ಜಾತಿ ಸಿಂಧುತ್ವ ಇಲ್ಲದಿದ್ದರೂ ಶಿಕ್ಷಕರಿಗೆ  ನೇಮಕಾತಿ ಆದೇಶ ನೀಡಿ!  KAT ಯಿಂದ ಮಹತ್ವದ ತೀರ್ಪು ಪ್ರಕಟ – ಅಭ್ಯರ್ಥಿಗಳು ನಿರಾಳ- KAT Judgement for Issuing Order without Sindutva for OBC Candidates

WhatsApp Group Join Now
Telegram Group Join Now
Spread the love

 ಜಾತಿ ಸಿಂಧುತ್ವ ಇಲ್ಲದಿದ್ದರೂ ಶಿಕ್ಷಕರಿಗೆ  ನೇಮಕಾತಿ ಆದೇಶ ನೀಡಿ!  KAT ಯಿಂದ ಮಹತ್ವದ ತೀರ್ಪು ಪ್ರಕಟ – ಅಭ್ಯರ್ಥಿಗಳು ನಿರಾಳ- KAT Judgement for Issuing Order without Sindutva for OBC Candidates

           ಸ್ನೇಹಿತರೇ ನಮಸ್ತೆ ಸ್ಪರ್ಧಾದೀಪ ವೆಬ್ಸೈಟ್‌ ಗೆ ಸ್ವಾಗತ. 2022 ನೇ ಸಾಲಿನಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8ನೇ ತರಗತಿ) ನೇಮಕಾತಿಯಲ್ಲಿ ಆಯ್ಕೆಗೊಂಡು ಸಿಂಧುತ್ವದ ಸಮಸ್ಯೆಯಿಂದ ಹೊರಗುಳಿದಿದ್ದ ಹಿಂದೂಳಿದ ವರ್ಗಗಳ ಅಭ್ಯರ್ಥಿಗಳಿಗೆ ಕೊನೆಗೂ ಆದೇಶ ಪ್ರತಿ ಸಿಗುವ ಕ್ಷಣ ಸನ್ನಿಹವಾಗಿದೆ!. ಹೌದು ಸ್ನೇಹಿತರೇ ರಾಜ್ಯ ಪ್ರಾಥಮಿಕ & ಪ್ರೌಢಶಾಲಾ ಶಿಕ್ಷಣ ಇಲಾಖೆಯಿಂದ 15000 ಟಿಜಿಟಿ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿತ್ತು. ಇದರಲ್ಲಿ ಸರಿಸುಮಾರು 13500 ಅಭ್ಯರ್ಥಿಗಳು ಮಾತ್ರ ನೇಮಕಾತಿಗೆ ಅರ್ಹತೆಯನ್ನು ಪಡೆದುಕೊಂಡಿದ್ದರು. ಆದರೇ ಹಲವಾರು ವಿಷಯಗಳು ಕೋರ್ಟ್‌ ಮೆಟ್ಟಿಲು ಏರಿದ್ದರಿಂದ ವರ್ಷನುಗಟ್ಟಾಲೇ ನೇಮಕಾತಿ ಪ್ರಕ್ರಿಯೇ ವಿಳಂಬವಾಗಿತ್ತು. ಇದೇ ಸಂದರ್ಭದಲ್ಲಿ ಹಿಂದೂಳಿದ ವರ್ಗಗಳಾದ 2ಎ, 2ಬಿ, 3ಎ & 3ಬಿ ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಗಳ ಸಿಂಧುತ್ವ ಪ್ರಕ್ರಿಯೆಯಲ್ಲಿ ಸಮಸ್ಯೆಯಾಗಿದ್ದರಿಂದ ಅವರ ಆದೇಶವನ್ನು ತಡೆಹಿಡಿಯಲಾಗಿತ್ತು. ಅದರಲ್ಲಿ ಕೆಲವು ಅಭ್ಯರ್ಥಿಗಳು ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗಿದ್ದರಿಂದ ಅವರು ಜಾತಿ ಪ್ರಮಾಣಪತ್ರದ ಸಿಂಧುತ್ವವಿಲ್ಲದೇ ಆದೇಶ ನೀಡಬೇಕೆಂದೂ ಕರ್ನಾಟಕ ರಾಜ್ಯ ಆಡಳಿತ ಮಂಡಳಿ, ಬೆಂಗಳೂರಿನಲ್ಲಿ ದಾವೆ ಹೂಡಿದರು. ಅದರಂತೆ ಬೆಂಗಳೂರಿನ ಪೀಠವು ದಿನಾಂಕ 08-04-2024 ರಂದು ಮಹತ್ವದ ತೀರ್ಪನ್ನು ಪ್ರಕಟಿಸಿತು.  ಈ ತೀರ್ಪಿನಲ್ಲಿ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಬಾರದು ಎಂದು ಹೇಳಿತು. 

