504 ಕೆಎಎಸ್ (ಗೆಜೆಟೆಡ್ ಪ್ರೊಬೇಶನರಿ) ಹುದ್ದೆಗಳ ನೇಮಕಾತಿಗೆ ಕೆಪಿಎಸ್ಸಿಯಿಂದ ಅರ್ಜಿ: Check here compete details about KAS recruitment 2026
ನಮಸ್ತೆ ಸ್ನೇಹಿತರೇ, ಸ್ಪರ್ಧಾದೀಪ ವೆಬ್ಸೈಟ್ ನಿಂದ ಕರ್ನಾಟಕ ಆಡಳಿತ ಸೇವೆಗಳ (ಕೆಎಎಸ್) ನೇಮಕಾತಿಗೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಕೆಎಎಸ್ ಅಥವಾ ಕರ್ನಾಟಕ ಆಡಳಿತ ಸೇವೆಗಳ ನೇಮಕಾತಿಯು ಕರ್ನಾಟಕದ ಬಹಳಷ್ಟು ಅಭ್ಯರ್ಥಿಗಳ ಕನಸು ಆಗಿರುತ್ತದೆ. ಅಂತಹ ಪರೀಕ್ಷೆಗಾಗಿ ವರ್ಷಾನುಗಟ್ಟಾಲೆ ಅಭ್ಯರ್ಥಿಗಳು ಸಿದ್ದತೆಯನ್ನು ಮಾಡಿಕೊಂಡಿರುತ್ತಾರೆ. ಸದರಿ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಬಹುಮುಖ್ಯ ಮಾಹಿತಿಯೊಂದು ಹೊರಬಿದ್ದಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 504 ಗೆಜೆಟೆಡ್ ಆಫೀಸರ್ ಹುದ್ದೆಗ ನೇಮಕಾತಿಗೆ ಆರ್ಥಿಕ ಇಲಾಖೆಯು ಅನುಮತಿ ನೀಡಿದ್ದು, ಕರ್ನಾಟಕ ಲೋಕಸೇವಾ ಆಯೋಗದಿಂದ ಹೊಸ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ.
ಕರ್ನಾಟಕ ಆಡಳಿತ ಸೇವೆ (KAS) ಎಂಬುದು ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸುವ ಒಂದು ರಾಜ್ಯ ನಾಗರಿಕ ಸೇವೆಯಾಗಿದ್ದು, ಇದು ರಾಜ್ಯಾದ್ಯಂತ ವಿವಿಧ ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳನ್ನು (ಗೆಜೆಟೆಡ್ ಪ್ರೊಬೇಷನರ್‌ಗಳು) ನೇಮಕ ಮಾಡಿಕೊಳ್ಳುತ್ತದೆ, ಉದಾಹರಣೆಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್, ಡೆಪ್ಯೂಟಿ ಸುಪರಿಟೆಂಡೆಂಟ್ ಆಫ್ ಪೋಲಿಸ್ ಸೇರಿದಂತೆ ಇತರೆ ಆಯಕಟ್ಟಿನ ಹುದ್ದೆಗಳ ಭರ್ತಿಯನ್ನು ಇದರ ಮೂಲಕ ಮಾಡಲಾಗುತ್ತದೆ. ಆಡಳಿತ ಇಲಾಖೆಯು ವಿವಿಧ ಇಲಾಖೆಗಳಲ್ಲಿನ ಒಟ್ಟು 656 ಹುದ್ದೆಗಳ ನೇಮಕಾತಿಗಾಗಿ ಅನುಮತಿಯನ್ನು ಕೋರಲಾಗಿತ್ತು. ಆದರಂತೆ ಅರ್ಥಿಕ ಇಲಾಖೆಯು ಪರಿಶೀಲಿಸಿ 504 ಹುದ್ದೆಗಳ ಭರ್ತಿಗೆ ಅನುಮತಿಯನ್ನು ನೀಡಿದೆ.
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಗೆಜೆಟೆಡ್ ಪ್ರೊಬೇಶನರಿ 504 ಹುದ್ದೆಗಳ ನೇಮಕಾತಿ ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೀತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗೆಜೆಟೆಡ್ ಪ್ರೊಬೇಶನರಿ ಹುದ್ದೆಗಳ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ. ಇದರಲ್ಲಿ ಇಲಾಖೆಯ ಹೆಸರು, ಆಡಳಿತ ಇಲಾಖೆಯು ಭರ್ತಿ ಮಾಡಲು ಕೋರಲಾದ ಹುದ್ದೆಗಳ ಸಂಖ್ಯೆ ಮತ್ತು ಆರ್ಥಿಕ ಇಲಾಖೆ ಭರ್ತಿ ಮಾಡಲು ಸಹಮತಿಸಿದ ಹುದ್ದೆಗಳ ಸಂಖ್ಯೆಯ ವಿವರಗಳನ್ನು ನೀಡಲಾಗಿದೆ.
