರ ರಸ್ತೆ, ಬೆಂಗಳೂರು, ಇವರು ಗುತ್ತಿಗೆ ಆಧಾರದ ಮೇಲೆ ಮನಃಶಾಸ್ತ್ರಜ್ಞರು/ವೃತ್ತಿಪರ ಸಲಹೆಗಾರರನ್ನು ನೇಮಕ ಮಾಡಲು ಅರ್ಜಿಗಳನ್ನು ಆಹ್ವಾನಿಸಿದ್ದಾರೆ.
ಶೈಕ್ಷಣಿಕ ವಿದ್ಯಾರ್ಹತೆ:
(1) ವೈದ್ಯಕೀಯ ಮನೋವಿಜ್ಞಾದಲ್ಲಿ ಸ್ನಾನಕೋತ್ತರ ಪದವಿ (ಎಂ.ಎ / ಎಂ.ಎಸ್ಸಿ)
(2) ವೃತ್ತಿಪರ ಆಪ್ತ ಸಮಾಲೋಚಕರಾಗಿ ಕನಿಷ್ಠ 3 ವರ್ಷಗಳ ಅನುಭವ, ವಿಶೇಷವಾಗಿ ಕಾರ್ಪೊರೇಟ್ ಪರಿಸರದಲ್ಲಿ ಅಥವಾ ಯಾವುದೇ ಸಾಂಸ್ಥಿಕ ವ್ಯವಸ್ಥೆಯಲ್ಲಿ ಅನುಭವವಿರಬೇಕು.
(3) ಸಿಬ್ಬಂದಿ ಸಹಾಯಕ ಕಾರ್ಯಕ್ರಮಗಳಲ್ಲಿ (EAP) ವಿಶೇಷ ಮಾನ್ಯತೆ ಹೊಂದಿರಬೇಕು.
ಅಪೇಕ್ಷಿತ ಅರ್ಹತೆ:
(1) ನಡವಳಿಕೆ ವಿಜ್ಞಾನದಲ್ಲಿ ಸಲಹೆಗಾರರಾಗಿ, ಮನೋಚಿಕಿತ್ಸಕರಾಗಿ ವೃತ್ತಿಪರ ಪ್ರಮಾಣಪತ್ರವನ್ನು ಹೊಂದಿರಬೇಕು
(2) ಮಾನಸಿಕ ಆರೋಗ್ಯ ಅಥವಾ ನಡವಳಿಕೆ ವಿಜ್ಞಾನ ಡಿಪ್ಲೊಮೊಗಳಲ್ಲಿ ಹೆಚ್ಚುವರಿ ಪ್ರಮಾಣಪತ್ರವನ್ನು ಹೊಂದಿರಬೇಕು.
ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕತೆ :
(1) ಬಲವಾದ ಆತ್ಮೀಯ ಸಂಬಂಧಗಳು ಮತ್ತು ಸಂವಹನ ಕೌಶಲ್ಯಗಳು, ವಿಶ್ವಾಸ ಮತ್ತು ಸಂಬಂಧವನ್ನು ತ್ವರಿತವಾಗಿ ನಿರ್ಮಿಸುವ ಸಾಮರ್ಥ್ಯವಿರಬೇಕು
(2) ಪ್ರತಿಯೊಂದು ಸಲಹಾ ಅವಧಿಗಳಲ್ಲಿ ಗೌಪ್ಯತೆ ಕಾಪಾಡುವ, ಒಮ್ಮತವನ್ನು ಹಾಗೂ ವೃತ್ತಿಪರತೆಯ ಕೌಶಲ್ಯವನ್ನು ಪ್ರದರ್ಶಿಸುವ ಸಾಮರ್ಥ್ಯವಿರಬೇಕು.
(3) ಒತ್ತಡ ನಿರ್ವಹಣೆ ತಂತ್ರಗಾರಿಕೆ, ಮಾನಸಿಕ ಆರೋಗ್ಯಕ್ಕೆ ಸಂಬಂದಪಟ್ಟಂತೆ ಪ್ರಥಮ ಚಿಕಿತ್ಸೆ ಮತ್ತು ತುರ್ತು ಸಂದರ್ಭದಲ್ಲಿ ಮಧ್ಯಸ್ಥಿಕೆ ವಹಿಸಬಲ್ಲ ಸಾಮರ್ಥ್ಯವಿರಬೇಕು.
