ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 14967 ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ & ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನ: 14967 Vacancies recruitment in kvs & nvs

WhatsApp Group Join Now
Telegram Group Join Now
Spread the love

ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 14967 ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ & ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನ: 14967 Vacancies recruitment in kvs & nvs

ನಮಸ್ತೆ ಸ್ನೇಹಿತರೇ, ಕೇಂದ್ರಿಯ ವಿದ್ಯಾಲಯ ಸಂಘಟನೆ (KVS)& ನವೋದಯ ವಿದ್ಯಾಲಯ ಸಮಿತಿ (NVS) ನಿಂದ ಬೃಹತ್ ನೇಮಕಾತಿ  ಅಧಿಸೂಚನೆ ಪ್ರಕಟವಾಗಿದೆ. ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ಈ ಶಾಲೆಗಳಲ್ಲಿ ಖಾಲಿ ಇರುವ ಟಿಜಿಟಿ, ಪಿಜಿಟಿ, ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರಿನ್ಸಿಪಾಲ್‌, ಅಕೌಂಟೆಂಟ್‌, ಗುಮಾಸ್ತ ಸೇರಿದಂತೆ ವಿವಿಧ  ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಪಿಯುಸಿ, ಪದವಿ, ಡಿಎಡ್‌, ಬಿಎಡ್‌, ಸ್ನಾತಕೋತ್ತರ ಪದವಿ, ಬಿಸಿಎ ವಿದ್ಯಾರ್ಹತೆ ಮುಗಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

NVS & KVS  ನ ವತಿಯಿಂದ ಖಾಲಿ ಇರುವ ಒಟ್ಟು  14967 ಬೋಧಕ & ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ದಿನಾಂಕವನ್ನು 23-10-2025ರವರೆಗೆ ನೀಡಲಾಗಿದೆ. ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೀತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.

ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ. ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.

JOB NEWS: ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದಲ್ಲಿ (KMF) ಖಾಲಿ ಇರುವ 194 ಹುದ್ದೆಗಳಿಗೆ ಅರ್ಜಿ ಆಹ್ವಾನ: KMF SHIMUL 194 POSTS  RECRUITMENT 2025

ನೇಮಕಾತಿಯ ಪಕ್ಷಿನೋಟ

ನೇಮಕಾತಿ ಸಂಸ್ಥೆ KVS & NVS ಶಾಲೆಗಳು
ಹುದ್ದೆಗಳ ಪದನಾಮ ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ
ಹುದ್ದೆಗಳ ಸಂಖ್ಯೆ 14967
ಕೆಲಸದ ಸ್ಥಳ ದೇಶದಾದ್ಯಂತಾ

ಹುದ್ದೆಗಳ ವಿವರ:

ಕೇಂದ್ರೀಯ ವಿದ್ಯಾಲಯ ಸಂಘಟನೆಯ ಖಾಲಿ ಹುದ್ದೆಗಳು:

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಅಸಿಸ್ಟೆಂಟ್‌ ಕಮಿಶನರ್‌ 08
ಪ್ರಿನ್ಸಿಪಾಲ್‌ 134
ವೈಸ್‌ ಪ್ರಿನ್ಸಿಪಾಲ್‌ 58
ಪೋಸ್ಟ್‌ ಗ್ರ್ಯಾಜುಯೇಟ್‌ ಟೀಚರ್‌ 1465
ಟ್ರೈನಡ್‌ ಗ್ರ್ಯಾಜುಯೇಟ್‌ ಟೀಚರ್‌ 2794
ಲೈಬ್ರೆರಿಯನ್‌ 147
ಪ್ರೈಮರಿ ಟೀಚರ್‌ 3365
ಬೋಧಕೇತರ ಹುದ್ದೆಗಳು 1155
ಒಟ್ಟು ಹುದ್ದೆಗಳು 9126

ನವೋದಯ ವಿದ್ಯಾಲಯ ಸಮಿತಿಯ ಖಾಲಿ ಹುದ್ದೆಗಳು:

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಅಸಿಸ್ಟೆಂಟ್‌ ಕಮಿಶನರ್‌ 09
ಪ್ರಿನ್ಸಿಪಾಲ್‌ 93
ಪೋಸ್ಟ್‌ ಗ್ರ್ಯಾಜುಯೇಟ್‌ ಟೀಚರ್‌ 1513
ಟ್ರೈನಡ್‌ ಗ್ರ್ಯಾಜುಯೇಟ್‌ ಟೀಚರ್‌ 2978
ಟ್ರೈನಡ್‌ ಗ್ರ್ಯಾಜುಯೇಟ್‌ ಟೀಚರ್‌ (ಭಾಷೆ) 443
ಬೋಧಕೇತರ ಹುದ್ದೆಗಳು 787
ಒಟ್ಟು ಹುದ್ದೆಗಳು 5841

 

ವೇತನ/ Salary Scale

ಕೇಂದ್ರ ಸರ್ಕಾರದ 7ನೇ ವೇತನ ನಿಯಮಾವಳಿಗಳ ಕೆಳಕಂಡಂತೆ ಮೂಲ ವೇತನ ನಿಗದಿ ಮಾಡಲಾಗಿದೆ.

