KSRTC ಯಲ್ಲಿ ಖಾಲಿ ಇರುವ 78 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಯಾವುದೇ ಪರೀಕ್ಷೆಯಿಲ್ಲದೇ ನೇರ ಆಯ್ಕೆ: KKRTC Driver Recruitment in Bidar 2026

WhatsApp Group Join Now
Telegram Group Join Now
Spread the love

KSRTC ಯಲ್ಲಿ ಖಾಲಿ ಇರುವ 78 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಯಾವುದೇ ಪರೀಕ್ಷೆಯಿಲ್ಲದೇ ನೇರ ಆಯ್ಕೆ: KKRTC Driver Recruitment in Bidar 2026

    ನಮಸ್ತೆ ಸ್ನೇಹಿತರೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ ವತಿಯಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ ಖಾಲಿ ಇರುವ ಚಾಲಕ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ ಅಧಿಕೃತ ವೆಬ್ಸೈಟ್‌ನಲ್ಲಿ ನೀಡಿರುವ ಅರ್ಜಿ ನಮೂನೆಯನ್ನು ತುಂಬಿ  ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಬೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದ್ಯೋಶ ಸಹಕಾರ ಸಂಘ ನಿಯಮಿತ, ಜಿಲ್ಲಾಧಿಕಾರಿಗಳ ಕಛೇರಿ, ಬೀದರ ರವರ ಮೂಲಕ ಹೊರಗುತ್ತಿಗೆ ಮೇಲೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ ವಿಭಾಗದ ವ್ಯಾಪ್ತಿಯ ಬೀದರ-1, ಬೀದರ-2 ಭಾಲ್ಕಿ, ಔರಾದ ಬಸವಕಲ್ಯಾಣ ಮತ್ತು ಹುಮನಾಬಾದ ಘಟಕಗಳ ಬಸ್ ಚಾಲನೆಗೆ 78 ಜನ ಚಾಲಕರು ಬೇಕಾಗಿರುವುದರಿಂದ Walk in interview ಅನ್ನು ಏರ್ವಡಿಸಲಾಗಿದೆ. ಕಾರಣ ದಿನಾಂಕ:03.02.2026 ರಿಂದ 04.02.2026ರ ವರೆಗೆ ಚಾಲಕ ಹುದ್ದೆಗೆ ಕಕರಸಾ ನಿಗಮದ ಹಳೆ ಬಸ್ ನಿಲ್ದಾಣದ ಬೀದರ ವಿಭಾಗೀಯ ಕಛೇರಿಯ ಕಛೇರಿ ಸಮಯದಲ್ಲಿ ನೇರ ಸಂದರ್ಶನ ನಡೆಸಲಾಗುತ್ತಿದೆ. ಆಯ್ಕೆ ಸಮೀತಿ ಸಮ್ಮುಖದಲ್ಲಿ ಸಂದರ್ಶನಕ್ಕೆ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು ಅಭ್ಯರ್ಥಿಗಳು ಹಾಜರು ಪಡಿಸಬೇಕಾದ ದಾಖಲಾತಿಗಳು ಮತ್ತು ಅನುಸರಿಸಬೇಕಾದ ಷರತ್ತು ನಿಬಂಧನೆಗಳ ಹಾಗೂ ಹೆಚ್ಚಿನ ವಿವರಗಳಿಗಾಗಿ ಸರಕಾರದ ವೆಬ್ ಸೈಟ್ www.bidar.nic.in ನ್ನು ಸಂಪರ್ಕಿಸಬಹುದಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.

