ಡಿಸಿಸಿ ಬ್ಯಾಂಕ್ ನಲ್ಲಿ ಖಾಲಿ ಇರುವ ಸೆಕ್ಷನ್ ಕ್ಲರ್ಕ್ & ಅಟೆಂಡರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: DCC Bank Recruitment 2025
ನಮಸ್ತೆ ಸ್ನೇಹಿತರೇ, ಸ್ಪರ್ಧಾದೀಪ ವೆಬ್ಸೈಟ್ ನಿಂದ ಇಂದು ವಿನೂತನ ಉದ್ಯೋಗ ಮಾಹಿತಿಯನ್ನು ನೀಡುತ್ತೇವೆ. ರಾಯಚೂರು-ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ರಾಯಚೂರು ವತಿಯಿಂದ ಖಾಲಿ ಇರುವ ಶಾಖಾ ವ್ಯವಸ್ಥಾಪಕರು, ಸಹಾಯಕರು & ಅಟೆಂಡರ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ನಿಗದಿತ ನಮೂನೆಯ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
Raichur Koppal District Central Cooperative Bank ನಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಖಾಲಿ ಇರುವ ಕಿರಿಯ ಸಹಾಯಕ ಮತ್ತು ಸಿಪಾಯಿ ಹುದ್ದೆಗಳ ಭರ್ತಿಗೆ ಆಫ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ದಿನಾಂಕ 22-12-2025 ರ ಒಳಗಾಗಿ ಅರ್ಜಿಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೀತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.
ರಾಯಚೂರು-ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ರಾಯಚೂರು ಹೊಸ ಅಧಿಸೂಚನೆ ಪ್ರಕಟವಾಗಿದ್ದು, ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.
ನೇಮಕಾತಿಯ ಪಕ್ಷಿನೋಟ:
| ನೇಮಕಾತಿ ಕಛೇರಿ: ರಾಯಚೂರು-ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ರಾಯಚೂರು |
| ಹುದ್ದೆಗಳ ಪದನಾಮ: ಶಾಖಾ ವ್ಯವಸ್ಥಾಪಕರು, ಅಟೆಂಡರ್ & ಇತರೆ |
| ಹುದ್ದೆಗಳ ಸಂಖ್ಯೆ: 70 ಹುದ್ದೆಗಳು |
| ಕಾರ್ಯ ನಿರ್ವಹಿಸಬೇಕಾದ ವಿಳಾಸ: ಕೊಪ್ಪಳ, ರಾಯಚೂರು |
ಹುದ್ದೆಗಳ ವಿವರ:
| ಹುದ್ದೆಗಳ ಹೆಸರು | ರಾಜ್ಯ ವೃಂದ | ಕಲ್ಯಾಣ ಕರ್ನಾಟಕ ವೃಂದ |
| ಶಾಖಾ ವ್ಯವಸ್ಥಾಪಕರು | 04 | 11 |
| ಸಹಾಯಕರು ಗ್ರೇಡ್ 1 | 11 | 34 |
| ಅಟೆಂಡರ್ | 02 | 08 |
| ಒಟ್ಟು ಹುದ್ದೆಗಳು | 17 | 53 |
ವೇತನ ಶ್ರೇಣಿ:
ಅಧಿಸೂಚನೆಯ ಪ್ರಕಾರ ಮೂಲವೇತನ ಶ್ರೇಣಿ ಕೆಳಗೆ ನೀಡಿದಂತೆ ನಿಗದಿಪಡಿಸಲಾಗಿದೆ.
| ಹುದ್ದೆಗಳ ಹೆಸರು | ವೇತನ |
| ಶಾಖಾ ವ್ಯವಸ್ಥಾಪಕರು | 61300-112900 |
| ಸಹಾಯಕರು ಗ್ರೇಡ್ 1 | 44425-83700 |
| ಅಟೆಂಡರ್ | 37500-76100 |
ಶೈಕ್ಷಣಿಕ ವಿದ್ಯಾರ್ಹತೆ
ಶಾಖಾ ವ್ಯವಸ್ಥಾಪಕರು:
1)ಭಾರತದ ಕಾನೂನಿನ ಅಡಿಯಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾನಿಲಯದ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು.
2) ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಮತ್ತು
3) ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ ಬರೆಯುವಿಕೆ, ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.
ಸಹಾಯಕರು ಗ್ರೇಡ್ 1
1)ಭಾರತದ ಕಾನೂನಿನ ಅಡಿಯಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾನಿಲಯದ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು.
2)ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಮತ್ತು
3)ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ,ಬರೆಯುವಿಕೆ, ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.
ಅಟೆಂಡರ್ :
ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾಗಿದ್ದು ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.
