ಬೆಂಗಳೂರು ನಗರಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: Bangalore Municipality Recruitment 2026

WhatsApp Group Join Now
Telegram Group Join Now
Spread the love

ಬೆಂಗಳೂರು ನಗರಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: Bangalore Municipality Recruitment 2026

ನಮಸ್ತೆ ಸ್ನೇಹಿತರೇ, ಬೆಂಗಳೂರು  ದಕ್ಷಿಣ ನಗರಪಾಲಿಕೆ ವತಿಯಿಂದ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ.  ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗಾಗಿ, ಸೇವಾ ವಿಷಯಗಳಲ್ಲಿ, ಕಾರ್ಮಿಕರ ಕಾನೂನು, ಭೂಕಾನೂನು ಇತ್ಯಾದಿ ವಿಷಯಗಳಲ್ಲಿ ಉತ್ತಮ ಪರಿಣಿತಿ ಹೊಂದಿರುವ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಅಥವಾ ಸಹಾಯಕ ಡ್ರಾಫ್ಟ್‌ಮೆನ್ ಹುದ್ದೆಗಿಂತ ಕಡಿಮೆ ಇಲ್ಲದ ಮತ್ತು ಪದ ನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿಯಾಗಿ ಸಂಸದೀಯ ವ್ಯವಹಾರಗಳ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಿವೃತ್ತ ಅಧಿಕಾರಿ ಅಥವಾ ಕರ್ನಾಟಕದಲ್ಲಿ ಕನಿಷ್ಟ 10 ವರ್ಷಗಳ ವಕೀಲ ವೃತ್ತಿಯ ಅನುಭವ ಹೊಂದಿರುವ ವಕೀಲರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವವರು 65 ವರ್ಷಗಳಿಗೆ ಮೀರದ ವಯೋಮಿತಿ ಹೊಂದಿರತಕ್ಕದ್ದು.

ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಕರವಸೂಲಿಗಾರರು ಹುದ್ದೆಗಳ ನೇಮಕಾತಿಗೆ ಪಿಯುಸಿ ಆದವರಿಂದ ಅರ್ಜಿ ಆಹ್ವಾನ: GP Bill Collector Recruitment 2026

ಹುದ್ದೆಯ ಅವಧಿ:  ಪ್ರಾರಂಭದಲ್ಲಿ 1 ವರ್ಷದವರೆಗೆ ಇರುತ್ತದೆ. ಕಾರ್ಯಕ್ಷಮತೆಯನ್ನು ಆಧರಿಸಿ 01 ರಿಂದ 3 ವರ್ಷಗಳವರೆಗೆ ವೃತ್ತಿಯಲ್ಲಿ ಮುಂದುವರೆಸಲಾಗುವುದು.
ವೇತನ:  ಸಾರಿಗೆ ವೆಚ್ಚ ಸೇರಿದಂತೆ ರೂ.1,00,000/-(ರೂ. ಒಂದು ಲಕ್ಷಗಳು) ಸಂಚಿತ ವೇತನ ನಿಗದಿಪಡಿಸಲಾಗುವುದು. ನಗರ ಪಾಲಿಕೆ ಉದ್ಯೋಗಿಗಳಿಗೆ ಇರುವಂತೆ ರಜೆ ಮತ್ತು ವೈದ್ಯಕೀಯ ಸೌಲಭ್ಯಗಳಿರುವುದು.
ಆಯ್ಕೆವಿಧಾನ:  ಸಂದರ್ಶನದ ಮೂಲಕ ನೇಮಕ ಮಾಡಲಾಗುವುದು.

ಜಿಲ್ಲಾ ಮಕ್ಕಳ ರಕ್ಷಣಾ ಕಛೇರಿಯಲ್ಲಿ ಖಾಲಿ ಇರುವ ರಕ್ಷಣಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: District Children Protection Unit Recruitment 2026

ಅರ್ಜಿ ಸಲ್ಲಿಸುವ ವಿಧಾನ:  ಸಂಪೂರ್ಣ ವ್ಯಕ್ತಿ ಚಿತ್ರಣ (ಬಯೋಡೇಟ) ವಿರುವ ಮತ್ತು ಸಂಬಂಧಿಸಿದ ದಾಖಲಾತಿಗಳನ್ನು ಲಗತ್ತಿಸಿರುವ ಅರ್ಜಿಗಳನ್ನು ‘ಮಾನ್ಯ ಆಯುಕ್ತರು’ ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಪಾಲಿಕೆ ಕಚೇರಿಗಳ ಸಂಕೀರ್ಣ, 2ನೇ ಮಹಡಿ, 9ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, 2ನೇ ಬ್ಲಾಕ್, ಜಯನಗರ ಬೆಂಗಳೂರು-560011 ಇವರ ವಿಳಾಸಕ್ಕೆ ಲಕೋಟೆಯ ಮೇಲೆ ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗಾಗಿ ಅರ್ಜಿ ಎಂಬ ಮೇಲ್ಬರಹ ಮಾಡಿ ದಿನಾಂಕ: 20-01-2026 ರೊಳಗೆ ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದಾಗಿರುತ್ತದೆ. ಅವಧಿ ಮುಗಿದ ನಂತರ ಸಲ್ಲಿಸಿದ್ದಲ್ಲಿ ಅಂತಹ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top