ಕರ್ನಾಟಕ ಅಂಚೆ ವೃತ್ತದಲ್ಲಿ ಬೃಹತ್ ನೇರ ನೇಮಕಾತಿ- ಖಾಲಿ ಇರುವ 21413 ಪೋಸ್ಟ್ ಮ್ಯಾನ್, GDS ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Indian Postal DGS 21413 Vacancies Jobs 2025

WhatsApp Group Join Now
Telegram Group Join Now
Spread the love

ಕರ್ನಾಟಕ ಅಂಚೆ ವೃತ್ತದಲ್ಲಿ ಬೃಹತ್ ನೇರ ನೇಮಕಾತಿ- ಖಾಲಿ ಇರುವ 21413 ಪೋಸ್ಟ್ ಮ್ಯಾನ್, GDS ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Indian Postal DGS 21413 Vacancies Jobs 2025

ನಮಸ್ತೆ ಸ್ನೇಹಿತರೇ, ಸ್ಪರ್ಧಾದೀಪ ವೆಬ್ಸೈಟ್ ನಿಂದ ಇಂದು ಬೃಹತ್ ಉದ್ಯೋಗ ಮಾಹಿತಿಯನ್ನು ನೀಡುತ್ತೇವೆ.  ಭಾರತೀಯ ಅಂಚೆ ಇಲಾಖೆಯಿಂದ ಬೃಹತ್ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಇದರಲ್ಲಿ  ಖಾಲಿ ಇರುವ  ಬ್ರ್ಯಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್, ಗ್ರಾಮೀಣ ಡಾಕ್ ಸೇವಕ್  ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

Indian Postal Department ದಲ್ಲಿ ಖಾಲಿ ಇರುವ 21413 GDS, Branch post master & Assistant Branch post master ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ದಿನಾಂಕ 03-03-2025 ರ ಒಳಗಾಗಿ ಅರ್ಜಿಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೀತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.

ಭಾರತೀಯ ಅಂಚೆ ಇಲಾಖೆಯಲ್ಲಿ ಹೊಸ ಅಧಿಸೂಚನೆ ಪ್ರಕಟವಾಗಿದ್ದು, ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.

 

ನೇಮಕಾತಿಯ ಪಕ್ಷಿನೋಟ

ಸರ್ಕಾರಿ ಸಂಸ್ಥೆ ಭಾರತೀಯ ಅಂಚೆ ಇಲಾಖೆ
ಹುದ್ದೆಗಳ ಪದನಾಮ BPM, ABPM, GDS
ಹುದ್ದೆಗಳ ಸಂಖ್ಯೆ 21413
ಕೆಲಸದ ಸ್ಥಳ ದೇಶದಾದ್ಯಂತಾ

 

ಹುದ್ದೆಗಳ ವಿವರ /Post Details:

ಸಾಮಾನ್ಯ ವರ್ಗ/ GM- 9735 ಹುದ್ದೆಗಳು
ಇತರೆ ಹಿಂದೂಳಿದ ವರ್ಗ/ OBC- 4164 ಹುದ್ದೆಗಳು
ಪರಿಶಿಷ್ಟ ಜಾತಿ/ SC- 2867 ಹುದ್ದೆಗಳು
ಪರಿಶಿಷ್ಟ ಪಂಗಡ/ ST- 2086 ಹುದ್ದೆಗಳು
ಆರ್ಥಿಕವಾಗಿ ಹಿಂದೂಳಿದ ವರ್ಗ/ EWS- 1952 ಹುದ್ದೆಗಳು
ಒಟ್ಟು ಹುದ್ದೆಗಳು- 21413 ಹುದ್ದೆಗಳು

ಹುದ್ದೆಗಳ ವಿವರ/ Post Details:

ಬ್ರಾಂಚ್ ಪೋಸ್ಟ್ ಮಾಸ್ಟರ್/ BPM
ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್/ ABPM
ಈ ಲೇಖನವನ್ನು ಸಂಪೂರ್ಣವಾಗಿ ಓದಿ ನಂತರ ಈ ಹುದ್ದೆಗಳಿಗೆ ನೀವು ಅರ್ಹತೆಯನ್ನು ಹೊಂದಿದ್ದರೇ ನೀವು ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ನಿಮಗೆ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದರೇ ನಮ್ಮ ಸ್ಪರ್ಧಾ ದೀಪ ಕಡೆಯಿಂದ ಅತಿ ಕಡಿಮೆ ದರದಲ್ಲಿ ಅರ್ಜಿ ಸಲ್ಲಿಸಿಕೊಡಲಾಗುವುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9108736889

ವೇತನ ಶ್ರೇಣಿ/ Salary scale:

ಬ್ರಾಂಚ್ ಪೋಸ್ಟ್ ಮಾಸ್ಟರ್/ BPM:  ರೂ. 12000-29320
ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್/ ABPM: ರೂ. 10000-24470

ವಯೋಮಿತಿ/ Age limit:

ಕನಿಷ್ಟ ವಯೋಮಿತಿ: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಟ 18 ವರ್ಷ ಪೂರೈಸಿರಬೇಕು

ಗರಿಷ್ಟ ವಯೋಮಿತಿ: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಗರಿಷ್ಟ 40 ವರ್ಷದ ಮೀರಿರಬಾರದು ಹಾಗೂ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡಕ್ಕೆ ಗರಿಷ್ಟ 5 ವರ್ಷ & ಇತರೆ ಹಿಂದುಳಿದ ವರ್ಗದವರಿಗೆ 03 ವರ್ಷಗಳು ಸಡಿಲಿಕೆ ಇರುತ್ತದೆ. ಮಾಜಿ ಸೈನಿಕ & ಅಂಗವಿಕಲ ಅಭ್ಯರ್ಥಿಗಳಿಗೂ ಸರ್ಕಾರದ ನಿಯಮದ ಪ್ರಕಾರ ಸಡಿಲಿಕೆ ಇರುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ/ Educational Qualification:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಹತ್ತನೇ ತರಗತಿ/ ತತ್ಸಮಾನ ವಿದ್ಯಾರ್ಹತೆ ಪೂರೈಸಿರಬೇಕು.

ಸ್ಥಳೀಯ ಭಾಷೆ (ಕನ್ನಡ) ಯಲ್ಲಿ ಕಡ್ಡಾಯವಾಗಿ ಓದಿರಬೇಕು.

ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನ ಹೊಂದಿರಬೇಕು

ಅರ್ಜಿ ಶುಲ್ಕ/ Application Fees:

ಪುರುಷ ಸಾಮಾನ್ಯ ಅಭ್ಯರ್ಥಿಗಳು, ಓಬಿಸಿ & EWS ಅಭ್ಯರ್ಥಿಗಳು ರೂ. 100/- ಅನ್ನು ಪಾವತಿಸಬೇಕು.

ಎಲ್ಲ ಮಹಿಳೆಯರು & ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ & ನೆಟ್ ಬ್ಯಾಂಕಿಂಗ್ ಬಳಸಿಕೊಂಡು ಆನ್ಲೈನ್ ಮೂಲಕ ಪಾವತಿಸಬೇಕು.

ಆಯ್ಕೆವಿಧಾನ/ Selection Procedure:

ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯಾದ ಹತ್ತನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ & ರೋಸ್ಟರ್ ಪ್ರಕಾರ ಆಯ್ಕೆಮಾಡಲಾಗುವುದು.

  

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

ಭರ್ತಿ ಮಾಡಿರುವ ಅರ್ಜಿ ನಮೂನೆ

ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು

ಜಾತಿ & ಆದಾಯ ಪ್ರಮಾಣ ಪತ್ರ, ಅಂಗವಿಕಲ ಪ್ರಮಾಣಪತ್ರ, ಗ್ರಾಮೀಣ ಪ್ರಮಾಣಪತ್ರ, ಮಾಜಿಸೈನಿಕ, ಶುಲ್ಕ ಪಾವತಿಸಿದ ರಸೀಧಿ ಹಾಗೂ ಇತರೆ ಪ್ರಮಾಣಪತ್ರಗಳು

