ಕರ್ನಾಟಕದ ಸೈನಿಕ ಶಾಲೆಯಲ್ಲಿ ಖಾಲಿ ಇರುವ ವಾರ್ಡಬಾಯ್, ಶಿಕ್ಷಕರು, ನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ: Sainik School Bijapur Recruitment 2026

ನಮಸ್ತೆ ಸ್ನೇಹಿತರೇ, ಹೊಸ ಉದ್ಯೋಗ ಮಾಹಿತಿಗೆ ಸ್ವಾಗತ, ಬಿಜಾಪುರದ ಸೈನಿಕ ಸ್ಕೂಲ್ ನಿಂದ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ, ಸೈನಿಕ ಸ್ಕೂಲ್ ನಲ್ಲಿ ಖಾಲಿ ಇರುವ PGT ಶಿಕ್ಷಕರು, TGT ಶಿಕ್ಷಕರು, ವಾರ್ಡಬಾಯ್, ನರ್ಸ್ ಒಳಗೊಂಡಂತೆ ಇನ್ನಿತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
Sainik School, Bijapur ಯಲ್ಲಿನ ಶಿಕ್ಷಕ & ಇತರೆ ಹುದ್ದೆಗಳ ಭರ್ತಿಗೆ ಆಫ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ದಿನಾಂಕ 20-01-2026 ರ ಒಳಗಾಗಿ ಅರ್ಜಿಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೋತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.
ನೇಮಕಾತಿಯ ಪಕ್ಷಿನೋಟ:
| ನೇಮಕಾತಿ ಕಛೇರಿ: ಬಿಜಾಪುರದ ಸೈನಿಕ ಸ್ಕೂಲ್ |
| ಹುದ್ದೆಗಳ ಪದನಾಮ: ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ |
| ಹುದ್ದೆಗಳ ಸಂಖ್ಯೆ: 18 ಹುದ್ದೆಗಳು |
| ಕಾರ್ಯ ನಿರ್ವಹಿಸಬೇಕಾದ ವಿಳಾಸ: ಬಿಜಾಪುರ |
ಹುದ್ದೆಗಳ ವಿವರ:
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| PGT ಶಿಕ್ಷಕರು (ಕೆಮಿಸ್ಟ್ರಿ) | 01 |
| PGT ಶಿಕ್ಷಕರು (ಇಂಗ್ಲಿಷ್) | 01 |
| TGT ಶಿಕ್ಷಕರು (ಇಂಗ್ಲಿಷ್) | 02 |
| TGT ಶಿಕ್ಷಕರು (ಬಯೋಲಜಿ) | 01 |
| TGT ಶಿಕ್ಷಕರು (ಗಣಿತ) | 01 |
| TGT ಶಿಕ್ಷಕರು (ಕನ್ನಡ) | 01 |
| TGT ಶಿಕ್ಷಕರು (ಫಿಸಿಕ್ಸ್) | 01 |
| TGT ಶಿಕ್ಷಕರು (ಸಮಾಜ ವಿಜ್ಞಾನ) | 01 |
| ಮ್ಯೂಸಿಕ್ ಟೀಚರ್ | 01 |
| ಕೌನ್ಸಲರ್ | 01 |
| ಕ್ರಾಫ್ಟ್ ಟೀಚರ್ | 01 |
| ವಾರ್ಡಬಾಯ್ | 04 |
| PEM/ PTI Cum Matron | 01 |
| ನರ್ಸಿಂಗ್ ಸಿಸ್ಟರ್ | 01 |
ಹುದ್ದೆಗಳು & ಅರ್ಹತೆಗಳು (Posts & Qualifications):
- ಹುದ್ದೆಯ ಹೆಸರು: ಪಿಜಿಟಿ (ರಸಾಯನಶಾಸ್ತ್ರ) – (ಗುತ್ತಿಗೆ ಆಧಾರಿತ)
- ಹುದ್ದೆಗಳ ಸಂಖ್ಯೆ: 01 (ಸಾಮಾನ್ಯ ವರ್ಗ – UR)
- ವಯಸ್ಸು: 01 ಏಪ್ರಿಲ್ 2026 ರಂತೆ 21 ರಿಂದ 40 ವರ್ಷಗಳು.
