KEA Recruitment- ರಾಜ್ಯ ಸರ್ಕಾರದ 8 ಇಲಾಖೆಗಳಲ್ಲಿ ಖಾಲಿ ಇರುವ 708 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: KEA 8 DEPARTMENT RECRUITMENT FOR 708 VACANCIES 2025
ನಮಸ್ತೆ ಸ್ನೇಹಿತರೇ, ಸ್ಪರ್ಧಾದೀಪ ವೆಬ್ಸೈಟ್ ನಿಂದ ಇಂದು ಹೊಸ ಉದ್ಯೋಗ ಮಾಹಿತಿಯನ್ನು ನೀಡುತ್ತೇವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ವಿವಿಧ ಇಲಾಖೆಗಳು, ಮಂಡಳಿಗಳು ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ 708 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.
ಈ ಕೆಳಕಂಡ ಸರ್ಕಾರಿ ಇಲಾಖೆ / ನಿಗಮ / ಸಂಸ್ಥೆಗಳಲ್ಲಿ ಉಳಿಕೆ ಮೂಲ ವೃಂದದಲ್ಲಿರುವ ಹಾಗೂ ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳ ನೇಮಕಾತಿಗೆ ಆರ್ಹತೆ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಬೇಕು.
ನೇಮಕಾತಿಯ ಪಕ್ಷಿನೋಟ:
ನೇಮಕಾತಿ ಕಛೇರಿ | ಸರ್ಕಾರಿ ಇಲಾಖೆ / ನಿಗಮ / ಸಂಸ್ಥೆಗಳಲ್ಲಿ |
ಹುದ್ದೆಗಳ ಹೆಸರು | ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ |
ಹುದ್ದೆಗಳ ಸಂಖ್ಯೆ | 708 |
ಕೆಲಸದ ಸ್ಥಳ | ಕರ್ನಾಟಕದಾದ್ಯಂತಾ |
ಹುದ್ದೆಗಳ ವಿವರ:
ಇಲಾಖೆ | ರಾಜ್ಯ ವೃಂದ ಖಾಲಿ ಹುದ್ದೆಗಳ ಸಂಖ್ಯೆ | ಕಲ್ಯಾಣ ಕರ್ನಾಟಕ ಖಾಲಿ ಹುದ್ದೆಗಳ ಸಂಖ್ಯೆ |
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ | 18 | 7 |
ಕರ್ನಾಟಕ ಸೋಪ್ಸ್ ಆಯಂಡ್ ಡಿಟರ್ಜಂಟ್ ಲಿಮಿಟೆಡ್ | 07 | 14 |
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ | 40 | 04 |
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ | 63 | 253 |
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ | 19 | – |
ಕೃಷಿ ಮಾರಾಟ ಇಲಾಖೆ | 180 | – |
ತಾಂತ್ರಿಕ ಶಿಕ್ಷಣ ಇಲಾಖೆ | 50 | 43 |
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) | 10 | – |
ವಯೋಮಿತಿ/ Age limit:
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಕನಿಷ್ಟ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಟ 38 ವರ್ಷವನ್ನು ಮೀರಿರಬಾರದು.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಕೆಟಗೆರಿ 1 ಅಭ್ಯರ್ಥಿಗಳಿಗೆ : 40 ವರ್ಷ
2ಎ/2ಬಿ/3ಎ/3ಬಿ ವರ್ಗದ ಅಭ್ಯರ್ಥಿಗಳಿಗೆ: 38 ವರ್ಷ
ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷಗಳ ಸಡಿಲಿಕೆ
ಆನ್‌ಲೈನ್ ಅರ್ಜಿ ಸಲ್ಲಿಸಲು ದಿನಾಂಕ 09-10-2025 ರಿಂದ 01-11-2025 ರ ವರೆಗೆ ಅವಕಾಶ ನೀಡಲಾಗಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಬಗ್ಗೆ ಸೂಚನೆಗಳು, ಅಗತ್ಯ ಅರ್ಹತೆ ವಿವರ, ವಯೋಮಿತಿ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಶುಲ್ಕ, ಸ್ಪರ್ಧಾತ್ಮಕ ಪರೀಕ್ಷೆಯ ವಿಷಯಗಳು, ಪ್ರವರ್ಗವಾರು ಮತ್ತು ಹುದ್ದೆವಾರು ಹುದ್ದೆಯ ವಿವರಗಳು ಮತ್ತು ನೇಮಕಾತಿ ಪ್ರಕ್ರಿಯೆಯ ವಿವರವಾದ ಸೂಚನೆಗಳಿಗಾಗಿ ಪ್ರಾಧಿಕಾರದ ವೆಬ್‌ಸೈಟ್ https://cetonline.karnataka.gov.in/kea/.