ಆಧಾರ್‌ ಕೇಂದ್ರದಲ್ಲಿ ಖಾಲಿ ಇರುವ ಒಟ್ಟು 282 ಸುಪರ್ವೈಸರ್‌ & ಆಪರೇಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ: Apply for Aadhar Supervisor and Operator Recruitment 2026

ನೇಮಕಾತಿಯ ಪಕ್ಷಿನೋಟ:

ನೇಮಕಾತಿ ಕಛೇರಿ: ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ
ಹುದ್ದೆಗಳ ಪದನಾಮ: ಚಾಲಕ ಹುದ್ದೆಗಳು
ಹುದ್ದೆಗಳ ಸಂಖ್ಯೆ: 78 ಹುದ್ದೆಗಳು
ಕಾರ್ಯ ನಿರ್ವಹಿಸಬೇಕಾದ ವಿಳಾಸ: ಬೀದರ

1. ಚಾಲಕ ಹುದ್ದೆ: 56

ಪ್ರವರ್ಗ ಒಟ್ಟು
ಪ.ಜಾ 9
ಪ.ಪಂ 4
ಪ್ರ-1 3
2(ಎ) 8
2(ಬಿ) 2
3(ಎ) 2
3(ಬಿ) 3
ಸಾ.ಅ 25
ಒಟ್ಟು 56

2. ಚಾಲಕ ಹಿಂಬಾಕಿ (Backlog) ಹುದ್ದೆ: 22

ಪ್ರವರ್ಗ ಇತರೆ ಒಟ್ಟು
ಪ.ಜಾ 0 0
ಪ.ಪಂ 0 0
ಪ್ರ-1 3 3
2(ಎ) 15 15
2(ಬಿ) 0 0
3(ಎ) 4 4
3(ಬಿ) 0 0
ಸಾ.ಅ 0 0
ಒಟ್ಟು 22 22

ಅಂಚೆ ಕಛೇರಿಯಲ್ಲಿ 28740 ಗ್ರಾಮ ಡಾಕ್‌ ಸೇವಕ್ ಹುದ್ದೆಗಳ ಬೃಹತ್‌ ನೇಮಕಾತಿಗೆ ಅರ್ಜಿ- Indian Post Office GDS Recruitment 2026

 ಹಾಜರು ಪಡಿಸಬೇಕಾದ ಮೂಲ ದಾಖಲಾತಿಗಳು:
ಚಾಲಕ ಹುದ್ದೆಗೆ:

1) ಎಸ್.ಎಸ್.ಎಲ್.ಸಿ. ಮೂಲ ಅಂಕಪಟ್ಟಿ
2) Must be in position of two years HTV licence to drive heavy passenger/goods vehicle and possess Karnataka Badge.
3) ಕಕರಸಾ ನಿಗಮದಲ್ಲಿ ಅಥವಾ ಸಹೋದರ ಸಂಸ್ಥೆಗಳಾದ ಕರಾರಸಾ ನಿಗಮ/ ಬೆಮಸಾ ಸಂಸ್ಥೆ/ವಾಕರಸಾ ಸಂಸ್ಥೆಗಳಲ್ಲಿ ಗಣಕೀಕೃತ ಚಾಲನಾ ಪಥದ ಟ್ರ್ಯಾಕ್ ಟೆಸ್ಟ್‌ನಲ್ಲಿ ಭಾಗವಹಿಸಿ, ಉತ್ತೀರ್ಣರಾದ ಕುರಿತು ಅಂಕಪಟ್ಟಿ ಹಾಗೂ ದಾಖಲಾತಿ ಪರಿಶೀಲನಾ ವರದಿ.
4) ಆಧಾರ ಕಾರ್ಡ
5) ಜಾತಿ ಪ್ರಮಾಣ ಪತ್ರ
6) ಇತ್ತೀಚಿನ ಪಾಸಪೋರ್ಟಿ ಅಳತೆಯ 4 ಭಾವಚಿತ್ರಗಳು.

ಅಭ್ಯರ್ಥಿಯ ವಯಸ್ಸು :

ದಿನಾಂಕ:04.02.2026 ಕನಿಷ್ಠ 24 ವರ್ಷ ತುಂಬಿರಬೇಕು ಮತ್ತು ಈ ಕೆಳಗಿನಂತೆ ಗರಿಷ್ಠ ವಯೋಮಿತಿ ಮೀರಿರಬಾರದು.
ಸಾಮಾನ್ಯ ವರ್ಗ. 35 ವರ್ಷ, ಪ್ರವರ್ಗ 2A, 2B, 3A & 3B: 38 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1: 40 ವರ್ಷ.