ಮಾನ್ಯ ಕರ್ನಾಟಕ ರಾಜ್ಯ ಆಡಳಿತ ಮಂಡಳಿಯ ತೀರ್ಪನ್ನು ವಿಮರ್ಶಿಸಲು ಸರ್ಕಾರವು ಕರ್ನಾಟಕ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಕಳುಹಿಸಿತು. ಇಲಾಖೆಯು ತೀರ್ಪನ್ನು ವಿಮರ್ಶಿಸಲಾಗಿ ಕಾನೂನು ವಿಭಾಗದ ಸಲಹೆಯನ್ನು  ಪಡೆದು ಹಿಂದೂಳಿದ ವರ್ಗಗಳ ಮೀಸಲಾತಿಯಲ್ಲಿ ಅರ್ಜಿ ಸಲ್ಲಿಸಲಾಗಿ ಆದರೇ ಅದರ ಯಾವುದೇ ರೀತಿಯ ಲಾಭವನ್ನು ಪಡೆಯದೇ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬಹುದು ಎಂಬ ಅಭಿಪ್ರಾಯವನ್ನು ದಿನಾಂಕ 17-01-2025ರ ಪತ್ರದಲ್ಲಿ ವ್ಯಕ್ತಪಡಿಸಿತು. 

ಇದರ ಅನುಸಾರ ಸರ್ಕಾರವು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಕೆಳಕಂಡಂತಹ ಅಂಶಗಳ ಆಧಾರದ ಮೇಲೆ ನೇಮಕಾತಿ ಆದೇಶ ನೀಡಲು ನಿರ್ದೇಶನ ನೀಡಲಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನೀಡಿರುವ ಅಭಿಪ್ರಾಯದನ್ವಯ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಉಲ್ಲೇಖ(2)ರ ಆದೇಶವನ್ನು ಅನುಷ್ಠಾನಗೊಳಿಸುವ ಬಗ್ಗೆ ಪರಿಶೀಲಿಸಲಾಗಿದೆ. ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಿಂದ ಆದೇಶ ಪಡೆದಿರುವ ಅಭ್ಯರ್ಥಿಗಳಿಗೆ ಹಾಗೂ ಇದೇ ರೀತಿಯ ಸಮನಾಂತರ ಪ್ರಕರಣಗಳಲ್ಲಿನ ಎಲ್ಲ ಅಭ್ಯರ್ಥಿಗಳಿಗೆ ಏಕ ಪ್ರಕಾರವಾಗಿ ಅನ್ವಯವಾಗುವಂತೆ ಈ ಕೆಳಗಿನಂತೆ ಕ್ರಮ ವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಮಗೆ ತಿಳಿಸಲಾಗಿದೆ.

1. ಹಿಂದುಳಿದ ವರ್ಗಗಳ ಮೀಸಲಾತಿ ಕ್ಷೇಮ್ ಮಾಡಿ ಅರ್ಜಿ ಸಲ್ಲಿಸಿದ್ದು, ಅಂತಿಮ ಆಯ್ಕೆ ಪಟ್ಟಿಯಲ್ಲಿ ಸಾಮಾನ್ಯ ವರ್ಗದಡಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಹಿಂದುಳಿದ ವರ್ಗಗಳಿಗೆ (ಪ್ರವರ್ಗ 1, 2ಎ, 2ಬಿ, 3ಎ ಮತ್ತು 3ಬಿ) ನೀಡಲಾಗಿರುವ ವಯೋಮಿತಿ ಸಡಿಲಿಕೆ, ಶುಲ್ಕ, ವಿನಾಯತಿ, ನೇಮಕಾತಿಗೆ ಅರ್ಜಿ ಸಲ್ಲಿಸಲು ಪದವಿಯಲ್ಲಿ ಪಡೆದ ಪ್ರತಿಶತ ಅಂಕಗಳಲ್ಲಿ ವಿನಾಯತಿ ಮತ್ತು టిఇటి ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ನಿಗದಿಪಡಿಸಿರುವ ಕನಿಷ್ಟ ಅಂಕಗಳಲ್ಲಿ ವಿನಾಯತಿ ಒಳಗೊಂಡಂತೆ ಒಟ್ಟಾರೆಯಾಗಿ ಟಿಇಟಿ ಉತ್ತೀರ್ಣತೆ, ನೇಮಕಾತಿಗೆ ಅರ್ಜಿ ಸಲ್ಲಿಕೆ ಮತ್ತು ಇಡೀ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಸೌಲಭ್ಯ/ವಿನಾಯತಿ/ಸಡಿಲಿಕೆ ಪಡೆದುಕೊಂಡಿಲ್ಲವೆಂಬುದನ್ನು ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರಗಳು ದಾಖಲೆಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳತಕ್ಕದ್ದು.