ವಯೋಮಿತಿ:
ಅಭ್ಯರ್ಥಿಗಳು ದಿನಾಂಕಕ್ಕೆ ಕನಿಷ್ಟ 18 ವರ್ಷ ವಯಸ್ಸನ್ನು ಪೂರೈಸಿರಬೇಕು. ಗರಿಷ್ಟ 35 ವರ್ಷಗಳನ್ನು ಮೀರುವಂತಿಲ್ಲ. ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದವರಿಗೆ 05 ವರ್ಷ ಹಾಗೂ ಇತರೆ ಹಿಂದೂಳಿದ ವರ್ಗದವರಿಗೆ 03 ವರ್ಷ ಸಡಿಲಿಕೆ ದೊರೆಯುತ್ತದೆ.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
- ಭರ್ತಿ ಮಾಡಿರುವ ಅರ್ಜಿ ನಮೂನೆ
- ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು
- ಗಣಕಯಂತ್ರ ಕೋರ್ಸ್ ಪ್ರಮಾಣಪತ್ರ
- ಅರ್ಜಿ ಶುಲ್ಕ ಪಾವತಿಸಿದ ರಸೀಧಿ
- ಜಾತಿ & ಆದಾಯ ಪ್ರಮಾಣ ಪತ್ರ,
- ಕನ್ನಡ ಮಾದ್ಯಮ ಪ್ರಮಾಣಪತ್ರ,
- ಗ್ರಾಮೀಣ ಪ್ರಮಾಣಪತ್ರ, ಮಾಜಿಸೈನಿಕ ಹಾಗೂ ಇತರೆ ಪ್ರಮಾಣಪತ್ರಗಳು
- ಇತರೆ ಅಗತ್ಯವಿರುವ ದಾಖಲೆಗಳು
ಅರ್ಜಿ ಸಲ್ಲಿಸುವುದು ಹೇಗೆ?
- ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಹಾಗೂ ಇಮೇಲ್ ಐ.ಡಿ ಯನ್ನು ಹೊಂದಿರಬೇಕು. ಹಾಗೂ ಇತ್ತೀಚಿನ ಭಾವಚಿತ್ರ, ಶೈಕ್ಷಣಿಕ ದಾಖಲೆಗಳು, ಇನ್ನಿತರ ಅಗತ್ಯ ದಾಖಲೆಗಳನ್ನು ಕೇಳಿರುವ ಸೈಜ್ ಗೆ ಅನುಸಾರವಾಗಿ ಸ್ಕ್ಯಾನ್ ಮಾಡಿಟ್ಟುಕೊಳ್ಳಿ.
- ಅಭ್ಯರ್ಥಿಗಳು https://www.raichurdcc.bank.in ವೆಬ್ಸೈಟ್ ಗ ಬೇಟಿ ನೀಡಿ Recruitment Page ಗೆ ಹೋಗಿ. ಅಲ್ಲಿ ಲಭ್ಯವಿರುವ Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಆನ್ಲೈನ್ ಅರ್ಜಿ ನಮೂನೆಯನ್ನು ಸರಿಯಾದ ಮಾಹಿತಿಯೊಂದಿಗೆ ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯವಿರುವ ಕಡೆ ಸ್ಕ್ಯಾನ್ ಮಾಡಿರುವ ಕಾಪಿಗಳನ್ನು Upload ಮಾಡಿ, ಅಂತಿಮವಾಗಿ Submit ಮಾಡಿ.
- ನಂತರ ಪೇಮೆಂಟ್ ಪೋರ್ಟಲ್ ನಲ್ಲಿ ಅಗತ್ಯವಿರುವ ಅರ್ಜಿ ಶುಲ್ಕವನ್ನು ಪಾವತಿಸಿ
- ಅರ್ಜಿ ಸಲ್ಲಿಸಿದ ನಂತರ ಅದನ್ನು ಮುದ್ರಿಸಿಟ್ಟುಕೊಳ್ಳಿ. ಮುಂದೆ ನಡೆಯುವ ಮೂಲ ದಾಖಲಾತಿಗಳ ಪರಿಶೀಲನೆ ಸಂದರ್ಭದಲ್ಲಿ ಅದನ್ನು ಹಾಜರುಪಡಿಸಬೇಕು.
ಅರ್ಜಿ ಶುಲ್ಕ ಪಾವತಿಸುವುದು:
| ವರ್ಗ | ಪಜಾ, ಪಪಂ, ಪ್ರವರ್ಗ 1, ಮಾಜಿ ಸೈನಿಕ ಅಂಗವಿಕಲ ಅಭ್ಯರ್ಥಿಗಳಿಗೆ | ಸಾಮಾನ್ಯ ಇತರೆ ಅಭ್ಯರ್ಥಿಗಳಿಗೆ |
| ಶಾಖಾ ವ್ಯವಸ್ಥಾಪಕರು | ರೂ. 800 | ರೂ. 1600/- |
| ಸಹಾಯಕರು ಗ್ರೇಡ್ 1 | ||
| ಅಟೆಂಡರ್ | ರೂ. 500/- | ರೂ. 1000/- |
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ: 21-11-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22-12-2025
ಅಧಿಕೃತ ಲಿಂಕುಗಳು/ Official Links
| ನೋಟಿಫಿಕೇಶನ್ ಡೌನ್ಲೋಡ್ HK & NHK |
| ಅರ್ಜಿ ಸಲ್ಲಿಸುವ ಲಿಂಕ್ |
| ಅಧಿಕೃತ ವೆಬ್ಸೈಟ್ |