(4) ಕಾರ್ಯಸ್ಥಳದ ಚಟುವಟಿಕೆಗಳ ಬಗ್ಗೆ ಸಮರ್ಪಕವಾದ ಜ್ಞಾನ, ಕಾರ್ಯಕ್ಕೆ ಸಂಬಂಧಪಟ್ಟ ಒತ್ತಡದಂತಹ ಸಮಸ್ಯೆಗಳಿಗೆ ಪರಿಹಾರ ಸೂಚಿಸಬಲ್ಲ, ನಿಭಾಯಿಸಬಲ್ಲ ಸಿಬ್ಬಂದಿಯ ಕ್ಷೇಮಕ್ಕೆ ಸ್ಪಂದಿಸಬಲ್ಲ ಸಾಮರ್ಥ್ಯವಿರಬೇಕು
(5) ಅಗತ್ಯಬಿದ್ದಾಗ ಆಪ್ತ ಸಮಾಲೋಚನಾ ಪ್ರಕರಣಗಳನ್ನು ದಾಖಲಿಸಲು ಲಿಖಿತ ಮತ್ತು ಮೌಖಿಕ ಸಂವಹನದಲ್ಲಿ ಸಾಮರ್ಥ್ಯವಿರಬೇಕು.
6) ಅಭ್ಯರ್ಥಿಯು, ವಿವಿಧ ವಯೋಮಾನದ ಉದ್ಯೋಗಿಗಳೊಂದಿಗೆ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಬಲ್ಲಂತಹ ಪ್ರಬುದ್ಧತೆ ಇರಬೇಕು.
ಬೆಂಗಳೂರು ಮೆಟ್ರೊದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೆ ಕೊನೆಯ ದಿನಾಂಕ: ವೇತನ ರೂ. 62000/-
ಅವಧಿ: ಈ ನೇಮಕಾತಿಯು ಒಂದು ವರ್ಷದ ಅವಧಿಗೆ ಹಾಗೂ ವಾರದಲ್ಲಿ ಎರಡು ಕೆಲಸದ ದಿನಗಳಲ್ಲಿ 2 ಗಂಟೆಗಳ ಕಾಲಕ್ಕೆ ಅನ್ವಯಿಸುತ್ತದೆ.
ಒಪ್ಪಂದದ ಮೇಲೆ ಮನ:ಶಾಸ್ತ್ರಜ್ಞರು/ವೃತ್ತಿಪರ ಆಪ್ತ ಸಮಾಲೋಚಕರಿಗೆ ಪಾವತಿಸುವ ಸಂಭಾವನೆ/ಗೌರವಧನ ಭತ್ಯೆಯ ಒಟ್ಟು ಮೊತ್ತದ ದರ ಮಾತುಕತೆಯಲ್ಲಿ ನಿರ್ಧರಿಸಬಹುದಾಗಿದೆ.
ಆಸಕ್ತ ಎಲ್ಲ ಅಭ್ಯರ್ಥಿಗಳು ಅರ್ಹತೆಯ ಆಧಾರದ ಮೇಲೆ ಆಗತ್ಯವಿರುವ ದಾಖಲೆಗಳೊಂದಿಗೆ ತಮ್ಮ ಬಯೋ-ಡಾಟಾವನ್ನು ದಿನಾಂಕ 25.02.2025 ರೊಳಗೆ ಈ ಕೆಳಗೆ ಸೂಚಿಸಿರುವ ಸಹಾಯಕ ಪ್ರಧಾನ ವ್ಯವಸ್ಥಾಪಕರು-ಮಾನವ ಸಂಪನ್ಮೂಲ, ಭಾರತೀಯ ಸ್ಟೇಟ್ ಬ್ಯಾಂಕ್, ಸ್ಥಳೀಯ ಪ್ರಧಾನ ಕಛೇರಿ. ನಂ. 65, ಅನೆಕ್ಸ್ ಭವನ, 3ನೇ ಮಹಡಿ, ಸಂತ ಮಾರ್ಕರ ರಸ್ತೆ, ಬೆಂಗಳೂರು ಇವರಿಗೆ ಸಲ್ಲಿಸುವಂತೆ ಕೋರಲಾಗಿದೆ. ಅರ್ಹತೆ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳನ್ನು ಆಯ್ಕೆ ಸಮಿತಿಯು ಸಂದರ್ಶನ ನಡೆಸುತ್ತದೆ.
ಪ್ರಮುಖ ಲಿಂಕುಗಳು
ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.