ಸರ್ಕಾರಿ ನೌಕರರಿಗೆ ಯುಗಾದಿ ಗಿಫ್ಟ್- 2% ತುಟ್ಟಿಭತ್ಯೆ (DA) ಹೆಚ್ಚಳ: ಜನವರಿ 1, 2025 ರಿಂದ ಅರಿಯರ್ಸ್- Central Govt. Employees DA Hike January 2025
ಸ್ನೇಹಿತರೇ ನಮಸ್ತೆ ಕೇಂದ್ರ ಸರ್ಕಾರಿ ನೌಕರರಿಗೆ ಯುಗಾದಿ ಗಿಫ್ಟ್ ಘೋಷಣೆಯಾಗಿದೆ. 2% ತುಟ್ಟಿಭತ್ಯೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿದೆ, ಶೀಘ್ರದಲ್ಲಿಯೇ ಇದರ ಅಧಿಕೃತ ಘೋಷಣೆ ಹೊರಬೀಳಲಿದೆ. ಇದರಿಂದ ಕೇಂದ್ರ ಸರ್ಕಾರದ 49.18 ಲಕ್ಷ ನೌಕರರಿಗೆ & 64.89 ಪಿಂಚಣಿದಾರರಿಗೆ ತಮ್ಮ ವೇತನದಲ್ಲಿ ಹೆಚ್ಚಳವಾಗಲಿದೆ.
ಕೇಂದ್ರ ಸರ್ಕಾರ ಪ್ರತಿ ವರ್ಷ ಜನೆವರಿ & ಜುಲೈ ನಲ್ಲಿ ಎರಡು ಬಾರಿ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುತ್ತದೆ. ಆದರೆ ಕೆಲವೊಮ್ಮೆ ಘೋಷಣೆ ತಡವಾದರೂ ನೌಕರರಿಗೆ ಅರಿಯರ್ಸ್ ನೀಡಲಾಗುತ್ತದೆ. ಪ್ರಸ್ತುತ ಜನೆವರಿ 1, 2025 ರಿಂದ ತುಟ್ಟಿಭತ್ಯೆ ಹೆಚ್ಚಳದ ಲಾಭ ದೊರಕುತ್ತದೆ. ಈ ಹೆಚ್ಚಳದೊಂದಿಗೆ ತುಟ್ಟಿಭತ್ಯೆ ಶೇಕಡ 53% ನಿಂದ 55% ಕ್ಕೆ ಹೆಚ್ಚಳವಾಗುತ್ತದೆ ಹಾಗೇಯೆ ಜನೆವರಿ 1 ರಿಂದ ಹೆಚ್ಚಳದ ಅರಿಯರ್ಸ್ ಅನ್ನು ನೌಕರರಿಗೆ ನೀಡಲಾಗುತ್ತದೆ.
JOB NEWS: ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ರಾಜ್ಯ ಸರ್ಕಾರಿ ನೌಕರರಿಗೆ ಡಿಎ ಘೋಷಣೆ:
ಸಾಮಾನ್ಯವಾಗಿ ಕೇಂದ್ರ ಸರ್ಕಾರ ಡಿಎ ಹೆಚ್ಚಳ ಘೋಷಣೆ ಮಾಡಿದ ನಂತರ ಕರ್ನಾಟಕ ಸರ್ಕಾರ ಘೋಷಣೆ ಮಾಡುವುದು ವಾಡಿಕೆಯಾಗಿರುತ್ತದೆ. ಕೇಂದ್ರ ಸರ್ಕಾರ ನೀಡಿರುವ ಶೇಕಡವಾರು ಡಿಎ ಹೆಚ್ಚಳದಷ್ಟು ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ ಡಿಎ ಯನ್ನು ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತದೆ. ಶೀಘ್ರವೇ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡುವ ನಿರೀಕ್ಷೆ ಇದೆ.
ಡಿಎ ಹೆಚ್ಚಳದ ಮಾನದಂಡಗಳೇನು?
ಕೇಂದ್ರ ಸರ್ಕಾರವು ತುಟ್ಟಿಭತ್ಯೆ ನೀಡುವಾಗ ವಿವಿಧ ಮಾನದಂಡಗಳನ್ವಯ ಲೆಕ್ಕ ಹಾಕಲಾಗುತ್ತದೆ. ಸಾಮಾನ್ಯವಾಗಿ ಕೈಗಾರಿಕಾ ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (CPI- IW) ಆಧಾರದ ಮೇಲೆ ತುಟ್ಟಿಭತ್ಯೆ ನಿರ್ಧಾರ ಮಾಡಲಾಗುತ್ತದೆ. ಆ ಪ್ರಕಾರವಾಗಿ ಜನೆವರಿ 1, 2025 ರಿಂದ ಅನ್ವಯವಾಗುವಂತೆ ರಿಂದ ಶೇ. 2% ನಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗಿದೆ.
ಕನಿಷ್ಟ ಎಷ್ಟು ವೇತನ ಹೆಚ್ಚಳ:
ತುಟ್ಟಿಭತ್ಯೆಯನ್ನು ಮೂಲವೇತನಕ್ಕೆ ಲೆಕ್ಕ ಹಾಕಲಾಗುತ್ತದೆ. ಒಬ್ಬ ನೌಕರ ಪ್ರತಿ ತಿಂಗಳ ಮೂಲವೇತನ ರೂ. 20000/- ಇದ್ದರೇ, ಆತನ ಡಿಎ ಹೆಚ್ಚಳದ ಮೊತ್ತ ಪ್ರತಿ ತಿಂಗಳು ರೂ. 400 ಆಗಿರುತ್ತದೆ.
ಸ್ನೇಹಿತರೇ ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಬಾವಿಸುತ್ತೇವೆ. ಇದೇ ರೀತಿಯ ನಿರಂತರ ಅಪ್ಡೇಟ್ಸ್ ಗಳಿಗೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಸೇರಿಕೊಳ್ಳಿ.
ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಕ್ಲರ್ಕ್, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನ- FSI Recruitment 2025