ಆಯುಷ್ ಕಛೇರಿಯಲ್ಲಿ ಖಾಲಿ ಇರುವ ಅಟೆಂಡರ್ ಸೇರಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Ayush Office tumkur Recruitment 2025
ನಮಸ್ತೆ ಸ್ನೇಹಿತರೇ, ಸ್ಪರ್ಧಾದೀಪ ವೆಬ್ಸೈಟ್ ನಿಂದ ಇಂದು ಹೊಸ ಉದ್ಯೋಗ ಮಾಹಿತಿಯನ್ನು ನೀಡುತ್ತೇವೆ. ತುಮಕೂರು ಜಿಲ್ಲಾ ಪಂಚಾಯತ್ ಕಾರ್ಯಾಲಯ, ಜಿಲ್ಲಾ ಆಯುಷ್ ಕಛೇರಿಯ ವತಿಯಿಂದ ಖಾಲಿ ಇರುವ ತಜ್ಞ ವೈದ್ಯರು, ಫಾರ್ಮಾಸಿಸ್ಟ್, ಅಟೆಂಡರ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ನಿಗದಿತ ನಮೂನೆಯ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
ಜಿಲ್ಲಾ ಪಂಚಾಯತ್ ತುಮಕೂರು ನಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಫ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ದಿನಾಂಕ 17-03-2025 ರ ಒಳಗಾಗಿ ಅರ್ಜಿಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೀತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.
ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ. ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.
JOB NEWS: ಕರ್ನಾಟಕದ ರೈಲ್ವೆ ಗಾಲಿ ಕಾರ್ಖಾನೆಯಲ್ಲಿ ಖಾಲಿ ಇರುವ 192 ಹುದ್ದೆಗಳಿಗೆ ಅರ್ಜಿ ಆಹ್ವಾನ
ನೇಮಕಾತಿಯ ಪಕ್ಷಿನೋಟ:
ನೇಮಕಾತಿ ಕಛೇರಿ: ಜಿಲ್ಲಾ ಆಯುಷ್ ಕಛೇರಿ, ತುಮಕೂರು |
ಹುದ್ದೆಗಳ ಪದನಾಮ: ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ |
ಹುದ್ದೆಗಳ ಸಂಖ್ಯೆ: 09 ಹುದ್ದೆಗಳು |
ಕಾರ್ಯ ನಿರ್ವಹಿಸಬೇಕಾದ ವಿಳಾಸ: ತುಮಕೂರು |
ಹುದ್ದೆಗಳ ವಿವರ & ವೇತನ:
ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ | ವೇತನ |
ತಜ್ಞ ವೈದ್ಯರು | 02 | 60000/- |
ಕ್ಷಾರಸೂತ್ರ ಅಟೆಂಡರ್ | 01 | 19425/- |
ಫಾರ್ಮಾಸಿಸ್ಟ್ | 04 | 28928/- |
ಮಸಾಜಿಸ್ಟ್ | 01 | 19425/- |
ವಿದ್ಯಾರ್ಹತೆ & ಅನುಭವ:
ತಜ್ಞ ವೈದ್ಯರು: ಕನಿಷ್ಟ 03 ವರ್ಷಗಳ ಅನುಭವದೊಂದಿಗೆ ಬಿ.ಹೆಚ್.ಎಂ.ಎಸ್, ಎಂ.ಎಸ್/ಎಂ.ಡಿ ಸ್ನಾತಕೋತ್ತರ ಪದವಿ ಹೊಂದಿರತಕ್ಕದ್ದು, ಒಂದು ವೇಳೆ ಸ್ನಾತಕೋತ್ತರ ಪದವೀಧರರು ಲಭ್ಯವಿಲ್ಲದಿದ್ದರೆ ಪಿ.ಜಿ.ಅಲೋಯೆನ್ಸ್ ರಹಿತವಾಗಿ ಬಿ.ಹೆಚ್.ಎಂ.ಎಸ್. ಸ್ನಾತಕ ಪದವಿ ಪರಿಗಣಿಸಲಾಗುವುದು
