ರೆಕಾರ್ಡ್ ಕ್ಲರ್ಕ್, ಕಿರಿಯ ಲೆಕ್ಕಾಧಿಕಾರಿ & ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ: NEIGRIHMS Recruitment 2025
ನಮಸ್ತೆ ಸ್ನೇಹಿತರೇ, ಇಂದು ಈ ಲೇಖನದಲ್ಲಿ ಹೊಸ ಉದ್ಯೋಗ ಮಾಹಿತಿಯನ್ನು ಹಂಚಿಕೊಳ್ಳಲಿದ್ದೇನೆ. ಇಂದಿರಾಗಾಂಧಿ ಪ್ರಾಂತಿಯ ಆರೋಗ್ಯ & ವೈದ್ಯಕೀಯ ಸಂಸ್ಥೆ (NEIGRIHMS)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹತ್ತನೇ, ಪಿಯುಸಿ, ಐಟಿಐ, ಡಿಪ್ಲೊಮಾ & ಯಾವುದೇ ಪದವಿ ಮುಗಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
NEIGRIHMS ದಲ್ಲಿ ಖಾಲಿ ಇರುವ ಒಟ್ಟು ನರ್ಸಿಂಗ್ ಆಫೀಸರ್, ರೆಕಾರ್ಡ್ ಕ್ಲರ್ಕ್ & ಕಿರಿಯ ಲೆಕ್ಕಾಧಿಕಾರಿ ಸೇರಿ ವಿವಿಧ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ದಿನಾಂಕವನ್ನು 20-04-2025ರ ವರೆಗೂ ನಿಗದಿಪಡಿಸಲಾಗಿದೆ. ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೀತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.
ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ. ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.
JOB NEWS: ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ 486 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ನೇಮಕಾತಿಯ ಪಕ್ಷಿನೋಟ
ಸರ್ಕಾರಿ ಸಂಸ್ಥೆ | ಇಂದಿರಾಗಾಂಧಿ ಪ್ರಾಂತಿಯ ಆರೋಗ್ಯ & ವೈದ್ಯಕೀಯ ಸಂಸ್ಥೆ (NEIGRIHMS) |
ಹುದ್ದೆಗಳ ಪದನಾಮ | ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ |
ಹುದ್ದೆಗಳ ಸಂಖ್ಯೆ | 130 |
ಕೆಲಸದ ಸ್ಥಳ | ದೇಶದಾದ್ಯಂತಾ |
ಹುದ್ದೆಗಳ ವಿವರ:
ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
ನರ್ಸಿಂಗ್ ಆಫೀಸರ್ | 105 |
ಸ್ಟೋರ್ ಕೀಪರ್ | 03 |
ರೆಡಿಯೋಗ್ರಾಫರ್ | 03 |
ಮೆಡಿಕಲ್ ಸೊಷಿಯಲ್ ವರ್ಕರ್ | 01 |
ಟೆಕ್ನಿಶಿಯನ್ (Endoscope & Colonoscopy) | 02 |
ಟೆಕ್ನಿಶಿಯನ್ (Nuclear Medicine) | 04 |
ಹೆಲ್ತ್ ಇನ್ಸ್ಪೆಕ್ಟರ್ | 01 |
ಜೂನಿಯರ್ ಅಕೌಂಟ್ ಆಫೀಸರ್ | 01 |
ಜೂನಿಯರ್ ಇಂಜಿನಿಯರ್ | 01 |
ಫಾರ್ಮಾಸಿಸ್ಟ್ | 01 |
ಟೆಕ್ನಿಕಲ್ ಅಸಿಸ್ಟೆಂಟ್ | 01 |
ECG ಟೆಕ್ನಿಶಿಯನ್ | 01 |
ಸ್ಯಾನಿಟರಿ ಇನ್ಸ್ಪೆಕ್ಟರ್ | 02 |
ಸೆಕ್ಯೂರಿಟಿ ಗಾರ್ಡ್ | 01 |
ರೆಕಾರ್ಡ್ ಕ್ಲರ್ಕ್ | 01 |
ಡ್ರೈವರ್ | 01 |
ಡಾರ್ಕ್ ರೂಮ್ ಅಸಿಸ್ಟೆಂಟ್ | 01 |
ವಯೋಮಿತಿ/ Age limit:
ದಿನಾಂಕ 20-04-2025ಕ್ಕೆ ನಿಗದಿಪಡಿಸಿದಂತೆ
ಕನಿಷ್ಟ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಟ 30 ವರ್ಷವನ್ನು ಮೀರುವಂತಿಲ್ಲ.
