BMTC ಯಿಂದ ಉಚಿತ ವಸತಿಸಹಿತ ಲಘು & ಬಾರಿ ವಾಹನಾ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ: BMTC Free Driving Classes 2025

WhatsApp Group Join Now
Telegram Group Join Now
Spread the love

BMTC ಯಿಂದ ಉಚಿತ ವಸತಿಸಹಿತ ಲಘು & ಬಾರಿ ವಾಹನಾ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ: BMTC Free Driving Classes 2025

ನೀವು ಡ್ರೈವಿಂಗ್ ನಲ್ಲಿ ಆಸಕ್ತಿ ಹೊಂದಿದ್ದರೇ ಉಚಿತವಾಗಿ ತರಬೇತಿಯನ್ನು ಹೊಂದಲು ಬಯಸಿದ್ದರೇ, ಇಲ್ಲಿದೆ ಸುವರ್ಣವಕಾಶ. ಹೌದು ಸ್ನೇಹಿತರೇ  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆವತಿಯಿಂದ ಉಚಿತವಾದ ಚಾಲನಾ ತರಬೇತಿಯನ್ನು ನೀಡಲು ಅರ್ಜಿಗಳನ್ನು ಕರೆಯಲಾಗಿದೆ. ಕರ್ನಾಟಕದ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಇದರ ಪ್ರಯೋಜನವನ್ನು ಪಡೆಯಬಹುದು. ಆಸಕ್ತ ಅಭ್ಯರ್ಥಿಗಳು ಈ ಲೇಖನವನ್ನು ಪೂರ್ತಿಯಾಗಿ ಓದಿ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕರ್ನಾಟಕ ಸರ್ಕಾರದ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್.ಸಿ.ಎಸ್.ಪಿ) ಹಾಗೂ ಗಿರಿಜನ ಉಪ ಯೋಜನೆ (ಬಿ.ಎಸ್.ಪಿ) ಯೋಜನೆಯಡಿ ಪರಿಶಿಷ್ಟ ಜಾತಿ (ಎಸ್.ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್.ಎ)ಗಳ ಅಭ್ಯರ್ಥಿಗಳಿಗೆ ಉಚಿತವಾಗಿ ಲಘು ಮತ್ತು ಭಾರಿ ವಾಹನ ಚಾಲನಾ ತರಬೇತಿಯ (ವಸತಿ ಸಹಿತ /ವಸತಿ ರಹಿತ) ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ.

ಉದ್ಯೋಗ ಮಾಹಿತಿ: ಕರ್ನಾಟಕ ಅಂಚೆ ವೃತ್ತದಲ್ಲಿ ಬೃಹತ್ ನೇರ ನೇಮಕಾತಿ- ಖಾಲಿ ಇರುವ 21413 ಪೋಸ್ಟ್ ಮ್ಯಾನ್, GDS ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Indian Postal DGS 21413 Vacancies Jobs 2025

ಸದರಿ ತರಬೇತಿಯನ್ನು ಪಡೆಯಲು ಇಚ್ಛಿಸುವ ಪರಿಶಿಷ್ಟ ಜಾತಿ(ಎಸ್.ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್.ಟಿ)ಗಳ ಅಭ್ಯರ್ಥಿಗಳು ಹೊಂದಿರಬೇಕಾದ ಕನಿಷ್ಠ ಅರ್ಹತೆಗಳು/ಸಲ್ಲಿಸಬೇಕಾಗಿರುವ ದಾಖಲಾತಿಗಳ ವಿವರ ಕೆಳಕಂಡಂತೆ ಇರುತ್ತದೆ.

ಲಘು ವಾಹನಾ ಚಾಲನಾ ತರಬೇತಿ:

ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ ವಯೋಮಿತಿ ಹೊಂದಿರಬೇಕು

ಬಾರಿ ವಾಹನಾ ಚಾಲನಾ ತರಬೇತಿ:

ಕನಿಷ್ಠ 20 ವರ್ಷ ಮತ್ತು ಗರಿಷ್ಠ 45 ವರ್ಷ ವಯೋಮಿತಿ ಹೊಂದಿರಬೇಕು. ಮತ್ತು ಲಘು ವಾಹನ ಚಾಲನಾ ಅನುಜ್ಞಾಪತ್ರ ಪಡೆದು ಒಂದು ವರ್ಷ ಪೂರ್ಣಗೊಂಡಿರಬೇಕು.