ಹುದ್ದೆಗಳ ಹೆಸರು ವೇತನ ಶ್ರೇಣಿ
ಪ್ರಿನ್ಸಿಪಾಲ್‌ 78800-209200
ಪಿಜಿಟಿ ಶಿಕ್ಷಕರು 47600-151100
ಟಿಜಿಟಿ ಶಿಕ್ಷಕರು 44900-142400
ಮಹಿಳಾ ಸ್ಟಾಫ್‌ ನರ್ಸ್‌ 29200-92300
ಹಾಸ್ಟೆಲ್‌ ವಾರ್ಡನ್‌ 29200-92300
ಅಕೌಂಟೆಂಟ್‌ 35400-112400
ಜೂನಿಯರ್‌ ಸೆಕ್ರೆಟೆರಿಯೆಟ್‌ ಅಸಿಸ್ಟೆಂಟ್‌ 19900-63200
ಲ್ಯಾಬ್‌ ಅಟೆಂಡೆಂಟ್‌ 18000-56900

 JOB NEWS: ಬೆಂಗಳೂರಿನ ರೈಲ್ವೇ ಗಾಲಿ & ಅಚ್ಚು ಕಾರ್ಖಾನೆಯಲ್ಲಿ ಖಾಲಿ ಇರುವ ಜೂನಿಯರ್‌ ಕ್ಲರ್ಕ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: Railway Wheel Factory Junior Clerk Recruitment 2025

ವಯೋಮಿತಿ/ Age limit:

ದಿನಾಂಕ 01-01-2026ಕ್ಕೆ ನಿಗದಿಪಡಿಸಿದಂತೆ

ಕನಿಷ್ಟ ವಯೋಮಿತಿ: 18 ವರ್ಷ

ಗರಿಷ್ಟ ವಯೋಮಿತಿ:

ಹುದ್ದೆಗಳ ಹೆಸರು ಗರಿಷ್ಟ ವಯೋಮಿತಿ
ಅಸಿಸ್ಟೆಂಟ್‌ ಕಮಿಶನರ್‌ 50 ವರ್ಷ
ಪ್ರಿನ್ಸಿಪಾಲ್‌ 50 ವರ್ಷ
ಪೋಸ್ಟ್‌ ಗ್ರ್ಯಾಜುಯೇಟ್‌ ಟೀಚರ್‌ 40 ವರ್ಷ
ಟ್ರೈನಡ್‌ ಗ್ರ್ಯಾಜುಯೇಟ್‌ ಟೀಚರ್‌ 35 ವರ್ಷ
ಟ್ರೈನಡ್‌ ಗ್ರ್ಯಾಜುಯೇಟ್‌ ಟೀಚರ್‌ (ಭಾಷೆ) 35 ವರ್ಷ
ಬೋಧಕೇತರ ಹುದ್ದೆಗಳು 35 ವರ್ಷ

ಗರಿಷ್ಟವಯೋಮಿತಿಯಲ್ಲಿ ಪಜಾ & ಪಪಂ ಅಭ್ಯರ್ಥಿಗಳಿಗೆ 05 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 03 ವರ್ಷ ಸಡಿಲಿಕೆ ಇರುತ್ತದೆ.

ಶೈಕ್ಷಣಿಕ ಅರ್ಹತೆಗಳು/ Educational Qualification:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅಂಗೀಕೃತ ಬೋರ್ಡ್/ ವಿಶ್ವವಿದ್ಯಾಲಯದಿಂದ  ಪಿಯುಸಿ, ಪದವಿ, ಡಿಎಡ್, ಬಿಎಡ್‌, ಬಿಸಿಎ, ನರ್ಸಿಂಗ್‌, ಸ್ನಾತಕೋತ್ತರ ಪದವಿ, ಬಿಇ, ಬಿಟೆಕ್‌ ಮುಗಿದವರಿಗೆ ವಿವಿಧ ಉದ್ಯೋಗಾವಕಾಶಗಳು ಲಭ್ಯವಿರುತ್ತವೆ.

