KSOU ನಿಂದ ದೂರ ಶಿಕ್ಷಣದ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿಗೆ ಅರ್ಜಿ ಆಹ್ವಾನ: KSOU UG AND PG ADMISSION 2026
ನಮಸ್ತೆ ಸ್ನೇಹಿತರೇ ನೀವು ದೂರಶಿಕ್ಷಣದ ಮೂಲಕ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಕಲಿಯಲು ಇಚ್ಚಿಸಿದ್ದರೇ, ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಹೌದು ಸ್ನೇಹಿತರೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು (KSOU) ನಿಂದ 2025-26 ನೇ ಸಾಲಿನ ಮುಕ್ತ ದೂರ ಶಿಕ್ಷಣದ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಪ್ರವೇಶಾತಿಗಾಗಿ ಅರ್ಜಿಗಳನ್ನು ಕರೆಯಲಾಗಿದೆ.
ಮುಕ್ತ ದೂರ ಶಿಕ್ಷಣ (ODL) ಮೂಲಕ ಉನ್ನತ ಶಿಕ್ಷಣವನ್ನು ನೀಡಲು ಅಧಿಕೃತಗೊಂಡ ಕರ್ನಾಟಕದ ಏಕೈಕ ಸಾರ್ವಜನಿಕ ವಿಶ್ವವಿದ್ಯಾನಿಲಯವಾದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು (KSOU), 2025-26ರ ಜನವರಿ ಆವೃತ್ತಿಯ ಪ್ರವೇಶಾತಿಯನ್ನು ಪ್ರಕಟಿಸಿದೆ.
ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಂಘದಲ್ಲಿ ಖಾಲಿ ಇರುವ ಗುಮಾಸ್ತ & ಜವಾನ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಕೆಎಸ್ಓಯು ನಲ್ಲಿ ಲಭ್ಯವಿರುವ ಅವಕಾಶಗಳು:
“ಉನ್ನತ ಶಿಕ್ಷಣ ಎಲ್ಲರಿಗೂ, ಎಲ್ಲೆಡೆ” ಎಂಬ ಧ್ಯೇಯದೊಂದಿಗೆ ಕರಾಮುವಿ ಕಾರ್ಯನಿರ್ವಹಿಸುತ್ತಿದೆ. ಇದರ ಪ್ರಮುಖ ವಿಶೇಷತೆಗಳು:
ಎರಡು ಪದವಿಗಳ ಅವಕಾಶ: ಯುಜಿಸಿ (UGC) ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ಈಗ ಏಕಕಾಲದಲ್ಲಿ ಎರಡು ಶೈಕ್ಷಣಿಕ ಕಾರ್ಯಕ್ರಮಗಳನ್ನು (Dual Degree) ಅಧ್ಯಯನ ಮಾಡಬಹುದು.
ಮೂಲಸೌಕರ್ಯ: ಮೈಸೂರಿನಲ್ಲಿ ವಿಶಾಲವಾದ ಹಸಿರುಮಯ ಕ್ಯಾಂಪಸ್ ಮತ್ತು ಆಧುನಿಕ ಐಸಿಟಿ (ICT) ತಂತ್ರಜ್ಞಾನ ಬೆಂಬಲಿತ ಬೋಧನಾ ಸೌಲಭ್ಯಗಳು.
ಬೆಂಬಲ:ಗುಣಮಟ್ಟದ ಸ್ವಯಂ ಕಲಿಕಾ ಸಾಮಗ್ರಿಗಳು (SLM), ಕಲಿಕಾರ್ಥಿ ಸಹಾಯ ಕೇಂದ್ರಗಳ ವಿಶಾಲ ಜಾಲ ಮತ್ತು ಉದ್ಯೋಗ ನೇಮಕಾತಿ ನೆರವು.
ಮಾನ್ಯತೆ: ಯುಜಿಸಿ-ಡಿಇಬಿ (UGC-DEB) ಇಂದ ಮಾನ್ಯತೆ ಪಡೆದ ಶಿಕ್ಷಣ ಕ್ರಮಗಳು.
