KSOU ನಿಂದ ಯುಜಿ, ಪಿಜಿ & ಬಿಎಡ್ ದೂರ ಶಿಕ್ಷಣ ಪ್ರಥವ ವರ್ಷದ ಪ್ರವೇಶಾತಿಗೆ ಅರ್ಜಿ ಆಹ್ವಾನ: KSOU First year UG & PG Course Admission 2025
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU), ಮೈಸೂರು ವತಿಯಿಂದ ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಎಲ್ಲರೀತಿಯ ದೂರ ಶಿಕ್ಷಣ ಪದವಿಗಳಿಗೆ ಪ್ರಥಮ ವರ್ಷದ ಪ್ರವೇಶಾತಿಗೆ ಅರ್ಜಿ ಗಳನ್ನು ಕರೆಯಲಾಗಿದೆ. ಹಾಗೆಯೇ ಆನ್ಲೈನ್ ಮೂಲಕ ನಡೆಯುವ ಕೋರ್ಸ್ ಗಳಿಗೂ ಅರ್ಜಿ ಆಹ್ವಾನಿಸಲಾಗಿದೆ. KSOU ಯಿಂದ ಕಲಿಯುವ ಶಿಕ್ಷಣವು ಮುಂದಿನ ಎಲ್ಲ ಅವಕಾಶಗಳಿಗೂ ಅರ್ಹತೆಯನ್ನು ನೀಡುತ್ತವೆ. ಈ ಶಿಕ್ಷಣವನ್ನು ಮನೆಯಲ್ಲಿಯೇ ಕುಳಿತು ಕಲಿಯಬಹುದು. ಒಂದು ವೇಳೆ ನೀವು ಕಾಲೇಜುಗಳಿಗೆ ತೆರಳದೆ ಮನೆಯಲ್ಲಿಯೇ ಕಲಿಯ ಬಯಸಿದ್ದರೇ KSOU ನಿಂದ ನಡೆಸಲಾಗುವ ಶಿಕ್ಷಣಕ್ಕೆ ದಾಖಲಾತಿ ಹೊಂದಬಹುದು.
Karnataka State Open University, Mysore, ಯಿಂದ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಪ್ರಥಮ ವರ್ಷದ ಪ್ರವೇಶಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ದಿನಾಂಕ 10-02-2025 ರಿಂದ ಆನ್ಲೈನ್ ಮೂಲಕ ಅರ್ಜಿಗಳು ಆರಂಭವಾಗಿವೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಕುರಿತಂತೆ ಹೆಚ್ಚಿನ ವಿವರಗಳನ್ನು ನಿಡಲಾಗಿದ್ದು, ಅಭ್ಯರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಿ.
ಈ ಲೇಖನವನ್ನು ಸಂಪೂರ್ಣವಾಗಿ ಓದಿ ನಂತರ ಈ ಹುದ್ದೆಗಳಿಗೆ ನೀವು ಅರ್ಹತೆಯನ್ನು ಹೊಂದಿದ್ದರೇ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದರೇ ನಮ್ಮ ಸ್ಪರ್ಧಾ ದೀಪ ಕಡೆಯಿಂದ ಅತಿ ಕಡಿಮೆ ದರದಲ್ಲಿ ಅರ್ಜಿ ಸಲ್ಲಿಸಿಕೊಡಲಾಗುವುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9108736889 |
ವಿಶ್ವವಿದ್ಯಾಲಯ ಕೆಳಕಂಡ ವಿಶೇಷತೆಗಳನ್ನು ಒಳಗೊಂಡಿದೆ.