ಗರಿಷ್ಟವಯೋಮಿತಿಯಲ್ಲಿ ಪಜಾ & ಪಪಂ ಅಭ್ಯರ್ಥಿಗಳಿಗೆ 05 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 03 ವರ್ಷ ಸಡಿಲಿಕೆ ಇರುತ್ತದೆ.
ಶೈಕ್ಷಣಿಕ ಅರ್ಹತೆಗಳು/ Educational Qualification:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅಂಗೀಕೃತ ವಿಶ್ವವಿದ್ಯಾಲಯದಿಂದ ಕೆಳಗೆ ನೀಡಲಾದ ವಿದ್ಯಾರ್ಹತೆ ಹೊಂದಿರಬೇಕು:
ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
ನರ್ಸಿಂಗ್ ಆಫೀಸರ್ | ಬಿಎಸ್ಸಿ ನರ್ಸಿಂಗ್/ ಡಿಪ್ಲೊಮಾ ನರ್ಸಿಂಗ್ |
ಸ್ಟೋರ್ ಕೀಪರ್ | ಯಾವುದೇಪದವಿ |
ರೆಡಿಯೋಗ್ರಾಫರ್ | ಬಿಎಸ್ಸಿ |
ಮೆಡಿಕಲ್ ಸೊಷಿಯಲ್ ವರ್ಕರ್ | MSW |
ಟೆಕ್ನಿಶಿಯನ್ (Endoscope & Colonoscopy) | BSC/ Diploma |
ಟೆಕ್ನಿಶಿಯನ್ (Nuclear Medicine) | BSc |
ಹೆಲ್ತ್ ಇನ್ಸ್ಪೆಕ್ಟರ್ | BA/ BSc |
ಜೂನಿಯರ್ ಅಕೌಂಟ್ ಆಫೀಸರ್ | ಯಾವುದೇ ಪದವಿ |
ಜೂನಿಯರ್ ಇಂಜಿನಿಯರ್ | ಬಿಇ |
ಫಾರ್ಮಾಸಿಸ್ಟ್ | ಬಿಫಾರ್ಮ್ |
ಟೆಕ್ನಿಕಲ್ ಅಸಿಸ್ಟೆಂಟ್ | ಬಿಎಸ್ಸಿ |
ECG ಟೆಕ್ನಿಶಿಯನ್ | ಬಿಎಸ್ಸಿ |
ಸ್ಯಾನಿಟರಿ ಇನ್ಸ್ಪೆಕ್ಟರ್ | ಹತ್ತನೇ ತರಗತಿ |
ಸೆಕ್ಯೂರಿಟಿ ಗಾರ್ಡ್ | ಹತ್ತನೇ |
ರೆಕಾರ್ಡ್ ಕ್ಲರ್ಕ್ | ಪಿಯುಸಿ |
ಡ್ರೈವರ್ | ಹತ್ತನೇ ಹಾಗೂ HMV |
ಡಾರ್ಕ್ ರೂಮ್ ಅಸಿಸ್ಟೆಂಟ್ | ಹತ್ತನೇ ತರಗತಿ |
(ಸ್ನೇಹಿತರೇ ಈ ನೇಮಕಾತಿ ಸೇರಿದಂತೆ ಯಾವುದೇ ನೇಮಕಾತಿ/ ಸ್ಕಾಲರ್ಶಿಫ್/ ಸ್ಕೀಮ್ ಗಳಿಗೆ ಅರ್ಜಿ ಸಲ್ಲಿಸಿಕೊಡಲಾಗುವುದು. ವಾಟ್ಸಪ್ (9108736889) ಮುಖಾಂತರ ದಾಖಲೆಗಳನ್ನು ಕಳುಹಿಸಿದರೇ ಕಡಿಮೆ ದರದಲ್ಲಿ ಅರ್ಜಿ ಸಲ್ಲಿಸಿ ಪಿಡಿಎಫ್ ಅನ್ನು ನಿಮಗೆ ಕಳುಹಿಸಿಕೊಡಲಾಗುವುದು)
ಅರ್ಜಿ ಶುಲ್ಕ/ Application Fees:
ಸಾಮಾನ್ಯ/ ಓಬಿಸಿ ಅಭ್ಯರ್ಥಿಗಳಿಗೆ: ರೂ. 500/-ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಪಜಾ/ ಪಪಂ/ EWS ಅಭ್ಯರ್ಥಿಗಳಿಗೆ: ರೂ. 250/-ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ
ಆಯ್ಕೆವಿಧಾನ/ Selection procedure:
ಲಿಖಿತ ಪರೀಕ್ಷೆಯಲ್ಲಿ ತಾವು ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
ಚಾಲ್ತಿಯಲ್ಲಿರುವ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ
ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು
ಜಾತಿ & ಆದಾಯ ಪ್ರಮಾಣ ಪತ್ರ, ಅಂಗವಿಕಲ ಪ್ರಮಾಣಪತ್ರ, ಗ್ರಾಮೀಣ ಪ್ರಮಾಣಪತ್ರ, ಮಾಜಿಸೈನಿಕ, ಶುಲ್ಕ ಪಾವತಿಸಿದ ರಸೀಧಿ ಹಾಗೂ ಇತರೆ ಪ್ರಮಾಣಪತ್ರಗಳು
ಸೇವಾ ದಾಖಲಾತಿಗಳು
ಇತರೆ ಅಗತ್ಯವಿರುವ ದಾಖಲೆಗಳು
ಅರ್ಜಿ ಹಾಕುವ ವಿಧಾನ/ Application Submission Method:
- ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಹಾಗೂ ಇಮೇಲ್ ಐ.ಡಿ ಯನ್ನು ಹೊಂದಿರಬೇಕು. ಹಾಗೂ ಇತ್ತೀಚಿನ ಭಾವಚಿತ್ರ, ಶೈಕ್ಷಣಿಕ ದಾಖಲೆಗಳು, ಇನ್ನಿತರ ಅಗತ್ಯ ದಾಖಲೆಗಳನ್ನು ಕೇಳಿರುವ ಸೈಜ್ ಗೆ ಅನುಸಾರವಾಗಿ ಸ್ಕ್ಯಾನ್ ಮಾಡಿಟ್ಟುಕೊಳ್ಳಿ.
- ಅಭ್ಯರ್ಥಿಗಳು https://www.neigrihms.gov.in ವೆಬ್ಸೈಟ್ ಗ ಬೇಟಿ ನೀಡಿ Recruitment Page ಗೆ ಹೋಗಿ. ಅಲ್ಲಿ ಲಭ್ಯವಿರುವ Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನೊಂದಣಿ ಮಾಡಿಕೊಂಡು Registration Number & Password ಅನ್ನು ಬಳಸಿಕೊಂಡು ಮೇಲೆ ನೀಡಿರುವ Portal ನಲ್ಲಿ ಲಾಗಿನ್ ಮಾಡಿಕೊಳ್ಳಿ.
- ಆನ್ಲೈನ್ ಅರ್ಜಿ ನಮೂನೆಯನ್ನು ಸರಿಯಾದ ಮಾಹಿತಿಯೊಂದಿಗೆ ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯವಿರುವ ಕಡೆ ಸ್ಕ್ಯಾನ್ ಮಾಡಿರುವ ಕಾಪಿಗಳನ್ನು Upload ಮಾಡಿ, ಅಂತಿಮವಾಗಿ Submit ಮಾಡಿ.
- Payment Gateway ಗೆ ತೆರಳಿ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್/ ಯುಪಿಐ/ ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ.
- ಅರ್ಜಿ ಸಲ್ಲಿಸಿದ ನಂತರ ಅದನ್ನು ಮುದ್ರಿಸಿಟ್ಟುಕೊಳ್ಳಿ. ಮುಂದೆ ನಡೆಯುವ ಮೂಲ ದಾಖಲಾತಿಗಳ ಪರಿಶೀಲನೆ ಸಂದರ್ಭದಲ್ಲಿ ಅದನ್ನು ಹಾಜರುಪಡಿಸಬೇಕು.
Important Date/ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 22-03-2025
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-04-2025
Important Links/ ಪ್ರಮುಖ ಲಿಂಕುಗಳು:
ಅಧಿಸೂಚನೆ/ Notification: |
ಅರ್ಜಿ ಸಲ್ಲಿಸಿ/ Apply Online: |
ವೆಬ್ಸೈಟ್/ Website : |