ಲಭ್ಯವಿರುವ ಶೈಕ್ಷಣಿಕ ಕಾರ್ಯಕ್ರಮಗಳು
2025-26 ರ ಜನವರಿ ಆವೃತ್ತಿಗೆ ಪ್ರಥಮ ವರ್ಷದ ಒಡಿಎಲ್ (ODL) ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ:
ಸ್ನಾತಕ (UG) ಶಿಕ್ಷಣ ಕಾರ್ಯಕ್ರಮಗಳು
ಕಲೆ ಮತ್ತು ಸಮಾಜ ಕಾರ್ಯ: ಬಿ.ಎ. (B.A.), ಬಿ.ಎಸ್.ಡಬ್ಲ್ಯೂ. (B.S.W.) .
ವಾಣಿಜ್ಯ ಮತ್ತು ನಿರ್ವಹಣೆ: ಬಿ.ಕಾಂ. (B.Com.), ಬಿ.ಬಿ.ಎ. (B.B.A.) .
ವಿಜ್ಞಾನ ಮತ್ತು ಕಂಪ್ಯೂಟರ್:
ಬಿ.ಎಸ್ಸಿ. (ಸಾಮಾನ್ಯ ವಿಷಯಗಳು: PCM, CBZ, ಇತ್ಯಾದಿ) .
ಬಿ.ಎಸ್ಸಿ. ಮಾಹಿತಿ ತಂತ್ರಜ್ಞಾನ (IT).
ಬಿ.ಸಿ.ಎ. (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್) .
ಬಿ.ಲಿಬ್.ಐ.ಎಸ್ಸಿ. (ಗ್ರಂಥಾಲಯ ವಿಜ್ಞಾನ) .
ಸ್ನಾತಕೋತ್ತರ (PG) ಶಿಕ್ಷಣ ಕಾರ್ಯಕ್ರಮಗಳು
ಎಂ.ಎ. (M.A.): ಕನ್ನಡ, ಇಂಗ್ಲಿಷ್, ಸಂಸ್ಕೃತ, ಉರ್ದು, ಹಿಂದಿ, ತೆಲುಗು, ಶಿಕ್ಷಣ, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ .
ಎಂ.ಎಸ್ಸಿ. (M.Sc.): ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಪರಿಸರ ವಿಜ್ಞಾನ, ಭೂಗೋಳಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಐಟಿ (IT), ಕಂಪ್ಯೂಟರ್ ಸೈನ್ಸ್, ಡಾಟಾ ಸೈನ್ಸ್, ಅರ್ಥ್ ಸೈನ್ಸ್, ಲೈಫ್ ಸೈನ್ಸ್ .
ಎಂ.ಬಿ.ಎ. (M.B.A.):ಆನ್ಲೈನ್ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ. ಫೈನಾನ್ಸ್, ಮಾರ್ಕೆಟಿಂಗ್, ಹೆಚ್.ಆರ್, ಆಪರೇಷನ್ಸ್, ಟೂರಿಸಂ, ಕಾರ್ಪೊರೇಟ್ ಲಾ, ಐಟಿ ಮತ್ತು ಆಸ್ಪತ್ರೆ ನಿರ್ವಹಣೆ ಮುಂತಾದ ಸ್ಪೆಷಲೈಜೇಷನ್ ಲಭ್ಯವಿದೆ.
ಇತರೆ ಪಿಜಿ ಪದವಿಗಳು ಎಂ.ಕಾಂ (ಡ್ಯುಯೆಲ್ ಸ್ಪೆಷಲೈಜೇಷನ್), ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ., ಎಂ.ಲಿಬ್.ಐ.ಎಸ್ಸಿ. .
ಡಿಪ್ಲೋಮ ಮತ್ತು ಸರ್ಟಿಫಿಕೇಟ್ ಕಾರ್ಯಕ್ರಮಗಳು
ಪಿಜಿ ಸರ್ಟಿಫಿಕೇಟ್ (1 ವರ್ಷ): ಇಂಗ್ಲಿಷ್, ಮಾರ್ಕೆಟಿಂಗ್, ಬಿಸಿನೆಸ್ ಲಾ, ಅಂಬೇಡ್ಕರ್ ಅಧ್ಯಯನಗಳು, ತಂತ್ರಜ್ಞಾನ ಇತ್ಯಾದಿ .
