ಬೆಳಗಾವಿ ಜಿಲ್ಲೆಯಲ್ಲಿ ಖಾಲಿ ಇರುವ 558 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ- Apply for WCD Belagavi district 2025

WhatsApp Group Join Now
Telegram Group Join Now
Spread the love

ಬೆಳಗಾವಿ ಜಿಲ್ಲೆಯಲ್ಲಿ ಖಾಲಿ ಇರುವ 558 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ- Apply for WCD Belagavi district 2025

ನಮಸ್ತೆ ಸ್ನೇಹಿತರೇ, ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ.  ಬೆಳಗಾವಿ ಜಿಲ್ಲೆಯ ಶಿಶು ಅಬಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ವಿವಿಧ ಅಂಗನವಾಡಿಗಳಲ್ಲಿ ಖಾಲಿ ಇರುವ ಒಟ್ಟು 558 ಅಂಗನವಾಡಿ ಕಾರ್ಯಕರ್ತೆ & ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ   ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ಹತ್ತನೇ ತರಗತಿ ಹಾಗೂ ಪಿಯುಸಿ ಮುಗಿದವರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ದಿನಾಂಕ 20-05-2025 ರ ಒಳಗಾಗಿ ಅರ್ಜಿಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೀತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.

JOB NEWS: ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಲ್ಲಿ ಖಾಲಿ ಇರುವ ಕ್ಲರ್ಕ್, ಕ್ಯಾಶಿಯರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ‍Souharda Sahakari niyamitha jobs 2025

ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ. ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.

ನೇಮಕಾತಿಯ ಪಕ್ಷಿನೋಟ:

ಇಲಾಖೆ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ
ಹುದ್ದೆಗಳ ಹೆಸರು ಅಂಗನವಾಡಿ ಶಿಕ್ಷಕಿ & ಸಹಾಯಕಿ
ಹುದ್ದೆಗಳ ಸಂಖ್ಯೆ 558
ಕೆಲಸದ ಸ್ಥಳ ಬೆಳಗಾವಿ ಜಿಲ್ಲೆಯ ಗ್ರಾಮಗಳು
ತಾಲೂಕುವಾರು ಹುದ್ದೆಗಳು ಅಂಗನವಾಡಿ ಕಾರ್ಯಕರ್ತೆ ಸಹಾಯಕಿ
ಅರಭಾವಿ 15 41
ಅಥಣಿ 9
ಬೈಲಹೊಂಗಲ 6 30
ಬೆಳಗಾವಿ ಗ್ರಾಮೀಣ 4 44
ಬೆಳಗಾವಿ ನಗರ 37
ಚಿಕ್ಕೊಡಿ 6 21
ಗೊಕಾಕ್ 4 28
ಹುಕ್ಕೆರಿ 7 21
ಕಾಗವಾಡ 6 26
ಖಾನಾಪುರ 8 33
ಕಿತ್ತೂರು 3 10
ನಿಪ್ಪಾಣಿ 10 53
ರಾಯಭಾಗ 11 64
ರಾಮದುರ್ಗ 5 25
ಸವದತ್ತಿ 7 18
ಯರಗಟ್ಟಿ 3 3

JOB NEWS: ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ & ಹಣಕಾಸು ನಿಗಮದಿಂದ (NMDFC) ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ NMDFC Recruitment 2025

ವೇತನ/ Salary

ಸರ್ಕಾರದ ಆದೇಶಾನುಸಾರ ಅಂಗನವಾಡಿಗಳಿಗೆ  ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೆಳಗಿನಂತೆ ವೇತನ ನೀಡಲಾಗುತ್ತದೆ.

ಹುದ್ದೆ ಗೌರವಧನ
ಕಾರ್ಯಕರ್ತೆ 11000/-
ಸಹಾಯಕಿ 8000/-

 

ವಯೋಮಿತಿ/ Age limit:

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಕನಿಷ್ಟ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಟಕೆಳಕಂಡ ವರ್ಷವನ್ನು ಮೀರಿರಬಾರದು.

