ಬೆಂಗಳೂರು ವಿಶ್ವವಿದ್ಯಾಲಯದಿಂದ ಖಾಲಿ ಇರುವ ಲೈಬ್ರೇರಿ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ- Bengaluru University Library Trainee Jobs 2025
ನಮಸ್ತೆ ಸ್ನೇಹಿತರೆ, ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಲೈಬ್ರೇರಿ ಅಪ್ರೇಂಟೀಸ್ ಟ್ರೈನಿ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಬೆಂಗಳೂರು ವಿಶ್ವವಿದ್ಯಾಲಯದಿಂದ ನಡೆಸಲಾಗುವ ನೇರ ಸಂದರ್ಶನಕ್ಕೆ ನಿಗದಿ ಪಡಿಸಿದ ದಿನಾಂಕದಂದು ಹಾಜರಾಗಲು ಸೂಚಿಸಲಾಗಿದೆ.
ಲೈಬ್ರೇರಿ ಅಪ್ರೇಂಟೀಸ್ ಟ್ರೈನಿ ಹುದ್ದೆಗಳ ಭರ್ತಿ ಕುರಿತಂತೆ ಬೆಂಗಳೂರು ವಿಶ್ವವಿದ್ಯಾಲಯದಿಂದ ನೇರ ಸಂದರ್ಶನವನ್ನು ದಿನಾಂಕ 25 ಜನವರಿ 2025 ರಂದು ಹಮ್ಮಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ಸದರಿ ದಿನದಂದು ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿಯಲ್ಲಿರುವ ಬೋರ್ಡ್ ರೂಂ ನಲ್ಲಿ ಸಂದರ್ಶನಕ್ಕೆ ಆಗಮಿಸಿ, ನೇರ ಸಂದರ್ಶನವನ್ನು ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಿ.
ತರಬೇತಿಯ ಕಾಲಾವಧಿ
ಲೈಬ್ರೇರಿ ಅಪ್ರೇಂಟೀಸ್ ಟ್ರೈನಿ ಹುದ್ದೆಗಳನ್ನ 2025-25ನೇ ಶೈಕ್ಷಣಿಕ ಸಾಲಿಗೆ ಮಾತ್ರ ಏರ್ಪಡಿಸಲಾಗಿದೆ,
ಖಾಲಿ ಇರುವ ತರಬೇತಿ ಹುದ್ದೆಗಳು
ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಗ್ರಂಥಾಲಯಗಳಲ್ಲಿ ಖಾಲಿ ಇರುವ 15 ಲೈಬ್ರೇರಿ ಅಪ್ರೇಂಟೀಸ್ ಟ್ರೈನಿ ಗಳಿಗೆ ತರಬೇತಿ ನೀಡಲಾಗುತ್ತದೆ.
ವೇತನ ಅಥವಾ ಗೌರವದನ
ಪ್ರಶಿಕ್ಷಣಾರ್ಥಿಗಿಗೆ ಮಾಸಿಕ ರೂ. 15000/- ಸ್ಟೈಫಂಡ್ ಅನ್ನು ನೀಡಲಾಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ
ಮಾನ್ಯತಾ ಹೊಂದಿದ ವಿಶ್ವವಿದ್ಯಾಲಯದಿಂದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿರಬೇಕು.
ಆಯ್ಕೆ ವಿಧಾನ
ಲೈಬ್ರೇರಿ ಅಪ್ರೇಂಟೀಸ್ ಟ್ರೈನಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ
ನೇರ ಸಂದರ್ಶನಕ್ಕೆ ಅಗತ್ಯವಿರುವ ದಾಖಲೆಗಳು
ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು
ಸೇವಾ ದಾಖಲಾತಿಗಳು.
ನೇರ ಸಂದರ್ಶನ ನಡೆಯುವ ಸ್ಥಳ
ಜ್ಞಾನಭಾರತಿಯ ಬೋರ್ಡ್ ರೂಂನಲ್ಲಿ ಸಂದರ್ಶನ ನಡೆಸಲಾಗುತ್ತದೆ.
ನೇರ ಸಂದರ್ಶನ ನಡೆಯುವ ದಿನಾಂಕ
ಅಧಿಸೂಚನೆಯ ಅನುಸಾರ ದಿನಾಂಕ 25.01.2025 ರಂದು ಬೆಳಿಗ್ಗೆ 11 ಗಂಟೆಗೆ ನೇರ ಸಂದರ್ಶನ ಆರಂಭವಾಗುತ್ತದೆ
ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.