ಡಿಪ್ಲೋಮ (10+2 ಆಧಾರಿತ, 1 ವರ್ಷ): ಪತ್ರಿಕೋದ್ಯಮ, ಐಟಿ, ಬಾಲ್ಯ ಶಿಕ್ಷಣ, ಜ್ಯೋತಿಷ್ಯ, ವಾಸ್ತು ಶಾಸ್ತ್ರ ಇತ್ಯಾದಿ .
ಸರ್ಟಿಫಿಕೇಟ್ (6 ತಿಂಗಳು): ಪಂಚಾಯತ್ ರಾಜ್, ಐಸಿಟಿ (ICT), ಭಾಷಾಂತರ ಅಧ್ಯಯನ, ಜ್ಯೋತಿರ್ ವಿಜ್ಞಾನ.
ಆನ್ಲೈನ್ (Online) ಕಾರ್ಯಕ್ರಮಗಳು
ಬಿ.ಎ., ಬಿ.ಕಾಂ., ಎಂ.ಎ. (ಕನ್ನಡ, ಹಿಂದಿ, ಸಂಸ್ಕೃತ, ಅರ್ಥಶಾಸ್ತ್ರ, ಇಂಗ್ಲಿಷ್), ಎಂ.ಕಾಂ, ಎಂ.ಬಿ.ಎ. ಮತ್ತು ಎಂ.ಎಸ್ಸಿ. ಗಣಿತಶಾಸ್ತ್ರ .
ಶುಲ್ಕ ವಿನಾಯಿತಿ ಮತ್ತು ವಿದ್ಯಾರ್ಥಿವೇತನಗಳು
ಅರ್ಹ ಅಭ್ಯರ್ಥಿಗಳಿಗೆ ಕರಾಮುವಿಯು ಗಮನಾರ್ಹ ಶುಲ್ಕ ವಿನಾಯಿತಿಗಳನ್ನು ನೀಡುತ್ತದೆ:
1. ಪೂರ್ಣ ಶುಲ್ಕ ವಿನಾಯಿತಿ (100%):
ತೃತೀಯ ಲಿಂಗಿಗಳು (Transgender).
ದೃಷ್ಟಿ ದೋಷವುಳ್ಳವರು: ಶೇಕಡ 50ಕ್ಕೂ ಹೆಚ್ಚಿನ ದೃಷ್ಟಿ ದೋಷವುಳ್ಳ ಅಭ್ಯರ್ಥಿಗಳು (ಬಿ.ಎಡ್ ಮತ್ತು ಎಂ.ಬಿ.ಎ. ಹೊರತುಪಡಿಸಿ).
ಕೋವಿಡ್-19 ಬಾಧಿತರು: ಕೋವಿಡ್-19 ನಿಂದ ಮೃತಪಟ್ಟ ತಂದೆ/ತಾಯಿಯ ಮಕ್ಕಳು (ಪ್ರಮಾಣ ಪತ್ರ ಸಲ್ಲಿಸುವ ಷರತ್ತಿಗೆ ಒಳಪಟ್ಟು).
2. ಶೇಕಡ 10% ರಷ್ಟು ಬೋಧನಾ ಶುಲ್ಕ ರಿಯಾಯಿತಿ:
*ಬಿಪಿಎಲ್ (BPL) ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳು, ರಕ್ಷಣಾ ಸಿಬ್ಬಂದಿ/ಮಾಜಿ ಸೈನಿಕರು, ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಕುಟುಂಬದವರು, ಕೆಎಸ್ಆರ್ಟಿಸಿ/ಬಿಎಂಟಿಸಿ ಇತ್ಯಾದಿ ಸಾರಿಗೆ ಸಂಸ್ಥೆಗಳ ನೌಕರರು.