ಸೇವಾ ದಾಖಲಾತಿಗಳು

ಇತರೆ ಅಗತ್ಯವಿರುವ ದಾಖಲೆಗಳು

ಅರ್ಜಿ ಹಾಕುವ ವಿಧಾನ/ Application Submission Method:

  1. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಹಾಗೂ ಇಮೇಲ್ ಐ.ಡಿ ಯನ್ನು ಹೊಂದಿರಬೇಕು. ಹಾಗೂ ಇತ್ತೀಚಿನ ಭಾವಚಿತ್ರ, ಶೈಕ್ಷಣಿಕ ದಾಖಲೆಗಳು, ಇನ್ನಿತರ ಅಗತ್ಯ ದಾಖಲೆಗಳನ್ನು ಕೇಳಿರುವ ಸೈಜ್ ಗೆ ಅನುಸಾರವಾಗಿ ಸ್ಕ್ಯಾನ್ ಮಾಡಿಟ್ಟುಕೊಳ್ಳಿ.
  2. ಅಭ್ಯರ್ಥಿಗಳು https://indiapostgdsonline.gov.in/ ವೆಬ್ಸೈಟ್ ಗ ಬೇಟಿ ನೀಡಿ Recruitment Page ಗೆ ಹೋಗಿ. ಅಲ್ಲಿ ಲಭ್ಯವಿರುವ Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ಅಲ್ಲಿ ನೊಂದಣಿ ಮಾಡಿಕೊಂಡು Registration Mobile Number & Password ಅನ್ನು ಬಳಸಿಕೊಂಡು ಮೇಲೆ ನೀಡಿರುವ Portal ನಲ್ಲಿ ಲಾಗಿನ್ ಮಾಡಿಕೊಳ್ಳಿ.
  4. ಆನ್ಲೈನ್ ಅರ್ಜಿ ನಮೂನೆಯನ್ನು ಸರಿಯಾದ ಮಾಹಿತಿಯೊಂದಿಗೆ ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯವಿರುವ ಕಡೆ ಸ್ಕ್ಯಾನ್ ಮಾಡಿರುವ ಕಾಪಿಗಳನ್ನು Upload ಮಾಡಿ, ಅಂತಿಮವಾಗಿ Submit ಮಾಡಿ.
  5. Payment Gateway ಗೆ ತೆರಳಿ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್/ ಯುಪಿಐ/ ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ.
  6. ಅರ್ಜಿ ಸಲ್ಲಿಸಿದ ನಂತರ ಅದನ್ನು ಮುದ್ರಿಸಿಟ್ಟುಕೊಳ್ಳಿ. ಮುಂದೆ ನಡೆಯುವ ಮೂಲ ದಾಖಲಾತಿಗಳ ಪರಿಶೀಲನೆ ಸಂದರ್ಭದಲ್ಲಿ ಅದನ್ನು ಹಾಜರುಪಡಿಸಬೇಕು.

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 10-02-2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-03-2025    

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:
ಅರ್ಜಿ ಸಲ್ಲಿಸಿ/ Apply Online:
ವೆಬ್ಸೈಟ್/ Website :
ಇತ್ತೀಚಿನ ಸಂಬಂಧಿತ ಸುದ್ದಿಗಳು:
KSOU ನಿಂದ ಯುಜಿ, ಪಿಜಿ & ಬಿಎಡ್ ದೂರ ಶಿಕ್ಷಣ ಪ್ರಥವ ವರ್ಷದ ಪ್ರವೇಶಾತಿಗೆ ಅರ್ಜಿ ಆಹ್ವಾನ: KSOU First year UG & PG Course Admission 2025
ಅಂಚೆ ಇಲಾಖೆಯಲ್ಲಿನ 25 ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಹತ್ತನೇ ಮುಗಿದವರಿಂದ ಅರ್ಜಿ ಕರೆಯಲಾಗಿದೆ.
ಸುಪ್ರಿಂಕೋರ್ಟ್ ನಲ್ಲಿ ಖಾಲಿ ಇರುವ 241 ಕಿರಿಯ ಕೋರ್ಟ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

 ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top