- ಅರ್ಹತೆಗಳು:
- ಸ್ನಾತಕೋತ್ತರ ಪದವಿಯಲ್ಲಿ ರಸಾಯನಶಾಸ್ತ್ರ ವಿಷಯದೊಂದಿಗೆ ಎಂ.ಇಡಿ (M.Ed) ಅಥವಾ ಎಂ.ಎಸ್ಸಿ ಇಡಿ (MSc Ed).
- ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ಸಾಮರ್ಥ್ಯ ಹಾಗೂ ಕ್ರೀಡೆಗಳಲ್ಲಿ ಪ್ರಾವೀಣ್ಯತೆ.
- ಕಂಪ್ಯೂಟರ್ ಜ್ಞಾನ ಮತ್ತು ಉನ್ನತ ಅರ್ಹತೆ ಹಾಗೂ ಅನುಭವ ಇರುವವರಿಗೆ ಆದ್ಯತೆ.
- ವೇತನ: ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ನೀಡಲಾಗುತ್ತದೆ.
- ಹುದ್ದೆಯ ಹೆಸರು: ಪಿಜಿಟಿ (ಇಂಗ್ಲಿಷ್) – (ಗುತ್ತಿಗೆ ಆಧಾರಿತ)
- ಹುದ್ದೆಗಳ ಸಂಖ್ಯೆ: 01 (ಸಾಮಾನ್ಯ ವರ್ಗ – UR)
- ವಯಸ್ಸು: 01 ಏಪ್ರಿಲ್ 2026 ರಂತೆ 21 ರಿಂದ 40 ವರ್ಷಗಳು.
- ಅರ್ಹತೆಗಳು:
- NCERT ಪ್ರಾದೇಶಿಕ ಶಿಕ್ಷಣ ಕಾಲೇಜಿನಿಂದ ಸಂಬಂಧಿತ ವಿಷಯದಲ್ಲಿ 2 ವರ್ಷಗಳ ಎಂ.ಎ ಕೋರ್ಸ್.
- ಅಥವಾ ಮಾನ್ಯತೆ ಪಡೆದ ವಿವಿಯಿಂದ ಇಂಗ್ಲಿಷ್ನಲ್ಲಿ ಶೇ.50 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ.
- ಬಿ.ಇಡಿ (B.Ed) ಅಥವಾ ತತ್ಸಮಾನ ಪದವಿ.
- ಆಂಗ್ಲ ಮಾಧ್ಯಮ ಬೋಧನೆ ಮತ್ತು ಕ್ರೀಡಾ ಪ್ರಾವೀಣ್ಯತೆ.
- ವೇತನ: ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ನೀಡಲಾಗುತ್ತದೆ.
- ಹುದ್ದೆಯ ಹೆಸರು: ಟಿಜಿಟಿ (ಇಂಗ್ಲಿಷ್) – (ಗುತ್ತಿಗೆ ಆಧಾರಿತ)
- ಹುದ್ದೆಗಳ ಸಂಖ್ಯೆ: 02 (ಸಾಮಾನ್ಯ ವರ್ಗ – UR)
- ವಯಸ್ಸು: 01 ಏಪ್ರಿಲ್ 2026 ರಂತೆ 21 ರಿಂದ 35 ವರ್ಷಗಳು.
- ಅರ್ಹತೆಗಳು:
- ಪದವಿಯಲ್ಲಿ ಕನಿಷ್ಠ ಶೇ.50 ಅಂಕಗಳು. ಪದವಿಯ ಮೂರು ವರ್ಷಗಳಲ್ಲೂ ಇಂಗ್ಲಿಷ್ ವಿಷಯವನ್ನು ಓದಿರಬೇಕು.
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇಡಿ (B.Ed).
- ವೇತನ: ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ನೀಡಲಾಗುತ್ತದೆ.
- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ಖಾಲಿ ಇರುವ ಸುಪರ್ವೈಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: DHFWS Kalaburagi Recruitment for supervisor posts 2026
- ಹುದ್ದೆಯ ಹೆಸರು: ಟಿಜಿಟಿ (ಜೀವಶಾಸ್ತ್ರ) – (ಗುತ್ತಿಗೆ ಆಧಾರಿತ)
- ಹುದ್ದೆಗಳ ಸಂಖ್ಯೆ: 01 (ಸಾಮಾನ್ಯ ವರ್ಗ – UR)
- ವಯಸ್ಸು: 01 ಏಪ್ರಿಲ್ 2026 ರಂತೆ 21 ರಿಂದ 35 ವರ್ಷಗಳು.
