ಪಿಯುಸಿ ಮುಗಿಸಿದ ಅಭ್ಯರ್ಥಿಗಳಿಗೆ ಅಜೀಂ ಪ್ರೇಂಜಿ ಫೌಂಡೇಷನ್‌ ನಿಂದ ರೂ. 30000/- ದ ದೀಪಿಕಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ: Apply for Deepika Ajim Premji Foundation Schalorship 2026

WhatsApp Group Join Now
Telegram Group Join Now
Spread the love

ಪಿಯುಸಿ ಮುಗಿಸಿದ ಅಭ್ಯರ್ಥಿಗಳಿಗೆ ಅಜೀಂ ಪ್ರೇಂಜಿ ಫೌಂಡೇಷನ್‌ ನಿಂದ ರೂ. 30000/- ದ ದೀಪಿಕಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ: Apply for Deepika Ajim Premji Foundation Schalorship 2026

 ಉನ್ನತ ಶಿಕ್ಷಣ ಇಲಾಖೆ ಮತ್ತು ಅಜೀಂ ಪ್ರೇಂಜಿ ಫೌಂಡೇಷನ್ ಸಹಯೋಗದಲ್ಲಿ ರಾಜ್ಯದಲ್ಲಿ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಶಿಕ್ಷಣಕ, ಪ್ರವೇಶ ಪಡೆದಿರುವ ಅರ್ಹ ಹೆಣ್ಣು ಮಕ್ಕಳಿಗೆ ವಾರ್ಷಿಕ ರೂ.30,000/- ನೀಡುವ ವಿದ್ಯಾರ್ಥಿವೇತನ ಸಬಲೀಕರಣಗೊಳಿಸುವ ಉದ್ದೇಶದಿಂದ 2025-26 ನೇ ಸಾಲಿನಿಂದ “ದೀಪಿಕಾ” ಹೆಸರಿನಲ್ಲಿ “ಅಜೀಂ ಪ್ರೇಂಜೀ ವಿದ್ಯಾರ್ಥಿವೇತನ ಮತ್ತು ಪೂರಕ ವಿದ್ಯಾರ್ಥಿವೇತನ” ವನ್ನು ಜಾರಿಗೊಳಸಲಾಗಿರುತ್ತದೆ.

ಇದಕ್ಕೆ ಸಂಬಂಧಿಸಿದಂತೆ, ಸರ್ಕಾರಿ ಶಾಲೆ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ 2025-26 ನೇ ಸಾಲಿಗೆ ವಿವಿಧ ಪ್ರಥಮ ಪದವಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರು ಅಜೀಂ ಪ್ರೇಂಜೀ ವಿದ್ಯಾರ್ಥಿವೇತನಕ್ಕಾಗಿ ಮೊದಲನೇ ಹಂತದಲ್ಲಿ ಅರ್ಜಿಯನ್ನು   ಸಲ್ಲಿಸುವ ಅವಧಿಯನ್ನು ದಿನಾಂಕ:30.09.2025ರವರೆಗೆ ನೀಡಲಾಗಿತ್ತು. ಪ್ರಸ್ತುತ, ಎರಡನೇ ಹಂತದಲ್ಲಿ (Round-2) ವಿದ್ಯಾರ್ಥಿವೇತನಕ್ಕೆ ದಿನಾಂಕ:10.01.2026 ರಿಂದ 31.01.2026 ರವರೆಗೆ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿನಿಯರು ಈ ಮುಂದಿನ ಲಿಂಕ್ https://azimpremjifoundation.org/ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಅಂಚೆ ಇಲಾಖೆಯಲ್ಲಿ 28740 ಗ್ರಾಮ ಡಾಕ್‌ ಸೇವಕ್ ಹುದ್ದೆಗಳ ಬೃಹತ್‌ ನೇಮಕಾತಿಗೆ ಅರ್ಜಿ- Indian Postal GDS Recruitment 2026

ಅರ್ಜಿ ಸಲ್ಲಿಸಲು ವಿದ್ಯಾರ್ಥಿನಿಯರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.-
1. 10 ಮತ್ತು 12ನೇ ತರಗತಿಗಳನ್ನು (State/ICSE/ISE/CBSE) ಕಡ್ಡಾಯವಾಗಿ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಕಾಲೇಜಿನಲ್ಲಿ ಅಭ್ಯಾಸ ಮಾಡಿರಬೇಕು.
2. 2025-26ನೇ ಶೈಕ್ಷಣಿಕ ಸಾಲಿನಲ್ಲಿ ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ರೆಗ್ಯುಲರ್ ಪದವಿ ಕೋರ್ಸ್ ಗಳಿಗೆ ಪ್ರವೇಶ ಪಡೆದಿರಬೇಕು.
3. ಈಗಾಗಲೇ ವದವಿ/ಡಿಪ್ಲೊಮಾ ಕೋರ್ಸುಗಳನ್ನು ಪೂರ್ಣಗೊಳಿಸಿ 2025-26ನೇ ಸಾಲಿನಲ್ಲಿ ಎರಡನೇ/ಹೆಚ್ಚಿನ ವದವಿ/ಡಿಪ್ಲೊಮಾ ಕೋರ್ಸುಗಳಿಗೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿನಿಯರು ಅರ್ಹರಿರುವುದಿಲ್ಲ.

