ಅಗ್ನಿಶಾಮಕ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ: Fire Safety Officer Recruitment 2025
ನಮಸ್ತೆ ಸ್ನೇಹಿತರೇ, ಸ್ಪರ್ಧಾದೀಪ ವೆಬ್ಸೈಟ್ ನಿಂದ ಇಂದು ಹೊಸ ಉದ್ಯೋಗ ಮಾಹಿತಿಯನ್ನು ನೀಡುತ್ತೇವೆ. ಬ್ಯಾಂಕ್ ಆಫ್ ಬರೋಡಾದಿಂದ ಹೊಸ ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ ಖಾಲಿ ಇರುವ ಫೈರ್ ಸೆಫ್ಟಿ ಆಫೀಸರ್, ಸೀನಿಯರ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಇದರಲ್ಲಿ ಖಾಲಿ ಇರುವ 41 ಹುದ್ದೆಗಳನ್ನು ತುಂಬಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
Bank of Baroda ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ದಿನಾಂಕ 12-08-2025 ರ ಒಳಗಾಗಿ ಅರ್ಜಿಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಇನ್ನು ಅರ್ಜಿ ಸಲ್ಲಿಸದವರು ಕೂಡಲೇ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೀತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.
ಬ್ಯಾಂಕ್ ಆಫ್ ಬರೋಡಾದಲ್ಲಿ ಹೊಸ ಅಧಿಸೂಚನೆ ಪ್ರಕಟವಾಗಿದ್ದು, ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.
ಬ್ಯಾಂಕ್ | ಬ್ಯಾಂಕ್ ಆಫ್ ಬರೋಡಾ |
ಹುದ್ದೆಗಳ ಹೆಸರು | ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ |
ಹುದ್ದೆಗಳ ಸಂಖ್ಯೆ | 47 ಹುದ್ದೆಗಳು |
ಕೆಲಸದ ಸ್ಥಳ | ಕರ್ನಾಟಕ & ಇತರೆ ರಾಜ್ಯಗಳು |
ವರ್ಗ | ಹುದ್ದೆಗಳ ಸಂಖ್ಯೆ |
ಮ್ಯಾನೇಜರ್ (Digital Product) | 07 |
ಸೀನಿಯರ್ ಮ್ಯಾನೇಜರ್ (Digital Product) | 06 |
ಫೈರ್ ಸೆಫ್ಟಿ ಆಫೀಸರ್ | 14 |
ಮ್ಯಾನೇಜರ್ (Information Society) | 04 |
ಸೀನಿಯರ್ ಮ್ಯಾನೇಜರ್ (Information Society) | 04 |
ಚೀಫ್ ಮ್ಯಾನೇಜರ್ (Information Society) | 02 |
ಮ್ಯಾನೇಜರ್ (Storage Administrator and Backup) | 02 |
ಸೀನಿಯರ್ ಮ್ಯಾನೇಜರ್ (Information Society) | 02 |
ಮೂಲವೇತನ ರೂ. 48480-85920 ಬ್ಯಾಂಕಿನ ನಿಯಮಾವಳಿಗಳ ಅನ್ವಯ ತುಟ್ಟಿಭತ್ಯೆ ಹಾಗೂ ಮನೆಬಾಡಿಗೆ ಭತ್ಯೆಗಳನ್ನು ನೀಡಲಾಗುತ್ತದೆ.
ದಿನಾಂಕ 12-08-2025ಕ್ಕೆ ನಿಗದಿಪಡಿಸಿದಂತೆ
ಹುದ್ದೆಗಳ ಹೆಸರು | ಕನಿಷ್ಟ- ಗರಿಷ್ಟ ವಯೋಮಿತಿ |
ಮ್ಯಾನೇಜರ್ (Digital Product) | 24-34 |
ಸೀನಿಯರ್ ಮ್ಯಾನೇಜರ್ (Digital Product) | 27-37 |
ಫೈರ್ ಸೆಫ್ಟಿ ಆಫೀಸರ್ | 22-35 |
ಮ್ಯಾನೇಜರ್ (Information Society) | 24-34 |
ಸೀನಿಯರ್ ಮ್ಯಾನೇಜರ್ (Information Society) | 27-37 |
ಚೀಫ್ ಮ್ಯಾನೇಜರ್ (Information Society) | 30-40 |
ಮ್ಯಾನೇಜರ್ (Storage Administrator and Backup) | 24-34 |
ಸೀನಿಯರ್ ಮ್ಯಾನೇಜರ್ (Information Society) | 27-37 |
ಗರಿಷ್ಟವಯೋಮಿತಿಯಲ್ಲಿ ಪಜಾ & ಪಪಂ ಅಭ್ಯರ್ಥಿಗಳಿಗೆ 05 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 03 ವರ್ಷ ಸಡಿಲಿಕೆ ಇರುತ್ತದೆ.
