ಅಂಚೆ ಕಛೇರಿಯಲ್ಲಿ 28740 ಗ್ರಾಮ ಡಾಕ್‌ ಸೇವಕ್ ಹುದ್ದೆಗಳ ಬೃಹತ್‌ ನೇಮಕಾತಿಗೆ ಅರ್ಜಿ- Indian Post Office GDS Recruitment 2026

WhatsApp Group Join Now
Telegram Group Join Now
Spread the love

ಅಂಚೆ ಕಛೇರಿಯಲ್ಲಿ 28740 ಗ್ರಾಮ ಡಾಕ್‌ ಸೇವಕ್ ಹುದ್ದೆಗಳ ಬೃಹತ್‌ ನೇಮಕಾತಿಗೆ ಅರ್ಜಿ- Indian Post Office GDS Recruitment 2026

ನಮಸ್ತೆ ಸ್ನೇಹಿತರೇ, ಸ್ಪರ್ಧಾದೀಪ ವೆಬ್ಸೈಟ್ ನಿಂದ ಇಂದು ಬೃಹತ್ ಉದ್ಯೋಗ ಮಾಹಿತಿಯನ್ನು ನೀಡುತ್ತೇವೆ.  ಭಾರತೀಯ ಅಂಚೆ ಇಲಾಖೆಯಿಂದ 2026 ರಲ್ಲಿ ಬೃಹತ್ ಹುದ್ದೆಗಳ ನೇಮಕಾತಿಗೆ ಕ್ಷಣಗಣನೆ ಆರಂಭವಾಗಿದೆ. ಅಂಚೆ ಇಲಾಖೆಯಲ್ಲಿ  ಖಾಲಿ ಇರುವ  ಬ್ರ್ಯಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್, ಗ್ರಾಮೀಣ ಡಾಕ್ ಸೇವಕ್ ಒಟ್ಟು 28740 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ  ಶೀಘ್ರದಲ್ಲಿಯೇ ಹಅರ್ಜಿಗಳನ್ನು ಕರೆಯಲಾಗುತ್ತದೆ.

Indian Postal Department ದಲ್ಲಿ ಖಾಲಿ ಇರುವ 28740 GDS, Branch post master & Assistant Branch post master ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗುತ್ತಿದ್ದು, ಅದರ ಖಾಲಿ ಹುದ್ದೆಗಳ ಸಂಖ್ಯೆ ಬಹಿರಂಗವಾಗಿದೆ. 2026ರ ಜನೆವರಿಯಲ್ಲಿ ಒಟ್ಟು ದೇಶದಾದ್ಯಂತಾ ವಿವಿಧ ರಾಜ್ಯಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಎಷ್ಟಿದೆ ಎಂಬುದನ್ನು ತಿಳಿಯಬಹುದು. ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೀತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.

ಭಾರತೀಯ ಅಂಚೆ ಇಲಾಖೆಯಲ್ಲಿ ಹೊಸ ಅಧಿಸೂಚನೆ ಪ್ರಕಟವಾಗಿದ್ದು, ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: NIRDPR Recruitment 2026

ನೇಮಕಾತಿಯ ಪಕ್ಷಿನೋಟ

ಸರ್ಕಾರಿ ಸಂಸ್ಥೆ ಭಾರತೀಯ ಅಂಚೆ ಇಲಾಖೆ
ಹುದ್ದೆಗಳ ಪದನಾಮ BPM, ABPM, GDS
ಹುದ್ದೆಗಳ ಸಂಖ್ಯೆ 28740
ಕೆಲಸದ ಸ್ಥಳ ದೇಶದಾದ್ಯಂತಾ‌
ಟೆಲಿಗ್ರಾಮ್‌ ಸೇರುವ ಲಿಂಕ್

ರಾಜ್ಯವಾರು ಹುದ್ದೆಗಳ ವಿವರ:

ವೃತ್ತದ ಹೆಸರು (Name of Circle) ವೇಳಾಪಟ್ಟಿ-1, ಜನವರಿ-26 ರಲ್ಲಿ ಅಂತಿಮ ಖಾಲಿ ಹುದ್ದೆಗಳು (Final Vacancies)
ಆಂಧ್ರ ಪ್ರದೇಶ (Andhra Pradesh) 1060
ಅಸ್ಸಾಂ (Assam) 639
ಬಿಹಾರ (Bihar) 1347
ಛತ್ತೀಸ್‌ಗಢ (Chhattisgarh) 1155
ದೆಹಲಿ (Delhi) 42
ಗುಜರಾತ್ (Gujarat) 1830
ಹರಿಯಾಣ (Haryana) 270
ಹಿಮಾಚಲ ಪ್ರದೇಶ (Himachal Pradesh) 520
ಜಮ್ಮು ಮತ್ತು ಕಾಶ್ಮೀರ (Jammu & Kashmir) 267
ಜಾರ್ಖಂಡ್ (Jharkhand) 908
ಕರ್ನಾಟಕ (Karnataka) 1023
ಕೇರಳ (Kerala) 1691
ಮಧ್ಯ ಪ್ರದೇಶ (Madhya Pradesh) 2120
ಮಹಾರಾಷ್ಟ್ರ (Maharashtra) 3553
ಈಶಾನ್ಯ (North East) 1014
ಒರಿಸ್ಸಾ (Orissa) 1191
ಪಂಜಾಬ್ (Punjab) 262
ರಾಜಸ್ಥಾನ (Rajasthan) 634
ತಮಿಳುನಾಡು (Tamilnadu) 2009
ತೆಲಂಗಾಣ (Telangana) 609
ಉತ್ತರ ಪ್ರದೇಶ (Uttar Pradesh) 3169
ಉತ್ತರಾಖಂಡ (Uttarakhand) 445
ಪಶ್ಚಿಮ ಬಂಗಾಳ (West Bengal) 2982
ಒಟ್ಟು (Total) 28740