ವಿದ್ಯಾರ್ಥಿನಿಯರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಕಂಡ ಮಾರ್ಗ ಸೂಚಿಗಳನ್ನು ಅನುಸರಿಸಲು ಸೂಚಿಸಲಾಗಿದೆ.
ವಿದ್ಯಾರ್ಥಿನಿಯರ ನೊಂದಣಿ
1. ಮೊಬೈಲ್ ಸಂಖ್ಯೆ (OTP ಆಧಾರಿತ ಪರಿಶೀಲನೆ)
2. ಮೊಬೈಲ್ ಸಂಖ್ಯೆ (OTP ಆಧಾರಿತ ಪರಿಶೀಲನೆ)
3. ಪೂರ್ಣ ಹೆಸರು (10ನೇ ತರಗತಿಯ ಅಂಕಪಟ್ಟಿಯಲ್ಲಿ ಇರುವಂತೆ)
4. 10 ನೇ ತರಗತಿಯನ್ನು ಪೂರ್ಣಗೊಳಿಸಿದ ಜಿಲ್ಲೆ ಮತ್ತು ರಾಜ್ಯದ ಹೆಸರು (ಅಂಕ ಪಟ್ಟಿಯಲ್ಲಿರುವಂತೆ).
5. ಆಧಾರ್ ಸಂಖ್ಯೆ ನಮೂದಿಸುವುದು ಮತ್ತು ದೃಢೀಕರಿಸುವುದು
6. ಪಾಸ್ ವರ್ಡ್ ಸೃಜನ ಮತ್ತು ದೃಢೀಕರಿಸುವುದು
7. ನೊಂದಣಿಯನ್ನು ಪೂರ್ಣಗೊಳಿಸಿದ ನಂತರ ಅರ್ಜಿದಾರರು ತಮ್ಮ User ID ಯನ್ನು ಅವರ ಮೊಬೈಲ್ ನಲ್ಲಿ ಸ್ವೀಕರಿಸುತ್ತಾರೆ.
8. ನಂತರ ಅರ್ಜಿ ಸಲ್ಲಿಸಲು User ID and Password ನೊಂದಿಗೆ ಲಾಗಿನ್ ಮಾಡುವುದು.

ಈ‌ ದೀಪಿಕಾ ಸ್ಕಾಲರ್‌ಶಿಫ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವ ವಿದ್ಯಾರ್ಥಿಗಳು 9108736889 ನಂಬರ್‌ ಗೆ ವಾಟ್ಸಪ್‌ ನಲ್ಲಿ ಅಗತ್ಯ ದಾಖಲೆಗಳನ್ನು ಕಳುಹಿಸಿಕೊಟ್ಟರೆ ರಿಯಾಯಿತಿ ದರದಲ್ಲಿ ಅರ್ಜಿ ಸಲ್ಲಿಸಿಕೊಡಲಾಗುವುದು. 

ಅರ್ಜಿ ಸಲ್ಲಿಕೆಗೆ (ಅಗತ್ಯವಿರುವ ದಾಖಲೆಗಳು)
1. ಪಾಸ್ ಪೋರ್ಟ್ ಅಳತೆಯ ಛಾಯಚಿತ್ರ
2. ಸಹಿ
3. ಆಧಾರ್ ಕಾರ್ಡ್
4. ಬ್ಯಾಂಕ್ ವಿವರಗಳು
5. 10 ನೇ ತರಗತಿಯ ಅಂಕಪಟ್ಟಿ
6. 12 ನೇ ತರಗತಿಯ ಅಂಕಪಟ್ಟಿ
7. ಕಾಲೇಜು ಪ್ರವೇಶ ಪುರಾವೆ

ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: UAS Bangalore Jobs 2026

ಅರ್ಜಿ ಸಲ್ಲಿಸುವ ಲಿಂಕುಗಳು: ಇಲ್ಲಿ ಕ್ಲಿಕ್‌ ಮಾಡಿ

ಕೊನೆಯ ಮಾತು: 

ಉನ್ನತ ಶಿಕ್ಷಣ ಇಲಾಖೆ ಮತ್ತು ಅಜೀಂ ಪ್ರೇಂಜಿ ಫೌಂಡೇಷನ್ ಸಹಯೋಗದಲ್ಲಿ ರಾಜ್ಯದಲ್ಲಿ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಶಿಕ್ಷಣಕ, ಪ್ರವೇಶ ಪಡೆದಿರುವ ಅರ್ಹ ಹೆಣ್ಣು ಮಕ್ಕಳಿಗೆ ವಾರ್ಷಿಕ ರೂ.30,000/- ನೀಡುವ ವಿದ್ಯಾರ್ಥಿವೇತನ ಸಬಲೀಕರಣಗೊಳಿಸುವ ಉದ್ದೇಶದಿಂದ 2025-26 ನೇ ಸಾಲಿನಿಂದ “ದೀಪಿಕಾ” ಹೆಸರಿನಲ್ಲಿ “ಅಜೀಂ ಪ್ರೇಂಜೀ ವಿದ್ಯಾರ್ಥಿವೇತನ ಮತ್ತು ಪೂರಕ ವಿದ್ಯಾರ್ಥಿವೇತನ” ವನ್ನು ಜಾರಿಗೊಳಸಲಾಗಿರುತ್ತದೆ. ಪಿಯುಸಿ ಮುಗಿಸಿದ ಹಾಗೂ ಅಭ್ಯರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಕೂಡಲೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಜನವರಿ 31, 2026 ಕೊನೆಯ ದಿನಾಂಕವಾಗಿರುತ್ತದೆ.  ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top