ಕರ್ನಾಟಕದ ಈ ಸಂಸ್ಥೆಯಲ್ಲಿ ಖಾಲಿ ಇರುವ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕ, ಲೆಕ್ಕ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ:
| ಕ್ರ. ಸಂ. | ಇಲಾಖೆ | ಆಡಳಿತ ಇಲಾಖೆಯು ಕೋರಲಾದ ಹುದ್ದೆಗಳ ಸಂಖ್ಯೆ | ಆರ್ಥಿಕ ಇಲಾಖೆಯು ಸಹಮತಿಸಿದ ಹುದ್ದೆಗಳ ಸಂಖ್ಯೆ |
| 1 | ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ | 97 | 85 |
| 2 | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ | 59 | 55 |
| 3 | ಕಂದಾಯ ಇಲಾಖೆ | 129 | 76 |
| 4 | ಪೊಲೀಸ್ ಇಲಾಖೆ | 12 | 10 |
| 5 | ಕಾರಾಗೃಹ ಇಲಾಖೆ | 09 | 03 |
| 6 | ವಾಣಿಜ್ಯ ತೆರಿಗೆಗಳ ಇಲಾಖೆ | 143 | 140 |
| 7 | ಖಜಾನೆ ಇಲಾಖೆ | 69 | 48 |
| 8 | ಅಬಕಾರಿ ಇಲಾಖೆ | 13 | 10 |
| 9 | ಸಹಕಾರ ಇಲಾಖೆ | 26 | 21 |
| 10 | ಸಮಾಜ ಕಲ್ಯಾಣ ಇಲಾಖೆ | 54 | 27 |
| 11 | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ | 13 | 07 |
| 12 | ಕಾರ್ಮಿಕ ಇಲಾಖೆ | 11 | 04 |
| 13 | ಕೌಶಲ್ಯಾಭಿವೃದ್ಧಿ ಇಲಾಖೆ | 11 | 03 |
| 14 | ಪ್ರವಾಸೋದ್ಯಮ ಇಲಾಖೆ | 02 | 02 |
| 15 | ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ | 09 | 09 |
| 16 | ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ | 04 | 04 |
| ಒಟ್ಟು | 656 | 504 |
ಶೈಕ್ಷಣಿಕ ಅರ್ಹತೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (ಯಾವುದೇ ವಿಭಾಗ) ಪಡೆದಿರಬೇಕು. ಎಂಜಿನಿಯರಿಂಗ್ ಪದವಿ ಹೊಂದಿರುವವರು ಸಹ ಅರ್ಹರು.
ವಯೋಮಿತಿ/ Age limit:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಸರಿಯಾಗಿ
ಕನಿಷ್ಟ ವಯೋಮಿತಿ- 18 ವರ್ಷ
ಗರಿಷ್ಟ ವಯೋಮಿತಿ 38 ವರ್ಷ
ಗರಿಷ್ಟವಯೋಮಿತಿಯಲ್ಲಿ ಪಜಾ & ಪಪಂ ಅಭ್ಯರ್ಥಿಗಳಿಗೆ 05 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 03 ವರ್ಷ ಸಡಿಲಿಕೆ ಇರುತ್ತದೆ.
ಪ್ರಯತ್ನಗಳ ಸಂಖ್ಯೆ:
ಸಾಮಾನ್ಯ ವರ್ಗಕ್ಕೆ 5, ಒಬಿಸಿಗೆ ಹಾಗೂ ಮೀಸಲು ವರ್ಗದ ಅಭ್ಯರ್ಥಿಗಳು ವಯಸ್ಸಿನ ಮಿತಿಯವರೆಗೆ ಎಷ್ಟು ಬೇಕಾದರು ಪ್ರಯತ್ನಗಳನ್ನು ಹೊಂದಬಹುದು.
ಆಯ್ಕೆ ವಿಧಾನ:
ಪೂರ್ವಭಾವಿ ಪರೀಕ್ಷೆ (ಪೂರ್ವಭಾವಿ ಪರೀಕ್ಷೆ) – ವಸ್ತುನಿಷ್ಠ ಪ್ರಕಾರದ ಸ್ಕ್ರೀನಿಂಗ್ ಪರೀಕ್ಷೆಮುಖ್ಯ ಪರೀಕ್ಷೆ (ಮುಖ್ಯ) – ಲಿಖಿತ ವಿವರಣಾತ್ಮಕ ಪತ್ರಿಕೆಗಳುಸಂದರ್ಶನ / ವ್ಯಕ್ತಿತ್ವ ಪರೀಕ್ಷೆ – ಆಯ್ಕೆಗೆ ಮೊದಲು ಅಂತಿಮ ಮೌಲ್ಯಮಾಪನ
ಸ್ನೇಹಿತರೇ ಶೀಘ್ರದಲ್ಲಿಯೇ ಕೆಎಎಸ್ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ಬೃಹತ್ ನೇಮಕಾತಿ ಅಧಿಸೂಚನೆ ಹೊರಬೀಳುವ ನಿರೀಕ್ಷೆ ಇದ್ದು, ಆಸಕ್ತ ಅಭ್ಯರ್ಥಿಗಳು ಈಗಿನಿಂದಲೇ ತಮ್ಮ ಸಿದ್ದತೆಯನ್ನು ಮಾಡಿಕೊಳ್ಳಿ. ಉಳ್ಳವರಿಗೆ ನೂರೆಂಟು ಆಯ್ಕೆ, ಆದರೆ ಸ್ಪರ್ಧಾರ್ಥಿಗಳಿಗೆ ಒಂದೇ ಆಯ್ಕೆ ಅದು ಪರಿಶ್ರಮ. ಎಲ್ಲರೂ ಜಾಗೃತರಾಗಿರಿ ಮುಂದೊಂದು ದಿನ ದೇಶ ನೋಡುವಂತ ಕೈಂಕರ್ಯ ನಿಮ್ಮಿಂದಾಗಲಿ ಎಂಬ ಆಶಯ ನಮ್ಮದು. ಈ ಲೇಖನವನ್ನು ಆದಷ್ಟು ಶೇರ್ ಮಾಡಿ ಮತ್ತು ನಮ್ಮ ಟೆಲಿಗ್ರಾಮ್ ಹಾಗೂ ವಾಟ್ಸಪ್ ಗ್ರೂಪ್ ಗಳಿಗೆ ಸೇರಿಕೊಳ್ಳಿ. ಧನ್ಯವಾದಗಳು…