ಸಾಮಾನ್ಯ ವರ್ಗ 35 ವರ್ಷ
2ಎ, 2ಬಿ, 3ಎ & 3ಬಿ 38 ವರ್ಷ
ಪ.ಜಾ/ ಪ.ಪಂ/ ಪ್ರ 1 40 ವರ್ಷ

ಸ್ಥಳೀಯತೆ:

  1. ಗ್ರಾಮಾಂತರ ಪ್ರದೇಶದ ಅಂಗನವಾಡಿ ಕೇಂದ್ರವಾದಲ್ಲಿ ಆಯಾ ಕಂದಾಯ ಗ್ರಾಮದಲ್ಲಿ ವಾಸ್ತವ್ಯ ಹೊಂದಿರಬೇಕು. ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಆಯ್ಕೆಗೆ ಸ್ಥಳೀಯ ಮಜಿರೆ, ತಾಂಡಾ ಹಾಗೂ ಹಾಡಿಗೆ ಸೇರಿದವರಾಗಿದ್ದರೆ ಸಂಬಂಧಿಸಿದ ವಾಸ್ತವ್ಯ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆಯುವುದು.
  2. ನಗರ ಪ್ರದೇಶದ ಅಂಗನವಾಡಿ ಕೇಂದ್ರವಾದಲ್ಲಿ ಆಯಾ ಕಂದಾಯ ವಾರ್ಡ್‌ಲ್ಲಿ ವಾಸ್ತವ್ಯ ಹೊಂದಿರಬೇಕು ಹಾಗೂ ವಾಸ್ತವ್ಯ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದಿರಬೇಕು. [ಚುನಾವಣಾ ವಾರ್ಡ್‌ಗಳನ್ನು ಪರಿಗಣಿಸುವಂತಿಲ್ಲ]
  3. ತಹಶೀಲ್ದಾರ್ / ಉಪ ತಹಶೀಲ್ದಾರ್‌ರವರ ಮೂರು ವರ್ಷದ ವಾಸ್ತವ್ಯ ದೃಢೀಕರಣದೊಂದಿಗೆ ಸ್ಥಳೀಯರು ಎಂಬುದನ್ನು ದೃಢೀಕರಿಸಲು ಪೂರಕ ದಾಖಲೆಗಳಾಗಿ ಆಧಾರ ಕಾರ್ಡ್, ರೇಷನ್ ಕಾರ್ಡ್ ಮತದಾರರ ಗುರುತಿನ ಚೀಟಿಗಳನ್ನು ಪಡೆಯುವುದು. ಮಜಿರೆ, ತಾಂಡಾ ಹಾಗೂ ಹಾಡಿಗೆ ಸೇರಿದವರಾಗಿದ್ದರೆ ಸಂಬಂಧಿಸಿದ ವಾಸ್ತವ್ಯ ಪ್ರಮಾಣ ಪತ್ರ ಪಡೆಯುವುದು.

ಶೈಕ್ಷಣಿಕ ಅರ್ಹತೆಗಳು/ Educational Qualification:

ಕಾರ್ಯಕರ್ತೆ: ಅಂಗೀಕೃತ ಬೋರ್ಡ್ ನಿಂದ  ಪಿಯುಸಿ ಅಥವಾ ಡಿಪ್ಲೊಮಾ ವಿದ್ಯಾರ್ಹತೆಯನ್ನು ಮುಗಿಸಿರಬೇಕು.

ಸಹಾಯಕಿ: ಅಂಗೀಕೃತ ಬೋರ್ಡ್ ನಿಂದ  ಹತ್ತನೇ ತರಗತಿ ವಿದ್ಯಾರ್ಹತೆಯನ್ನು ಮುಗಿಸಿರಬೇಕು.

ವಾಸಸ್ಥಳ:

ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಯಾಗಿರತಕ್ಕದು, ಪರಂತು ಸಂಬಂಧಪಟ್ಟ ಗ್ರಾಮ ಪಂಚಾಯತ್ ನಿವಾಸಿ ಲಭ್ಯತೆ ಇಲ್ಲದಿದ್ದಲ್ಲಿ ಆಯಾ ತಾಲ್ಲೂಕು ಪಂಚಾಯತಿಯ ವ್ಯಾಪ್ತಿಯಲ್ಲಿನ ಬೇರೆ ಗ್ರಾಮ ಪಂಚಾಯತ್‌ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸುವುದು. ಸಂಬಂಧಿಸಿದಂತೆ, ಸಕ್ಷಮ ಪ್ರಾಧಿಕಾರವಾದ ತಹಸೀಲ್ದಾ‌ರ್ ಇವರಿಂದ ವಾಸಸ್ಥಳ ಪ್ರಮಾಣ ಪತ್ರ ಪಡೆದು ಸಲ್ಲಿಸತಕ್ಕದ್ದು.

