ಮೈಸೂರಿನ ವಿದ್ಯುತ್ ಸರಬರಾಜು ನಿಗಮದಿಂದ 250 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: CHESCOM Notification for 250 vacancies 2025

WhatsApp Group Join Now
Telegram Group Join Now
Spread the love

ಮೈಸೂರಿನ ವಿದ್ಯುತ್ ಸರಬರಾಜು ನಿಗಮದಿಂದ 250 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: CHESCOM Notification for 250 vacancies 2025

ನಮಸ್ತೆ ಸ್ನೇಹಿತರೇ, ಸ್ಪರ್ಧಾದೀಪ ವೆಬ್ಸೈಟ್ ನಿಂದ ಇಂದು ಹೊಸ ಉದ್ಯೋಗ ಮಾಹಿತಿಯನ್ನು ನೀಡುತ್ತೇವೆ.  ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಿಂದ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ, CHESCOM ವತಿಯಿಂದ ಗ್ರ್ಯಾಜುಯೇಟ್ ಮತ್ತು ಡಿಪ್ಲೋಮಾ ತರಬೇತಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

CHESCOM ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ದಿನಾಂಕ 06-02-2025 ರ ಒಳಗಾಗಿ ಅರ್ಜಿಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೋತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರಿನಿಂದ ಹೊಸ ಅಧಿಸೂಚನೆ ಪ್ರಕಟವಾಗಿದ್ದು, ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.

ಹುದ್ದೆಗಳ ವಿವರ/ Post Details:

Graduate Apprentices Posts:

ಗ್ರ್ಯಾಜುಯೇಟ್ ಅಪ್ರೇಂಟೀಸ್ ಹುದ್ದೆಗಳು
ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ 77 ಹುದ್ದೆಗಳು
ಸಿವಿಲ್ ಇಂಜಿನಿಯರಿಂಗ್ 03 ಹುದ್ದೆಗಳು
ಒಟ್ಟು ಹುದ್ದೆಗಳು 80 ಹುದ್ದೆಗಳು

Diploma Apprentices Posts:

ಡಿಪ್ಲೋಮಾ ಅಪ್ರೇಂಟೀಸ್ ಹುದ್ದೆಗಳು
ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ 51 ಹುದ್ದೆಗಳು
ಸಿವಿಲ್ ಇಂಜಿನಿಯರಿಂಗ್ 04 ಹುದ್ದೆಗಳು
ಒಟ್ಟು ಹುದ್ದೆಗಳು 55 ಹುದ್ದೆಗಳು

Non-Engineering Apprentices Posts:

ನಾನ್- ಇಂಜಿನಿಯರಿಂಗ್ ಅಪ್ರೆಂಟೀಸ್ ಹುದ್ದೆಗಳು
ಬಿ.ಕಾಂ 55
ಬಿ.ಬಿ.ಎ 15
ಬಿ.ಸಿ.ಎ 15
ಬಿ.ಎ 20
ಬಿ.ಎಸ್.ಸಿ 10
ಒಟ್ಟು ಹುದ್ದೆಗಳು 115

ವೇತನ/ Stipend

ಶಿಶಿಕ್ಷು ನಿಯಮಾವಳಿಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ನಿಗದಿಪಡಿಸಿದ ಸ್ಟೈಫಂಡ್ (Stipend) ನೀಡಲಾಗುತ್ತದೆ

Engineering- Rs. 9000
Diploma- Rs. 8000/-
Any Degree- Rs. 9000/=

 

ವಯೋಮಿತಿ/ Age limit:

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಕನಿಷ್ಟ 18 ವರ್ಷ ಪೂರೈಸಿರಬೇಕು & ಗರಿಷ್ಟ 24 ವರ್ಷ ಮೀರಿರಬಾರದು.

ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪಜಾ/ಪಪಂ ಅಭ್ಯರ್ಥಿಗಳಿಗೆ: 05 ವರ್ಷ

ಇತರೆ ಹಿಂದೂಳಿದ ವರ್ಗ: 03 ವರ್ಷ

ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ

ಶೈಕ್ಷಣಿಕ ಅರ್ಹತೆಗಳು/ Educational Qualification:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ 2020, 2021, 2022, 2023 & 2024 ನೇ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಸಂಬಂಧಿಸಿದ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಅಥವಾ ಡಿಪ್ಲೋಮಾ ಅಥವಾ ಯಾವುದೇ  ಪದವಿ ಉತ್ತೀರ್ಣ ಹೊಂದಿರಬೇಕು.