2. ಮೇಲೆ ವಿವರಿಸಿದ ಯಾವುದೇ ಸೌಲಭ್ಯ/ವಿನಾಯತಿ/ಸಡಿಲಿಕೆ ಪಡೆದುಕೊಂಡಿಲ್ಲದ ಅಭ್ಯರ್ಥಿಗಳಿಂದ ಮುಂದಿನ ದಿನಗಳಲ್ಲಿ ಅಂದರೆ ಇಡೀ ತಮ್ಮ ವೃತ್ತಿ ಜೀವನದಲ್ಲಿ ಪ್ರಸ್ತುತ ಅರ್ಜಿ ಸಲ್ಲಿಸುವಾಗ ಕ್ಷೇಮು ಮಾಡಿರುವ ಜಾತಿ ಮೀಸಲಾತಿಯನ್ನು ಯಾವುದೇ ಸೌಲಭ್ಯಗಳಿಗಾಗಿ, ಯಾವುದೇ ಉದ್ದೇಶಗಳಿಗಾಗಿ ಯಾವ ರೀತಿಯಲ್ಲೂ ಬಳಸಿಕೊಳ್ಳುವುದಿಲ್ಲವೆಂದು ಮತ್ತು ತಮ್ಮ ಜಾತಿ ಮೀಸಲಾತಿಯನ್ನು ಶಾಶ್ವತವಾಗಿ ಬಿಟ್ಟುಕೊಡುತ್ತೇವೆಂದು ನೋಟರಿ ಮಾಡಲ್ಪಟ್ಟ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರಗಳು ಪಡೆದುಕೊಳ್ಳತಕ್ಕದ್ದು.
3. ಅಭ್ಯರ್ಥಿಗಳು ಮೇಲಿನಂತೆ ಜಾತಿ ಮೀಸಲಾತಿಯನ್ನು ಶಾಶ್ವತವಾಗಿ ಬಿಟ್ಟುಕೊಟ್ಟ ಕುರಿತು ಕಡ್ಡಾಯವಾಗಿ ಸದರಿ ಅಭ್ಯರ್ಥಿಗಳ ಸೇವಾ ಪುಸ್ತಕದಲ್ಲಿ ನಮೂದಿಸಿ ದೃಢೀಕರಿಸತಕ್ಕದ್ದು ಮತ್ತು ಸದರಿ ಅಭ್ಯರ್ಥಿಗಳಿಗೆ ಮುಂದಿನ ದಿನಗಳಲ್ಲಿ ಮುಂಬಡ್ತಿ ಸೇರಿದಂತೆ ಇತರೆ ಯಾವುದೇ ಸೌಲಭ್ಯಗಳನ್ನು ನೀಡುವ ಸಂದರ್ಭದಲ್ಲಿ ನಿಯಮಾನುಸಾರ ಸಾಮಾನ್ಯ ವರ್ಗದಡಿಯಲ್ಲಿಯೇ ಪರಿಗಣಿಸತಕ್ಕದು.

4. ಅಭ್ಯರ್ಥಿಗಳು ಜಾತಿ ಮೀಸಲಾತಿಯನ್ನು ಶಾಶ್ವತವಾಗಿ ಬಿಟ್ಟುಕೊಟ್ಟ ಬಗ್ಗೆ ಅವರು ಸಲ್ಲಿಸುವ ಅಫಿಡೆವಿಟ್ ಪ್ರತಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡುವ ಸಕ್ರಮ ಪ್ರಾಧಿಕಾರಗಳ ಗಮನಕ್ಕೆ ತಂದು ಸದರಿ ಅಭ್ಯರ್ಥಿಗಳಿಗೆ ಈ ಹಿಂದೆ ಅಂದರೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀಡಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ರದ್ದುಪಡಿಸುವಂತೆ ಮತ್ತು ಮುಂದಿನ ದಿನಗಳಲ್ಲಿ ಸದರಿ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡದಂತೆ ತಿಳಿಸತಕ್ಕದ್ದು.

ಮೇಲಿನ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಡಿಸಿ 2022 ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6 ರಿಂದ 8ನೇ ತರಗತಿ) ಹುದ್ದೆಗೆ ಹಿಂದುಳಿದ ವರ್ಗಗಳ ಮೀಸಲಾತಿ ಕ್ಷೇಮ್ ಮಾಡಿ ಅರ್ಜಿ ಸಲ್ಲಿಸಿದ್ದು, ಅಂತಿಮ ಆಯ್ಕೆ ಪಟ್ಟಿಯಲ್ಲಿ ಸಾಮಾನ್ಯ ವರ್ಗ/ಅರ್ಹತೆಯಡಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸದೆ ವಿನಾಯ್ತಿ ನೀಡಿ ನೇಮಕಾತಿ ಆದೇಶ ನೀಡುವ ಕುರಿತು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.

 

ಇತ್ತೀಚಿನ ಸಂಬಂಧಿತ ಸುದ್ದಿಗಳು:
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 1000 ಹುದ್ದೆಗಳಿಗೆ ಅರ್ಜಿ ಆಹ್ವಾನ: Central Bank of India Jobs for 1000 Credit Officer 2025
ಬೆಂಗಳೂರು ವಿದ್ಯುತ್ ಸರಬರಾಜು ನಿಗಮದಿಂದ 250 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: BESCOM Notification for 510 vacancies 2025
ಕೃಷಿ ಮಹಾವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ ರೂ. 31000/- UASD JRF Jobs 2025

    ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ. 

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top