ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಖಾಲಿ ಇರುವ TGT, PGT ಶಿಕ್ಷಕರು & ಇತರೆ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: Kittur Sainik School Recruitment 2026

WhatsApp Group Join Now
Telegram Group Join Now
Spread the love

ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಖಾಲಿ ಇರುವ TGT, PGT ಶಿಕ್ಷಕರು & ಇತರೆ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: Kittur Sainik School Recruitment 2026

ನಮಸ್ತೆ ಸ್ನೇಹಿತರೇ, ಹೊಸ ಉದ್ಯೋಗ ಮಾಹಿತಿಗೆ ಸ್ವಾಗತ,  ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ  ಸೈನಿಕ  ವಸತಿ ಶಾಲೆಯಿಂದ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಇದರಲ್ಲಿ ಖಾಲಿ ಇರುವ  PGT ಶಿಕ್ಷಕರು, TGT ಶಿಕ್ಷಕರು, ಮನೋವೈಜ್ಞಾನಿಕ ಸಲಹೆಗಾರರು, ನೃತ್ಯ ಶಿಕ್ಷಕಿ ಒಳಗೊಂಡಂತೆ ಇನ್ನಿತರ ಹುದ್ದೆಗಳನ್ನು ಭರ್ತಿ ಮಾಡಲು ‌ ಅರ್ಜಿ ಕರೆಯಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

Kittur Rani Channamma girls Sainik School, Kitturu ಯಲ್ಲಿನ ಶಿಕ್ಷಕ & ಇತರೆ ಹುದ್ದೆಗಳ ಭರ್ತಿಗೆ ಆಫ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ದಿನಾಂಕ 27-01-2026 ರ ಒಳಗಾಗಿ ಅರ್ಜಿಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೋತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.

ಬಿಜಾಪುರದ ಸೈನಿಕ ಶಾಲೆಯಿಂದ ಹೊಸ ಅಧಿಸೂಚನೆ ಪ್ರಕಟವಾಗಿದ್ದು, ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.

  162 ಅಭಿವೃದ್ಧಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಕೃಷಿ & ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ನಿಂದ ಅರ್ಜಿ ಆಹ್ವಾನ: Nabard Development Officer 2026

ನೇಮಕಾತಿಯ ಪಕ್ಷಿನೋಟ:

ನೇಮಕಾತಿ ಕಛೇರಿ: ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ  ಸೈನಿಕ  ವಸತಿ ಶಾಲೆ
ಹುದ್ದೆಗಳ ಪದನಾಮ: ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ
ಹುದ್ದೆಗಳ ಸಂಖ್ಯೆ: –
ಕಾರ್ಯ ನಿರ್ವಹಿಸಬೇಕಾದ ವಿಳಾಸ: ಕಿತ್ತೂರು, ಬೆಳಗಾವಿ

ಹುದ್ದೆಗಳು & ಅರ್ಹತೆಗಳು (Posts & Qualifications):

1) ಪಿ.ಜಿ.ಟಿ. (ಇಂಗ್ಲೀಷ್): ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿ.ಎಡ್ ಅರ್ಹತೆ ಹೊಂದಿರಬೇಕು. ಸಿಬಿಎಸ್‌ಇ ಶಾಲೆಯಲ್ಲಿ 10 ರಿಂದ 12ನೇ ತರಗತಿಯವರೆಗೆ ಬೋಧನಾ ಅನುಭವ ಹೊಂದಿರಬೇಕು.

2) ಟಿ.ಜಿ.ಟಿ. ( ಗಣಿತ, ವಿಜ್ಞಾನ ಮತ್ತು ಹಿಂದಿ) : ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ

ಪದವಿ ಹಾಗೂ ಬಿ.ಎಡ್ ಅರ್ಹತೆ ಹೊಂದಿರಬೇಕು. ಸಿಬಿಎಸ್‌ಇ ಶಾಲೆಯಲ್ಲಿ 6 ರಿಂದ 12ನೇ ತರಗತಿಯವರೆಗೆ ಬೋಧನಾ ಅನುಭವ ಹೊಂದಿರಬೇಕು.

3) ದೈಹಿಕ ಶಿಕ್ಷಣ ಶಿಕ್ಷಕಿ ( ಮಹಿಳೆಯರಿಗೆ ಮಾತ್ರ) : ಯಾವುದೇ ವಿಷಯದಲ್ಲಿ ಸ್ನಾತಕ ಪದವಿ

ಜೊತೆಗೆ ಬಿ.ಪಿ.ಎಡ್/ಎಂ.ಪಿ.ಎಡ್ ಅರ್ಹತೆ ಹೊಂದಿರಬೇಕು. ಸಿಬಿಎಸ್‌ಇ ಶಾಲೆಯಲ್ಲಿ 6 ರಿಂದ 12ನೇ ತರಗತಿಯವರೆಗೆ ಬೋಧನಾ ಅನುಭವ ಹೊಂದಿರಬೇಕು.

4) ಮನೋವೈಜ್ಞಾನಿಕರು ಮತ್ತು ಸಲಹೆಗಾರರು (ಮಹಿಳೆಯರಿಗೆ ಮಾತ್ರ) : ಸಮಾಲೋಚನೆ ( ಕೌನ್ಸಿಲಿಂಗ್) ಸಂಬಂಧಿತ ಪದವಿ ಹಾಗೂ ಅನುಭವ ಹೊಂದಿರಬೇಕು.

5) ಕುದುರೆಸವಾರಿ ತರಬೇತುದಾರರು : 10ನೇ ತರಗತಿಯ ಅರ್ಹತೆ ಹೊಂದಿರಬೇಕು.

ವಿದ್ಯಾರ್ಥಿಗಳಿಗೆ ಕುದುರೆಸವಾರಿ ತರಬೇತಿ ನೀಡಿದ ಅನುಭವ ಇರಬೇಕು. ನಿವೃತ್ತ ರಕ್ಷಣಾ ಸಿಬ್ಬಂದಿಗೆ ಆದ್ಯತೆ ನೀಡಲಾಗುತ್ತದೆ.

6) ನೃತ್ಯ ಶಿಕ್ಷಕಿ : ಪ್ರದರ್ಶನ ಕಲೆಗಳಲ್ಲಿ ಪದವಿ ಅಥವಾ ಯಾವುದೇ ವಿಷಯದಲ್ಲಿ ಪದವಿ ಹೊಂದಿದ್ದು, ನೃತ್ಯ ಮಾಡುವ/ನೃತ್ಯ ಬೋಧಿಸುವ ಸಾಮರ್ಥ್ಯ ಹೊಂದಿರಬೇಕು.

KSOU ನಿಂದ ದೂರ ಶಿಕ್ಷಣದ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿಗೆ ಅರ್ಜಿ ಆಹ್ವಾನ: KSOU UG AND PG ADMISSION 2026

ಸೌಲಭ್ಯಗಳು :

ಉಚಿತ ಊಟ ಮತ್ತು ಒಂಟಿ/ಕುಟುಂಬ ವಸತಿ ವ್ಯವಸ್ಥೆ ಲಭ್ಯ.

ವೇತನ/ Salary:

ಎಲ್ಲಾ ಹುದ್ದೆಗಳಿಗೂ ವಿದ್ಯಾರ್ಹತೆ ಮತ್ತು ಅನುಭವದ ಆಧಾರದ ಮೇಲೆ ಏಕೀಕೃತ ವೇತನವನ್ನು (Consolidated Salary) ನೀಡಲಾಗುವುದು.

 ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಅಧಿಸೂಚನೆಯಲ್ಲಿ ಯಾವುದೇ ಕನಿಷ್ಟ ಅಥವಾ ಗರಿಷ್ಟ ವಯೋಮಿತಿಯನ್ನು ನಿಗದಿಪಡಿಸಿಲ್ಲ.

ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಕೌಶಲ್ಯ ಪರೀಕ್ಷೆ  ನಡೆಸಲಾಗುತ್ತದೆ

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು/ Required Documents:

ಭರ್ತಿ ಮಾಡಿರುವ ಅರ್ಜಿ ನಮೂನೆ

ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು

ಜಾತಿ & ಆದಾಯ ಪ್ರಮಾಣ ಪತ್ರ, ಕನ್ನಡ ಮಾದ್ಯಮ ಪ್ರಮಾಣಪತ್ರ, ಗ್ರಾಮೀಣ ಪ್ರಮಾಣಪತ್ರ, ಮಾಜಿಸೈನಿಕ ಹಾಗೂ ಇತರೆ ಪ್ರಮಾಣಪತ್ರಗಳು

ಆಧಾರ್ ಕಾರ್ಡ್

ಸೇವಾ ದಾಖಲಾತಿಗಳು

ಶುಲ್ಕ ಪಾವತಿಸಿದ ಡಿಮ್ಯಾಂಡ್ ಡ್ರಾಫ್ಟ್

ಇತರೆ ಅಗತ್ಯವಿರುವ ದಾಖಲೆಗಳು

ಅರ್ಜಿ ಸಲ್ಲಿಸುವುದು ಹೇಗೆ/ How to Apply?

ಅರ್ಹ ಅಭ್ಯರ್ಥಿಗಳು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಬಣ್ಣದ ಛಾಯಾಚಿತ್ರ ಸಂಬಂಧಿತ ಪ್ರಮಾಣಪತ್ರಗಳ ಪ್ರತಿಗಳೊಂದಿಗೆ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಪ್ರಾಂಶುಪಾಲರು, ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆ. ಕಿತ್ತೂರು-591115, ಜಿಲ್ಲೆ : ಬೆಳಗಾವಿ, ಕರ್ನಾಟಕ

ಇ-ಮೇಲ್ ಮೂಲಕ ಕಳುಹಿಸಿಕೊಡಬಹುದು: kittursainikschool@gmail.com

ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಂಘದಲ್ಲಿ ಖಾಲಿ ಇರುವ ಗುಮಾಸ್ತ & ಜವಾನ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ:

ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ : 27.01.2026

ಪ್ರಮುಖ ಲಿಂಕುಗಳು

ನೋಟಿಫಿಕೇಶನ್:  ಡೌನ್ಲೋಡ್‌ ಲಿಂಕ್

 

ಕೊನೆಯ ಮಾತು:

ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ  ಸೈನಿಕ  ವಸತಿ ಶಾಲೆಯಿಂದ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಇದರಲ್ಲಿ ಖಾಲಿ ಇರುವ  PGT ಶಿಕ್ಷಕರು, TGT ಶಿಕ್ಷಕರು, ಮನೋವೈಜ್ಞಾನಿಕ ಸಲಹೆಗಾರರು, ನೃತ್ಯ ಶಿಕ್ಷಕಿ ಒಳಗೊಂಡಂತೆ ಇನ್ನಿತರ ಹುದ್ದೆಗಳನ್ನು ಭರ್ತಿ ಮಾಡಲು ‌ ಅರ್ಜಿ ಕರೆಯಲಾಗಿದೆ. ಈ ಹುದ್ದೆಗಳು ತಾತ್ಕಾಲಿಕವಾಗಿರುತ್ತವೆ. ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಿ. ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top