- ಅರ್ಹತೆಗಳು:
- ಜೀವಶಾಸ್ತ್ರದೊಂದಿಗೆ ಪದವಿ ಮತ್ತು ಬಿ.ಇಡಿ ಅಥವಾ ಬಿಎಸ್ಸಿ ಇಡಿ.
- ಆಂಗ್ಲ ಮಾಧ್ಯಮ ಬೋಧನೆ ಮತ್ತು ಕ್ರೀಡಾ ಪ್ರಾವೀಣ್ಯತೆ.
- ಸ್ನಾತಕೋತ್ತರ ಪದವಿ (ಜೀವಶಾಸ್ತ್ರ) ಮತ್ತು ಎಂ.ಇಡಿ ಇದ್ದರೆ ಆದ್ಯತೆ.
- ವೇತನ: ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ನೀಡಲಾಗುತ್ತದೆ.
- ಹುದ್ದೆಯ ಹೆಸರು: ಟಿಜಿಟಿ (ಗಣಿತ) – (ಗುತ್ತಿಗೆ ಆಧಾರಿತ)
- ಹುದ್ದೆಗಳ ಸಂಖ್ಯೆ: 01 (ಸಾಮಾನ್ಯ ವರ್ಗ – UR)
- ವಯಸ್ಸು: 01 ಏಪ್ರಿಲ್ 2026 ರಂತೆ 21 ರಿಂದ 35 ವರ್ಷಗಳು.
- ಅರ್ಹತೆಗಳು:
- ಗಣಿತದೊಂದಿಗೆ ಪದವಿ ಮತ್ತು ಬಿ.ಇಡಿ ಅಥವಾ ಬಿಎಸ್ಸಿ ಇಡಿ.
- ಆಂಗ್ಲ ಮಾಧ್ಯಮ ಬೋಧನೆ ಮತ್ತು ಕ್ರೀಡಾ ಪ್ರಾವೀಣ್ಯತೆ.
- ಸ್ನಾತಕೋತ್ತರ ಪದವಿ (ಗಣಿತ) ಮತ್ತು ಎಂ.ಇಡಿ ಇದ್ದರೆ ಆದ್ಯತೆ.
- ವೇತನ: ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ನೀಡಲಾಗುತ್ತದೆ.
- ಹುದ್ದೆಯ ಹೆಸರು: ಟಿಜಿಟಿ (ಕನ್ನಡ) – (ಗುತ್ತಿಗೆ ಆಧಾರಿತ)
- ಹುದ್ದೆಗಳ ಸಂಖ್ಯೆ: 01 (ಸಾಮಾನ್ಯ ವರ್ಗ – UR)
- ವಯಸ್ಸು: 01 ಏಪ್ರಿಲ್ 2026 ರಂತೆ 21 ರಿಂದ 35 ವರ್ಷಗಳ ನಡುವೆ ಇರಬೇಕು.
- ಅರ್ಹತೆಗಳು:
- ಪದವಿಯಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಮೂರು ವರ್ಷಗಳ ಕಾಲ ಓದಿರಬೇಕು ಮತ್ತು ಬಿ.ಇಡಿ (B.Ed) ಪದವಿ ಹೊಂದಿರಬೇಕು.
- CBSE ಮಾನ್ಯತೆ ಪಡೆದ ಶಾಲೆಗಳಲ್ಲಿ (ಆದ್ಯತೆ ವಸತಿ ಶಾಲೆಗಳಿಗೆ) ಎರಡು ವರ್ಷಗಳ ಬೋಧನಾ ಅನುಭವವಿರಬೇಕು.
- ಕಂಪ್ಯೂಟರ್ ಅಪ್ಲಿಕೇಶನ್ಗಳ ಜ್ಞಾನದೊಂದಿಗೆ ಉನ್ನತ ಅರ್ಹತೆ ಹೊಂದಿರಬೇಕು. ಅನುಭವವಿರುವವರಿಗೆ ಆದ್ಯತೆ.