ಅರ್ಜಿ ಶುಲ್ಕ:

ಅರ್ಜಿ ಹಾಕಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

 ಆಯ್ಕೆವಿಧಾನ/ Selection procedure:

ಶೈಕ್ಷಣಿಕ ಅರ್ಹತೆಯಲ್ಲಿನ ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಒಂದು ವೇಳೆ ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳು ಸಮಾನವಾದ ಅಂಕಗಳನ್ನು ಮೆರಿಟನ್ನು ಹೊಂದಿದಲ್ಲಿ ವಯಸ್ಸಿನಲ್ಲಿ ಹಿರಿಯರಾದವರನ್ನು ಆಯ್ಕೆಗೆ ಪರಿಗಣಿಸಲಾಗುವುದು.

ಆಯ್ಕೆಗೆ ಆಧ್ಯತೆ:

1). ಆಸಿಡ್ ದಾಳಿಗೆ ತುತ್ತಾದ ಮಹಿಳೆ

2). ಇಲಾಖೆಯ ಸಂಸ್ಥೆಗಳ ನಿವಾಸಿಗಳ ಆಯ್ಕೆ

3). ವಿಧವೆಯರ ಆಯ್ಕೆ

4). ಅಂಗವಿಕಲರ ಆಯ್ಕೆ

ಆನ್ ಲೈನ್ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು:-

  1. ಅರ್ಜಿ ನಿಗದಿತ ನಮೂನೆಯಲ್ಲಿ (ಆನ್ ಲೈನ್)
  2. ಜನನ ಪ್ರಮಾಣ ಪತ್ರ/ಜನ್ಮ ದಿನಾಂಕ ಇರುವ S.S.L.C.ಅಂಕಪಟ್ಟಿ
  3. ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ
  4. ತಹಶೀಲ್ದಾರರು/ಉಪ ತಹಶೀಲ್ದಾರರಿಂದ ಪಡೆದ ಮೂರು ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ
  1. ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ
  2. ಪತಿಯ ಮರಣ ಪ್ರಮಾಣ ಪತ್ರ ಹಾಗೂ ವಿಧವಾ ಪ್ರಮಾಣ ಪತ್ರ (ವಿಧವಾ ವೇತನದ ದೃಢಿಕರಣವನ್ನು ಪರಿಗಣಿಸುವಂತಿಲ್ಲ)
  3. ಅಂಗವಿಕಲತೆ ಪ್ರಮಾಣಪತ್ರ (ಅಂಗವಿಕಲ ವೇತನದ ದೃಢೀಕರಣವನ್ನು ಪರಿಗಣಿಸುವಂತಿಲ್ಲ)
  4. ವಿಚ್ಛೇದನ ಪ್ರಮಾಣ ಪತ್ರ (ನ್ಯಾಯಾಲಯದಿಂದ ಪಡೆದಿರಬೇಕು)
  5. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಡೆಸಲ್ಪಟ್ಟ ಮಾಜಿ ದೇವದಾಸಿಯರ ಸಮೀಕ್ಷೆಯ ಪಟ್ಟಿಯಲ್ಲಿರುವ ಮಾಜಿ ದೇವದಾಸಿಯರ ಮಕ್ಕಳು ಎಂಬುದರ ಬಗ್ಗೆ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ
  6. ಇಲಾಖೆಯ ಸುಧಾರಣಾ ಸಂಸ್ಥೆ /ರಾಜ್ಯ ಮಹಿಳಾ ನಿಲಯಗಳ ನಿವಾಸಿಗಳು ಕನಿಷ್ಮ 3 ವರ್ಷ ಸಂಸ್ಥೆಯಲ್ಲಿರಬೇಕು. ಹಾಗೂ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಂದ ಪಡೆದ ನಿವಾಸಿ ಪ್ರಮಾಣ ಪತ್ರ
  7. ಯೋಜನಾ ನಿರಾಶ್ರಿತರ ಬಗ್ಗೆ ತಹಶೀಲ್ದಾರರಿಂದ ಪಡೆದ ಪ್ರಮಾಣ ಪತ್ರ
  8. ಆಧಾರ್ ಕಾರ್ಡ್/ಮತದಾರರ ಗುರುತಿನ ಚೀಟಿ/ರೇಷನ್ ಕಾರ್ಡ್/ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಪಡೆದ ದೃಢೀಕರಣ ಪತ್ರ
  9. ಎಲ್ಲಾ ದಾಖಲಾತಿಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಣ ಮಾಡಿಸಿ ಸಲ್ಲಿಸುವುದು.

