ಪೋಲಿಸ್ ಇಲಾಖೆಯ ಪಿಸಿ, ಪಿಎಸ್ಐ ನೇಮಕಾತಿಯಲ್ಲಿ ಹೊಸ ತಿದ್ದುಪಡಿ- ಪೋಲಿಸ್ ಆಕಾಂಕ್ಷಿಗಳು ಗಮನಿಸಿ: Karnataka State Police Service Recruitment Amendment 2025
ನಮಸ್ತೆ ಸ್ನೇಹಿತರೆ ಪೋಲಿಸ್ ಇಲಾಖೆಯ ನೇಮಕಾತಿಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಹೊಸ ತಿದ್ದುಪಡಿ ನಿಯಮಾವಳಿಗಳನ್ನ ಜಾರಿಗೊಳಿಸಿದೆ. ಕರ್ನಾಟಕ ಪೋಲಿಸ್ ಇಲಾಖೆಯ ಪೋಲಿಸ್ ಕಾನ್ಸ್ಟೇಬಲ್ (PC), ಪೋಲಿಸ್ ಸಬ್ ಇನ್ಸ್ಪೆಕ್ಟರ್ (PSI) & ಡೆಪ್ಯೂಟಿ ಸುಪರಿಟೆಡೆಂಟ್ ಆಫ್ ಪೋಲಿಸ್ (DySP) ನೇಮಕಾತಿಗಳಲ್ಲಿ ಹೊಸ ಬದಲಾವಣೆಗಳನ್ನು ರೂಪಿಸಿ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಅಷ್ಟೇ ಅಲ್ಲದೆ ಪ್ರಕಟಿಸಿರುವ ಕರಡು ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಯಾವುದೇ ಸಲಹೆ ಮತ್ತು ಆಕ್ಷೇಪಣೆಗಳನ್ನು ಸಾರ್ವಜನಿಕರಿಂದ ಆಹ್ವಾನಿಸಲಾಗಿದೆ.
2025ರ ನಿಯಮಾವಳಿಗಳ ಪ್ರಕಾರ ಪೋಲಿಸ್ ನೇಮಕಾತಿಯಲ್ಲಿ ಈ ಕೆಳಕಂಡ ಬದಲಾವಣೆಗಳನ್ನು ಕಾಣಬಹುದು:
- ಕ್ರೀಡಾ ಸಾಧಕರಿಗೆ (Sports Meritorious Person) ಇಲ್ಲಿಯವರೆಗೆ ನೀಡುತ್ತಿದ್ದ 2% ಮೀಸಲಾತಿಯನ್ನು 3% ಗೆ ಹೆಚ್ಚಿಸಲಾಗಿದೆ. ಕರ್ನಾಟಕ ರಾಜ್ಯ ಪೋಲಿಸ್ ಸೇವೆಗಳು ನಿಯಮಾವಳಿಗಳು 2020 ರ ನಿಯಮ 1 ಉಪನಿಯಮ 3ಕ್ಕೆ ತಿದ್ದುಪಡಿ ಮಾಡಿ ಈ ಬದಲಾವಣೆ ಮಾಡಲಾಗಿದೆ.
- ಡೆಪ್ಯೂಟಿ ಸುಪರಿಟೆಡೆಂಟ್ ಆಫ್ ಪೋಲಿಸ್ (DySP) ನೇಮಕಾತಿಯಲ್ಲಿ ವಯೋಮಿತಿಯಲ್ಲಿ ಬದಲಾವಣೆ ತರಲಾಗಿದೆ. ನಿಯಮ 6 ರ ಉಪನಿಯಮ 2-A ಗೆ ತಿದ್ದುಪಡಿ ಮಾಡಿ ಕ್ರೀಡಾ ಸಾಧಕರಿಗೆ (Sports Meritorious Person) ಕನಿಷ್ಟ & ಗರಿಷ್ಟ ವಯೋಮಿತಿಯನ್ನು ಕೆಳಕಂಡಂತೆ ರೂಪಿಸಲಾಗಿದೆ.
ಕನಿಷ್ಟ ವಯೋಮಿತಿ- 21 ವರ್ಷ
ಗರಿಷ್ಟ ವಯೋಮಿತಿ- ಸಾಮಾನ್ಯ ವರ್ಗ 38 ವರ್ಷ
2ಎ, 2ಬಿ, 3ಎ & 3 ಬಿಅಭ್ಯರ್ಥಿಗಳಿಗೆ- 40 ವರ್ಷ
ಪ.ಜಾ & ಪ.ಪಂ ಅಭ್ಯರ್ಥಿಗಳಿಗೆ- 45 ವರ್ಷ
ಇದಿಷ್ಟು ಕರ್ನಾಟಕ ರಾಜ್ಯ ಪೋಲಿಸ್ ಸೇವೆಗಳು (ನೇಮಕಾತಿ) ನಿಯಮಾವಳಿಗೆ ಹೊಸದಾಗಿ ತಿದ್ದುಪಡಿಯಾಗಿರುವ ವಿವರವಾಗಿದೆ. ಈ ಕುರಿತು ಯಾವುದೇ ಆಕ್ಷೇಪಣೆಗಳು & ಸಲಹೆಗಳು ಇದ್ದರೆ 15 ದಿನಗಳ ಒಳಗಾಗಿ ಸಲ್ಲಿಸಬಹುದು. ಒಂದು ವೇಳೆ ಇದೇ ನಿಯಮಗಳು ಅಂತಿಮವಾದಲ್ಲಿ ಮುಂದಿನ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಮೀಸಲಾತಿಯಲ್ಲಿ ಹೆಚ್ಚಳವಾಗಲಿದೆ.
Nothing
E ನಿರ್ಧಾರ್ ತುಂಬಾ ಒಳ್ಳೆ ನಿರ್ಧಾರ್ ತೊಗೊಂಡಿದೆ ಸರಕಾರ ಯಾಕಂದ್ರೆ ಕೊರೋನ ಟೈಮ್ ಅಲ್ಲಿ 3ವರುಷ ಯಾವುದೇ ಪೊಲೀಸ್ ನೇಮಕಾತಿ ಆಗಿರುದಿಲ್. ಎಷ್ಟೋ ಅಬೆರ್ತಿಗಳು ಉದ್ದೋಗದಿಂದ ವಂಚಿತರಾಗಿರುತ್ತಾರೆ ಹಾಗಿದ್ದ ಕಾರಣ ವಯೋಮಿತಿ ಹೆಚ್ಚು ಮಾಡಿ ಅಬ್ಬೆರ್ತಿ ಗಳಿಗೆ ಅನುಕೂಲ ಮಾಡಿದಕೆ ಸರಕಾರ ನಿರ್ಧಾರ್ 100%ಜನರ ಪರವಾಗಿದೆ 🙏🙏