- ವೇತನ: ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಏಕೀಕೃತ ವೇತನ ನೀಡಲಾಗುತ್ತದೆ.
- ಹುದ್ದೆಯ ಹೆಸರು: ಟಿಜಿಟಿ (ಭೌತಶಾಸ್ತ್ರ) – (ಗುತ್ತಿಗೆ ಆಧಾರಿತ)
- ಹುದ್ದೆಗಳ ಸಂಖ್ಯೆ: 01 (ಸಾಮಾನ್ಯ ವರ್ಗ – UR)
- ವಯಸ್ಸು: 01 ಏಪ್ರಿಲ್ 2026 ರಂತೆ 21 ರಿಂದ 35 ವರ್ಷಗಳ ನಡುವೆ ಇರಬೇಕು.
- ಅರ್ಹತೆಗಳು:
- ಭೌತಶಾಸ್ತ್ರದೊಂದಿಗೆ ಪದವಿ ಮತ್ತು ಬಿ.ಇಡಿ (B.Ed) ಮಾಡಿರಬೇಕು.
- ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ಸಾಮರ್ಥ್ಯ, ಕ್ರೀಡೆಗಳಲ್ಲಿ ಪ್ರಾವೀಣ್ಯತೆ ಮತ್ತು ಇಂಗ್ಲಿಷ್ನಲ್ಲಿ ಉತ್ತಮ ಅಭಿವ್ಯಕ್ತಿ ಕೌಶಲವಿರಬೇಕು.
- ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (Post Graduate) ಮತ್ತು ಬಿ.ಇಡಿ/ಎಂ.ಇಡಿ ಹೊಂದಿರುವವರಿಗೆ ಆದ್ಯತೆ.
- ವೇತನ: ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಏಕೀಕೃತ ವೇತನ ನೀಡಲಾಗುತ್ತದೆ.
- ಹುದ್ದೆಯ ಹೆಸರು: ಟಿಜಿಟಿ (ಸಮಾಜ ವಿಜ್ಞಾನ) – (ಗುತ್ತಿಗೆ ಆಧಾರಿತ)
- ಹುದ್ದೆಗಳ ಸಂಖ್ಯೆ: 01 (ಸಾಮಾನ್ಯ ವರ್ಗ – UR)
- ವಯಸ್ಸು: 01 ಏಪ್ರಿಲ್ 2026 ರಂತೆ 21 ರಿಂದ 35 ವರ್ಷಗಳ ನಡುವೆ ಇರಬೇಕು.
- ಅರ್ಹತೆಗಳು:
- ಸಮಾಜ ವಿಜ್ಞಾನದೊಂದಿಗೆ ಪದವಿ ಮತ್ತು ಬಿ.ಇಡಿ (B.Ed) ಮಾಡಿರಬೇಕು.
- ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ಸಾಮರ್ಥ್ಯ, ಕ್ರೀಡೆಗಳಲ್ಲಿ ಪ್ರಾವೀಣ್ಯತೆ ಮತ್ತು ಇಂಗ್ಲಿಷ್ನಲ್ಲಿ ಉತ್ತಮ ಅಭಿವ್ಯಕ್ತಿ ಕೌಶಲವಿರಬೇಕು.
- ರಾಜ್ಯಶಾಸ್ತ್ರ ಅಥವಾ ಭೂಗೋಳಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿ.ಇಡಿ/ಎಂ.ಇಡಿ ಹೊಂದಿರುವವರಿಗೆ ಆದ್ಯತೆ.
- ವೇತನ: ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಏಕೀಕೃತ ವೇತನ ನೀಡಲಾಗುತ್ತದೆ.
ಗಮನಿಸಿ (ಟಿಜಿಟಿ ಹುದ್ದೆಗಳಿಗೆ): ಅಭ್ಯರ್ಥಿಗಳು CBSE ನಡೆಸುವ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (CTET) ಅಥವಾ ರಾಜ್ಯ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (STET) ಉತ್ತೀರ್ಣರಾಗಿರಬೇಕು.
