ಪಿಎಚ್ಡಿ ಅಭ್ಯರ್ಥಿಗಳಿಗೆ ಸ್ಕಾಲರ್ಶಿಫ್ ಯೋಜನೆಗೆ ಅರ್ಜಿ ಆಹ್ವಾನ: PhD Scholarship Application Invites 2026
ಸ್ನೇಹಿತರೇ ನೀವು ಪಿಎಚ್ಡಿ ಮಾಡುತ್ತಿದ್ದರೇ ಈ ಲೇಖನವನ್ನು ಪೂರ್ತಿಯಾಗಿ ಓದಿಕೊಳ್ಳಿ. ರಾಜ್ಯ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪಿಎಚ್ ಡಿ ವ್ಯಾಸಂಗ ಮಾಡುತ್ತಿರುವ ಹಿಂದೂಳಿದ ವರ್ಗಗಳ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಆಫ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸದರಿ ಮಾಹಿತಿಯನ್ನು ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.
2025-26ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಎಚ್.ಡಿ ಅಧ್ಯಯನ ಪ್ರಾರಂಭಿಸಿರುವ (ದಿನಾಂಕ:10.02.2025ಮತ್ತು ಅದರ ನಂತರ ಪ್ರಥಮ ವರ್ಷದ ಪಿಎಚ್.ಡಿ ಪ್ರಾರಂಭಿಸಿರಬೇಕು) ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, II(ಎ), III(ಎ) ಹಾಗೂ III(ಬಿ) ಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕದ ಶಾಸನಬದ್ಧ ವಿಶ್ವ ವಿದ್ಯಾಲಯಗಳಲ್ಲಿ/ ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪಿಎಚ್.ಡಿ ಅಧ್ಯಯನ ಮಾಡುತ್ತಿರುವ ಹೊಸ ಅಭ್ಯರ್ಥಿಗಳು ಮಾತ್ರ ಆಫ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:09.01.2026ರ ಸಂಜೆ 5.30 ಗಂಟೆ – https://bcwd.karnataka.gov.in ಲಭ್ಯವಿದ್ದು, ಅಭ್ಯರ್ಥಿಗಳು ಎಲ್ಲಾ ಮಾಹಿತಿಯನ್ನು ಓದಿ, ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶೈಕ್ಷಣಿಕ ವಿದ್ಯಾರ್ಹತೆಗಳು:
(a) ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕಗಳನ್ನು ಪಡೆದಿರಬೇಕು.
(b) ವಿಶ್ವವಿದ್ಯಾಲಯ/ಅಧಿಕೃತ ಸಂಸ್ಥೆಗಳಲ್ಲಿ ಸಂಶೋಧನಾ ಮಾರ್ಗದರ್ಶಕರಡಿಯಲ್ಲಿ ಪಿಎಚ್.ಡಿ ಅಧ್ಯಯನಕ್ಕಾಗಿ ನೋಂದಣಿ ಮಾಡಿಕೊಂಡಿರಬೇಕು.
(c) ಅಭ್ಯರ್ಥಿಗಳು ಪೂರ್ಣಾವಧಿ ಪಿಹೆಚ್.ಡಿ ಅಧ್ಯಯನಕ್ಕಾಗಿ ಮಾಡಿಸಿರುವ ನೋಂದಾಣಿ ದಿನಾಂಕವು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುವ ವ್ಯಾಸಂಗ ವೇತನ/ಫೆಲೋಶಿಪ್ ಗಾಗಿ ಅರ್ಜಿ ಸಲ್ಲಿಸಲು ನಿಗದಿಪಡಿಸುವ ಕೊನೆಯ ದಿನಾಂಕಕ್ಕೆ ಹಿಂದಿನ 2 ವರ್ಷದೊಳಗಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸಲು ನಿಗದಿಪಡಿಸುವ ಕೊನೆಯ ದಿನಾಂಕಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯ ಗರಿಷ್ಠ ವಯೋಮಿತಿ 35 ವರ್ಷಗಳು.
ನಿಗದಿಪಡಿಸಿರುವ ಅರ್ಹತೆಗಳು:
(a) ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
(b) ಕರ್ನಾಟಕ ಸರ್ಕಾರ ಅಧಿಸೂಚಿಸಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, II(ಎ), III(ಎ) ಅಥವಾ III(ಬಿ) ಗೆ ಸೇರಿರಬೇಕು.
