ಕರ್ನಾಟಪ ಪರೀಕ್ಷಾ ಪ್ರಾಧಿಕಾರದಿಂದ ನಡೆಯಬೇಕಿದ್ದ ಪರೀಕ್ಷೆಗಳು ಏಕಾಏಕಿ ಮುಂದಕ್ಕೆ!, ವಿವಿಧ ಪರೀಕ್ಷೆಗಳನ್ನು ಮುಂದೂಡಿ ಆದೇಶ ಹೊರಡಿಸಿದ ಕೆಇಎ- KEA Exam Postponed 2025
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದ ವಿವಿಧ/ ಇಲಾಖೆ/ ನಿಗಮ ಮಂಡಳಿಗಳ ಹುದ್ದೆಗಳಿಗೆ ನಿಗದಿಪಡಿಸಲಾಗಿದ್ದ ವೇಳಾಪಟ್ಟಿಯನ್ನು ಮಾರ್ಪಡಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸಿದ ಹುದ್ದೆಗಳ ಪರೀಕ್ಷೆ ದಿನಾಂಕವನ್ನು ಇಲ್ಲಿ ಪಡೆಯಿರಿ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಿನಾಂಕ 19.11.2025 ರಂದು ಪ್ರಕಟಿಸಿದ ವೇಳಾಪಟ್ಟಿಯಲ್ಲಿ, ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗಳಿಗೆ ದಿನಾಂಕ 10.01.2026 ರಂದು ಮತ್ತು ಕಿರಿಯ ಅಧಿಕಾರಿ (ಉತ್ಪಾದನೆ & ನಿರ್ವಹಣೆ) ಮತ್ತು ಕಿರಿಯ ಅಧಿಕಾರಿ (ಸಾಮಾಗ್ರಿ & ಉಗ್ರಾಣ) ಹುದ್ದೆಗಳಿಗೆ ದಿನಾಂಕ 12.01.2026 ರಂದು ಪರೀಕ್ಷೆ ನಡೆಸಲಾಗುವುದೆಂದು ತಿಳಿಸಲಾಗಿತ್ತು. ಆದರೆ ತಾಂತ್ರಿಕ ಕಾರಣದಿಂದ ಈ ಕೆಳಕಂಡಂತೆ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಉಳಿದಂತೆ ದಿನಾಂಕ 19.11.2025 ರ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
| ದಿನಾಂಕ | ಇಲಾಖೆ/ ಸಂಸ್ಥೆ/ ನಿಗಮ/ ಮಂಡಳಿ | ಹುದ್ದೆಯ ಪದನಾಮ | ಪರೀಕ್ಷೆ | ಸಮಯ | ಗರಿಷ್ಟ ಅಂಕಗಳು |
| 18-01-2025 | ಕೆಎಸ್ಡಿಎಲ್ | ಕಿರಿಯ ಅಧಿಕಾರಿ
(ಉತ್ಪಾದನೆ & ನಿರ್ವಹಣೆ) |
ನಿರ್ದಿಷ್ಟ ಪತ್ರಿಕೆ 2 | ಬೆ. 10.30 ಇಂದ 12.30 | 100 |
| ಕಿರಿಯ ಅಧಿಕಾರಿ
(ಸಾಮಾಗ್ರಿ & ಉಗ್ರಾಣ) |
ನಿರ್ದಿಷ್ಟ ಪತ್ರಿಕೆ 2 | ||||
| ಕೃಷಿ ಮಾರಾಟ ಇಲಾಖೆ | ಮಾರುಕಟ್ಟೆ ಮೇಲ್ವಿಚಾರಕ | ನಿರ್ದಿಷ್ಟ ಪತ್ರಿಕೆ 2 | ಮದ್ಯಾಹ್ನ 2.30 ಇಂದ 4.30 | 100 |
ಕೆಇಎ ಯಿಂದ ನೀಡಲಾದ ಸೂಚನೆಗಳೇನು?
ಪರೀಕ್ಷಾ ಕೇಂದ್ರದಲ್ಲಿ Frisking ಮತ್ತು ಮುಖಚಹರೆ ಪರಿಶೀಲಿಸಿ ಪ್ರವೇಶ ನೀಡುವುದರಿಂದ ಎರಡು ಘಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದೊಳಗೆ ಹಾಜರಿರತಕ್ಕದ್ದು.
ಋಣಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕಗಳನ್ನು ಕಡಿತಗೊಳಿಸಲಾಗುವುದು.
ಉತ್ತರಿಸದೇ ಇರುವ ಪ್ರಶ್ನೆಗಳಿಗೆ ಐದನೇ ಆಯ್ಕೆ/ವೃತ್ತವನ್ನು ಶೇಡ್ ಮಾಡಲು ಕೊನೆಯ ಬೆಲ್ ಆದ ನಂತರ ಹೆಚ್ಚುವರಿಯಾಗಿ ಐದು ನಿಮಿಷಗಳನ್ನು ನೀಡಲಾಗುವುದು. ಯಾವುದೇ ಆಯ್ಕೆಯನ್ನು /ವೃತ್ತವನ್ನು ಶೇಡ್ ಮಾಡಿಲ್ಲದಿದ್ದರೆ, ಪ್ರಶ್ನೆಗೆ 1/4 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
ಕೇಂದ್ರ ಸಚಿವಾಲಯದಲ್ಲಿ ಖಾಲಿ ಇರುವ 316 ಗ್ರೂಪ್ ಸಿ ಸ್ಟೆನೋಗ್ರಾಫರ್ ಹುದ್ದೆಗ ನೇಮಕಾತಿಗೆ ಅರ್ಜಿ ಆಹ್ವಾನ
ಅಭ್ಯರ್ಥಿಗಳು ಕರ್ನಾಟಕ ಪರೀಕ್ಷ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗುವ ಪ್ರವೇಶಪತ್ರವನ್ನು ಡೌನ್ಲೋಡ್ ಮಾಡಿಕೊಂಡು ನಿಗದಿಪಡಿಸಿದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಹಾಜರಾಗಿ.
