ಪಿಯುಸಿ ಆದವರಿಗೆ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ-ವೇತನ ರೂ. 30000/- AAI Junior Assistant Recruitment 2025
ನಮಸ್ತೆ ಸ್ನೇಹಿತರೇ, ಸ್ಪರ್ಧಾದೀಪ ವೆಬ್ಸೈಟ್ ನಿಂದ ಇಂದು ವಿನೂತನ ಉದ್ಯೋಗ ಮಾಹಿತಿಯನ್ನು ನೀಡುತ್ತೇವೆ. ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ (AAI) ವತಿಯಿಂದ ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳನ್ನು ನಿಯೋಜನೆ ಮೂಲಕ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ನಿಗದಿತ ನಮೂನೆಯ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
Airport Authority of India ನಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಫ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ದಿನಾಂಕ 30-04-2025 ರ ಒಳಗಾಗಿ ಅರ್ಜಿಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೀತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.
ನೇಮಕಾತಿಯ ಪಕ್ಷಿನೋಟ:
ನೇಮಕಾತಿ ಕಛೇರಿ: ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ |
ಹುದ್ದೆಗಳ ಪದನಾಮ: ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ |
ಹುದ್ದೆಗಳ ಸಂಖ್ಯೆ: 07 ಹುದ್ದೆಗಳು |
ಕಾರ್ಯ ನಿರ್ವಹಿಸಬೇಕಾದ ವಿಳಾಸ: ದೇಶದಾದ್ಯಂತಾ |
ಹುದ್ದೆಗಳ ವಿವರ:
ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
ಜೂನಿಯರ್ ಅಸಿಸ್ಟೆಂಟ್ (HR) | 03 |
ಜೂನಿಯರ್ ಅಸಿಸ್ಟೆಂಟ್ (Workshop) | 01 |
ಜೂನಿಯರ್ ಅಸಿಸ್ಟೆಂಟ್ (Plumber) | 01 |
ಜೂನಿಯರ್ ಅಸಿಸ್ಟೆಂಟ್ (Wireman) | 02 |
ಒಟ್ಟು ಹುದ್ದೆಗಳು | 07 |
ವೇತನ ಶ್ರೇಣಿ:
ಅಧಿಸೂಚನೆಯ ಪ್ರಕಾರ ಮೂಲವೇತನ ಶ್ರೇಣಿ ಕೆಳಗೆ ನೀಡಿದಂತೆ ನಿಗದಿಪಡಿಸಲಾಗಿದೆ.
ಮೂಲವೇತನ ರೂ. 31000-92000 (ಜೊತೆಗೆ ತುಟ್ಟಿಭತ್ಯೆ, ಮನೆಬಾಡಿಗೆ ಭತ್ಯೆ ಇತರೆ ಸೌಲಭ್ಯಗಳು)
ಶೈಕ್ಷಣಿಕ ವಿದ್ಯಾರ್ಹತೆ
ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
ಜೂನಿಯರ್ ಅಸಿಸ್ಟೆಂಟ್ (HR) | ಯಾವುದೇ ಪದವಿ & ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ |
ಜೂನಿಯರ್ ಅಸಿಸ್ಟೆಂಟ್ (Workshop) | 10th ಉತ್ತೀರ್ಣ & ಐಟಿಐ (ಸಂಬಂಧಿಸಿದ ಟ್ರೇಡ್) |
ಜೂನಿಯರ್ ಅಸಿಸ್ಟೆಂಟ್ (Plumber) | 10th ಉತ್ತೀರ್ಣ & ಐಟಿಐ (ಸಂಬಂಧಿಸಿದ ಟ್ರೇಡ್) |
ಜೂನಿಯರ್ ಅಸಿಸ್ಟೆಂಟ್ (Wireman) | 10th ಉತ್ತೀರ್ಣ & ಐಟಿಐ (ಸಂಬಂಧಿಸಿದ ಟ್ರೇಡ್) |
AAI ನಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ ಡಿ ನೌಕರರು ಮಾತ್ರ ಅರ್ಜಿ ಹಾಕಬಹುದು.
ವಯೋಮಿತಿ:
ಅಭ್ಯರ್ಥಿಗಳು ಗರಿಷ್ಟ 50 ವರ್ಷದವರೆಗೆ ಮಾತ್ರ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
- ಭರ್ತಿ ಮಾಡಿರುವ ಅರ್ಜಿ ನಮೂನೆ
- ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು
- ಗಣಕಯಂತ್ರ ಕೋರ್ಸ್ ಪ್ರಮಾಣಪತ್ರ
- ಅರ್ಜಿ ಶುಲ್ಕ ಪಾವತಿಸಿದ ರಸೀಧಿ
- ಜಾತಿ & ಆದಾಯ ಪ್ರಮಾಣ ಪತ್ರ,
- ಸೇವಾ ಪ್ರಮಾಣ ಪತ್ರ
- ನಿರಾಕ್ಷೇಪಣಾ ಪ್ರಮಾಣಪತ್ರ
- ಇತರೆ ಅಗತ್ಯವಿರುವ ದಾಖಲೆಗಳು
ಅರ್ಜಿ ಸಲ್ಲಿಸುವುದು ಹೇಗೆ?
- ಅಧಿಸೂಚನೆಯಲ್ಲಿ ತಿಳಿಸಲಾದ ವಿಳಾಸಕ್ಕೆ ತೆರಳಿ ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ.
- ಅರ್ಜಿ ನಮೂನೆಯ ಎಲ್ಲ ಭಾಗಗಳನ್ನು ಮೂಲ ದಾಖಲೆಗಳಲ್ಲಿ ಇರುವಂತೆ ಸರಿಯಾಗಿ ಭರ್ತಿ ಮಾಡಿ.
- ಅರ್ಜಿ ನಮೂನೆಯ ಅಗತ್ಯ ಸ್ಥಳದಲ್ಲಿ ಪಾಸ್ ಪೊರ್ಟ್ ಸೈಜಿನ ತಮ್ಮ ಇತ್ತೀಚಿನ ಭಾವಚಿತ್ರವನ್ನು ಅಂಟಿಸಿ.
- ಅರ್ಜಿ ನಮೂನೆ ಜೊತೆಗೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಲಗತ್ತಿಸಿಕೊಳ್ಳಿ. ನಂತರ ಅದನ್ನು ಒಂದು ಲಕೋಟೆಯ ಒಳಗೆ ಹಾಕಿ ಸೀಲ್ ಮಾಡಿ. ಲಕೋಟೆಯ ಮೇಲೆ ಜೂನಿಯರ್ ಅಸಿಸ್ಟೆಂಟ್ ___ ಹುದ್ದೆಗೆ ಅರ್ಜಿ ಎಂದು ದಪ್ಪ ಅಕ್ಷರಗಳಲ್ಲಿ ಬರೆಯಿರಿ
- ಕೆಳಗೆ ನೀಡಲಾದ ವಿಳಾಸಕ್ಕೆ ಕೊನೆಯ ದಿನಾಂಕದ ಒಳಗೆ ಅರ್ಜಿಯನ್ನು ಕಳುಹಿಸಿಕೊಡಿ.
- ತಮ್ಮ ಮುಂದಿನ ಅಗತ್ಯ ಕ್ರಮಗಳಿಗಾಗಿ ಒಂದು ಪ್ರತಿಯನ್ನು ತಮ್ಮ ಬಳಿ ಜೋಪಾನವಾಗಿ ಇಟ್ಟುಕೊಳ್ಳಿ.
ಅರ್ಜಿ ಕಳುಹಿಸಿಕೊಡುವ ವಿಳಾಸ:
Senior Manager (HR), Airport Authority if India, Regional Head Quarter, (North-East Region), L.G.B.I Airport, Guwahati-781015
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-04-2025
ಅಧಿಕೃತ ಲಿಂಕುಗಳು/ Official Links
ನೋಟಿಫಿಕೇಶನ್ ಡೌನ್ಲೋಡ್ |
ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.