
ಹೊಸ ಆದೇಶ: ನಿಮ್ಮ ಜಾತಿ ಪ್ರಮಾಣಪತ್ರ ಹಳೆಯದಿದ್ದರೇ ರಿಜೆಕ್ಟ್ ಆಗುವುದು ಗ್ಯಾರಂಟಿ..! ಕೂಡಲೇ ಹೊಸ ಜಾತಿ ಪ್ರಮಾಣಪತ್ರ ಮಾಡಿಸಿ – New Caste Certificate must be need for all recruitment & entrance
ಸ್ನೇಹಿತರೇ ನಮಸ್ತೆ, ನೀವು ಪರಿಶಿಷ್ಟ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಾಗಿದ್ದರೇ ಈ ಲೇಖನವನ್ನು ಸಂಪೂರ್ಣವಾಗಿ. ಏಕೆಂದರೆ ಈ ಮುಂಚೆ ಪಡೆದಿದ್ದ ಜಾತಿ ಪ್ರಮಾಣಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪರಿಗಣಿಸುತ್ತಿಲ್ಲ ಮತ್ತು ಅಂತಹ ಅಭ್ಯರ್ಥಿಗಳ ಮೀಸಲಾತಿ ಕೋರಿಕೆಯನ್ನು ತಿರಸ್ಕರಿಸಲಾಗುತ್ತಿದೆ. ಹೌದು ಸ್ನೇಹಿತರೇ ಸದ್ಯ KREIS 2026 ಹಾಗೂ ಸಿಇಟಿ ಪರೀಕ್ಷೆಗೆ ಮಾತ್ರ ಅನ್ವಯವಾಗುತ್ತಿದ್ದು, ಅದಕ್ಕೆ ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಕಡ್ಡಾಯವಾಗಿ ಹೊಸ ಜಾತಿ ಪ್ರಮಾಣಪತ್ರವನ್ನು ಮಾಡಿಸಬೇಕು ಮತ್ತು ಹೊಸ ಆರ್.ಡಿ ಸಂಖ್ಯೆಯನ್ನು ಮಾತ್ರ ಆನ್ಲೈನ್ ಅರ್ಜಿಯಲ್ಲಿ ನಮೂದಿಸಬೇಕು ಎಂಬ ಆದೇಶವನ್ನು ಹೊರಡಿಸಿದೆ. 25-08-2025ರ ಸರ್ಕಾರಿ ಆದೇಶದನುಸಾರ ಪರಿಶಿಷ್ಟ ಜಾತಿಯನ್ನು ಪ್ರವರ್ಗ ಎ, ಬಿ ಮತ್ತು ಸಿ ಎಂದು ವಿಭಜಿಸಿ ಒಳಮೀಸಲಾತಿಯನ್ನು ಕಲ್ಪಿಸಿದ ಕಾರಣಕ್ಕಾಗಿ ಈ ಆದೇಶವನ್ನು ಮಾಡಲಾಗಿದೆ. ಮುಂದೆ ನಡೆಯಲಿರುವ ಯಾವುದೇ ನೇಮಕಾತಿಗಳಿಗೂ ಕೂಡ ಇದೇ ರೀತಿಯ ಹೊಸ ಜಾತಿ ಪ್ರಮಾಣಪತ್ರವನ್ನು ಕೇಳುವ ಸಾದ್ಯತೆ ಇದೆ. ಆದಖಾರಣ ಉದ್ಯೋಗಾಕಾಂಕ್ಷಿಗಳು ಕೂಡ ಹೊಸ ಪ್ರಮಾಣಪತ್ರವನ್ನು ಮಾಡಿಸುವುದು ಒಳಿತು.