JOB NEWS: ಅಂಚೆ ಪಾವತಿ ಬ್ಯಾಂಕ್ ನಲ್ಲಿ ಪದವಿ ಆದವರಿಗೆ ಖಾಲಿ ಇರುವ ಓಂಬುಡ್ಸಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನ: IPPB Ombudsman Jobs 2025

ಅರ್ಜಿ ಹಾಕುವ ವಿಧಾನ/ Application Submission Method:

  1. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಹಾಗೂ ಇಮೇಲ್ ಐ.ಡಿ ಯನ್ನು ಹೊಂದಿರಬೇಕು. ಹಾಗೂ ಇತ್ತೀಚಿನ ಭಾವಚಿತ್ರ, ಶೈಕ್ಷಣಿಕ ದಾಖಲೆಗಳು, ಇನ್ನಿತರ ಅಗತ್ಯ ದಾಖಲೆಗಳನ್ನು ಕೇಳಿರುವ ಸೈಜ್ ಗೆ ಅನುಸಾರವಾಗಿ ಸ್ಕ್ಯಾನ್ ಮಾಡಿಟ್ಟುಕೊಳ್ಳಿ.
  2. ಅಭ್ಯರ್ಥಿಗಳು https://karnemakaone.kar.nic.in/abcd/ ವೆಬ್ಸೈಟ್ ಗ ಬೇಟಿ ನೀಡಿ. ಹೋಂ ಪೇಜ್ ನಲ್ಲಿ ಲಭ್ಯವಿರುವ ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಎಂಬ ಲಿಂಕಿನ ಮೇಲೆ ಕ್ಲಿಕ್ ಮಾಡಿ.
  3. ನಂತರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡ ನಂತರ ಆನ್ಲೈನ್ ಅರ್ಜಿ ನಮೂನೆಯನ್ನು ಸರಿಯಾದ ಮಾಹಿತಿಯೊಂದಿಗೆ ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯವಿರುವ ಕಡೆ ಸ್ಕ್ಯಾನ್ ಮಾಡಿರುವ ಕಾಪಿಗಳನ್ನು Upload ಮಾಡಿ, ಅಂತಿಮವಾಗಿ Submit ಮಾಡಿ.
  4. ಅರ್ಜಿ ಸಲ್ಲಿಸಿದ ನಂತರ ಅದನ್ನು ಮುದ್ರಿಸಿಟ್ಟುಕೊಳ್ಳಿ. ಮುಂದೆ ನಡೆಯುವ ಮೂಲ ದಾಖಲಾತಿಗಳ ಪರಿಶೀಲನೆ ಸಂದರ್ಭದಲ್ಲಿ ಅದನ್ನು ಹಾಜರುಪಡಿಸಬೇಕು.

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಆರಂಭದ ದಿನಾಂಕ:  18-04-2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-05-2025    

JOB NEWS: ಅಕೌಂಟೆಂಟ್ ಕಮ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಬಿಕಾಂ ಪದವಿಧರರಿಂದ ಅರ್ಜಿ ಆಹ್ವಾನ

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:
ಅರ್ಜಿ ಸಲ್ಲಿಸಿ/ Apply Online:
ವೆಬ್ಸೈಟ್/ Website :

ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top