ಸ್ಪರ್ಧಾತ್ಮಕ ಪರೀಕ್ಷೆ;
- a) OMR ಆಧಾರಿತ ಪರೀಕ್ಷೆಯಾಗಿದ್ದು ಒಂದು ಪ್ರಶ್ನೆಗೆ OMR ನಲ್ಲಿ 05 ವೃತ್ತಗಳಿದ್ದು, ಮೊದಲ 04 ವೃತ್ತಗಳು ಒಂದು ಸರಿಯಾದ ಉತ್ತರವನ್ನು ಶೇಡ್ ಮಾಡಲು ಸಂಬಂಧಿಸಿವೆ. ಅಭ್ಯರ್ಥಿಗೆ ಯಾವುದಾದರೂ ಪ್ರಶ್ನೆಗೆ / ಪ್ರಶ್ನೆಗಳಿಗೆ ಉತ್ತರ ತಿಳಿದಿಲ್ಲದಿದ್ದರೆ ಕಡ್ಡಾಯವಾಗಿ 05 ನೇ ವೃತ್ತವನ್ನು ಶೇಡ್ ಮಾಡಬೇಕು. ಇಲ್ಲದಿದ್ದಲ್ಲಿ 4 ಅಂಕ ಕಡಿತ ಮಾಡಲಾಗುವುದು.
- b) ಋಣಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದರಷ್ಟು ಅಂಕಗಳನ್ನು ಕಡಿತ ಮಾಡಲಾಗುವುದು.
- c) ಪರೀಕ್ಷಾ ವೇಳಾಪಟ್ಟಿಯನ್ನು ಪ್ರಾಧಿಕಾರದ ವೆಬ್ ಸೈಟಿನಲ್ಲಿ ಪ್ರಕಟಿಸಲಾಗುವುದು.
- d) ಒಂದೇ ಪಠ್ಯಕ್ರಮವಿರುವ ವಿವಿಧ ಇಲಾಖೆಗಳ ಹುದ್ದೆಗಳಿಗೆ ಒಂದೇ ಪರೀಕ್ಷೆ ನಡೆಸಿ ಸಂಬಂಧಪಟ್ಟ ಇಲಾಖೆಗಳಿಗೆ ಮೆರಿಟ್ ಪಟ್ಟಿ ನೀಡಲಾಗುವುದು.
ಅರ್ಜಿ ಆಹ್ವಾನಿಸಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಸಂಬಂಧ ಪಟ್ಟ ನೇಮಕಾತಿ ಪ್ರಾಧಿಕಾರಗಳಿಗೆ ನೀಡುವ ಜವಾಬ್ದಾರಿ ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ್ದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ನೀಡಿರುವ ಮಾಹಿತಿಯನುಸಾರ ದಾಖಲೆ ಪರಿಶೀಲಿಸಿ ನಿಯಮಾನುಸಾರ ನೇಮಕಾತಿ ಆದೇಶ ನೀಡುವುದು ಸಂಬಂಧ ಪಟ್ಟ ನೇಮಕಾತಿ ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ.
ನೇಮಕಾತಿ ಪ್ರಕ್ರಿಯೆ ಕುರಿತು ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಮಾಹಿತಿಯನ್ನು ಕಳುಹಿಸುವುದಿಲ್ಲ, ಅಭ್ಯರ್ಥಿಗಳು ಆಗಿಂದಾಗ್ಗೆ ಪ್ರಾಧಿಕಾರದ ವೆಬ್ ಸೈಟ್ https://cetonline.karnataka.gov.in/kea/ಗೆ ಭೇಟಿ ನೀಡುತ್ತಿರಲು ಸೂಚಿಸಿದೆ.
ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