ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿ ಇರುವ TGT, PGT & ಸ್ಪೆಷಲ್ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ| MEG CENTRE KVS RECRUITMENT 2025

WhatsApp Group Join Now
Telegram Group Join Now
Spread the love

ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿ ಇರುವ TGT, PGT & ಸ್ಪೆಷಲ್ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ| MEG CENTRE KVS RECRUITMENT 2025

ನಮಸ್ತೆ ಸ್ನೇಹಿತರೆ, ಬೆಂಗಳೂರಿನ ಕೇಂದ್ರೀಯ ವಿದ್ಯಾಲಯದ ವತಿಯಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಬೆಂಗಳೂರು ಕೇಂದ್ರೀಯ ವಿದ್ಯಾಲಯದ ಎಂಇಜಿ ಸೆಂಟರ್  ನಲ್ಲಿ  ಖಾಲಿ ಇರುವ  ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಬೆಂಗಳೂರು ಕೇಂದ್ರೀಯ ವಿದ್ಯಾಲಯದಿಂದ ನಡೆಸಲಾಗುವ ನೇರ ಸಂದರ್ಶನಕ್ಕೆ ನಿಗದಿ ಪಡಿಸಿದ ದಿನಾಂಕದಂದು ಹಾಜರಾಗಲು ಸೂಚಿಸಲಾಗಿದೆ.

ಟಿಜಿಟಿ & ಪಿಜಿಟಿ ಹಾಗೂ ಯೋಗ ಶಿಕ್ಷಕರ  ಹುದ್ದೆಗಳ ಭರ್ತಿ ಕುರಿತಂತೆ ಬೆಂಗಳೂರು ಕೇಂದ್ರೀಯ ವಿದ್ಯಾಯದಿಂದ ನೇರ ಸಂದರ್ಶನವನ್ನು ದಿನಾಂಕ 17-02-2025 ರಿಂದ ದಿನಾಂಕ 19-02-2025 ರವರೆಗೆ ಹಮ್ಮಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ಸದರಿ ದಿನದಂದು  ಸಂದರ್ಶನಕ್ಕೆ ಆಗಮಿಸಿ, ನೇರ ಸಂದರ್ಶನವನ್ನು ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಿ.

ಬೆಂಗಳೂರಿನ ಕೇಂದ್ರೀಯ ವಿದ್ಯಾಲಯ ಎಂ.ಇ.ಜಿ. & ಸೆಂಟರ್‌ಗೆ ಪೂರ್ಣ ಅರೆಕಾಲಿಕ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ಆಯ್ಕೆ ಪಟ್ಟಿಯನ್ನು 2025-26 (ಪ್ಯಾನಲ್) ಸಿದ್ಧಪಡಿಸಲು, ಅಭ್ಯರ್ಥಿಗಳ (18 ರಿಂದ 65 ವಯೋಮಾನದವರು) ಸಂದರ್ಶನವನ್ನು ನಡೆಸಲಾಗುವುದು ಎಲ್ಲಾ ಅಭ್ಯರ್ಥಿಗಳು ತಮ್ಮ ಸ್ವಂತ ವೆಚ್ಚದಲ್ಲಿ ಎಂ.ಇ.ಜಿ. ಮತ್ತು ಕೇಂದ್ರದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು ಮತ್ತು ಪ್ರಮಾಣಪತ್ರಗಳ ಮೂಲ ಮತ್ತು ಫೋಟೊಕಾಪಿಗಳು ಮತ್ತು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರದೊಂದಿಗೆ ಹಾಜರಾಗಬೇಕು. ಎಲ್ಲಾ ಹುದ್ದೆಗಳ ನೋಂದಣಿಯನ್ನು 16.02.2025 ರೊಳಗೆ ಗೂಗಲ್ ಫಾರ್ಮ್ ಲಿಂಕ್ ಮೂಲಕ ಮಾಡಲಾಗುತ್ತದೆ.