ತಜ್ಞ ವೈದ್ಯರು: ಕನಿಷ್ಠ 03 ವರ್ಷಗಳ ಅನುಭವದೊಂದಿಗೆ ಬಿಎಎಂಎಸ್, ಎಂ.ಎಸ್ ಶಲ್ಯತಂತ್ರ ಅಥವಾ ಎಂ.ಡಿ ಪಂಚಕರ್ಮ/ಕಾಯಚಿಕಿತ್ಸಾ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರತಕ್ಕದ್ದು
ಕ್ಷಾರ ಸೂತ್ರ ಅಟೆಂಡರ್: ಕನಿಷ್ಟ 10ನೇ ತರಗತಿ ವಿದ್ಯಾರ್ಹತೆ ಹೊಂದಿರತಕ್ಕದ್ದು ಹಾಗೂ ಕನಿಷ್ಟ 2 ವರ್ಷಗಳು ಆಯುಷ್ ಆಸ್ಪತ್ರೆ/ಚಿಕಿತ್ಸಾಲಯಗಳಲ್ಲಿ ನಿರ್ವಹಸಿರುವ ಅನುಭವ ಹೊಂದಿರತಕ್ಕದ್ದು.
ಫಾರ್ಮಾಸಿಸ್ಟ್: ಬ್ಯಾಚುಲರ್ ಆಫ್ ಫಾರ್ಮಸಿ (ಬಿ.ಫಾರ್ಮಾ) ಪದವಿಯ ಜೊತೆಗೆ ಆಯುಷ್ ಆಸ್ಪತ್ರೆ/ಚಿಕಿತ್ಸಾಲಯಗಳಲ್ಲಿ ಕನಿಷ್ಟ 02 ವರ್ಷ ಕರ್ತವ್ಯ ನಿರ್ವಹಿಸಿರುವ ಅನುಭವ ಹೊಂದಿರತಕ್ಕದ್ದು, ಒಂದು ವೇಳೆ ಬಿ.ಫಾರ್ಮಾ ಅಭ್ಯರ್ಥಿಯು ದೊರೆಯದ ಪಕ್ಷದಲ್ಲಿ ಕನಿಷ್ಟ 02 ವರ್ಷ ಅನುಭವವಿರುವ ಡಿಪ್ಲೋಮೊ ಇನ್ ಫಾರ್ಮಸಿ (ಡಿ.ಫಾರ್ಮಾ) ಅಭ್ಯರ್ಥಿಗಳನ್ನು ಪರಿಗಣಿಸುವುದು, ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ಮಸಾಜಿಸ್ಟ್: ಕನಿಷ್ಠ 10ನೇ ತರಗತಿ ವಿದ್ಯಾರ್ಹತೆ ಹೊಂದಿರತಕ್ಕದ್ದು ಹಾಗೂ ಆಯುಷ್ ಆಸ್ಪತ್ರೆ ಚಿಕಿತ್ಸಾಲಯಗಳಲ್ಲಿ ಕನಿಷ್ಟ 02 ವರ್ಷ ಕರ್ತವ್ಯ ನಿರ್ವಹಸಿರುವ ಅನುಭವ ಹೊಂದಿರತಕ್ಕದ್ದು,
ವಯೋಮಿತಿ:-
ದಿ:01-01-2025ಕ್ಕೆ ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಟ-18 ವರ್ಷ ಹಾಗೂ ಗರಿಷ್ಟ -35 ವರ್ಷ, ಪ.ಜಾತಿ ಮತ್ತು ಪ.ಪಂಗಡ ಅಭ್ಯರ್ಥಿಗಳಿಗೆ ಕನಿಷ್ಟ-18 ವರ್ಷ ಗರಿಷ್ಟ-40 ವರ್ಷ, ಪ್ರ-1, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಕನಿಷ್ಟ-18 ವರ್ಷ ಗರಿಷ್ಟ-38 ವರ್ಷ ಮೀರಿರಬಾರದು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
- ಭರ್ತಿ ಮಾಡಿರುವ ಅರ್ಜಿ ನಮೂನೆ
- ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು
- ಅನುಭವ ಪ್ರಮಾಣಪತ್ರ
- ಜಾತಿ & ಆದಾಯ ಪ್ರಮಾಣ ಪತ್ರ,
- ಕನ್ನಡ ಮಾದ್ಯಮ ಪ್ರಮಾಣಪತ್ರ,
- ಗ್ರಾಮೀಣ ಪ್ರಮಾಣಪತ್ರ, ಮಾಜಿಸೈನಿಕ ಹಾಗೂ ಇತರೆ ಪ್ರಮಾಣಪತ್ರಗಳು
- ಇತರೆ ಅಗತ್ಯವಿರುವ ದಾಖಲೆಗಳು
JOB NEWS: ಕೃಷಿ ಇಲಾಖೆಯಲ್ಲಿ ಖಾಲಿ ಇರುವ 582 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ವೇತನ 57700/-
ಅರ್ಜಿ ಸಲ್ಲಿಸುವುದು ಹೇಗೆ?