ಶೈಕ್ಷಣಿಕ ಅರ್ಹತೆಗಳು/ Educational Qualification:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅಂಗೀಕೃತ ವಿಶ್ವವಿದ್ಯಾಲಯದಿಂದ ಸಂಬಂದಿಸಿದ ವಿಷಯ ಅಥವಾ ವಿಭಾಗದಲ್ಲಿ ಪದವಿ/ ಬಿಇ/ ಬಿಟೆಕ್/ ಬಿಸಿಎ/ ಎಂಸಿಎ ಮುಗಿಸಿರಬೇಕು.
ಅರ್ಜಿ ಶುಲ್ಕ/ Application Fees:
ರೂ. 850/–ಅರ್ಜಿ ಶುಲ್ಕವನ್ನು ಪಾವತಿಸಬೇಕು.
SC/ ST/ ಮಹಿಳಾ/ಅಂಗವಿಕಲ ಅಭ್ಯರ್ಥಿಗಳಿಗೆ ರೂ. 175/- ಅರ್ಜಿ ಶುಲ್ಕ ಪಾವತಿಯನ್ನು ಮಾಡಬೇಕು.
ಆಯ್ಕೆವಿಧಾನ/ Selection procedure:
ಲಿಖಿತ ಪರೀಕ್ಷೆ/ ಸಂದರ್ಶನದಲ್ಲಿ ತಾವು ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
ಆಧಾರ್ ಕಾರ್ಡ್,
ಇತ್ತೀಚಿನ ಫಾಸ್ಪೋರ್ಟ್ ಸೈಜಿನ ಭಾವಚಿತ್ರ,
ಚಾಲ್ತಿಯಲ್ಲಿರುವ ಇಮೇಲ್ ಐಡಿ & ಮೊಬೈಲ್ ಸಂಖ್ಯೆ
ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು
ಜಾತಿ & ಆದಾಯ ಪ್ರಮಾಣ ಪತ್ರ, ಅಂಗವಿಕಲ ಪ್ರಮಾಣಪತ್ರ, ಗ್ರಾಮೀಣ ಪ್ರಮಾಣಪತ್ರ, ಮಾಜಿಸೈನಿಕ, ಶುಲ್ಕ ಪಾವತಿಸಿದ ರಸೀಧಿ ಹಾಗೂ ಇತರೆ ಪ್ರಮಾಣಪತ್ರಗಳು
ಇತರೆ ಅಗತ್ಯವಿರುವ ದಾಖಲೆಗಳು
ಅರ್ಜಿ ಹಾಕುವ ವಿಧಾನ/ Application Submission Method:
- ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಹಾಗೂ ಇಮೇಲ್ ಐ.ಡಿ ಯನ್ನು ಹೊಂದಿರಬೇಕು. ಹಾಗೂ ಇತ್ತೀಚಿನ ಭಾವಚಿತ್ರ, ಶೈಕ್ಷಣಿಕ ದಾಖಲೆಗಳು, ಇನ್ನಿತರ ಅಗತ್ಯ ದಾಖಲೆಗಳನ್ನು ಕೇಳಿರುವ ಸೈಜ್ ಗೆ ಅನುಸಾರವಾಗಿ ಸ್ಕ್ಯಾನ್ ಮಾಡಿಟ್ಟುಕೊಳ್ಳಿ.
- ಅಭ್ಯರ್ಥಿಗಳು www.bankofbaroda.in ವೆಬ್ಸೈಟ್ ಗ ಬೇಟಿ ನೀಡಿ Recruitment Page ಗೆ ಹೋಗಿ. ಅಲ್ಲಿ ಲಭ್ಯವಿರುವ Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನೊಂದಣಿ ಮಾಡಿಕೊಂಡು Registration Mobile Number & Password ಅನ್ನು ಬಳಸಿಕೊಂಡು ಮೇಲೆ ನೀಡಿರುವ Portal ನಲ್ಲಿ ಲಾಗಿನ್ ಮಾಡಿಕೊಳ್ಳಿ.
- ಆನ್ಲೈನ್ ಅರ್ಜಿ ನಮೂನೆಯನ್ನು ಸರಿಯಾದ ಮಾಹಿತಿಯೊಂದಿಗೆ ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯವಿರುವ ಕಡೆ ಸ್ಕ್ಯಾನ್ ಮಾಡಿರುವ ಕಾಪಿಗಳನ್ನು Upload ಮಾಡಿ, ಅಂತಿಮವಾಗಿ Submit ಮಾಡಿ.
- Payment Gateway ಗೆ ತೆರಳಿ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್/ ಯುಪಿಐ/ ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ.
- ಅರ್ಜಿ ಸಲ್ಲಿಸಿದ ನಂತರ ಅದನ್ನು ಮುದ್ರಿಸಿಟ್ಟುಕೊಳ್ಳಿ. ಮುಂದೆ ನಡೆಯುವ ಮೂಲ ದಾಖಲಾತಿಗಳ ಪರಿಶೀಲನೆ ಸಂದರ್ಭದಲ್ಲಿ ಅದನ್ನು ಹಾಜರುಪಡಿಸಬೇಕು.
Important Date/ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 23-07-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-08-2025
Important Links/ ಪ್ರಮುಖ ಲಿಂಕುಗಳು:
ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.