ಸರ್ಕಾರಿ ನೌಕರರ ಕೆಜಿಐಡಿ ಪಾಲಿಸಿಯ ಮೇಲೆ ವಿಧಿಸಲಾಗುತ್ತಿರುವ ಬಡ್ಡಿಗೆ ನೌಕರರ ಸಂಘ ಆಕ್ಷೇಪ- KSGEA Given Requisition for stop interest on Govt. Employee KGID Policy
ಸ್ನೇಹಿತರೆ ನಮಸ್ತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೆ.ಜಿ.ಐ.ಡಿ ಪಾಲಿಸಿಯ ಮೇಲೆ ಮತ್ತು ಸಾಲದ ಮರುಪಾವತಿಯ ಮೇಲೆ ವಿಧಿಸಲಾಗುತ್ತಿರುವ ಬಡ್ಡಿ ಪಾವತಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದು ಈಗ ವಿಧಿಸುತ್ತಿರುವ ಬಡ್ಡಿಯನ್ನು ಕೈ ಬಿಡುವ ಕುರಿತಾಗಿ ಸರ್ಕಾರದ ಅಪಾರ ಮುಖ್ಯ ಕಾರ್ಯದರ್ಶಿಗಳಿಗೆ ಮನವಿಯನ್ನು ಸಲ್ಲಿಸಿದೆ. ಅದಕ್ಕೆ ಸಂಬಂಧಿಸಿದಂತೆ ಸರ್ಕಾರಿ ನೌಕರರಿಗೆ ಇಲ್ಲಿ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದು ಪೂರ್ತಿಯನ್ನು ಓದಿ ಮಾಹಿತಿಯನ್ನು ಪಡೆಯಿರಿ
ಸ್ನೇಹಿತರೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರ ವೇತನ ಅನುದಾನ ಬಿಡುಗಡೆಯಲ್ಲಿ ಕೆಲವು ಕಾರಣಾಂತರಗಳಿಂದ ವೇತನ ವಿಳಂಬವಾಗುತ್ತಿದ್ದು, ಅಂತಹ ಸಂದರ್ಭದಲ್ಲಿ ಕೆಜಿಐಡಿ ಪಾಲಿಸಿ, ಸಾಲದ ಮರುಪಾವತಿ ಹಾಗೂ ಬಡ್ಡಿ ಪಾವತಿಗೆ ಕೆಜಿಐಡಿ ಆನ್ಲೈನ್ ತಂತ್ರಾಂಶದಲ್ಲಿ ಬಡ್ಡಿಯನ್ನು ವಿಧಿಸಲಾಗುತ್ತಿದೆ. ಇದು ನೌಕರರ ಮೇಲೆ ಪರಿಣಾಮವನ್ನು ಬೀರುತ್ತಿದ್ದು, ತಮ್ಮದಲ್ಲದ ಕಾರಣಕ್ಕಾಗಿ ತಮ್ಮ ವೇತನದಿಂದ ಅನಾವಶ್ಯಕವಾಗಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಈ ಕಾರಣದಿಂದಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಆರ್ಥಿಕ ಇಲಾಖೆಯ ಸರ್ಕಾರದ ಅಪಾರ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಪತ್ರವನ್ನು ನೀಡಿದ್ದು, ಅದರಲ್ಲಿ ಈ ಕೆಳಕಂಡಂತೆ ಮನವಿ ಸಲ್ಲಿಸಲಾಗಿದೆ.
ವಿವಿಧ ಕಾರಣಗಳಿಂದ ಕೆಲವು ಇಲಾಖೆಗಳ ವೇತನ ಅನುದಾನ ವಿಳಂಬವಾಗಿ ಪಾವತಿಯಾಗುತ್ತಿದ್ದು ಅಂತಹ ಇಲಾಖೆಗಳ ನೌಕರರು ಕೆಜಿಐಡಿ ಗಳ ಮೇಲಿನ ಮಾಸಿಕ ವಂತಿಗೆ, ಸಾಲದ ಪಾವತಿ ಹಾಗೂ ಸಾಲದ ಮೇಲಿನ ಬಡ್ಡಿ ಪಾವತಿಯನ್ನು ಸಹ ವಿಳಂಬವಾಗಿ ಪಾವತಿಸಬೇಕಾದ ಅನಿವಾರ್ಯತೆ ಈ ಕೆಳಕಂಡ ಕಾರಣದಿಂದ ಉದ್ಭವಿಸುತ್ತಿದ್ದು, ಇಂತಹ ಪ್ರಕರಣಗಳಿಗೂ ಸಹ ಕೆ ಜೆ ಐ ಡಿ ಇಲಾಖೆಯು ಆನ್‌ಲೈನ್ ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಬಡ್ಡಿಯನ್ನು ವಿಧಿಸುತ್ತಿರುವುದನ್ನು ಕೈ ಬಿಡಲು ನೌಕರರಗಳು ಮನವಿ ಮಾಡಿರುತ್ತಾರೆ.
ವೇತನ ವಿಳಂಬಕ್ಕೆ ಪ್ರಮುಖ ಅಂಶಗಳು:
1) ಡಿಎಸ್‌ಸಿ (DSC) ಬದಲಾವಣೆ ಸಂದರ್ಭದಲ್ಲಿ
2) ಡಿಡಿಓಗಳ ವರ್ಗಾವಣೆ ಅಥವಾ ನಿವೃತ್ತಿ ಸಂದರ್ಭದಲ್ಲಿ
3) ಎಚ್ ಆರ್ ಎಂ ಎಸ್ ನಲ್ಲಿ ಉದ್ಭವಿಸುವ ತಾಂತ್ರಿಕ ಕಾರಣಗಳು.
4) K-2 ತಂತ್ರಾಂಶದಲ್ಲಿನ ದೋಷಗಳ ಕಾರಣ
5) ಅನುದಾನದ ಕೊರತೆ ಸಂದರ್ಭ.
ಆದ್ದರಿಂದ ನೌಕರರು ಮಾಡದೇ ಇರುವ ತಪ್ಪುಗಳಿಂದಾಗಿ ಉದ್ಭವಿಸುತ್ತಿರುವ ಮೇಲ್ಕಂಡ ಕಾರಣಗಳಿಂದಾಗಿ ವಿಳಂಬವಾಗಿ ವೇತನ ಪಡೆಯುತ್ತಿರುವ ನೌಕರರು ಪಾವತಿಸುವ ಕೆ.ಜಿ.ಐ.ಡಿ ಪಾಲಿಸಿಗಳ ಮೇಲಿನ ಮಾಸಿಕ ವಂತಿಗೆ, ಸಾಲದ ಮರುಪಾವತಿ ಹಾಗೂ ಸಾಲದ ಮೇಲಿನ ಬಡ್ಡಿ ಪಾವತಿ ಗಳ ಮೇಲೆ ವಿಧಿಸುವ ಬಡ್ಡಿಯನ್ನು ವಿಧಿಸದೆ ಕೆಜೆಐಡಿ ಇಲಾಖೆಯ ತಂತ್ರಾಂಶದಲ್ಲಿ ಅವಶ್ಯವಿರುವ ಮಾರ್ಪಾಡು ಮಾಡುವಂತೆ ಮನವಿಯನ್ನು ಸಲ್ಲಿಸಿದೆ.
ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.