ಹುದ್ದೆಗಳ ವಿವರ/ Post Details:

ಬ್ರಾಂಚ್ ಪೋಸ್ಟ್ ಮಾಸ್ಟರ್/ BPM
ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್/ ABPM

ವೇತನ ಶ್ರೇಣಿ/ Salary scale:

ಬ್ರಾಂಚ್ ಪೋಸ್ಟ್ ಮಾಸ್ಟರ್/ BPM:  ರೂ. 12000-29320
ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್/ ABPM: ರೂ. 10000-24470

PSTR & GPSTR ನೇಮಕಾತಿ 2026: ಆಯ್ಕೆವಿದಾನದಲ್ಲಿ ಸಮಗ್ರ ಬದಲಾವಣೆ. ಹೇಗಿರಲಿದೆ ಮುಂದೆ ನಡೆಯಲಿರುವ ಶಿಕ್ಷಕರ ನೇಮಕಾತಿ

ವಯೋಮಿತಿ/ Age limit:

ಕನಿಷ್ಟ ವಯೋಮಿತಿ: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಟ 18 ವರ್ಷ ಪೂರೈಸಿರಬೇಕು

ಗರಿಷ್ಟ ವಯೋಮಿತಿ: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಗರಿಷ್ಟ 40 ವರ್ಷದ ಮೀರಿರಬಾರದು ಹಾಗೂ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡಕ್ಕೆ ಗರಿಷ್ಟ 5 ವರ್ಷ & ಇತರೆ ಹಿಂದುಳಿದ ವರ್ಗದವರಿಗೆ 03 ವರ್ಷಗಳು ಸಡಿಲಿಕೆ ಇರುತ್ತದೆ. ಮಾಜಿ ಸೈನಿಕ & ಅಂಗವಿಕಲ ಅಭ್ಯರ್ಥಿಗಳಿಗೂ ಸರ್ಕಾರದ ನಿಯಮದ ಪ್ರಕಾರ ಸಡಿಲಿಕೆ ಇರುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ/ Educational Qualification:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಹತ್ತನೇ ತರಗತಿ/ ತತ್ಸಮಾನ ವಿದ್ಯಾರ್ಹತೆ ಪೂರೈಸಿರಬೇಕು.

ಸ್ಥಳೀಯ ಭಾಷೆ (ಕನ್ನಡ) ಯಲ್ಲಿ ಕಡ್ಡಾಯವಾಗಿ ಓದಿರಬೇಕು.

ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನ ಹೊಂದಿರಬೇಕು

ಅರ್ಜಿ ಶುಲ್ಕ/ Application Fees:

ಪುರುಷ ಸಾಮಾನ್ಯ ಅಭ್ಯರ್ಥಿಗಳು, ಓಬಿಸಿ & EWS ಅಭ್ಯರ್ಥಿಗಳು ರೂ. 100/- ಅನ್ನು ಪಾವತಿಸಬೇಕು.

ಎಲ್ಲ ಮಹಿಳೆಯರು & ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ & ನೆಟ್ ಬ್ಯಾಂಕಿಂಗ್ ಬಳಸಿಕೊಂಡು ಆನ್ಲೈನ್ ಮೂಲಕ ಪಾವತಿಸಬೇಕು.

ಆಯ್ಕೆವಿಧಾನ/ Selection Procedure:

ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯಾದ ಹತ್ತನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ & ರೋಸ್ಟರ್ ಪ್ರಕಾರ ಆಯ್ಕೆಮಾಡಲಾಗುವುದು.

