ರಾಜ್ಯದಲ್ಲಿ 25000 ಪ್ರಾಥಮಿಕ & ಪ್ರೌಢಶಾಲಾ  ಶಿಕ್ಷಕರ ನೇಮಕಾತಿ- ಮಧು ಬಂಗಾರಪ್ಪ| 25000 HSTR & GPSTR Recruitment in Karnataka 2025

WhatsApp Group Join Now
Telegram Group Join Now
Spread the love

ರಾಜ್ಯದಲ್ಲಿ 25000 ಪ್ರಾಥಮಿಕ & ಪ್ರೌಢಶಾಲಾ  ಶಿಕ್ಷಕರ ನೇಮಕಾತಿ- ಮಧು ಬಂಗಾರಪ್ಪ| 25000 HSTR & GPSTR Recruitment in Karnataka 2025

ಸ್ನೇಹಿತರೆ ನಮಸ್ತೆ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಕುರಿತಂತೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಹತ್ವದ ಮಾಹಿತಿ ಒಂದನ್ನು ಹೊರಹಾಕಿದ್ದಾರೆ. ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲಾ ಕಡೆಯಲ್ಲಿಯೂ ಅನುದಾನಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 25000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂಬ ಅಂಶವನ್ನು ಹೊರಹಾಕಿದ್ದಾರೆ ಆ ಕುರಿತಂತೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ಕೊಡಲಿದ್ದೇವೆ. ಈ ಲೇಖನವನ್ನ ಪೂರ್ತಿಯಾಗಿ ಓದಿ ಮತ್ತು ಇತರರಿಗೂ ಶೇರ್ ಮಾಡಿ.

 

ಸ್ನೇಹಿತರೆ ಕಲ್ಯಾಣ ಕರ್ನಾಟಕ ಮತ್ತು ರಾಜ್ಯ ವೃಂದ ದಲ್ಲಿ ಅನುದಾನಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 25000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ 50,000 ಶಿಕ್ಷಕರ ಕೊರತೆ ಇದ್ದು ಅದರಲ್ಲಿ 25,000 ಶಿಕ್ಷಕರ ನೇಮಕಾತಿಯನ್ನು ಕೊಡಲೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

 

ಈಗಾಗಲೇ 15000 ಶಿಕ್ಷಕರ ನೇಮಕಾತಿಗೆ ಈ ಹಿಂದೆ ಅರ್ಜಿಯನ್ನು ಕರೆಯಲಾಗಿತ್ತು‌‌. ಆದರೆ ಅದರಲ್ಲಿ 13500 ಶಿಕ್ಷಕರ ನೇಮಕಾತಿ ಭರ್ತಿಯಾಗಿದ್ದು, ಉಳಿದ ಹುದ್ದೆಗಳು ಅರ್ಹ ಅಭ್ಯರ್ಥಿಗಳ ಕೊರತೆಯಿಂದ ಭರ್ತಿಯಾಗಿರುವುದಿಲ್ಲ. ಅವುಗಳನ್ನು ಸೇರಿದಂತೆ ಖಾಲಿ ಇರುವ ಒಟ್ಟು 25,000 ಹುದ್ದೆಗಳ ಮಾಡಲಾಗುವುದು ಹೇಗೆ ಹುದ್ದೆಗಳಲ್ಲಿ 80ರಷ್ಟು ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಭರ್ತಿಯಾಗಲಿವೆ ಎಂಬ ಅಂಶವನ್ನು ತಿಳಿಸಿದ್ದಾರೆ.

 

ಶಿಕ್ಷಣ ಇಲಾಖೆಗೆ 45000 ಕೋಟಿ ಮೀಸಲು:

25000 ಶಿಕ್ಷಕರ ನೇಮಕಾತಿ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಮಕ್ಕಳ ಶಿಕ್ಷಣಕ್ಕಾಗಿ 45,000 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಜಗಳೂರು ತಾಲೂಕಿನ  ಹುಚ್ಚಂಗಿಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದರು.

 

ಕಲ್ಯಾಣ ಕರ್ನಾಟಕದಲ್ಲಿ ಅವಕಾಶ:

25000 ಹುದ್ದೆಗಳ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಶೇ. 80% ಹುದ್ದೆಗಳು ಭರ್ತಿಯಾಗಲಿದೆ. 

 

ಪ್ರಾಥಮಿಕ, ಟಿಜಿಟಿ & ಪ್ರೌಢಶಾಲಾ ಶಿಕ್ಷಕ ಹುದ್ದೆಗಳು:

ಒಟ್ಟು 25000 ಹುದ್ದೆಗಳಲ್ಲಿ ಪ್ರಾಥಮಿಕ, ಟಿಜಿಟಿ & ಪ್ರೌಢಶಾಲಾ ಹುದ್ದೆಗಳು ಲಭ್ಯವಾಗಲಿವೆ.

 

ಬಿಎಡ್ ಮುಗಿದವರಿಗೆ ಅವಕಾಶ:

ಸಂಬಂದಿಸಿದ ವಿಷಯದಲ್ಲಿ ಪದವಿ ಜೊತೆಗೆ ಬಿಎಡ್ ಮುಗಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

 

ಶೀಘ್ರದಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವನೆ:

25000 ಶಿಕ್ಷಕರ ನೇಮಕಾತಿಗೆ ಪ್ರಾಥಮಿಕ & ಪ್ರೌಢಶಾಲಾ ಶಿಕ್ಷಣ ಇಲಾಖೆಯಿಂದ ಅನುಮೋದನೆಗಾಗಿ ಶೀಘ್ರದಲ್ಲಿಯೇ ಪ್ರಸ್ತಾವನೆಗೆ ಸಲ್ಲಿಸಲಾಗುತ್ತದೆ.

 

ಬಟೆಟ್ ನಲ್ಲಿ ಪ್ರಸ್ತಾಪ ಸಾಧ್ಯತೆ:

ಮಾರ್ಚ್ ನಲ್ಲಿ ನಡೆಯುವ ರಾಜ್ಯ ಬಜೆಟ್ ನಲ್ಲಿ ಪ್ರಸ್ತಾಪ ಹಾಗೂ ಅದಕ್ಕೆ ಪ್ರತ್ಯೇಕ ಹಣ ಮೀಸಲಿಡುವ ಸಾಧ್ಯತೆ ಇದೆ.

 

ಹೇಗೆ ನಡೆಯಲಿದೆ ನೇಮಕಾತಿ:

ಶಿಕ್ಷಕರ ನೇಮಕಾತಿಗಾಗಿ ನೇಮಕಾತಿ ಪ್ರಾಧಿಕಾರವು ಪಾರದರ್ಶಕ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ‌ ನಡೆಯಲಿದೆ. ಯಾವುದೇ ಸಂದರ್ಶನ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೀಸಲಾತಿ ರೋಸ್ಟರ್ ಅನ್ವಯ ಆಯ್ಕೆಪಟ್ಟಿ ತಯಾರಿಸಲಾಗುತ್ತದೆ.

 

ಅಭ್ಯರ್ಥಿಗಳು ತಮ್ಮ ಅಭ್ಯಾಸ ಆರಂಭಿಸಿ:

ಸ್ನೇಹಿತರೇ ತಾವು ಈ ಬಾರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಲು ಈಗಿನಿಂದಲೇ ತಮ್ಮ ಅಧ್ಯಯನವನ್ನು ಆರಂಭಿಸಬೇಕು. 

 

ಕೊನೆಯ ಮಾತು: ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.

 

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top