(ಸ್ನೇಹಿತರೇ ಈ ನೇಮಕಾತಿ ಸೇರಿದಂತೆ ಯಾವುದೇ ನೇಮಕಾತಿ/ ಸ್ಕಾಲರ್ಶಿಫ್/ ಸ್ಕೀಮ್ ಗಳಿಗೆ ಅರ್ಜಿ ಸಲ್ಲಿಸಿಕೊಡಲಾಗುವುದು. ವಾಟ್ಸಪ್ (9108736889) ಮುಖಾಂತರ  ದಾಖಲೆಗಳನ್ನು ಕಳುಹಿಸಿದರೇ ಕಡಿಮೆ ದರದಲ್ಲಿ ಅರ್ಜಿ ಸಲ್ಲಿಸಿ ಪಿಡಿಎಫ್ ಅನ್ನು ನಿಮಗೆ ಕಳುಹಿಸಿಕೊಡಲಾಗುವುದು)

ಅರ್ಜಿ ಶುಲ್ಕ/ Application Fees:

ಹುದ್ದೆಗಳ ಹೆಸರು ಅರ್ಜಿ ಶುಲ್ಕ
ಅಸಿಸ್ಟೆಂಟ್‌ ಕಮಿಶನರ್‌ 2300
ಪ್ರಿನ್ಸಿಪಾಲ್‌ 2300
ಪೋಸ್ಟ್‌ ಗ್ರ್ಯಾಜುಯೇಟ್‌ ಟೀಚರ್‌ 1500
ಟ್ರೈನಡ್‌ ಗ್ರ್ಯಾಜುಯೇಟ್‌ ಟೀಚರ್‌ 1500
ಟ್ರೈನಡ್‌ ಗ್ರ್ಯಾಜುಯೇಟ್‌ ಟೀಚರ್‌ (ಭಾಷೆ) 1500
ಬೋಧಕೇತರ ಹುದ್ದೆಗಳು 1200

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ‍ ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ರೂ. 500/- ಮಾತ್ರ

 ಆಯ್ಕೆವಿಧಾನ/ Selection procedure:

ಲಿಖಿತ ಪರೀಕ್ಷೆ / ಮೌಖಿಕ ಪರೀಕ್ಷೆಯಲ್ಲಿ ತಾವು ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆಮಾಡಲಾಗುತ್ತದೆ.

ಕರ್ನಾಟಕದಲ್ಲಿನ ಪರೀಕ್ಷಾ ಕೇಂದ್ರಗಳು:

ಬೆಂಗಳೂರು, ಮಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ, ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

ಚಾಲ್ತಿಯಲ್ಲಿರುವ ಇಮೇಲ್ ಐಡಿ ಹಾಗೂ ಮೊಬೈಲ್ ಸಂ‍ಖ್ಯೆ

ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು

ಜಾತಿ & ಆದಾಯ ಪ್ರಮಾಣ ಪತ್ರ, ಅಂಗವಿಕಲ ಪ್ರಮಾಣಪತ್ರ, ಗ್ರಾಮೀಣ ಪ್ರಮಾಣಪತ್ರ, ಮಾಜಿಸೈನಿಕ, ಶುಲ್ಕ ಪಾವತಿಸಿದ ರಸೀಧಿ ಹಾಗೂ ಇತರೆ ಪ್ರಮಾಣಪತ್ರಗಳು

ಸೇವಾ ದಾಖಲಾತಿಗಳು

ಇತರೆ ಅಗತ್ಯವಿರುವ ದಾಖಲೆಗಳು

ಅರ್ಜಿ ಹಾಕುವ ವಿಧಾನ/ Application Submission Method:

  1. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಹಾಗೂ ಇಮೇಲ್ ಐ.ಡಿ ಯನ್ನು ಹೊಂದಿರಬೇಕು. ಹಾಗೂ ಇತ್ತೀಚಿನ ಭಾವಚಿತ್ರ, ಶೈಕ್ಷಣಿಕ ದಾಖಲೆಗಳು, ಇನ್ನಿತರ ಅಗತ್ಯ ದಾಖಲೆಗಳನ್ನು ಕೇಳಿರುವ ಸೈಜ್ ಗೆ ಅನುಸಾರವಾಗಿ ಸ್ಕ್ಯಾನ್ ಮಾಡಿಟ್ಟುಕೊಳ್ಳಿ.
  2. ಅಭ್ಯರ್ಥಿಗಳು https://kvsangathan.nic.in ವೆಬ್ಸೈಟ್ ಗ ಬೇಟಿ ನೀಡಿ Link for applying to various teaching and non-teaching posts through Direct Recruitment- Notification No. 1/2025” ಲಿಂಕ್  ಗೆ ಹೋಗಿ. ಅಲ್ಲಿ ನೊಂದಣಿ ಮಾಡಿಕೊಳ್ಳಿ.
  3. ನೊಂದಣಿ ಮಾಡಿಕೊಂಡ ನಂತರ Registration Number & Password ಅನ್ನು ಬಳಸಿಕೊಂಡು ಲಾಗಿನ್ ಮಾಡಿಕೊಳ್ಳಿ.
  4. ಆನ್ಲೈನ್ ಅರ್ಜಿ ನಮೂನೆಯನ್ನು ಸರಿಯಾದ ಮಾಹಿತಿಯೊಂದಿಗೆ ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯವಿರುವ ಕಡೆ ಸ್ಕ್ಯಾನ್ ಮಾಡಿರುವ ಕಾಪಿಗಳನ್ನು Upload ಮಾಡಿ, ಅಂತಿಮವಾಗಿ Submit ಮಾಡಿ.
  5. Payment Gateway ಗೆ ತೆರಳಿ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್/ ಯುಪಿಐ/ ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ.
  6. ಅರ್ಜಿ ಸಲ್ಲಿಸಿದ ನಂತರ ಅದನ್ನು ಮುದ್ರಿಸಿಟ್ಟುಕೊಳ್ಳಿ. ಮುಂದೆ ನಡೆಯುವ ಮೂಲ ದಾಖಲಾತಿಗಳ ಪರಿಶೀಲನೆ ಸಂದರ್ಭದಲ್ಲಿ ಅದನ್ನು ಹಾಜರುಪಡಿಸಬೇಕು.

JOB NEWS: ಅಂಚೆ ಪಾವತಿ ಬ್ಯಾಂಕ್ ನಲ್ಲಿ ಖಾಲಿ ಇರುವ 309 ಜೂನಿಯರ್‌ ಅಸೋಸಿಯೇಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ: IPPB 309 Junior Associate Recruitment 2025

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 14-11-2025

ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04-12-2025        

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:
ಅರ್ಜಿ ಸಲ್ಲಿಸಿ/ Apply Online:
ವೆಬ್ಸೈಟ್/ Website :

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ) :

1) ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ ಯಾವುದು?

ಉತ್ತರ:  ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 14-11-2025

2) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು:

ಉತ್ತರ:  ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 04-12-2025

3) ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನು?

ಪಿಯುಸಿ, ಯಾವುದೇ ವಿಷಯದಲ್ಲಿ ಪದವಿ/ ಡಿಎಡ್/ ಬಿಎಡ್/‌ ಬಿಸಿಎ/ ನರ್ಸಿಂಗ್ ಆದವರು ಅರ್ಜಿ ಸಲ್ಲಿಸಬಹುದು.

4) ಅರ್ಜಿ ಶುಲ್ಕ ಪಾವತಿಸಿದ ಮೇಲೆ ವಾಪಸ್‌ ಪಡೆಯಬಹುದೇ?

ಉತ್ತರ: ಒಂದು ಬಾರಿ ಅರ್ಜಿ ಶುಲ್ಕವನ್ನು ಪಾವತಿಸಿದರೇ ವಾಪಾಸು ಪಡೆಯಲು ಬರುವುದಿಲ್ಲ.

5)ಟಿಜಿಟಿ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಟಿಇಟಿ ಕಡ್ಡಾಯವೇ?

ಹೌದು. ಕೇಂದ್ರೀಯ ಶಿಕ್ಷಕ ಅರ್ಹತಾ ಪರೀಕ್ಷೆಯನ್ನು (CTET) ಉತ್ತೀರ್ಣ ಹೊಂದಿರಬೇಕು. ರಾಜ್ಯದ TET ಪರೀಕ್ಷೆಯು ಅರ್ಹವಲ್ಲ.

6) ಕನ್ನಡದಲ್ಲಿ ಪರೀಕ್ಷೆ ಬರೆಯಬಹುದೇ?

ಹೌದು ಪೂರ್ವಭಾವಿ ಪರೀಕ್ಷೆಯನ್ನು ಸಂಪೂರ್ಣವಾಗಿ ಕನ್ನಡದಲ್ಲಿಯೇ ಪ್ರಶ್ನೆಪತ್ರಿಕೆ ಪಡೆಯಬಹುದು. ಮುಖ್ಯ ಪರೀಕ್ಷೆಯಲ್ಲಿ English/ Hindi ಭಾಷಾ ವಿಭಾಗವನ್ನು ಹೊರತುಪಡಿಸಿದರೇ ಇನ್ನುಳಿದ ಭಾಗಗಳನ್ನು ಕನ್ನಡದಲ್ಲಿ ಪಡೆಯಬಹುದು. ಇದಕ್ಕಾಗಿ ನೀವು ಅರ್ಜಿ ಸಲ್ಲಿಸುವ ವೇಳೆಯಲ್ಲಿಯೇ Medium of Instruction ಆಗಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಬೇಕು.

 

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top