  

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

ಭರ್ತಿ ಮಾಡಿರುವ ಅರ್ಜಿ ನಮೂನೆ

ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು

ಜಾತಿ & ಆದಾಯ ಪ್ರಮಾಣ ಪತ್ರ, ಅಂಗವಿಕಲ ಪ್ರಮಾಣಪತ್ರ, ಗ್ರಾಮೀಣ ಪ್ರಮಾಣಪತ್ರ, ಮಾಜಿಸೈನಿಕ, ಶುಲ್ಕ ಪಾವತಿಸಿದ ರಸೀಧಿ ಹಾಗೂ ಇತರೆ ಪ್ರಮಾಣಪತ್ರಗಳು

ಸೇವಾ ದಾಖಲಾತಿಗಳು

ಇತರೆ ಅಗತ್ಯವಿರುವ ದಾಖಲೆಗಳು

ಅರ್ಜಿ ಹಾಕುವ ವಿಧಾನ/ Application Submission Method:

  1. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಹಾಗೂ ಇಮೇಲ್ ಐ.ಡಿ ಯನ್ನು ಹೊಂದಿರಬೇಕು. ಹಾಗೂ ಇತ್ತೀಚಿನ ಭಾವಚಿತ್ರ, ಶೈಕ್ಷಣಿಕ ದಾಖಲೆಗಳು, ಇನ್ನಿತರ ಅಗತ್ಯ ದಾಖಲೆಗಳನ್ನು ಕೇಳಿರುವ ಸೈಜ್ ಗೆ ಅನುಸಾರವಾಗಿ ಸ್ಕ್ಯಾನ್ ಮಾಡಿಟ್ಟುಕೊಳ್ಳಿ.
  2. ಅಭ್ಯರ್ಥಿಗಳು https://indiapostgdsonline.gov.in/ ವೆಬ್ಸೈಟ್ ಗ ಬೇಟಿ ನೀಡಿ Recruitment Page ಗೆ ಹೋಗಿ. ಅಲ್ಲಿ ಲಭ್ಯವಿರುವ Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ಅಲ್ಲಿ ನೊಂದಣಿ ಮಾಡಿಕೊಂಡು Registration Mobile Number & Password ಅನ್ನು ಬಳಸಿಕೊಂಡು ಮೇಲೆ ನೀಡಿರುವ Portal ನಲ್ಲಿ ಲಾಗಿನ್ ಮಾಡಿಕೊಳ್ಳಿ.
  4. ಆನ್ಲೈನ್ ಅರ್ಜಿ ನಮೂನೆಯನ್ನು ಸರಿಯಾದ ಮಾಹಿತಿಯೊಂದಿಗೆ ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯವಿರುವ ಕಡೆ ಸ್ಕ್ಯಾನ್ ಮಾಡಿರುವ ಕಾಪಿಗಳನ್ನು Upload ಮಾಡಿ, ಅಂತಿಮವಾಗಿ Submit ಮಾಡಿ.
  5. Payment Gateway ಗೆ ತೆರಳಿ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್/ ಯುಪಿಐ/ ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ.
  6. ಅರ್ಜಿ ಸಲ್ಲಿಸಿದ ನಂತರ ಅದನ್ನು ಮುದ್ರಿಸಿಟ್ಟುಕೊಳ್ಳಿ. ಮುಂದೆ ನಡೆಯುವ ಮೂಲ ದಾಖಲಾತಿಗಳ ಪರಿಶೀಲನೆ ಸಂದರ್ಭದಲ್ಲಿ ಅದನ್ನು ಹಾಜರುಪಡಿಸಬೇಕು.

ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ 22000 ಗ್ರೂಪ್‌ ಡಿ ಹುದ್ದೆಗಳ ಬೃಹತ್ ಭರ್ತಿಗೆ ಅರ್ಜಿ ಆಹ್ವಾನ: RRB Group D Recruitment 2026

Important Date/ ಪ್ರಮುಖ ದಿನಾಂಕಗಳು:

ಶೀಘ್ರದಲ್ಲಿಯೇ ಅರ್ಜಿ ಸಲ್ಲಿಸುವ ದಿನಾಂಕಗಳನ್ನು ಪ್ರಕಟಿಸಲಾಗುತ್ತದೆ.

Important Links/ ಪ್ರಮುಖ ಲಿಂಕುಗಳು:

ವೆಬ್ಸೈಟ್/ Website

ಟೆಲಿಗ್ರಾಮ್‌ ಸೇರುವ ಲಿಂಕ್

ಕೊನೆಯ ಮಾತು: 

ಭಾರತೀಯ ಅಂಚೆ ಇಲಾಖೆಯಿಂದ 2026 ರಲ್ಲಿ ಬೃಹತ್ ಹುದ್ದೆಗಳ ನೇಮಕಾತಿಗೆ ಕ್ಷಣಗಣನೆ ಆರಂಭವಾಗಿದೆ. ಅಂಚೆ ಇಲಾಖೆಯಲ್ಲಿ  ಖಾಲಿ ಇರುವ  ಬ್ರ್ಯಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್, ಗ್ರಾಮೀಣ ಡಾಕ್ ಸೇವಕ್ ಒಟ್ಟು 28740 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ  ಶೀಘ್ರದಲ್ಲಿಯೇ ಅರ್ಜಿಗಳನ್ನು ಕರೆಯಲಾಗುತ್ತದೆ. ಹತ್ತನೇ ಅಥವಾ ತತ್ಸಮಾನ ವಿದ್ಯಾರ್ಹತೆ ಆದವರು ಇದಕ್ಕೆ ಅರ್ಜಿ ಸಲ್ಲಿಸಬೇಕು.  ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top