- ಅಧಿಸೂಚನೆಯಲ್ಲಿ ತಿಳಿಸಲಾದ ವಿಳಾಸಕ್ಕೆ ತೆರಳಿ ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ.
- ಅರ್ಜಿ ನಮೂನೆಯ ಎಲ್ಲ ಭಾಗಗಳನ್ನು ಮೂಲ ದಾಖಲೆಗಳಲ್ಲಿ ಇರುವಂತೆ ಸರಿಯಾಗಿ ಭರ್ತಿ ಮಾಡಿ.
- ಅರ್ಜಿ ನಮೂನೆಯ ಅಗತ್ಯ ಸ್ಥಳದಲ್ಲಿ ಪಾಸ್ ಪೊರ್ಟ್ ಸೈಜಿನ ತಮ್ಮ ಇತ್ತೀಚಿನ ಭಾವಚಿತ್ರವನ್ನು ಅಂಟಿಸಿ.
- ಅರ್ಜಿ ನಮೂನೆ ಜೊತೆಗೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಲಗತ್ತಿಸಿಕೊಳ್ಳಿ. ನಂತರ ಅದನ್ನು ಒಂದು ಲಕೋಟೆಯ ಒಳಗೆ ಹಾಕಿ ಸೀಲ್ ಮಾಡಿ. ಲಕೋಟೆಯ ಮೇಲೆ ______________ ಹುದ್ದೆಗೆ ಅರ್ಜಿ ಎಂದು ದಪ್ಪ ಅಕ್ಷರಗಳಲ್ಲಿ ಬರೆಯಿರಿ
- ಕೆಳಗೆ ನೀಡಲಾದ ವಿಳಾಸಕ್ಕೆ ಕೊನೆಯ ದಿನಾಂಕದ ಒಳಗೆ ಅರ್ಜಿಯನ್ನು ಕಳುಹಿಸಿಕೊಡಿ.
- ತಮ್ಮ ಮುಂದಿನ ಅಗತ್ಯ ಕ್ರಮಗಳಿಗಾಗಿ ಒಂದು ಪ್ರತಿಯನ್ನು ತಮ್ಮ ಬಳಿ ಜೋಪಾನವಾಗಿ ಇಟ್ಟುಕೊಳ್ಳಿ.
ಅರ್ಜಿ ಶುಲ್ಕ ಪಾವತಿಸುವುದು:
ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಕಳುಹಿಸಿಕೊಡುವ ವಿಳಾಸ:
ವಿಳಾಸ: ಜಿಲ್ಲಾ ಆಯುಷ್ ಕಛೇರಿ ತುಮಕೂರು
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17-03-2025
ಅಧಿಕೃತ ಲಿಂಕುಗಳು/ Official Links
ನೋಟಿಫಿಕೇಶನ್ ಡೌನ್ಲೋಡ್ |