(c) ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿ/ಅಧೀನಕ್ಕೆ ಒಳಪಡುವ ಹಾಗೂ ಕರ್ನಾಟಕದಲ್ಲಿರುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪೂರ್ಣಾವಧಿ (Full Time) ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರಬೇಕು.
(d) ಈ ಸೌಲಭ್ಯವನ್ನು ಪಡೆಯಲಿಚ್ಛಿಸುವ ಅಭ್ಯರ್ಥಿಯು ಭಾರತ ಸರ್ಕಾರ/ಕರ್ನಾಟಕ ಸರ್ಕಾರ/ವಿಶ್ವವಿದ್ಯಾಲಯ ಅಥವಾ ಇತರೆ ಯಾವುದೇ ಸಂಸ್ಥೆಗಳಿಂದ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಗೆ ಆಯ್ಕೆಯಾಗಿರಬಾರದು ಹಾಗೂ ಫೆಲೋಶಿಪ್ ಪಡೆದಿರಬಾರದು/ಪಡೆಯಬಾರದು. ಯಾವುದೇ ಕಾರಣಕ್ಕೂ ಅಭ್ಯರ್ಥಿಯು ಪಿಎಚ್.ಡಿ ಅಧ್ಯಯನವನ್ನು ಅರ್ಧದಲ್ಲಿ ಮೊಟಕುಗೊಳಿಸಬಾರದು. ಮೊಟಕುಗೊಳಿಸಿದಲ್ಲಿ ಅಂತಹ ಅಭ್ಯರ್ಥಿಗೆ ನೀಡಿದ ವ್ಯಾಸಂಗ ವೇತನ/ಫೆಲೋಶಿಪ್ ಮೊತ್ತವನ್ನು ಸಂಬಂಧಪಟ್ಟ ಅಭ್ಯರ್ಥಿ ಹಾಗೂ ಅವರ ತಂದೆ-ತಾಯಿ/ಪೋಷಕರು ಸರ್ಕಾರಕ್ಕೆ ಹಿಂದಿರುಗಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸೂಚನೆಗಳು
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಈ ಸೌಲಭ್ಯವನ್ನು ಪಡೆಯಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ.
- ಕೇಂದ್ರ ಸರ್ಕಾರ/ರಾಜ್ಯ ಸರ್ಕಾರ/ಅನುದಾನಿತ ಸಂಸ್ಥೆ/ಸಾರ್ವಜನಿಕ ಸ್ವಾಮ್ಯತೆಗೆ ಒಳಪಟ್ಟ ಸಂಸ್ಥೆಗಳ ಉದ್ಯೋಗಿಗಳು ಈ ಸೌಲಭ್ಯವನ್ನು ಪಡೆಯಲು ಅರ್ಹರಲ್ಲ.
- 2025-26ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಎಚ್.ಡಿ ಅಧ್ಯಯನ ಪ್ರಾರಂಭಿಸಿರಬೇಕು (ದಿನಾಂಕ:10.02.2025ಮತ್ತು ಅದರ ನಂತರ ಪ್ರಥಮ ವರ್ಷದ ಪಿಎಚ್.ಡಿ ಪ್ರಾರಂಭಿಸಿರಬೇಕು).
- ಪೂರ್ಣಾವಧಿ ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಮಾಸಿಕ ರೂ.10,000/- ದಂತೆ ಗರಿಷ್ಠ 3 ವರ್ಷಗಳ ಅವಧಿಗೆ ವ್ಯಾಸಂಗ ವೇತನ/ಫೆಲೋಶಿಪ್ ಅನ್ನು ಪ್ರವರ್ಗವಾರು, ಮೀಸಲಾತಿ, ಮೆರಿಟ್, ಅನುದಾನ ಲಭ್ಯತೆ ಹಾಗೂ ಹಾಜರಾತಿಗೆ ಅನುಗುಣವಾಗಿ ಹಾಗೂ ನಿಯಮಾನುಸಾರ ಅರ್ಹ ಅಭ್ಯರ್ಥಿಗಳಿಗೆ ನೀಡಲಾಗುವುದು.
