ಪದವೀಧರ ಶಿಕ್ಷಕರು ಹಾಗೂ ಶೈಕ್ಷಣಿಕ ಸಲಹೆಗಾರರು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ವೇತನ ರೂ. 26250/- Hubli KVS recruitment 2025
ನಮಸ್ತೆ ಸ್ನೇಹಿತರೆ, ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯದ ವತಿಯಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಹುಬ್ಬಳ್ಳಿ ಕೇಂದ್ರೀಯ ವಿದ್ಯಾಲಯದಿಂದ ನಡೆಸಲಾಗುವ ನೇರ ಸಂದರ್ಶನಕ್ಕೆ ನಿಗದಿ ಪಡಿಸಿದ ದಿನಾಂಕದಂದು ಹಾಜರಾಗಲು ಸೂಚಿಸಲಾಗಿದೆ.
ಪದವೀಧರ ಶಿಕ್ಷಕರು ಹಾಗೂ ಶೈಕ್ಷಣಿಕ ಸಲಹೆಗಾರರು ಹುದ್ದೆಗಳ ಭರ್ತಿ ಕುರಿತಂತೆ ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯದಿಂದ ನೇರ ಸಂದರ್ಶನವನ್ನು ದಿನಾಂಕ 24-04-2025 ರಂದು ಹಮ್ಮಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ಸದರಿ ದಿನದಂದು ಸಂದರ್ಶನಕ್ಕೆ ಆಗಮಿಸಿ, ನೇರ ಸಂದರ್ಶನವನ್ನು ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಿ.
ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯಕ್ಕೆ ಪೂರ್ಣ ಅರೆಕಾಲಿಕ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರು ಹಾಗೂ ಶೈಕ್ಷಣಿಕ ಸಲಹೆಗಾರರು ಆಯ್ಕೆ ಪಟ್ಟಿಯನ್ನು 2025-26 (ಪ್ಯಾನಲ್) ಸಿದ್ಧಪಡಿಸಲು, ಅಭ್ಯರ್ಥಿಗಳ (18 ರಿಂದ 65 ವಯೋಮಾನದವರು) ಸಂದರ್ಶನವನ್ನು ನಡೆಸಲಾಗುವುದು ಎಲ್ಲಾ ಅಭ್ಯರ್ಥಿಗಳು ತಮ್ಮ ಸ್ವಂತ ವೆಚ್ಚದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.
ಹುದ್ದೆಗಳ ವಿವರ:
ಹುದ್ದೆಗಳ ಹೆಸರು | ವಿಷಯ |
TGT ಶಿಕ್ಷಕರು | ಸಂಸ್ಕೃತ |
ಶೈಕ್ಷಣಿಕ ಸಲಹೆಗಾರರು |
ಹುದ್ದೆಗಳ ಕಾಲಾವಧಿ
ಈ ಹುದ್ದೆಗಳನ್ನು ತಾತ್ಕಲಿಕವಾಗಿ ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತಿದೆ. 2025-25ನೇ ಶೈಕ್ಷಣಿಕ ಸಾಲಿಗೆ ಮಾತ್ರ ಏರ್ಪಡಿಸಲಾಗಿದೆ,
ವೇತನ ಅಥವಾ ಗೌರವದನ
ಹುದ್ದೆಗಳಿಗೆ ಅನುಸಾರವಾಗಿ ತಿಂಗಳಿಗೆ ರೂ. 26250/- ಸಂಬಳ ನೀಡಲಾಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ
ಮಾನ್ಯತಾ ಹೊಂದಿದ ವಿಶ್ವವಿದ್ಯಾಲಯದಿಂದ ಸಂಬಂಧಿಸಿದ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಬಿಎಡ್, ಡಿಎಡ್, ಬಿಪಿಎಡ್ ಪದವಿಯನ್ನು ಮುಗಿಸಿರಬೇಕು.
ಆಯ್ಕೆ ವಿಧಾನ
ಈ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ
ನೇರ ಸಂದರ್ಶನಕ್ಕೆ ಅಗತ್ಯವಿರುವ ದಾಖಲೆಗಳು
ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು
ಇತ್ತೀಚಿನ ಭಾವಚಿತ್ರ
ಆಧಾರ್ ಕಾರ್ಡ್
ಸೇವಾ ದಾಖಲಾತಿಗಳು.
ನೇರ ಸಂದರ್ಶನ ನಡೆಯುವ ಸ್ಥಳ
ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ, ಗದಗ ರಸ್ತೆ, ಹುಬ್ಬಳ್ಳಿ
ನೇರ ಸಂದರ್ಶನ ನಡೆಯುವ ದಿನಾಂಕ
ದಿನಾಂಕ: 24-04-2025
ಗಮನಿಸಿ: ವಿದ್ಯಾರ್ಹತೆ ಮತ್ತು ಇತರ ವಿವರಗಳಿಗಾಗಿ ದಯವಿಟ್ಟು ವೆಬ್‌ಸೈಟ್ https://no2hubli.kvs.ac.in ಗೆ ಭೇಟಿ ನೀಡಿ.
ದೂರವಾಣಿ ಸಂಪರ್ಕ ಸಂಖ್ಯೆ: 0836-2972003
ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.