ಹುದ್ದೆಗಳ ವಿವರ:

ಹುದ್ದೆಗಳ ಹೆಸರು ವಿಷಯ
TGT ಶಿಕ್ಷಕರು ಇಂಗ್ಲಿಷ್, ಹಿಂದಿ, ಸಂಸ್ಕೃತ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ,
PGT ಶಿಕ್ಷಕರು ಇಂಗ್ಲಿಷ್, ಹಿಂದಿ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಅಕೌಂಟೆನ್ಸಿ, ಅರ್ಥಶಾಸ್ತ್ರ, ಇತಿಹಾಸ, ಭೂಗೋಳ, ರಾಜ್ಯಶಾಸ್ತ್ರ
ಇತರೆ ಶಿಕ್ಷಕರು ಯೋಗ ಶಿಕ್ಷಕರು, ನೃತ್ಯ ತರಬೇತುದಾರರು, ಕ್ರೀಡಾ ತರಬೇತುದಾರರು, ಕಲೆ ಮತ್ತು ಕರಕುಶಲ ಶಿಕ್ಷಕರು, ಕಂಪ್ಯೂಟರ್ ಬೋಧಕರು, ವೈದ್ಯರು, ನರ್ಸ್, ಸಂಗೀತ ಪ್ರಶಿಕ್ಷಕರು, ವಿಶೇಷ ಶಿಕ್ಷಕರು ಮತ್ತು ಸಲಹೆಗಾರರು,

ಹುದ್ದೆಗಳ ಕಾಲಾವಧಿ

ಈ ಹುದ್ದೆಗಳನ್ನು ತಾತ್ಕಲಿಕವಾಗಿ ಮಾತ್ರ ನೇಮಕ‌ ಮಾಡಿಕೊಳ್ಳಲಾಗುತ್ತಿದೆ.  2025-25ನೇ ಶೈಕ್ಷಣಿಕ ಸಾಲಿಗೆ ಮಾತ್ರ ಏರ್ಪಡಿಸಲಾಗಿದೆ,

ವೇತನ ಅಥವಾ ಗೌರವದನ

ಹುದ್ದೆಗಳಿಗೆ ಅನುಸಾರವಾಗಿ ತಿಂಗಳಿಗೆ ನಿಗದಿಪಡಿಸಿದ ಸಂಬಳ ನೀಡಲಾಗುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ

ಮಾನ್ಯತಾ ಹೊಂದಿದ ವಿಶ್ವವಿದ್ಯಾಲಯದಿಂದ ಸಂಬಂಧಿಸಿದ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಬಿಎಡ್, ಡಿಎಡ್, ಬಿಪಿಎಡ್ ಪದವಿಯನ್ನು ಮುಗಿಸಿರಬೇಕು.

ಆಯ್ಕೆ ವಿಧಾನ

ಈ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ

ನೇರ ಸಂದರ್ಶನಕ್ಕೆ ಅಗತ್ಯವಿರುವ ದಾಖಲೆಗಳು

ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು

ಸೇವಾ ದಾಖಲಾತಿಗಳು.

ನೇರ ಸಂದರ್ಶನ ನಡೆಯುವ ಸ್ಥಳ

ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ, ಎಂಇಜಿ & ಸೆಂಟರ್, ಬೆಂಗಳೂರು 

ನೇರ ಸಂದರ್ಶನ ನಡೆಯುವ ದಿನಾಂಕ

ಹುದ್ದೆಗಳ ಹೆಸರು ಸಂದರ್ಶನ ನಡೆಯುವ ದಿನಾಂಕ
TGT ಶಿಕ್ಷಕರು 17-02-2024
PGT ಶಿಕ್ಷಕರು 18-02-2025
ಯೋಗ ಶಿಕ್ಷಕರು 19-02-2025

ಗಮನಿಸಿ: ವಿದ್ಯಾರ್ಹತೆ ಮತ್ತು ಇತರ ವಿವರಗಳಿಗಾಗಿ ದಯವಿಟ್ಟು ವೆಬ್‌ಸೈಟ್ www.megcentre.kvs.ac.in  ಗೆ ಭೇಟಿ ನೀಡಿ.

ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Application Form

ಇತ್ತೀಚಿನ ಸಂಬಂಧಿತ ಸುದ್ದಿಗಳು:
ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಲೆಕ್ಚರರ್, ಅಸಿಸ್ಟೆಂಟ್ & ಸ್ಪೆಶಲ್ ಎಜುಕೇಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- NIEPMD Jobs 2025
ಕರ್ನಾಟಕದ ಈ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ: APS Bengaluru Recruitment 2025

ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top