- ಹುದ್ದೆಯ ಹೆಸರು: ಸಂಗೀತ ಶಿಕ್ಷಕರು (Music Teacher) – (ಗುತ್ತಿಗೆ ಆಧಾರಿತ)
- ಹುದ್ದೆಗಳ ಸಂಖ್ಯೆ: 01 (ಸಾಮಾನ್ಯ ವರ್ಗ – UR)
- ವಯಸ್ಸು: 01 ಏಪ್ರಿಲ್ 2026 ರಂತೆ 21 ರಿಂದ 35 ವರ್ಷಗಳ ನಡುವೆ ಇರಬೇಕು.
- ಅರ್ಹತೆಗಳು:
- ಸಂಗೀತದಲ್ಲಿ ಶೇ.50 ಅಂಕಗಳೊಂದಿಗೆ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಹಿಂದಿ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುವ ಸಾಮರ್ಥ್ಯವಿರಬೇಕು.
- ಅಪೇಕ್ಷಣೀಯ: 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಹಿಂದಿ ವಿಷಯಗಳನ್ನು ಬೋಧಿಸಲು ಸಮರ್ಥರಿರಬೇಕು.
- CBSE ಮಾನ್ಯತೆ ಪಡೆದ ವಸತಿ ಶಾಲೆಗಳಲ್ಲಿ ಪ್ರೌಢಶಾಲಾ ಮಟ್ಟದ ಬೋಧನಾ ಅನುಭವವಿರುವವರಿಗೆ ಆದ್ಯತೆ.
- ವೇತನ: ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಏಕೀಕೃತ ವೇತನ ನೀಡಲಾಗುತ್ತದೆ.
- ಹುದ್ದೆಯ ಹೆಸರು: ಆಪ್ತ ಸಮಾಲೋಚಕರು (Counselor) – (ಗುತ್ತಿಗೆ ಆಧಾರಿತ)
- ಹುದ್ದೆಗಳ ಸಂಖ್ಯೆ: 01 (ಸಾಮಾನ್ಯ ವರ್ಗ – UR)
- ವಯಸ್ಸು: 01 ಏಪ್ರಿಲ್ 2026 ರಂತೆ 21 ರಿಂದ 35 ವರ್ಷಗಳ ನಡುವೆ ಇರಬೇಕು.
- ಅರ್ಹತೆಗಳು:
- ಮನೋವಿಜ್ಞಾನದಲ್ಲಿ ಪದವಿ/ಸ್ನಾತಕೋತ್ತರ ಪದವಿ ಅಥವಾ ಶಿಶು ಅಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿ ಅಥವಾ ವೃತ್ತಿ ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನೆಯಲ್ಲಿ ಡಿಪ್ಲೊಮಾ ಹೊಂದಿರಬೇಕು.
- ಅನುಭವ: ಪ್ರತಿಷ್ಠಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ/ವೃತ್ತಿ ಸಮಾಲೋಚನೆ ನೀಡಿದ ಅನುಭವವಿರಬೇಕು.
- ರಿಹ್ಯಾಬಿಲಿಟೇಶನ್ ಕೌನ್ಸಿಲರ್ ಆಫ್ ಇಂಡಿಯಾದಲ್ಲಿ ವೃತ್ತಿಪರ ಕೌನ್ಸಿಲರ್ ಆಗಿ ನೋಂದಾಯಿಸಿಕೊಂಡಿರಬೇಕು.
- ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ, ವಸತಿ ಶಾಲೆಯ ಜೀವನಶೈಲಿಗೆ ಹೊಂದಿಕೊಳ್ಳುವ ಮನೋಭಾವ ಮತ್ತು ದೈಹಿಕವಾಗಿ ಸದೃಢರಾಗಿರಬೇಕು.
- ವೇತನ: ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಏಕೀಕೃತ ವೇತನ ನೀಡಲಾಗುತ್ತದೆ.
- ಕ್ರಾಫ್ಟ್ ಇನ್ಸ್ಟ್ರಕ್ಟರ್ (Craft Instructor):
- ಈ ಹುದ್ದೆಗೆ ಸಾಮಾನ್ಯ ವರ್ಗದಲ್ಲಿ (UR) 01 ಸ್ಥಾನ ಖಾಲಿ ಇದೆ.
- ಅಭ್ಯರ್ಥಿಯ ವಯಸ್ಸು 01 ಏಪ್ರಿಲ್ 2026 ರ ಹೊತ್ತಿಗೆ 21 ರಿಂದ 35 ವರ್ಷಗಳ ನಡುವಿರಬೇಕು. ಶೈಕ್ಷಣಿಕ ಅರ್ಹತೆಗಳು: ದ್ವಿತೀಯ ಪಿಯುಸಿ (12ನೇ ತರಗತಿ) ನಂತರ ಲಲಿತಕಲೆಗಳಲ್ಲಿ (ಡ್ರಾಯಿಂಗ್/ಪೇಂಟಿಂಗ್/ಶಿಲ್ಪಕಲೆ/ಗ್ರಾಫಿಕ್ ಆರ್ಟ್ಸ್) 5 ವರ್ಷಗಳ ಡಿಪ್ಲೊಮಾವನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದಿರಬೇಕು ಅಥವಾ ಲಲಿತಕಲೆಗಳಲ್ಲಿ ಪದವಿಯನ್ನು ಹೊಂದಿರಬೇಕು. ಬಯಸುವ ಅರ್ಹತೆಗಳು: ಬಿ.ಇಡ್ (B.Ed) ಪದವಿ, ವಸತಿ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಕೆಲಸ ಮಾಡಿದ ಅನುಭವ, ಕ್ರೀಡೆಗಳು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ನೈಪುಣ್ಯತೆ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ವಾರ್ಡ್ ಬಾಯ್ಸ್ (Ward Boys):
- ಈ ಹುದ್ದೆಗೆ ಸಾಮಾನ್ಯ ವರ್ಗದಲ್ಲಿ (UR) 04 ಸ್ಥಾನಗಳು ಖಾಲಿ ಇವೆ.
- ಅಭ್ಯರ್ಥಿಯ ವಯಸ್ಸು 01 ಏಪ್ರಿಲ್ 2026 ರ ಹೊತ್ತಿಗೆ 18 ರಿಂದ 50 ವರ್ಷಗಳ ನಡುವಿರಬೇಕು. ಕನಿಷ್ಠ ಅರ್ಹತೆ: ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು. ಬಯಸುವ ಅರ್ಹತೆಗಳು: ಇಂಗ್ಲಿಷ್ ಸಂವಹನ, ಉನ್ನತ ಶೈಕ್ಷಣಿಕ ಅರ್ಹತೆ, ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ನಿರ್ವಹಿಸಿದ ಅನುಭವ, ಕಂಪ್ಯೂಟರ್ ಮತ್ತು ಟೈಪಿಂಗ್ ಜ್ಞಾನ, ಹೌಸ್ ಕೀಪಿಂಗ್ ಕರ್ತವ್ಯಗಳ ಅನುಭವ ಮತ್ತು ವಸತಿ ಶಾಲೆಗಳಲ್ಲಿ ಹಾಸ್ಟೆಲ್ ವಾರ್ಡನ್ ಅಥವಾ ವಾರ್ಡ್ ಬಾಯ್ ಆಗಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಅಭ್ಯರ್ಥಿಯು ದೈಹಿಕವಾಗಿ ಸದೃಢರಾಗಿರಬೇಕು. ಮಾಜಿ ಸೈನಿಕರಿಗೆ ಆದ್ಯತೆ ನೀಡಲಾಗುವುದು.
- ಪಿಇಎಂ/ಪಿಟಿಐ-ಕಮ್-ಮ್ಯಾಟ್ರಾನ್ (PEM/PTI-Cum-Matron – ಕೇವಲ ಮಹಿಳೆಯರಿಗೆ):
- ಈ ಹುದ್ದೆಗೆ ಸಾಮಾನ್ಯ ವರ್ಗದಲ್ಲಿ (UR) 01 ಸ್ಥಾನ ಖಾಲಿ ಇದೆ.
- ಅಭ್ಯರ್ಥಿಯ ವಯಸ್ಸು 01 ಏಪ್ರಿಲ್ 2026 ರ ಹೊತ್ತಿಗೆ 18 ರಿಂದ 50 ವರ್ಷಗಳ ನಡುವಿರಬೇಕು. ಅರ್ಹತೆ: ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಕ್ರೀಡೆಗಳಲ್ಲಿ ನೈಪುಣ್ಯತೆ ಹೊಂದಿರಬೇಕು. ಬಯಸುವ ಅರ್ಹತೆಗಳು: ಪ್ರತಿಷ್ಠಿತ ಪಬ್ಲಿಕ್ ಶಾಲೆಯಲ್ಲಿ ಕನಿಷ್ಠ 5 ವರ್ಷಗಳ ಅನುಭವ, ದೈಹಿಕ ಶಿಕ್ಷಣದಲ್ಲಿ ಪದವಿ (B.P.Ed) ಶೇ. 50 ಅಂಕಗಳೊಂದಿಗೆ ಅಥವಾ ತತ್ಸಮಾನ, ಎನ್ಸಿಸಿ ‘ಸಿ’ ಪ್ರಮಾಣಪತ್ರ, ಇಂಗ್ಲಿಷ್ ಸಂವಹನ ಮತ್ತು ಕಂಪ್ಯೂಟರ್, ಟೈಪಿಂಗ್ ಹಾಗೂ ಹೌಸ್ ಕೀಪಿಂಗ್ ಜ್ಞಾನ ಹೊಂದಿರಬೇಕು.
- ನರ್ಸಿಂಗ್ ಸಿಸ್ಟರ್ (Nursing Sister – ಕೇವಲ ಮಹಿಳೆಯರಿಗೆ):
- ಈ ಹುದ್ದೆಗೆ ಸಾಮಾನ್ಯ ವರ್ಗದಲ್ಲಿ (UR) 01 ಸ್ಥಾನ ಖಾಲಿ ಇದೆ.
- ಅಭ್ಯರ್ಥಿಯ ವಯಸ್ಸು 01 ಏಪ್ರಿಲ್ 2026 ರ ಹೊತ್ತಿಗೆ 18 ರಿಂದ 50 ವರ್ಷಗಳ ನಡುವಿರಬೇಕು.
- ಅಗತ್ಯ ಅರ್ಹತೆಗಳು: ಬಿ.ಎಸ್ಸಿ ನರ್ಸಿಂಗ್ (B.Sc Nursing) ಅಥವಾ ನರ್ಸಿಂಗ್ ಡಿಪ್ಲೊಮಾವನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದಿರಬೇಕು. ಭಾರತೀಯ ಅಥವಾ ರಾಜ್ಯ ನರ್ಸಿಂಗ್ ಕೌನ್ಸಿಲ್ನಲ್ಲಿ ನೋಂದಣಿ ಮಾಡಿರಬೇಕು. ಆಸ್ಪತ್ರೆ ಅಥವಾ ಕ್ಲಿನಿಕ್ನಲ್ಲಿ ಕನಿಷ್ಠ 02 ವರ್ಷಗಳ ಕೆಲಸದ ಅನುಭವ ಕಡ್ಡಾಯವಾಗಿದೆ.
ವೇತನ/ Salary:
ಎಲ್ಲಾ ಹುದ್ದೆಗಳಿಗೂ ವಿದ್ಯಾರ್ಹತೆ ಮತ್ತು ಅನುಭವದ ಆಧಾರದ ಮೇಲೆ ಏಕೀಕೃತ ವೇತನವನ್ನು (Consolidated Salary) ನೀಡಲಾಗುವುದು.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ, ಇತರೆ ಹಿಂದೂಳಿದ ವರ್ಗ (OBC) : 03 ವರ್ಷ ಮತ್ತು ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ/ Application Fees:
ರೂ. 500/- ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ Principal Sainik School Bijapur ಹೆಸರಿನಲ್ಲಿ ಕಟ್ಟಬೇಕು.