ಉದ್ಯೋಗ ಮಾಹಿತಿ: ಬೆಂಗಳೂರಿನ ಬಿಎಚ್ಇಎಲ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: BHEL Bengaluru Recruitment 2025

ಪ್ರಮುಖ ಅಂಶಗಳು/ Important Information:

  1. ಮೊದಲು ಬಂದವರಿಗೆ, ಮೊದಲ ಆದ್ಯತೆಯ ಮೇರೆಗೆ. ಅರ್ಹ ಅಭ್ಯರ್ಥಿಗಳಿಗೆ ಲಘು/ಭಾರಿ ವಾಹನ ಚಾಲನಾ ತರಬೇತಿ ನೀಡಲಾಗುತ್ತದೆ.
  2. ವಸತಿ ಸಹಿತ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ (ನಿಗದಿತ ಸಂಖ್ಯೆಯಂತೆ) ತರಬೇತಿ ಅವಧಿಯಲ್ಲಿ ವಸತಿ ಸೌಕರ್ಯ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ನೀಡಲಾಗುತ್ತದೆ.
  3. ಮೇಲಿನ ಅರ್ಹತೆ ಹೊಂದಿದ್ದು, ಆಸಕ್ತಿ ಇರುವ ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳು ಕರ್ನಾಟಕ (https://sevasindhuservices.karnataka.gov.in) ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಕೆ ಸಂಬಂಧಿತ ವಿಚಾರಣೆಗಾಗಿ ಸೇವಾಸಿಂಧು ಪೋರ್ಟ್‌ಲ್ : 08022279954, 8792662814 / 8792662816 (ಸರ್ಕಾರಿ ರಜೆಯನ್ನು ಹೊರತುಪಡಿಸಿ ಎಲ್ಲಾ ಕೆಲಸದ ದಿನಗಳಲ್ಲಿ (ಸಮಯ:10.00 ರಿಂದ 6.00 ಗಂಟೆ) ಸಂಪರ್ಕಿಸುವುದು.
  4. ತರಬೇತಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಸ್ಥೆಯ ವೆಬ್ ಸೈಟ್ www.mybmtc.gov.in ನಿಂದ ಮತ್ತು ದೂರವಾಣಿ ಸಂಖ್ಯೆ: 6364858520 / 7760991085 (ಕಛೇರಿಯ ವೇಳೆಯಲ್ಲಿ (ಸಮಯ:10.00 ರಿಂದ 05.30) ಮಾತ್ರ ಸಂಪರ್ಕಿಸುವುದು) ಮುಖಾಂತರ ಪಡೆಯಬಹುದಾಗಿದೆ.
  5. ತರಬೇತಿಗೆ ಹಾಜರಾಗುವ ವೇಳೆಯಲ್ಲಿ ಅಭ್ಯರ್ಥಿಗಳು ಮೇಲಿನ ತಮ್ಮ ಮೂಲ ದಾಖಲೆ, ಸೇವಾ ಸಿಂದು ಪೋರ್ಟಲ್‌ನಲ್ಲಿ ಮುದ್ರಿತ ಅರ್ಜಿ ಮತ್ತು ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗುವುದು.

 

(ಮೇಲಿನ ಬಿಎಂಟಿಸಿ ಉಚಿತ ಚಾಲನಾ ವಾಹನಾ ತರಬೇತಿಗೆ ಅರ್ಜಿ ಸಲ್ಲಿಸಿಕೊಡಲಾಗುವುದು. ಆಸಕ್ತ ಪ.ಜ/ ಪ.ಪಂ ಅಭ್ಯರ್ಥಿಗಳು 9108736889 ಸಂಖ್ಯೆಗೆ ಕೂಡಲೇ ವಾಟ್ಸಪ್‌ ಮಾಡಿ)

 

ಅಧಿಸೂಚನೆಯನ್ನು ಡೌನ್ಲೋಡ್‌ ಮಾಡಿಕೊಳ್ಳಿ

 

 

ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ. 

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top