- ತಹಶೀಲ್ದಾರರಿಂದ ಪಡೆಯುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರವು ಕಡ್ಡಾಯವಾಗಿ ಅಭ್ಯರ್ಥಿಯ ಹೆಸರಿನಲ್ಲಿಯೇ ಇರಬೇಕು ಹಾಗೂ ಅದು expiry ಆಗಿರಬಾರದು.
- ಒಂದೇ ಕುಟುಂಬದ ಗರಿಷ್ಠ ಇಬ್ಬರು ಗಂಡು ಮಕ್ಕಳು ಮಾತ್ರ ಈ ಯೋಜನೆಗೆ ಅರ್ಹರು. ಆದರೆ ಈ ನಿರ್ಬಂಧ ಹೆಣ್ಣು ಮಕ್ಕಳಿಗೆ ಅನ್ವಯಿಸುವುದಿಲ್ಲ.
- ಒಬ್ಬ ಅಭ್ಯರ್ಥಿಗೆ ಒಂದು ಬಾರಿ ಮಾತ್ರ ಪಿಎಚ್.ಡಿ ಅಧ್ಯಯನಕ್ಕಾಗಿ ಈ ಸೌಲಭ್ಯವನ್ನು ನೀಡಲಾಗುವುದು.
ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಮಂಜೂರಾತಿಗಾಗಿ ನಿಗಿದಿಪಡಿಸಿರುವ ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯಮಿತಿ.
(a) ಪ್ರವರ್ಗ-I- ರೂ.4.50 ಲಕ್ಷ.
(b) ಪ್ರವರ್ಗ-II(ಎ), III(ಎ) ಮತ್ತು III(ಬಿ) – ರೂ.3.50 ಲಕ್ಷ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ:
ಈ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಅರ್ಹ ಅಭ್ಯರ್ಥಿಗಳು ಆಫ್-ಲೈನ್ ಮೂಲಕ ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸುವುದು. ಅಭ್ಯರ್ಥಿಗಳು ತಾವು ಪಿಎಚ್.ಡಿ ಅಧ್ಯಯನ ಮಾಡುತ್ತಿರುವ ವಿಶ್ವವಿದ್ಯಾಲಯ/ಸಂಸ್ಥೆ ಇರುವಂತಹ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ಇದನ್ನು ಸಲ್ಲಿಸುವುದು.
ಅರ್ಜಿ ಸಲ್ಲಿಸಲು ಲಗತ್ತಿಸಬೇಕಾದ ದಾಖಲೆಗಳು:
ಎಸ್.ಎಸ್.ಎಲ್.ಸಿ/10ನೇ ತರಗತಿಯ ಅಂಕಪಟ್ಟಿ.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
ವಾಸಸ್ಥಳ ಪ್ರಮಾಣ ಪತ್ರ.
ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳು.
ಪಿಎಚ್.ಡಿ ಅಧ್ಯಯನಕ್ಕಾಗಿ ನೋಂದಣಿ ಮಾಡಿರುವ ಬಗ್ಗೆ ವಿಶ್ವವಿದ್ಯಾಲಯ/ಅಧಿಕೃತ ಸಂಸ್ಥೆಯಿಂದ ಪ್ರಮಾಣ ಪತ್ರ (ಇದರಲ್ಲಿ ನೋಂದಣಿ ದಿನಾಂಕವು ಕಡ್ಡಾಯವಾಗಿ ನಮೂದಾಗಿರಬೇಕು).
ಇತರೆ ಯಾವುದೇ ಮೂಲಗಳಿಂದ ವ್ಯಾಸಂಗ ವೇತನಕ್ಕೆ ಆಯ್ಕೆಯಾಗದಿರುವ ಬಗ್ಗೆ ವಿಶ್ವವಿದ್ಯಾಲಯ/ಶಿಕ್ಷಣ ಸಂಸ್ಥೆ/ಕಾಲೇಜಿನಿಂದ ನಿಗದಿತ ನಮೂನೆಯಲ್ಲಿ ದೃಢೀಕರಣ ಪತ್ರ (ಇದಕ್ಕೆ ಸಂಬಂಧಿಸಿದ ನಮೂನೆಯನ್ನು ಇಲಾಖಾ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಸಂಬಂಧಿಸಿದವರಿಂದ ದೃಢೀಕರಿಸಿ ಸಲ್ಲಿಸುವುದು).
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09-01-2026
ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.