ವೇತನ ಶ್ರೇಣೆ/ Salary Scale

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ನಿಗದಿಪಡಿಸಿದ ವೇತನ ನೀಡಲಾಗುತ್ತದೆ.

ಆಯ್ಕೆ ವಿಧಾನ

ನೇರ  ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ

ಇತರೇ ಷರತ್ತುಗಳು:

1) ಬೀದರ ವಿಭಾಗದ ಬೀದರ-1, ಬೀದರ-2, ಭಾಲ್ಕಿ, ಬಸವಕಲ್ಯಾಣ. ಔರಾದ ಮತ್ತು ಹುಮನಾಬಾದ ಘಟಕಗಳ ಪೈಕಿ ಯಾವುದೇ ಘಟಕದಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧರಿರಬೇಕು.

2) ಚಾಲಕ ಹುದ್ದೆಗೆ ಮಾಸಿಕ ವೇತನವು ಚಾಲ್ತಿ ಸಾಲಿನಲ್ಲಿರುವ ಕನಿಷ್ಠ ವೇತನ ಪ್ರಕಾರ ಪಾವತಿಸಲಾಗುವುದು. ಕರ್ತವ್ಯಕ್ಕೆ ಗೈರು ಹಾಜರಾದಲ್ಲಿ ತತ್ಸಮಾನವಾಗಿ ವೇತನವನ್ನು ಕಡಿಕಗೊಳಿಸಲಾಗವುದು.

3) ಚಾಲಕ ಹುದ್ದೆಗಾಗಿ ಗಣಕೀಕೃತ ಚಾಲನಾ ಪಥದ ಟ್ರೇಡ್ ಟೆಸ್ಟ್‌ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮಾತ್ರ ಪರಿಗಣಿಸಲಾಗುವದು.

4) ಸದರಿ ಹೊರಗುತ್ತಿಗೆಯ ನಿಯೋಜನೆಯು ಗರಿಷ್ಟ (11) ಹನ್ನೊಂದು ತಿಂಗಳ ಅವಧಿಗೆ ಮಾತ್ರ ಇರುತ್ತದೆ.

5) ನಿಗಮದ ಅವಶ್ಯತೆಗನುಗುಣವಾಗಿ ಯಾವದೇ ಸಮಯದಲ್ಲಿ ಸದರಿ ಹೊರಗುತ್ತಿಗೆ ಆದೇಶ ರದ್ದುಪಡಿಸಬಹುದಾಗಿರುತ್ತದೆ.

5) ಯಾವುದೇ ವಿಷಯದ ಕುರಿತು ಗೊಂದಲ ಉಂಟಾದಲ್ಲಿ ನಿಗಮದ ನಿರ್ಣಯವೇ ಅಂತಿಮವಾಗಿರುತ್ತದೆ.

6) ಸಂದರ್ಶನಕ್ಕೆ ಗೊತ್ತು ಪಡಿಸಿದ ದಿನಾಂಕಗಳಂದು ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಮುಂಜಾನೆ 12.00 ಗಂಟೆಯ ಒಳಗಾಗಿ ಕಕರಸಾ ನಿಗಮದ ವಿಭಾಗೀಯ ಕಛೇರಿ ಬೀದರನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದ್ದು. ನಂತರದಲ್ಲಿ ಹಾಜರಾಗುವ ಅಭ್ಯರ್ಥಿಗಳ ಹೆಸರುಗಳನ್ನು ನೋಂದಾಯಿಸಿಕೊಳ್ಳಲಾಗುವುದಿಲ್ಲ. ಮುಂಚಿತವಾಗಿ ಹೆಸರುಗಳನ್ನು ನೋಂದಾಯಿಸಿಕೊಂಡವರಿಗೆ ಮಾತ್ರ ಸಂದರ್ಶನಕ್ಕೆ ಹಾಜರಾಗಲು ಅವಕಾಶವಿರುತ್ತದೆ.

7) ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ಮೂಲ ದಾಖಲಾತಿಗಳೊಂದಿಗೆ ಎರಡು (2) ಸೆಟ್ ಛಾಯಾ ಪ್ರತಿಗಳನ್ನು ಒದಗಿಸುವುದು. ಹಾಗು ಇತ್ತೀಚಿನ 02 ಪಾಸಪೋರ್ಟ ಅಳತೆಯ ಫೋಟೋಗಳನ್ನು ಸಲ್ಲಿಸುವದು.

8) ಈ ನೇಮಕಾತಿಯ ತಾತ್ಕಾಲಿಕವಾಗಿದ್ದು ಮೆರಿಟ್ ಆಧಾರದ ಮೇಲೆ ಪಾರದರ್ಶಕವಾಗಿ ಪ್ರಚಲಿತ ನಿಯಮಾವಳಿಯಂತೆ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುವುದು. ಕಾರಣ ಯಾವುದೇ ಆಮೀಷಕ್ಕೆ ಒಳಗಾಗಬಾರದೆಂದು ತಿಳಿಸಲಾಗಿದೆ.

9. ಮುಂಬರುವ ದಿನಗಳಲ್ಲಿ ಸಿಬ್ಬಂದಿಗಳ ಅವಶ್ಯಕತೆ ಇದ್ದಲ್ಲಿ ಈ ಸಂದರ್ಶನದಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ನಿಯಮಾನುಸಾರ ಪರಿಗಣಿಸಲಾಗುವುದು,

10 ಈ ಆಯ್ಕೆಯು ಯಾವುದೇ ಖಾಯಂ ಹುದ್ದೆಗಾಗಿ ಎಂದು ಭಾವಿಸತಕ್ಕದಲ್ಲ

ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: NIRDPR Recruitment 2026

ನೇರ ಸಂದರ್ಶನದ ದಿನಾಂಕಗಳು:

ದಿನಾಂಕ:03.02.2026 ರಿಂದ 04.02.2026ರ ವರೆಗೆ ಚಾಲಕ ಹುದ್ದೆಗೆ ಕಕರಸಾ ನಿಗಮದ ಹಳೆ ಬಸ್ ನಿಲ್ದಾಣದ ಬೀದರ ವಿಭಾಗೀಯ ಕಛೇರಿಯ ಕಛೇರಿ ಸಮಯದಲ್ಲಿ ನೇರ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಅಗತ್ಯ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗತಕ್ಕದ್ದು.

ಅಧಿಕೃತ ಲಿಂಕುಗಳು

ಅಧಿಸೂಚನೆ ಡೌನ್ಲೋಡ್‌ ಮಾಡಿಕೊಳ್ಳಿ.

 

ಕೊನೆಯ ಮಾತು:

ಬೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದ್ಯೋಶ ಸಹಕಾರ ಸಂಘ ನಿಯಮಿತ, ಜಿಲ್ಲಾಧಿಕಾರಿಗಳ ಕಛೇರಿ, ಬೀದರ ರವರ ಮೂಲಕ ಹೊರಗುತ್ತಿಗೆ ಮೇಲೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ ವಿಭಾಗದ ವ್ಯಾಪ್ತಿಯ ಬೀದರ-1, ಬೀದರ-2 ಭಾಲ್ಕಿ, ಔರಾದ ಬಸವಕಲ್ಯಾಣ ಮತ್ತು ಹುಮನಾಬಾದ ಘಟಕಗಳ ಬಸ್ ಚಾಲನೆಗೆ 78 ಜನ ಚಾಲಕರು ಬೇಕಾಗಿರುವುದರಿಂದ Walk in interview ಅನ್ನು ಏರ್ವಡಿಸಲಾಗಿದೆ. ಆಸಕ್ತರು ಈ ಸಂದರ್ಶನಕ್ಕೆ ನಿಗದಿಪಡಿಸಿದ ದಿನಾಂಕಗಳಂದು ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಿ. ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top