ಅಕೌಂಟೆಂಟ್ ಕಮ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಬಿಕಾಂ ಪದವಿಧರರಿಂದ ಅರ್ಜಿ ಆಹ್ವಾನ: Bhagyodaya Vidyavardaka Sangha recruitment 2025
ನಮಸ್ತೆ ಸ್ನೇಹಿತರೆ, ಭಾಗ್ಯೋದಯ ವಿದ್ಯಾವರ್ಧಕ ಸಂಘ, ಚಿಂಚೋಳಿಯ ವತಿಯಿಂದ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಬಿದ್ದಿದೆ. ಇದರಲ್ಲಿ ಖಾಲಿ ಇರುವ ಅಕೌಂಟೆಂಟ್ ಕಮ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಭಾಗ್ಯೋದಯ ವಿದ್ಯಾವರ್ಧಕ ಸಂಘದಿಂದ ನಡೆಸಲಾಗುವ ನೇಮಕಾತಿಯಲ್ಲಿ ಭಾಗವಹಿಸಬಹುದು.
Bhagyodaya Vidyavardaka Sangha, Chincholli ವತಿಯಿಂದ Accountant cum Manager ಹುದ್ದೆಗಳ ಭರ್ತಿಗಾಗಿ ಆಫ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ, ಆಸಕ್ತ ಅಭ್ಯರ್ಥಿಗಳು ದಿನಾಂಕ 10-05-2025 ರ ಒಳಗಾಗಿ ಅರ್ಜಿ ಹಾಗೂ ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ ನಿಗದಿಪಡಿಸಲಾದ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿಕೊಡಬಹುದು. ಈ ಕುರಿತಂತೆ ಇನ್ನು ಹೆಚ್ಚಿನ ವಿವರಗಳನ್ನು ಇಲ್ಲಿ ನೀಡಲಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದುವ ಮೂಲಕ ಈ ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದು.
ಹುದ್ದೆಗಳ ವಿವರ:
ಸಂಸ್ಥೆಯ ಹೆಸರು: ಭಾಗ್ಯೋದಯ ವಿದ್ಯಾವರ್ಧಕ ಸಂಘ, ಚಿಂಚೋಳಿ
ಹುದ್ದೆಗಳ ಹೆಸರು: ಅಕೌಂಟೆಂಟ್ ಕಮ್ ಮ್ಯಾನೇಜರ್
ಕೆಲಸದ ಸ್ಥಳ: ಕಲಬುರಗಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-05-2025
ವೇತನ ಅಥವಾ ಗೌರವದನ
ಭಾಗ್ಯೋದಯ ವಿದ್ಯಾವರ್ಧಕ ಸಂಘ, ಚಿಂಚೋಳಿ ವತಿಯಿಂದ ಮಾಸಿಕ ರೂ. 18000/- ವೇತನ ನೀಡಲಾಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ
ಅಕೌಂಟೆಂಟ್ ಕಮ್ ಮ್ಯಾನೇಜರ್:
ಅಭ್ಯರ್ಥಿಗಳು ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯದಿಂದ ಬಿಕಾಂ ಪದವಿ ಪಡೆದಿರಬೇಕು ಹಾಗೂ ಗಣಕಯಂತ್ರ ನಿರ್ವಹಣೆ ಮಾಡಲು ಜ್ಞಾನವಿರಬೇಕು.
ವಯೋಮಿತಿ
ಅಕೌಂಟೆಂಟ್ ಕಮ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಕನಿಷ್ಠ ಅಥವಾ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿರುವುದಿಲ್ಲ.
ಆಯ್ಕೆ ವಿಧಾನ
ಅಕೌಂಟೆಂಟ್ ಕಮ್ ಮ್ಯಾನೇಜರ್ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
ವೈಯಕ್ತಿಕ ರೆಸ್ಯೂಮ್/ ಸಿವಿ
ಇತ್ತೀಚಿನ ಭಾವವಿತ್ರ
ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು
ಸೇವಾ ದಾಖಲಾತಿಗಳು
ಇತರೆ ಅಗತ್ಯವಿರುವ ದಾಖಲೆಗಳು
ಆಯ್ಕೆವಿಧಾನ: ಶೈಕ್ಷಣಿಕ ವಿದ್ಯಾರ್ಹತೆ, ಅನುಭವ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಹೇಗೆ:
ಅಭ್ಯರ್ಥಿಗಳು ಅರ್ಜಿ, ಶೈಕ್ಷಣಿಕ ದಾಖಲೆಗಳು ಮತ್ತು ಅನುಭವ ದಾಖಲೆಗಳನ್ನು ದಿನಾಂಕ 10-05-2025 ರಿಂದ 30-05-2025ರ ಒಳಗಾಗಿ ಡಾ. ಬಿ.ಆರ್ ಅಂಬೇಡ್ಕರ್ ಕೇಂದ್ರ ಸರ್ಕಾರದ ಅನುದಾನಿತ ಶಾಲೆ, ಚಂದಾಪುರ (ಬಂಜಾರ ಭವನ ಹತ್ತಿರ) ತಾ. ಚಿಂಚೊಳ್ಳಿ, ಜಿಲ್ಲೆ ಕಲಬುರಗಿ ವಿಳಾಸಕ್ಕೆ ಬೇಟಿ ಮಾಡಲು ಕೋರಿದೆ.
ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ
ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.