ಸರ್ಕಾರಿ ನೌಕರರೇ ಗಮನಿಸಿ! ಜನವರಿಯಿಂದ EGIS ಮಾಸಿಕ ವಂತಿಗೆಯಲ್ಲಿ ಬಾರಿ ಬದಲಾವಣೆ. ನಿಮ್ಮ ಮಾಸಿಕ ಕಡಿತ ಎಷ್ಟು ಗೊತ್ತಾ? Employees GIS Deduction from January 01 2025
ಸ್ನೇಹಿತರೇ ನಮಸ್ತೆ, ನೀವು ರಾಜ್ಯ ಸರ್ಕಾರಿ ನೌಕರರಾಗಿದ್ದರೇ ಈ ಲೇಖನವನ್ನು ಪೂರ್ತಿಯಾಗಿ ಓದಿ. ರಾಜ್ಯ ಸರ್ಕಾರಿ ನೌಕರರಿಗೆ ಮಾಸಿಕವಾಗಿ ಕಡಿತ ಮಾಡಲಾಗುವ ನೌಕರರ ಗುಂಪು ವಿಮಾ ಯೋಜನೆ (Employees Group Insurance Scheme) ನಲ್ಲಿ ಬದಲಾವಣೆ ತರಲಾಗಿದೆ. ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗವನ್ನು ಜಾರಿಗೊಳಿಸಲಾಯಿತು. ಅದರಂತೆ ನೌಕರರ ವೇತನ ಹೆಚ್ಚಳವಾಯಿತು ಈಗಾಗಿ EGIS ಕಡಿತದಲ್ಲಿ ಹೆಚ್ಚಳ ಮಾಡಲಾಗಿದೆ. ಗ್ರೂಪ್ ಎ, ಬಿ, ಸಿ & ಡಿ ವರ್ಗದ ನೌಕರರಿಗೆ ಎಷ್ಟೆಷ್ಟು EGIS ಕಡಿತ ಮಾಡಬೇಕು ಎಂಬ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೂಡಲೇ ನೀವು HRMS ನಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳಿ.
ಸ್ನೇಹಿತರೇ ಗುಂಪು ವಿಮಾ ಯೋಜನೆಯು ರಾಜ್ಯ ಸರ್ಕಾರದಿಂದ ಹೊರಡಿಸಲಾಗಿರುವ ಸರ್ಕಾರಿ ನೌಕರರಿಗಾಗಿ ರೂಪುಗೊಂಡಿರುವ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರಲ್ಲಿ ನೌಕರರು ಮಾಸಿಕವಾಗಿ ತಮ್ಮ ವೇತನದಿಂದ ಹಣವನ್ನು ಕಡಿತ ಮಾಡುವ ಮೂಲಕ ವಿಮೆ ಹಾಗೂ ಉಳಿತಾಯ ಎರಡು ಯೋಜನೆಗಳಿಗೂ ಹಣ ಕೂಡಿಡಲಾಗುತ್ತದೆ. ಇದನ್ನು 1982 ರಲ್ಲಿ ಜಾರಿಗೊಳಿಸಲಾಗಿದೆ. ಮಾಸಿಕ ವಂತಿಗೆಯನ್ನು ಹಂತಹಂತವಾಗಿ ಹೆಚ್ಚಿಸಿಕೊಂಡು ಬರಲಾಗಿದೆ. ಜನೆವರಿ 01, 2025 ರಿಂದ ಅನ್ವಯವಾಗುವಂತೆ ಗ್ರೂಪ್ ಎ, ಬಿ, ಸಿ & ಡಿ ನೌಕರರಿಗೆ ಹೊಸ ಸ್ಲ್ಯಾಬ್ ಅನ್ನು ಪರಿಚಯಿಸಲಾಗಿದೆ. ಅದರಂತೆ ಹಣ ಸೆಳೆಯವ ಅಧಿಕಾರಿಗಳು HRMS ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬೇಕಾಗಿದೆ. ಆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
EGIS ಕುರಿತಾದ ಮಾಹಿತಿಗಳು:
- ನೌಕರರ ಗುಂಪು ವಿಮಾ ಯೋಜನೆಯು 21 ಡಿಸೆಂಬರ್ 1981 ರ ಅಧಿಕೃತ ಜ್ಞಾಪಕ ಪತ್ರ ಸಂಖ್ಯೆ ಎಫ್‌ಡಿ/80/ಎಸ್‌ಆರ್‌ಪಿ(ಸಿಎಸ್‌ಸಿ)81, ಬೆಂಗಳೂರು ದಿನಾಂಕದ ಪ್ರಕಾರ ಈ ಯೋಜನೆಯನ್ನು ಪರಿಚಯಿಸಲಾಯಿತು.
- ಯೋಜನೆಯು ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯಿಸುತ್ತದೆ (ಅನುದಾನಿತ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಮಂಡಳಿಗಳು ಮತ್ತು ನಿಗಮದ ನೌಕರರು ಅರ್ಹರಲ್ಲ)
- ಯಾವುದೇ ವೈಯಕ್ತಿಕ ಲೆಕ್ಕಪತ್ರ ವ್ಯವಸ್ಥೆ ಇಲ್ಲ.