ಅರ್ಜಿ ಶುಲ್ಕ/ Application Fees:

ಅರ್ಜಿ ಶುಲ್ಕ ಇರುವುದಿಲ್ಲ.

 ಆಯ್ಕೆವಿಧಾನ/ Selection procedure:

ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ತಾವು ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆಮಾಡಲಾಗುತ್ತದೆ.

ಅರ್ಜಿ ಹಾಕುವ ವಿಧಾನ/ Application Submission Method:

1. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಹಾಗೂ ಇಮೇಲ್ ಐ.ಡಿ ಯನ್ನು ಹೊಂದಿರಬೇಕು. ಹಾಗೂ ಇತ್ತೀಚಿನ ಭಾವಚಿತ್ರ, ಶೈಕ್ಷಣಿಕ ದಾಖಲೆಗಳು, ಇನ್ನಿತರ ಅಗತ್ಯ ದಾಖಲೆಗಳನ್ನು ಕೇಳಿರುವ ಸೈಜ್ ಗೆ ಅನುಸಾರವಾಗಿ ಸ್ಕ್ಯಾನ್ ಮಾಡಿಟ್ಟುಕೊಳ್ಳಿ.

2. ನೀವು ಈ ಮುಂಚೆ NATS Portal ನಲ್ಲಿ ನೊಂದಣಿಯಾಗಿದಿದ್ದರೇ, https://nats.education.gov.in ವೆಬ್ಸೈಟ್ ಗೆ ಬೇಟಿ ನೀಡಿ ಕೂಡಲೇ ನೊಂದಣಿ ಮಾಡಿಕೊಳ್ಳಿ.  ಒಂದು ವೇಳೆ ಈ ಮುಂಚೆ ನೊಂದಣಿಯಾಗಿದ್ದರೇ ಮತ್ತೊಮ್ಮೆ ನೊಂದಣಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ.

3. ತಮ್ಮ User Name & Password ಅನ್ನು ಬಳಸಿಕೊಂಡು ಮೇಲೆ ನೀಡಿರುವ NATS Portal ನಲ್ಲಿ ಲಾಗಿನ್ ಮಾಡಿಕೊಳ್ಳಿ.

4. ಅಲ್ಲಿ ಲಭ್ಯವಿರುವ Apply against advertised vacancies ಸರ್ಚ್ ಬಾಕ್ಸ್ ನಲ್ಲಿ “Chamundeshwari Electricty Supply Corporation Limited “ ಅನ್ನು ಸೆಲೆಕ್ಟ್ ಮಾಡಿ

5. ಆನ್ಲೈನ್ ಅರ್ಜಿ ನಮೂನೆಯನ್ನು ಸರಿಯಾದ ಮಾಹಿತಿಯೊಂದಿಗೆ ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯವಿರುವ ಕಡೆ ಸ್ಕ್ಯಾನ್ ಮಾಡಿರುವ ಕಾಪಿಗಳನ್ನು Upload ಮಾಡಿ, ಅಂತಿಮವಾಗಿ Submit ಮಾಡಿ.

6. ಅರ್ಜಿ ಸಲ್ಲಿಸಿದ ನಂತರ ಅದನ್ನು ಮುದ್ರಿಸಿಟ್ಟುಕೊಳ್ಳಿ. ಮುಂದೆ ನಡೆಯುವ ಮೂಲ ದಾಖಲಾತಿಗಳ ಪರಿಶೀಲನೆ ಸಂದರ್ಭದಲ್ಲಿ ಅದನ್ನು ಹಾಜರುಪಡಿಸಬೇಕು.

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 20-01-2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-02-2025    

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:

ಅರ್ಜಿ ಸಲ್ಲಿಸಿ/ Apply Online:

ವೆಬ್ಸೈಟ್/ Website :

ಇತ್ತೀಚಿನ ಸಂಬಂಧಿತ ಸುದ್ದಿಗಳು:
ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ RDPR ಇಲಾಖೆಯಿಂದ ಅರ್ಜಿ ಆಹ್ವಾನ: RDPR Ombudsman Jobs 2025
ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಖಾಲಿ ಇರುವ ವಾರ್ಡನ್, ಅಟೆಂಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನ: GSSS College Opening 2025

    ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ. 

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top