ಶ್ರೀ ಕನಕ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಖಾಲಿ ಇರುವ ಗುಮಾಸ್ತ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು KREIS 2026 ಹಾಗೂ ಸಿಇಟಿ 2026 ಕ್ಕೆ ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಕೆಳಗಿನಂತೆ ಆದೇಶವನ್ನು ಹೊರಡಿಸಿದೆ:
ಸಿಇಟಿ-2026 ಹಾಗೂ KREIS-2026 ಕ್ಕೆ ಅರ್ಜಿ ಸಲ್ಲಿಸುತ್ತಿರುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳ ಗಮನಕ್ಕೆ ಸರ್ಕಾರವು ತನ್ನ ಆದೇಶ ಸಂಖ್ಯೆ ಸಕಇ 08 ಎಎಲ್‌ಪಿ 2024 ಬೆಂಗಳೂರು ದಿನಾಂಕ 25-08-2025 ರಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಒಳಮೀಸಲಾತಿಯನ್ನು ಕಲ್ಪಿಸಿ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು ವರ್ಗೀಕರಣ ಮಾಡಿರುವ ಕಾರಣದಿಂದ, ಸಿಇಟಿ-2026 ಹಾಗೂ KREIS-2026 ಕ್ಕೆ ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಒಳಮೀಸಲಾತಿ ವಿವರಗಳು ಮುದ್ರಿತವಾಗಿರುವ (ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ) ಜಾತಿ ಪ್ರಮಾಣ ಪತ್ರವನ್ನು ಸಂಬಂಧಿಸಿದ ತಹಶೀಲ್ದಾರ್ ರವರಿಂದ ಪಡೆದು ನಂತರ ಸದರಿ ಜಾತಿ ಪ್ರಮಾಣ ಪತ್ರದ ಆಡಿ ಸಂಖ್ಯೆಯನ್ನು ಸಿಇಟಿ-2026 ರ ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಲು ಈಗಾಗಲೇ ಸೂಚಿಸಲಾಗಿದೆ. ಆದರೆ ಕೆಲವು ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಈ ಮೊದಲೆ ಪಡೆದಿದ್ದ ಅಂದರೆ ಒಳಮೀಸಲಾತಿ ವಿವರಗಳು ಮುದ್ರಿತವಾಗಿಲ್ಲದಿರುವ ಜಾತಿ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆಯನ್ನೇ ಸಿಇಟಿ 2026 ಹಾಗೂ KREIS-2026 ರ ಅರ್ಜಿಯಲ್ಲಿ ನಮೂದಿಸುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಈ ವಿಚಾರದಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಗಮನಕ್ಕೆ: ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಆರ್‌ಡಿ ಸಂಖ್ಯೆ ಇರುವ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು ಮುದ್ರಿತವಾಗಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ಮಾತ್ರ ಆಯಾ ವರ್ಗಕ್ಕೆ ನಿಗದಿಯಾಗುವ ಸೀಟುಗಳ ಹಂಚಿಕೆಗೆ ಪರಿಗಣಿಸಲಾಗುವುದು. (ಆರ್‌ಡಿ ಸಂಖ್ಯೆಯನ್ನು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಬೇಕು)
KSRTC ಯಲ್ಲಿ ಖಾಲಿ ಇರುವ 78 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಯಾವುದೇ ಪರೀಕ್ಷೆಯಿಲ್ಲದೇ ನೇರ ಆಯ್ಕೆ

ಕೊನೆಯ ಮಾತು:
ಸ್ನೇಹಿತರೇ ಸದ್ಯ KREIS 2026 ಹಾಗೂ ಸಿಇಟಿ ಪರೀಕ್ಷೆಗೆ ಮಾತ್ರ ಅನ್ವಯವಾಗುತ್ತಿದ್ದು, ಅದಕ್ಕೆ ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಕಡ್ಡಾಯವಾಗಿ ಹೊಸ ಜಾತಿ ಪ್ರಮಾಣಪತ್ರವನ್ನು ಮಾಡಿಸಬೇಕು ಮತ್ತು ಹೊಸ ಆರ್.ಡಿ ಸಂಖ್ಯೆಯನ್ನು ಮಾತ್ರ ಆನ್ಲೈನ್ ಅರ್ಜಿಯಲ್ಲಿ ನಮೂದಿಸಬೇಕು ಎಂಬ ಆದೇಶವನ್ನು ಹೊರಡಿಸಿದೆ. ಮುಂದೆ ಅಧಿಸೂಚನೆ ಹೊರ ಬೀಳಲಿರುವ ಶಿಕ್ಷಕರು, ಪಿಡಿಓ, ಕೆಎಎಸ್, ಪಿಎಸೈ, ಗ್ರಾಮ ಆಡಳಿತ ಅಧಿಕಾರಿ ಸೇರಿದಂತೆ ಕೆಪಿಎಸ್‌ಸಿ ಮತ್ತು ಕೆಇಎ ಯ ಯaವುದೇ ನೇಮಕಾತಿಗೆ ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಹೊಸದಾದ ಜಾತಿ ಪ್ರಮಾಣ ಪತ್ರವನ್ನು (ಪ್ರವರ್ಗ ಎ. ಪ್ರವರ್ಗ ಬಿ ಮತ್ತು ಪ್ರವರ್ಗ ಸಿ ಉಲ್ಲೇಖವಿರುವ) ಮಾಡಿಸಿಟ್ಟುಕೊಳ್ಳಿ.
ಗಮನಿಸಿ: ಹೊಸದಾದ ಜಾತಿ ಪ್ರಮಾಣಪತ್ರ ಕೇವಲ ಕರ್ನಾಟಕ ಸರ್ಕಾರದ ನೇಮಕಾತಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಕೇಂದ್ರ ಸರ್ಕಾರ ಹಾಗೂ ಬ್ಯಾಂಕಿಂಗ್ ನೇಮಕಾತಿಗಳಿಗೆ ಹಳೆಯ ಜಾತಿ ಪ್ರಮಾಣಪತ್ರವೆ ನಡೆಯುತ್ತದೆ.