ವಿಶಾಲ ಅತ್ಯಾಧುನಿಕ ಹಾಗೂ ಹಸಿರುಮಯ ಕ್ಯಾಂಪಸ್ ಆಧುನಿಕ ಐಸಿಟಿ ತಂತ್ರಜ್ಞಾನ ಬೆಂಬಲಿತ ಬೋಧನಾ ಸೌಲಭ್ಯಗಳು
ಅನುಭವಿ ಹಾಗೂ ನುರಿತ ಬೋಧನಾ ಸಿಬ್ಬಂದಿ
ಸುಸಜ್ಜಿತ ಪ್ರಯೋಗಾಲಯಗಳು
ಸುಸಜ್ಜಿತ ಗ್ರಂಥಾಲಯ ಹಾಗೂ ಇಂಟರ್ನೆಟ್ ಸೌಲಭ್ಯಗಳು
ಪ್ರಾದೇಶಿಕ ಕೇಂದ್ರಗಳು ಹಾಗೂ ಕಲಿಕಾರ್ಥಿ ಸಹಾಯ (ಲರ್ನರ್ ಸಪೋರ್ಟ್ ಸೆಂಟರ್) ಕೇಂದ್ರಗಳನ್ನೊಳಗೊಂಡ ಸೇವಾ ವ್ಯವಸ್ಥೆ
ವೃತ್ತಿ ಸಂಬಂಧಿತ ಸಲಹೆ ಹಾಗೂ ನೇಮಕಾತಿಯಲ್ಲಿ ನೆರವು
ಪ್ರವೇಶಾತಿ ಮಾಹಿತಿ & ವಿಧಾನ:
ಅರ್ಹತೆಯ ಮಾನದಂಡ ಹಾಗೂ ಶುಲ್ಕದ ವಿವರಗಳನ್ನು ವಿವರಣಾ ಪುಸ್ತಕ (ಪ್ರಾಸ್ಪೆಕ್ಟಸ್) ದಲ್ಲಿ ನಮೂದಿಸಲಾಗಿದೆ. ಅಭ್ಯರ್ಥಿಗಳು ಸಂಬಂಧಿತ ವೆಬ್ ಸೈಟ್ ನಲ್ಲಿ ವೀಕ್ಷಿಸಬಹುದು / ಡೌನ್ ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು, ಮೈಸೂರಿನಲ್ಲಿರುವ ಕರಾಮುವಿಯ ಕೇಂದ್ರ ಕಚೇರಿಯಲ್ಲಿ ನೇರವಾಗಿ / ಆನ್‌ಲೈನ್ ಮುಖಾಂತರ, ಅಥವಾ ತಮ್ಮ ಆಯ್ಕೆಯ ಸಮೀಪದ ಪ್ರಾದೇಶಿಕ ಕೇಂದ್ರಗಳಲ್ಲಿ ಮಾತ್ರವೇ ಖುದ್ದಾಗಿ ಪ್ರವೇಶಾತಿಯನ್ನು ಪಡೆಯುವುದು. ಆನ್‌ಲೈನ್ ಪ್ರವೇಶ ಅರ್ಜಿ ಫಾರಂನ್ನು ಭರ್ತಿ ಮಾಡಲು KSOU Online Admission Portal ಗೆ ಭೇಟಿ ನೀಡಿ, ಪ್ರವೇಶಾತಿ ಹಾಗೂ ಇನ್ನಿತರ ಮಾಹಿತಿಗಾಗಿ ಅರ್ಜಿದಾರರು ಕರಾಮುವಿಯ ಅಧಿಕೃತ ವೆಬ್ ಸೈಟ್ : www.ksoumysuru.acin ನ್ನು ವೀಕ್ಷಿಸುವುದು. ಪ್ರವೇಶಪೂರ್ವ ಸಮಾಲೋಚನೆಗೆ ಮಾತ್ರ ಅರ್ಜಿದಾರರು ತಮ್ಮ ವ್ಯಾಪ್ತಿಯಲ್ಲಿ ಬರುವ ಕರಾಮುವಿಯ ಯಾವುದೇ ಕಲಿಕಾರ್ಥಿ ಸಹಾಯ ಕೇಂದ್ರವನ್ನು ಸಂಪರ್ಕಿಸಬಹುದು.
ಪ್ರವೇಶ ಶುಲ್ಕವನ್ನು ಆನ್ ಲೈನ್ ವಿಧಾನದ ಮೂಲಕ ಮಾತ್ರ ಪಾವತಿಸತಕ್ಕದ್ದು.
ಅಭ್ಯರ್ಥಿಗಳು ಗುರುತಿನ ಚೀಟಿಗಳು ಹಾಗೂ ಲಭ್ಯ ಸ್ವಯಂ ಕಲಿಕಾ ಸಾಮಗ್ರಿಗಳನ್ನು ಮೈಸೂರಿನಲ್ಲಿರುವ ಕರಾಮುವಿಯ ಆಡಳಿತ ಕಛೇರಿಯಿಂದ ಅಥವಾ ತಮ್ಮ ಆಯ್ಕೆಯ ಪ್ರಾದೇಶಿಕ ಕೇಂದ್ರದಿಂದ ಪಡೆಯಬಹುದು.