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಕೌಶಲ್ಯ ಪರೀಕ್ಷೆ ನಡೆಸಲಾಗುತ್ತದೆ
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು/ Required Documents:
ಭರ್ತಿ ಮಾಡಿರುವ ಅರ್ಜಿ ನಮೂನೆ
ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು
ಜಾತಿ & ಆದಾಯ ಪ್ರಮಾಣ ಪತ್ರ, ಕನ್ನಡ ಮಾದ್ಯಮ ಪ್ರಮಾಣಪತ್ರ, ಗ್ರಾಮೀಣ ಪ್ರಮಾಣಪತ್ರ, ಮಾಜಿಸೈನಿಕ ಹಾಗೂ ಇತರೆ ಪ್ರಮಾಣಪತ್ರಗಳು
ಆಧಾರ್ ಕಾರ್ಡ್
ಸೇವಾ ದಾಖಲಾತಿಗಳು
ಶುಲ್ಕ ಪಾವತಿಸಿದ ಡಿಮ್ಯಾಂಡ್ ಡ್ರಾಫ್ಟ್
ಇತರೆ ಅಗತ್ಯವಿರುವ ದಾಖಲೆಗಳು
ಅರ್ಜಿ ಸಲ್ಲಿಸುವುದು ಹೇಗೆ/ How to Apply?
ಈ ಲೇಖನದ ಕೊನೆಯ ಭಾಗದಲ್ಲಿ ನೀಡಿರುವ ಲಿಂಕ್ ಮೂಲಕ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಮುದ್ರಿಸಿಕೊಳ್ಳಿ.
ಅರ್ಜಿ ನಮೂನೆಯ ಎಲ್ಲ ಭಾಗಗಳನ್ನು ಮೂಲ ದಾಖಲೆಗಳಲ್ಲಿ ಇರುವಂತೆ ಸರಿಯಾಗಿ ಭರ್ತಿ ಮಾಡಿ.
ಅರ್ಜಿ ನಮೂನೆಯ ಅಗತ್ಯ ಸ್ಥಳದಲ್ಲಿ ಪಾಸ್ ಪೊರ್ಟ್ ಸೈಜಿನ ತಮ್ಮ ಇತ್ತೀಚಿನ ಭಾವಚಿತ್ರವನ್ನು ಅಂಟಿಸಿ.
ಅರ್ಜಿ ನಮೂನೆ ಜೊತೆಗೆ ಅಗತ್ಯವಿರುವ ಎಲ್ಲ ದಾಖಲೆಗಳು & ಡಿಮ್ಯಾಂಡ್ ಡ್ರಾಫ್ಟ್ ಅನ್ನು ಲಗತ್ತಿಸಿ ಲಕೋಟೆಯ ಒಳಗೆ ಇಟ್ಟು, ಲಕೋಟೆಯ ಮೇಲೆ (“Application for the Post of ____________”) ಎಂದು ಬರೆದು ಕೆಳಗೆ ನೀಡಲಾದ ವಿಳಾಸಕ್ಕೆ ದಿನಾಂಕ 20-01-2026 ರ ಒಳಗೆ ಅರ್ಜಿಯನ್ನು ಕಳುಹಿಸಿಕೊಡಿ.
ತಮ್ಮ ಮುಂದಿನ ಅಗತ್ಯ ಕ್ರಮಗಳಿಗಾಗಿ ಒಂದು ಪ್ರತಿಯನ್ನು ತಮ್ಮ ಬಳಿ ಜೋಪಾನವಾಗಿ ಇಟ್ಟುಕೊಳ್ಳಿ. ಮತ್ತು ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ಪ್ರಸ್ತುತ ಪಡಿಸಬೇಕು.
ಅರ್ಜಿ ಕಳುಹಿಸಿಕೊಡುವ ವಿಳಾಸ:
Principal, Sainik School, Bijapur, 586108 (Karnataka)
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-01-2026
ಪ್ರಮುಖ ಲಿಂಕುಗಳು
| ನೋಟಿಫಿಕೇಶನ್ & ಅರ್ಜಿ ನಮೂನೆ: ಡೌನ್ಲೋಡ್ ಲಿಂಕ್ |
ಅರ್ಜಿ ನಮೂನೆ ಹಾಗೂ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಕೊನೆಯ ಮಾತು:
ಬಿಜಾಪುರದ ಸೈನಿಕ ಸ್ಕೂಲ್ ನಿಂದ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ, ಸೈನಿಕ ಸ್ಕೂಲ್ ನಲ್ಲಿ ಖಾಲಿ ಇರುವ PGT ಶಿಕ್ಷಕರು, TGT ಶಿಕ್ಷಕರು, ವಾರ್ಡಬಾಯ್, ನರ್ಸ್ ಒಳಗೊಂಡಂತೆ ಇನ್ನಿತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ. ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.
