ಗುಮಾಸ್ತ & ಅಟೆಂಡರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ| Urban Cooperative Bank Jobs 2025
ನಮಸ್ತೆ ಸ್ನೇಹಿತರೇ, ಸ್ಪರ್ಧಾದೀಪ ವೆಬ್ಸೈಟ್ ನಿಂದ ಇಂದು ಹೊಸ ಉದ್ಯೋಗ ಮಾಹಿತಿಯನ್ನು ನೀಡುತ್ತೇವೆ. ಕುಮಟಾ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ನಿಂದ ಪ್ರಕಟಣೆ ಹೊರಬಿದ್ದಿದೆ. ಈ ಬ್ಯಾಂಕಿನಲ್ಲಿ ಖಾಲಿ ಇರುವ ಗುಮಾಸ್ತ & ಅಟೆಂಡರ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ನಿಗದಿತ ನಮೂನೆಯ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
The Kumta Urban Cooperat Bank Ltd. ನಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಖಾಲಿ ಇರುವ ಗುಮಾಸ್ತ ಮತ್ತು ಅಟೆಂಡೆಂಟ್ ಹುದ್ದೆಗಳ ಭರ್ತಿಗೆ ಆಫ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ದಿನಾಂಕ 01-02-2025 ರ ಒಳಗಾಗಿ ಅರ್ಜಿಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೋತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.
ನೇಮಕಾತಿಯ ಪಕ್ಷಿನೋಟ: |
ನೇಮಕಾತಿ ಕಛೇರಿ: ಕುಮಟಾ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ |
ಹುದ್ದೆಗಳ ಪದನಾಮ: ಗುಮಾಸ್ತ & ಅಟೆಂಡೆಂಟ್ |
ಹುದ್ದೆಗಳ ಸಂಖ್ಯೆ: 10 ಹುದ್ದೆಗಳು |
ಕಾರ್ಯ ನಿರ್ವಹಿಸಬೇಕಾದ ವಿಳಾಸ: ಕರ್ನಾಟಕ |
ಹುದ್ದೆಗಳ ವಿವರ |
ಗುಮಾಸ್ತ | 08 ಹುದ್ದೆಗಳು |
ಅಟೆಂಡರ್ | 02 ಹುದ್ದೆಗಳು |
ಒಟ್ಟು ಹುದ್ದೆಗಳು | 10 ಹುದ್ದೆಗಳು |
ವೇತನ ಶ್ರೇಣಿ: |
ಗುಮಾಸ್ತ | 14550-26700 |
ಅಟೆಂಡರ್ | 11000-19000 |
ಮೇಲಿನ ಮೂಲವೇತನದ ಜೊತೆಗೆ ಡಿಎ. ಎಚ್ಅರ್‌ಎ ಮುಂತಾದ ಸೌಲಭ್ಯಗಳು ದೊರೆಯುತ್ತವೆ
ಶೈಕ್ಷಣಿಕ ವಿದ್ಯಾರ್ಹತೆ |
ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸಲು ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಓಪರೇಷನ್ ಮತ್ತು ಅಪ್ಲಿಕೇಶನ್ ಜ್ಞಾನ ಹೊಂದಿರಬೇಕು. ಕನ್ನಡ ಓದುವ, ಬರೆಯುವ, ಅರ್ಥ ಮಾಡಿಕೊಳ್ಳುವ ಮತ್ತು ಸರಾಗವಾಗಿ ಮಾತನಾಡಲು ಬರುವಂತಿರಬೇಕು.
ಆಟೆಂಡರ್ ಹುದ್ದೆಗೆ ಅರ್ಜಿ ಸಲ್ಲೊಲಿಸಲು ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾಗಿದ್ದು, ಕನ್ನಡ ಒಂದು ಭಾಷೆಯನ್ನಾಗಿ ಓದಿರಬೇಕು.
ವಯೋಮಿತಿ: |
ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ 18 ವರ್ಷ ತುಂಬಿರಬೇಕು ಹಾಗೂ ಈ ಕೆಳಕಂಡಂತೆ ಗರಿಷ್ಠ ವಯೋಮಿತಿ ಮೀರಿರಬಾರದು.
1) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ – 40 ವರ್ಷ
2) ಇತರೇ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – 38 ವರ್ಷ
3) ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35ವರ್ಷ
ಆಯ್ಕೆ ವಿಧಾನ:
ಗುಮಾಸ್ತ ಹುದ್ದೆಗೆ ಒಟ್ಟೂ 200 ಅಂಕಗಳಿಗೆ ಸಹಕಾರ ಸಂಘಗಳ ನಿಯಮಾವಳಿಯಲ್ಲಿ ನಿಗದಿಪಡಿಸಿದ ವಿಷಯಗಳನುಸಾರ ಲಿಖಿತ ಪರೀಕ್ಷೆ ನಡೆಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ. 85ಕ್ಕೆ ಇಳಿಸಿ ಅದರಲ್ಲಿ ಅರ್ಹತೆ ಪಡೆದವರನ್ನು 15 ರ ಅನುಪಾತದಲ್ಲಿ ಇನ್ನುಳಿದ ಶೇ 15 ಅಂಕಗಳಿಗೆ ಮೌಖಿಕ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಹಾಗೂ ಆಟೆಂಡರ್ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಅನುಸಾರವಾಗಿ 100 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಿ, ಗಳಿಸಿದ ಅಂಕಗಳ ಆಧಾರದ ಮೇಲೆ
ಅಟೆಂಡರ್ ಹುದ್ದೆಗೆ ಮೌಖಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಫಾರ್ಮ ಪಡೆಯುವ ವಿಧಾನ:
ಅರ್ಜಿ ಶುಲ್ಕದ ಬಗ್ಗೆ ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ 1 ರ ಅಭ್ಯರ್ಥಿಗಳಿಗೆ ರೂ. 500/- ಜಿ.ಎಸ್.ಟಿ ರೂ. 90/- ಸೇರಿ ರೂ. 500/- ಹಾಗೂ ಇತರೇ ಹಿಂದುಳಿದ ವರ್ಗ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ. 1000/- + ಜಿ.ಎಸ್.ಟಿ ರೂ. 180/- ಸೇರಿ ರೂ. 1180/-ನ್ನು ಬ್ಯಾಂಕಿನ ಪ್ರಧಾನ ಶಾಖೆಯ ವ್ಯವಹಾರದ ವೇಳೆಯಲ್ಲಿ ನಗದು ಪಾವತಿಸಿ ಅರ್ಜಿ ಫಾರ್ಮನ್ನು ಪಡೆಯಬಹುದು
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು: |
1. ಭರ್ತಿ ಮಾಡಿರುವ ಅರ್ಜಿ ನಮೂನೆ
2. ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು
3. ಜಾತಿ & ಆದಾಯ ಪ್ರಮಾಣ ಪತ್ರ, ಕನ್ನಡ ಮಾದ್ಯಮ ಪ್ರಮಾಣಪತ್ರ, ಗ್ರಾಮೀಣ ಪ್ರಮಾಣಪತ್ರ, ಮಾಜಿಸೈನಿಕ ಹಾಗೂ ಇತರೆ ಪ್ರಮಾಣಪತ್ರಗಳು
6. ಇತರೆ ಅಗತ್ಯವಿರುವ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ |
ಬ್ಯಾಂಕಿನಿಂದ ಅರ್ಜಿ ಫಾರ್ಮ ಪಡೆದ ನಂತರ ಅರ್ಜಿಯನ್ನು ಸ್ವ-ಪಸ್ತಾಕ್ಷರದಲ್ಲಿ ತುಂಬಿ ಅರ್ಜಿಯೊಂದಿಗೆ ದೃಢೀಕರಿಸಿದ ಎಸ್.ಎಸ್.ಎಲ್.ಸಿ. ಪಿ.ಯು.ಸಿ ಮತ್ತು ಇನ್ನಿತರ ವಿದ್ಯಾರ್ಹತೆ, ಜಾತಿ/ಪಂಗಡ/ವರ್ಗಗಳ ಪ್ರಮಾಣ ಪತ್ರ, ಅನುಭವ ಇತ್ಯಾದಿಗಳ ಪ್ರಮಾಣ ಪತ್ರಗಳೊಂದಿಗೆ (ಗೆಜೆಟೆಡ್ ಆಫೀಸರ್ ರಿಂದ ದೃಢೀಕರಿಸಿದ ಜೆರಾಕ್ಸ್ ಪ್ರತಿ) ಇತ್ತೀಚಿನ ಒಂದು ಪಾಸ್ಪೋರ್ಟ ಸೈಜಿನ ಭಾವಚಿತ್ರ ಲಗತ್ತಿಸಿ ಕವರಿನ ಮೇಲೆ ಸಂಬಂಧಿಸಿದ ಗುಮಾಸ್ತ ಹುದ್ದೆ/ಅಟೆಂಡರ್ ಹುದ್ದೆಗೆ ಅರ್ಜಿ ಅಂತ ಸ್ಪಷ್ಟವಾಗಿ ನಮೂದಿಸಿ ಸ್ವತಃ ಅಥವಾ ಭಾರತೀಯ ಅಂಚೆ ಮುಖಾಂತರ ಬ್ಯಾಂಕಿಗೆ ದಿನಾಂಕ : 01-02-2025 ರ ಸಾಯಂಕಾಲ 5-30 ಘಂಟೆಯೊಳಗೆ ತಲುಪುವಂತೆ ಕಳುಹಿಸಬೇಕು. ಇನ್ನಿತರ ವಿಧಾನದಿಂದ ಕಳುಹಿಸಿದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಈ ಅವಧಿಯ ನಂತರ ಬಂದ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ, ಬ್ಯಾಂಕಿನಿಂದ ಪಡೆದ ಅರ್ಜಿಯನ್ನೇ ಉಪಯೋಗಿಸಬೇಕು. ಹಾಗೂ ಅಪೂರ್ಣ ಮಾಹಿತಿಯುಳ್ಳ ಮತ್ತು ಸಹಿ ಇಲ್ಲದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ: |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01-02-2025
ಅರ್ಜಿ ನಮೂನೆ ಹಾಗೂ ಅಧಿಸೂಚನೆ ಡೌನ್‌ಲೋಡ್ ಮಾಡಿಕೊಳ್ಳಿ.
ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.