ಪ.ಜಾ./ಪ.ಪ. ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ನಿಗದಿತ ಶುಲ್ಕವನ್ನು ಪಾವತಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕ ಪರುಭರಿಕೆ ಮಾಡಿಕೊಳ್ಳುವ ಷರತ್ತಿಗೆ ಒಳಪಟ್ಟು ಶುಲ್ಕ ವಿನಾಯಿತಿ ಯೋಜನೆಯಡಿ ಪ್ರವೇಶಾತಿ ಪಡೆಯಬಹುದಾಗಿದೆ. ಪ್ರವೇಶಾತಿಯು ವಿ.ವಿ.ಯ ಸ್ಕಾಲರ್‌ಷಿಪ್ ಘಟಕವು ವಿಧಿಸುವ ಷರತ್ತಿಗೆ ಒಳಪಟ್ಟಿರುತ್ತದೆ.
ಓಬಿಸಿ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಪೂರ್ಣ ಶುಲ್ಕವನ್ನು ಪಾವತಿಸಿ ಪ್ರವೇಶಾತಿ ಪಡೆದು, ನಂತರ ಸ್ಟೇಟ್ ಸ್ಕಾಲರ್‌ಷಿಪ್ ಪೋರ್ಟಲ್ (SSP) ಮುಖಾಂತರ ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕವನ್ನು ಮರುಭರಿಕೆ ಮಾಡಿಕೊಳ್ಳಬಹುದು.
ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ಅಭ್ಯರ್ಥಿಗಳು/ ಮಿಲಿಟರಿ ಸೇವೆಯಲ್ಲಿರುವ / ಮಾಜಿ ಸೈನಿಕ ವಿದ್ಯಾರ್ಥಿಗಳು / ಆಟೋ / ಕ್ಯಾಬ್ ಚಾಲಕರು ಮತ್ತು ಅವರ ಪತ್ನಿ / ಮಕ್ಕಳಿಗೆ / ಕೆಎಸ್ ಆರ್‌ಟಿಸಿ / ಬಿಎಂಟಿಸಿ ಎನ್‌ಡಬ್ಲ್ಯೂಕೆಆರ್‌ಟಿಸಿ / ಕೆಕೆಆರ್ ಟಿಸಿಯಲ್ಲಿನ ನೌಕರರುಗಳಿಗೆ ಯುಜಿ ಮತ್ತು ಪಿಜಿ ಪದವಿ ಶಿಕ್ಷಣ ಕ್ರಮಗಳಿಗೆ ಬೋಧನಾ ಶುಲ್ಕದಲ್ಲಿ ಶೇಕಡ 10%ರಷ್ಟು ರಿಯಾಯಿತಿಯನ್ನು ಪಡೆಯಬಹುದು.
ಅರ್ಜಿ ಸಲ್ಲಿಸುವುದು ಹೇಗೆ:
2024-25ರ ಜನವರಿ ಆವೃತ್ತಿಯಲ್ಲಿ ಯುಜಿಸಿ ಅನುಮೋದಿತ ಓಡಿಎಲ್ (ಆಫ್‌ಲೈನ್) ಮಾದರಿಯ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ವಿದ್ಯಾರ್ಥಿಗಳು (https://ksouportal.com/views/ Student Home.aspx)ನಲ್ಲಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಆಯಾ ಶಿಕ್ಷಣಕ್ರಮಗಳಿಗೆ ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯನುಸಾರ ದಾಖಲಾತಿಗಳೊಂದಿಗೆ ವಿಶ್ವವಿದ್ಯಾನಿಲಯದ ಕೇಂದ್ರ ಕಚೇರಿ ಮೈಸೂರು ಅಥವಾ ಹತ್ತಿರದ ವಿವಿಧ ಪ್ರಾದೇಶಿಕ ಕೇಂದ್ರಗಳಲ್ಲಿ ಮಾತ್ರ ಪ್ರವೇಶಾತಿ ಪಡೆಯಬಹುದಾಗಿದೆ.