3. ಪ.ಜಾ/ಪ.ಪ. (SC/ST) ಮರುಪಾವತಿ:
ಪ.ಜಾ/ಪ.ಪ. ವರ್ಗದ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕ ಮರುಭರಿಕೆ ಮಾಡಿಕೊಳ್ಳುವ ಷರತ್ತಿಗೆ ಒಳಪಟ್ಟು ಪ್ರವೇಶಾತಿ ಪಡೆಯಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
1. ಆನ್ಲೈನ್ ಅರ್ಜಿ: ಅರ್ಜಿ ಫಾರಂ ಅನ್ನು ಭರ್ತಿ ಮಾಡಲು “KSOU Online Admission Portal” ಗೆ ಅಥವಾ www.ksoumysuru.ac.inವೆಬ್ಸೈಟ್ಗೆ ಭೇಟಿ ನೀಡಿ.
2. ಪಾವತಿ: ಪ್ರವೇಶಾತಿ ಶುಲ್ಕವನ್ನು ಆನ್ಲೈನ್ ವಿಧಾನದ ಮೂಲಕ ಮಾತ್ರವೇ ಪಾವತಿಸಬೇಕು.
3. ಪ್ರಾದೇಶಿಕ ಕೇಂದ್ರಗಳು: ಅಭ್ಯರ್ಥಿಗಳು ಮೈಸೂರಿನ ಕೇಂದ್ರ ಕಚೇರಿಯಲ್ಲಿ ಅಥವಾ ತಮ್ಮ ಹತ್ತಿರದ ಪ್ರಾದೇಶಿಕ ಕೇಂದ್ರದಲ್ಲಿ ನೇರವಾಗಿ ಪ್ರವೇಶ ಪಡೆಯಬಹುದು .
4.ಅಧ್ಯಯನ ಸಾಮಗ್ರಿ:ಗುರುತಿನ ಚೀಟಿ ಮತ್ತು ಸ್ವಯಂ ಕಲಿಕಾ ಸಾಮಗ್ರಿಗಳನ್ನು (SLM) ಮೈಸೂರಿನ ಕೇಂದ್ರ ಕಚೇರಿಯಿಂದ ಅಥವಾ ಆಯ್ಕೆ ಮಾಡಿದ ಪ್ರಾದೇಶಿಕ ಕೇಂದ್ರದಿಂದ ಪಡೆಯಬಹುದು.
ನೇರ ಪ್ರವೇಶಾತಿ (Lateral Entry): ಪದವಿಯನ್ನು ಪೂರ್ಣಗೊಳಿಸದ ವಿದ್ಯಾರ್ಥಿಗಳು ವಿ.ವಿ. ನಿಯಮಗಳ ಪ್ರಕಾರ 2ನೇ ಅಥವಾ 3ನೇ ವರ್ಷಕ್ಕೆ ನೇರ ಪ್ರವೇಶಾತಿಯನ್ನು ಪಡೆಯಬಹುದು.
ಪ್ರಮುಖ ದಿನಾಂಕಗಳು
ಅಧಿಸೂಚನೆ ದಿನಾಂಕ:07-01-2026
ಪ್ರವೇಶಾತಿ ಪ್ರಾರಂಭ ದಿನಾಂಕ: 09-01-2026
ಪ್ರಮುಖ ಲಿಂಕುಗಳು:
ಅರ್ಜಿ ಸಲ್ಲಿಸುವ ಲಿಂಕ್ : ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ : ಕ್ಲಿಕ್ ಮಾಡಿ
ಕೊನೆಯ ಮಾತು:
ಮುಕ್ತ ದೂರ ಶಿಕ್ಷಣ (ODL) ಮೂಲಕ ಉನ್ನತ ಶಿಕ್ಷಣವನ್ನು ನೀಡಲು ಅಧಿಕೃತಗೊಂಡ ಕರ್ನಾಟಕದ ಏಕೈಕ ಸಾರ್ವಜನಿಕ ವಿಶ್ವವಿದ್ಯಾನಿಲಯವಾದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು (KSOU), 2025-26ರ ಜನವರಿ ಆವೃತ್ತಿಯ ಪ್ರವೇಶಾತಿಯನ್ನು ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ.