- ಚಂದಾದಾರಿಕೆ ಯಾವಾಗಲೂ ಮುಂಚಿತವಾಗಿರುತ್ತದೆ.
- ಯೋಜನೆಯ ಅಡಿಯಲ್ಲಿ ಎರಡು ನಿಧಿಗಳಿವೆ; ವಿಮಾ ನಿಧಿ ಮತ್ತು ಉಳಿತಾಯ ನಿಧಿ.
- ಜನವರಿ ಹೊರತುಪಡಿಸಿ ನೇಮಕಗೊಂಡ ವ್ಯಕ್ತಿಯು ವಿಮಾ ನಿಧಿಗೆ ಮಾತ್ರ ಚಂದಾದಾರರಾಗುತ್ತಾರೆ ಮತ್ತು ಮುಂದಿನ ವರ್ಷದ ಜನವರಿಯಿಂದ ನಿಯಮಿತ ಸದಸ್ಯರಾಗುತ್ತಾರೆ (ವಿಮೆ ಮತ್ತು ಉಳಿತಾಯ ನಿಧಿ ಎರಡಕ್ಕೂ ಕೊಡುಗೆ ನೀಡುತ್ತಾರೆ).
- ಸಾಲಗಳು ಮತ್ತು ಮುಂಗಡಗಳಿಗೆ ಯಾವುದೇ ಅವಕಾಶಗಳಿಲ್ಲ.
- ಯೋಜನೆಯಡಿಯಲ್ಲಿ ಉದ್ಯೋಗಿಗಳನ್ನು 4 ಗುಂಪುಗಳಾಗಿ ವರ್ಗೀಕರಿಸಲಾಗಿದೆ. A, B, C & D. ಸ್ಕೀಮ್‌ಗೆ ಚಂದಾದಾರಿಕೆಯು ಸದಸ್ಯರು ಯಾವ ಗುಂಪಿಗೆ ಸೇರಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಡಿಸೆಂಬರ್ 2024 ಕ್ಕಿಂತ ಮುಂಚೆ EGIS ಮಾಸಿಕ ಕಡಿತ ಎಷ್ಟಿತ್ತು?
ಗ್ರೂಪ್ ಎ ನೌಕರರಿಗೆ- ರೂ. 540/-
ಗ್ರೂಪ್ ಬಿ ನೌಕರರಿಗೆ- ರೂ. 405/-
ಗ್ರೂಪ್ ಸಿ ನೌಕರರಿಗೆ- ರೂ. 360/-
ಗ್ರೂಪ್ ಡಿ ನೌಕರರಿಗೆ- ರೂ. 240/-
ಜನೆವರಿ 2025 ರ ನಂತರ EGIS ಎಷ್ಟು ಕಡಿತ ಮಾಡಬೇಕು?
ಗ್ರೂಪ್ ಎ ನೌಕರರಿಗೆ- ರೂ. 720/-
ಗ್ರೂಪ್ ಬಿ ನೌಕರರಿಗೆ- ರೂ. 540/-
ಗ್ರೂಪ್ ಸಿ ನೌಕರರಿಗೆ- ರೂ. 480/-
ಗ್ರೂಪ್ ಡಿ ನೌಕರರಿಗೆ- ರೂ. 240/-
ಫೆಬ್ರವರಿ 01 2025 ಹಾಗೂ ಡಿಸೆಂಬರ್ 31 2025 ರ ನಡುವೆ ಹೊಸದಾಗಿ ಸೇವೆಗೆ ಸೇರಿದ ನೌಕರರಿಗೆ ಕಡಿತ ಮಾಡಬೇಕಿರುವ EGIS ವಿವರಗಳನ್ನು ಕೆಳಗೆ ನೀಡಲಾಗಿದೆ.
ಗ್ರೂಪ್ ಎ ನೌಕರರಿಗೆ- ರೂ. 60
ಗ್ರೂಪ್ ಬಿ ನೌಕರರಿಗೆ- ರೂ. 120-
ಗ್ರೂಪ್ ಸಿ ನೌಕರರಿಗೆ- ರೂ. 135/-
ಗ್ರೂಪ್ ಡಿ ನೌಕರರಿಗೆ- ರೂ. 180/-
ಮೇಲಿನ ಎಲ್ಲ ಮಾಹಿತಿಯನ್ನು ರಾಜ್ಯ ಸರ್ಕಾರವು ದಿನಾಂಕ 06-01-2025 ರಲ್ಲಿ ಹೊರಡಿಸಲಾದ ಕರ್ನಾಟಕ ಪತ್ರ ವಿವರಗಳಂತೆ ನೀಡಲಾಗಿದೆ. ತಾವು ರಾಜ್ಯ ಸರ್ಕಾರಿ ನೌಕರರಾಗಿದ್ದರೇ, ಕೂಡಲೇ HRMS ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಿ. ಹಾಗೂ ಈ ಮಾಹಿತಿಯನ್ನು ಎಲ್ಲ ನೌಕರರಿಗೂ ಶೇರ್ ಮಾಡಿ. ಧನ್ಯವಾದಗಳು
ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.