ಕರ್ನಾಟಕದಲ್ಲಿ ಪಿಎಚ್.ಡಿ ವ್ಯಾಸಂಗ ಮಾಡುತ್ತಿರವ ಅಭ್ಯರ್ಥಿಗಳಿಗೆ ಸಿಹಿಸುದ್ದಿ. OBC ಇಲಾಖೆಯಿಂದ ಮಾಸಿಕ ರೂ. 10000/- ಫೆಲೋಶಿಪ್ ಗಾಗಿ ಅರ್ಜಿ ಆಹ್ವಾನ: OBC Fellowship in Karnataka for 2025
ಕರ್ನಾಟಕದಲ್ಲಿ ಪೂರ್ಣಾವಧಿ ಪಿಎಚ್ಡಿ ಮಾಡುತ್ತಿರುವವರಿಗೆ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವ್ಯಾಸಂಗ ವೇತನ ಅಥವಾ ಫೆಲೋಶಿಫ್ ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2024-25 ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿ.ಎಚ್.ಡಿ ಅಧ್ಯಯನ ಪ್ರಾರಂಭಿಸಿರುವ 2ಎ, 2ಬಿ, 3ಎ ಹಾಗೂ 3ಬಿ ಗೆ ಸೇರಿದ ಅರ್ಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಹುದು. ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿ ಅಥವಾ ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪಿ.ಎಚ್.ಡಿ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳು ದಿನಾಂಕ 20-01-2025 ರ ಒಳಗಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಇದರ ಕುರಿತಾದ ಇನ್ನೂ ಹೆಚ್ಚಿನ ವಿವರಗಳನ್ನು ಈ ಲೇಖನದಲ್ಲಿ ಓದಿ.
ಸಂಕ್ಷಿಪ್ತ ವಿವರಗಳು:
ಇಲಾಖೆ | ಹಿಂದೂಳಿದ ವರ್ಗಗಳ ಇಲಾಖೆ |
ವಿಷಯ | ಫೆಲೋಶಿಪ್ |
ಅಧ್ಯಯನ | ಪಿ.ಎಚ್.ಡಿ |
ಕೊನೆಯ ದಿನಾಂಕ | 20-01-2025 |
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸೂಚನೆಗಳು:
1) ಕೇವಲ 2ಎ, 2ಬಿ, 3ಎ & 3ಬಿ ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
2) ಕೇಂದ್ರ/ ರಾಜ್ಯ ಸರ್ಕಾರಿ/ ಅನುದಾನಿತ ಸಂಸ್ಥೆಗಳು/ ಸಾರ್ವಜನಿಕ ಸ್ವಾಮ್ಯಕ್ಕೆ ಒಳಪಟ್ಟ ಸಂಸ್ಥೆಗಳ ಉದ್ಯೋಗಿಗಳು ಈ ಸೌಲಭ್ಯ ಪಡೆಯಲು ಅರ್ಹರಲ್ಲ.
3) 2024-25 ನೇ ಸಾಲಿನಲ್ಲಿ ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯ/ ಸಂಸ್ಥೆಯಲ್ಲಿ ಪ್ರಥಮ ವರ್ಷದ ಪೂರ್ಣಾವಧಿ (Regular) ಪಿಎಚ್.ಡಿ ಮಾಡುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಹರು.
4) ಭಾರತ ಸರ್ಕಾರ/ ಕರ್ನಾಟಕ ಸರ್ಕಾರ/ ವಿಶ್ವವಿದ್ಯಾಲಯ/ ಇತರೆ ಯಾವುದೇ ಸಂಸ್ಥೆಗಳಿಂದ ಮಾಸಿಕ ವ್ಯಾಸಂಗ ವೇತನ/ ಫೆಲೋಶಿಪ್ ಗಾಗಿ ಆಯ್ಕೆಯಾಗಿರಬಾರದು/ ಫೆಲೋಶಿಪ್ ಪಡೆಯುತ್ತಿರಬಾರದು.
ಶೈಕ್ಷಣಿಕ ಅರ್ಹತೆಗಳು:
1) ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಟ ಶೇ. 55% ಅಂಕಗಳೊಂದಿಗೆ ಉತ್ತೀರ್ಣ ಹೊಂದಿರಬೇಕು.
2) ವಿಶ್ವವಿದ್ಯಾಲಯ/ ಅಧಿಕೃತ ಸಂಸ್ಥೆಗಳಲ್ಲಿ ಸಂಶೋಧನಾ ಮಾರ್ಗದರ್ಶಕರ ಅಡಿಯಲ್ಲಿ ಪಿ.ಎಚ್.ಡಿ ಅಧ್ಯಯನಕ್ಕೆ 2024-25 ನೇ ಸಾಲಿನಲ್ಲಿ ನೊಂದಣಿ ಮಾಡಿಸಿರಬೇಕು.
