PSTR & GPSTR ನೇಮಕಾತಿ 2026: ಆಯ್ಕೆವಿದಾನದಲ್ಲಿ ಸಮಗ್ರ ಬದಲಾವಣೆ. ಹೇಗಿರಲಿದೆ ಮುಂದೆ ನಡೆಯಲಿರುವ ಶಿಕ್ಷಕರ ನೇಮಕಾತಿ: PSTR & GPSTR Recruitment ammendment 2026
ನಮಸ್ತೆ ಸ್ನೇಹಿತರೇ ಕರ್ನಾಟಕ ಶಿಕ್ಷಣ ಇಲಾಖೆಯಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ) ಮತ್ತು ಪದವೀಧರ ಶಿಕ್ಷಕರು (6 ರಿಂದ 8ನೇ ತರಗತಿ) ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. 1967ರ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ನೇಮಕಾತಿ) ಗೆ ಸಂಬಂಧಿಸಿದಂತೆ ಎರಡು ಪ್ರಮುಖ ತಿದ್ದುಪಡಿ ಜಾರಿ ಮಾಡುವ ಮೂಲಕ ನೇಮಕಾತಿಯ ಆಯ್ಕೆವಿಧಾನದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಇಲ್ಲಿಯವರಗೆ ಶಿಕ್ಷಕರ ನೇಮಕಾತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ, ಟಿಇಟಿಯಲ್ಲಿ ಪಡೆದ ಅಂಕಗಳು, ಪದವಿಯಲ್ಲಿ ಗಳಿಸಿದ ಅಂಕಗಳು ಹಾಗೂ ಶಿಕ್ಷಕರ ವೃತ್ತಿ ಶಿಕ್ಷಣದಲ್ಲಿ ಪಡೆದ ಅಂಕಗಳನ್ನು ನಿರ್ದಿಷ್ಟಪಡಿಸಿದ ಹಾಗೆ ಸರಾಸರಿ ಮಾಡುವ ಮೂಲಕ ಆಯ್ಕೆ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಶೇ. 35% ಅಂಕಗಳನ್ನು ಮಾತ್ರ ಮೀಸಲಿರಿಸಿ ಉಳಿದ 65% ಅಂಕಗಳನ್ನ ಇನ್ನುಳಿದ ಮೂರು ಮಾನದಂಡಗಳಿಗೆ ನೀಡಲಾಗುತ್ತಿತ್ತು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎಷ್ಟೆ ಅಂಕಗಳಿಸಿದರೂ, ಶೈಕ್ಷಣಿಕವಾಗಿ ಹಿಂದೂಳಿದಿದ್ದರೇ ಆಯ್ಕೆಯಾಗದೇ ಹೊರಗುಳಿಯುವ ಆತಂಕವಿತ್ತು. ಎಲ್ಲ ನೇಮಕಾತಿಯಲ್ಲಿ ಕೂಡ ಶೈಕ್ಷಣಿಕ ಅಂಕಗಳಿಗೆ ಅಷ್ಟೊಂದು ಮಹತ್ವ ಕೊಡದೆ ಸಿಇಟಿ ಅಂಕಗಳನ್ನು ಪ್ರಮುಖವೆಂದು ನಿರ್ದರಿಸುವ ಈ ಸ್ಪರ್ಧಾತ್ಮಕ ಕಾಲದಲ್ಲಿ ಕರ್ನಾಟಕ ಶೈಕ್ಷಣಿಕ ವ್ಯವಸ್ಥೆಯ ಈ ದೋಷ ಎದ್ದು ಕಾಣುತಿತ್ತು. ಆದ್ದರಿಂದ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆ ಹೆಚ್ಚು ಅನುಕೂಲ ಮಾಡಿಕೊಡುವ ಹಾಗೆಯೇ ಶೈಕ್ಷಣಿಕ ಅಂಕಗಳಿಗೆ ಈ ಹಿಂದೆ ನೀಡಿದ್ದ ಅಂಕಗಳನ್ನು ಕಡಿಮೆ ಮಾಡಿ ಹೊಸ ತಿದ್ದುಪಡಿಯನ್ನು ರೂಪಿಸಲಾಗಿದೆ. ಅದನ್ನು ರಾಜ್ಯ ಪತ್ರದಲ್ಲಿ ಹೊರಡಿಸಲಾಗಿದೆ. ಶಿಕ್ಷಕ ಆಕಾಂಕ್ಷಿಗಳು ಈ ಬದಲಾವಣೆಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.
ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) ನಿಯಮಗಳು, 1967ನ್ನು ಈ ಮುಂದಿನಂತೆ ತಿದ್ದುಪಡಿ ಮಾಡಲು ಕರ್ನಾಟಕ ನಾಗರಿಕ ಸೇವೆಗಳು ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ 14) ರ ಕಲಂ 3 ಉಪ ಕಲಂ (1) ರೊಂದಿಗೆ ಓದಿಕೊಂಡ ಕಲಂ 8 ರಂತೆ ಪ್ರದತ್ತವಾದ ಅಧಿಕಾರದನ್ವಯ ಕರ್ನಾಟಕ ಸರ್ಕಾರವು ಉದ್ದೇಶಿಸಿದ್ದು, ಅದರಿಂದ ಬಾಧಿತರಾಗಲು ಸಂಭವವಿರುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಸದರಿ ಅಧಿನಿಯಮದ ಕಲಂ-3 ರ ಉಪ ಕಲಂ (2) ರ ಖಂಡ (ಎ) ರಲ್ಲಿ ಅಗತ್ಯಪಡಿಸಿರುವಂತೆ ಈ ಮೂಲಕ ಪ್ರಕಟಿಸಿದೆ. ಹಾಗೂ ಸದರಿ ಕರಡು ತಿದ್ದುಪಡಿ ನಿಯಮಗಳನ್ನು, ಅವುಗಳು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 15 ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.
ಸದರಿ ಕರಡು ತಿದ್ದುಪಡಿ ನಿಯಮಗಳ ಕುರಿತಂತೆ ಯಾವುದೇ ವ್ಯಕ್ತಿಯಿಂದ ನಿಗಧಿತ ಅವಧಿಯೊಳಗೆ ಸ್ಪೀಕೃತವಾಗುವ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸುವುದು. ಆಕ್ಷೇಪಣೆ ಮತ್ತು ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ|| ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು – 560 001 ಇವರ ವಿಳಾಸಕ್ಕೆ ಕಳುಹಿಸತಕ್ಕದ್ದು.
ಮುಂಚೆ ಇದ್ದಂತಹ ಆಯ್ಕೆವಿಧಾನದ ನಿಯಾಮಾವಳಿಗಳು ಏನು?
1) ಡಿಪ್ಲೊಮಾ/ಬಿ.ಇಡಿ/ಸ್ಪೆಷಲ್ ಎಜುಕೇಶನ್ ಅರ್ಹತೆ ಹೊಂದಿರುವವರಿಗೆ:
Derived percentage ಲೆಕ್ಕ ಹಾಕಲು ಅಭ್ಯರ್ಥಿಯು ಡಿಪ್ಲೊಮಾ ಇನ್ ಎಲಿಮೆಂಟರಿ ಎಜುಕೇಶನ್ ಅಥವಾ ಬಿ.ಇಡಿ ಅಥವಾ ಡಿಪ್ಲೊಮಾ ಇನ್ ಸ್ಪೆಷಲ್ ಎಜುಕೇಶನ್ ಅಥವಾ ಬಿ.ಇಡಿ(ಸ್ಪೆಷಲ್ ಎಜುಕೇಶನ್) ವಿದ್ಯಾರ್ಹತೆ ಹೊಂದಿದ್ದಲ್ಲಿ ಕೆಳಗಿನಂತೆ ವೈಯ್ಟೇಜ್(weightage)ನ್ನು ಪರಿಗಣಿಸಲಾಗುವುದು.
| ವಿವರ | ವೈಯ್ಟೇಜ್ (Weightage) |
| ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳು | 0.35 |
| ಟಿ.ಇ.ಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳು | 0.15 |
| ಪದವಿಯಲ್ಲಿ ಪಡೆದ ಅಂಕಗಳು | 0.25 |
| ಶಿಕ್ಷಕರ ಶಿಕ್ಷಣ ಕೋರ್ಸ್ನ್ನಲ್ಲಿ ಪಡೆದ ಅಂಕಗಳು | 0.25 |
2) ನಾಲ್ಕು ವರ್ಷಗಳ ಶಿಕ್ಷಕರ ಶಿಕ್ಷಣ ಪದವಿ ಹೊಂದಿರುವವರಿಗೆ:
Derived percentage ಲೆಕ್ಕ ಹಾಕಲು ಅಭ್ಯರ್ಥಿಯು ನಾಲ್ಕು ವರ್ಷಗಳ ಶಿಕ್ಷಕರ ಶಿಕ್ಷಣ ಪದವಿಯನ್ನು ಹೊಂದಿದ್ದಲ್ಲಿ ಶೇಕಡಾವಾರು ಅಂಕಗಳಿಗಾಗಿ ವೈಯ್ಟೇಜ್ನ್ನು ಈ ಮುಂದಿನಂತೆ ಪರಿಗಣಿಸಲಾಗುವುದು.
| ವಿವರ | ವೈಯ್ಟೇಜ್ (Weightage) |
| ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳು | 0.35 |
| ಟಿ.ಇ.ಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳು | 0.15 |
| ನಾಲ್ಕು ವರ್ಷಗಳ ಬಿ.ಎಲ್.ಇಡಿ, ಅಥವಾ ಬಿಎ/ಬಿಎಸ್ಸಿಇಡಿ ಅಥವಾ ಬಿಎಇಡಿ ಅಥವಾ ಬಿಎಸ್ಸಿಇಡಿ. ಪದವಿಯಲ್ಲಿ ಪಡೆದ ಅಂಕಗಳು | 0.50 |
ಹೊಸ ತಿದ್ದುಪಡಿಯಲ್ಲಿ ಆಯ್ಕೆವಿದಾನ ಹೇಗಿರಲಿದೆ:
1) ಡಿಪ್ಲೊಮಾ/ಬಿ.ಇಡಿ/ಸ್ಪೆಷಲ್ ಎಜುಕೇಶನ್ ಅರ್ಹತೆ ಹೊಂದಿರುವವರಿಗೆ:
| ವಿವರ | ವೈಯ್ಟೇಜ್ (Weightage) |
| ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳು | 0.70 |
| ಟಿ.ಇ.ಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳು | 0.20 |
| ಪದವಿಯಲ್ಲಿ ಪಡೆದ ಅಂಕಗಳು | 0.08 |
| ಶಿಕ್ಷಕರ ಶಿಕ್ಷಣ ಕೋರ್ಸ್ನ್ನಲ್ಲಿ ಪಡೆದ ಅಂಕಗಳು | 0.2 |
2) ನಾಲ್ಕು ವರ್ಷಗಳ ಶಿಕ್ಷಕರ ಶಿಕ್ಷಣ ಪದವಿ ಹೊಂದಿರುವವರಿಗೆ:
| ವಿವರ | ವೈಯ್ಟೇಜ್ (Weightage) |
| ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳು | 0.35 |
| ಟಿ.ಇ.ಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳು | 0.15 |
| ನಾಲ್ಕು ವರ್ಷಗಳ ಬಿ.ಎಲ್.ಇಡಿ, ಅಥವಾ ಬಿಎ/ಬಿಎಸ್ಸಿಇಡಿ ಅಥವಾ ಬಿಎಇಡಿ ಅಥವಾ ಬಿಎಸ್ಸಿಇಡಿ. ಪದವಿಯಲ್ಲಿ ಪಡೆದ ಅಂಕಗಳು | 0.50 |
ಕೊನೆಯ ಮಾತು:
ಸ್ನೇಹಿತರೇ ಈ ತಿದ್ದುಪಡಿ ನಿಯಾಮಾವಳಿಗಳನ್ನು ರಾಜ್ಯ ಸರ್ಕಾರ ತರಲು ನಿರ್ದರಿಸಿದ್ದು, ಸದ್ಯ ಕರಡು ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ ತಮ್ಮ ಆಕ್ಷೇಪ ಅಥವಾ ಸಲಹೆಗಳೆನಾದರೂ ಇದ್ದರೇ, ಅಧಿಸೂಚನೆ ಹೊರಬಿದ್ದ 15 ದಿನಗಳ ಒಳಗಾಗಿ ಸಂಬಂಧಿಸಿದ ಕಛೇರಿಗೆ ಸಲ್ಲಿಸಬಹುದು.ಒಂದು ವೇಳೆ ಯಾವುದೇ ಸಲಹೆ/ ಆಕ್ಷೇಪಣೆಯನ್ನು ಪರಿಗಣಿಸಿದೇ ಇದ್ದರೇ ಇದೇ ತಿದ್ದುಪಡಿಯು ಅಂತಿಮವಾಗಿ ರಾಜ್ಯಪತ್ರದಲ್ಲಿ ಪ್ರಕಟವಾಗಲಿದೆ. ಇದೊಂದು ಐತಿಹಾಸಿಕ ನಿರ್ದಾರವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆಯನ್ನು ಮಾಡಿಕೊಳ್ಳುತ್ತಿರುವ ಶಿಕ್ಷಕ ಆಕಾಂಕ್ಷಿಗಳಿಗೆ ಲಾಭದಾಯಕವಾಗಲಿದೆ.