3) ಅಭ್ಯರ್ಥಿಗಳು ಪೂರ್ಣಾವಧಿ ಪಿ.ಎಚ್.ಡಿ ಅಧ್ಯಯನಕ್ಕೆ ನೊಂದಣಿ ಮಾಡಿಸಿರುವ ದಿನಾಂಕವು 20-01-2025 ಕ್ಕೆ 2 ವರ್ಷದೊಳಗಿರಬೇಕು.
4) ಮಾಸಿಕ ವ್ಯಾಸಂಗ ವೇತನ/ ಫೆಲೋಶಿಫ್ ಮಂಜೂರಾತಿಗಾಗಿ ನಿಗಡಿಪಡಿಸಿರುವ ಅಭ್ಯರ್ಥಿ ಮತ್ತು ಕುಟುಂಬದ ವಾರ್ಷಿಕ ಆದಾಯದ ಮಿತಿ ಕೆಳಗಿನಂತಿದೆ.
ಪ್ರವರ್ಗ 1 |
ವಾರ್ಷಿಕ ರೂ. 4.50 ಲಕ್ಷ |
ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ |
ವಾರ್ಷಿಕ ರೂ. 3.50 ಲಕ್ಷ |
ಮಾಸಿಕ ಫೆಲೋಶಿಪ್:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 10000/- ಫೆಲೋಶಿಪ್ ನೀಡಲಾಗುತ್ತದೆ.
ವಯೋಮಿತಿ:
ಗರಿಷ್ಟ ವಯೋಮಿತಿ: 35 ವರ್ಷ (ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಸರಿಯಾಗಿ)
ಆಫ್ಲೈನ್ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
1) 10ನೇ ತರಗತಿಯ ಅಂಕಪಟ್ಟಿ
2) ಜಾತಿ & ಆದಾಯ ಪ್ರಮಾಣ ಪತ್ರ
3) ವಾಸಸ್ಥಳ ಪ್ರಮಾಣ ಪತ್ರ
4) ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳು
5) ಘಟಿಕೋತ್ಸವ ಅಥವಾ ಪ್ರಾವಿಸನಲ್ ಪ್ರಮಾಣಪತ್ರ
6) ಪಿ.ಎಚ್.ಡಿ ನೊಂದಣಿ ಮಾಡಿರುವ ವಿಶ್ವವಿದ್ಯಾಲಯದಿಂದ ಪ್ರಮಾಣ ಪತ್ರ
7) ದೃಡಿಕರಣ ಪತ್ರ
8) ಬ್ಯಾಂಕ್ ಖಾತೆ ವಿವರ
9) ಆಧಾರ್ ಕಾರ್ಡ್
10) ಪಿ.ಎಚ್.ಡಿ ಶುಲ್ಕ ರಸೀಧಿ
11) ಅಭ್ಯರ್ಥಿಯ 2 ಭಾವಚಿತ್ರಗಳು
12) ಮುಚ್ಚಳಿಕೆ ಪತ್ರ
ಆಯ್ಕೆ ವಿಧಾನ: ಸ್ನಾತಕೋತ್ತರ ಪದವಿಯಲ್ಲಿ ಪಡೆದಿರುವ ಅಂಕಗಳು & ಮೀಸಲಾತಿಗಳಿಗನುಗುಣವಾಗಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ: ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿ.ಎಚ್.ಡಿ ಅಧ್ಯಯನ ಮಾಡುತ್ತಿರುವ ಜಿಲ್ಲೆಯ ಜಿಲ್ಲಾ ಹಿಂದೂಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಹಾಕುವ ದಿನಾಂಕ:
ದಿನಾಂಕ 20-01-2025 ರ ಒಳಗಾಗಿ ಅರ್ಜಿ ಸಲ್ಲಿಸಬೇಕು.
ಪ್ರಮುಖ ಲಿಂಕುಗಳು
ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ. ಆದಾಗ್ಯೂ ಆಫೀಶಿಯಲ್ ವೆಬ್ಸೈಟ್/ ಸಂಸ್ಥೆಯನ್ನ ಒಮ್ಮೆ ಸಂಪರ್ಕಿಸಿ ಮತ್ತೊಮ್ಮೆ ಖಚಿತ ಪಡಿಸಿಕೊಂಡು ನಂತರ ಅರ್ಜಿ ಸಲ್ಲಿಸಿ.